73 ವರ್ಷದ ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಯಶಸ್ವಿ ಲಿವರ್ ಕಸಿ ಮಾಡಿದ ಬೆಂಗಳೂರಿನ ಟ್ರಸ್ಟ್ ವೆಲ್ ಆಸ್ಪತ್ರೆ

By Suvarna News  |  First Published Mar 21, 2023, 4:53 PM IST

ಲಿವರ್ ಸಿರೋಸಿಸ್ ನೊಂದಿಗೆ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಗೆ ಬೆಂಗಳೂರಿನ ಟ್ರಸ್ಟ್ ವೆಲ್ ಆಸ್ಪತ್ರೆಯ ಕಸಿ ಶಸ್ತ್ರಚಿಕಿತ್ಸಕರು, ಕಸಿ ಅರಿವಳಿಕೆ ತಜ್ಞರು ಮತ್ತು ತೀವ್ರತರವಾದ ತಜ್ಞರ ತಂಡವು  ಯಕೃತ್ತಿನ ಕಸಿ ಮಾಡಿ ವ್ಯಕ್ತಿಯ ಬದುಕಿನಲ್ಲಿ  ನಗು ಮೂಡಿಸಿದ್ದಾರೆ.


ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್  

ಬೆಂಗಳೂರು(ಮಾ. 21) 73 ವರ್ಷದ ಮುಂಬೈನ ಯೋಗೇಶ್ (ಹೆಸರು ಬದಲಾಯಿಸಲಾಗಿದೆ) ಅವರು ಲಿವರ್ ಸಿರೋಸಿಸ್ ನೊಂದಿಗೆ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇವರಿಗೆ ಯಕೃತ್ತಿನ ಕಸಿ ಹೊರತು ಪಡಿಸಿ ಬೇರೆ ಯಾವುದೇ ಆಯ್ಕೆಗಳಿರಲಿಲ್ಲ. ಬೆಂಗಳೂರಿನ ಟ್ರಸ್ಟ್ ವೆಲ್ ಆಸ್ಪತ್ರೆಯ ಕಸಿ ಶಸ್ತ್ರಚಿಕಿತ್ಸಕರು, ಕಸಿ ಅರಿವಳಿಕೆ ತಜ್ಞರು ಮತ್ತು ತೀವ್ರತರವಾದ ತಜ್ಞರ ತಂಡವು ರೋಗಿಯನ್ನು ಬದುಕಿಸಲು ಸಂಕೀರ್ಣವಾದ ಯಕೃತ್ತಿನ ಕಸಿ ಮಾಡಿ ಇವರ ಬದುಕಿನಲ್ಲಿ ನೆಮ್ಮದಿಯ ನಗು ಮೂಡಿಸಿದ್ದಾರೆ.

Latest Videos

undefined

ಯೋಗೇಶ್ ಅವರನ್ನು ಮೊದಲು ಹಿರಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಪಟೊಲೊಜಿಸ್ಟ್ ಅವರಿಗೆ ತೋರಿಸಲಾಯಿತು. ಅವರು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ತಕ್ಷಣವೇ  ಟ್ರಾನ್ಸ್ ಆರ್ಟಿರಿಯಲ್  ಕೀಮೋ-ಎಂಬೋಲೈಸೇಶನ್ ಗೆ ಒಳಗಾಗಲು ತಿಳಿಸಿದರು. ಅದು ಅಲ್ಲದೇ ಯಕೃತ್ತಿನ ಕಸಿ ಮಾಡುವುದು ಕೂಡ ಅವಶ್ಯಕವಾಗಿತ್ತು. ಆದರೆ ಯೋಗೇಶ್ ಅವರು ಮಧುಮೇಹ ಹಾಗೂ ಸ್ಟೆಂಟ್ ಪ್ಲೇಸ್ ಮೆಂಟ್ ನೊಂದಿಗೆ ಪರಿಧಮನಿಯ ಆಂಜಿಯೋಗ್ರಫಿಗೆ ಒಳಗಾಗಿದ್ದರು. ಈ ಎಲ್ಲಾ ಕಾರಣದಿಂದಾಗಿ ಇವರಿಗೆ ಯಕೃತ್ತಿನ ಕಸಿ ಮಾಡುವುದು ಕೂಡ ತೀರಾ ಸವಾಲಿನ ಕೆಲಸವಾಗಿತ್ತು.

ಈ ಎಲ್ಲಾ ಸವಾಲಿನ ನಡುವೆ ಮಾರ್ಚ್ 7ರಂದು ಮುಂಜಾನೆ ವೈದ್ಯರ ತಂಡವು 6 ಗಂಟೆಗಳ ಕಾಲ  ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಕಸಿ ಶಸ್ತ್ರಚಿಕಿತ್ಸೆಯ ನಂತರ ಯೋಗೇಶ್ ಅವರಿಗೆ  ಕಸಿ ಐಸಿಯುನಲ್ಲಿ ಸರಿಯಾದ ಪೌಷ್ಠಿಕಾಂಶ ಹಾಗೂ ಫಿಸಿಯೋಥೆರಪಿ ನೀಡಿ 6 ದಿನಗಳಲ್ಲಿ ಅವರನ್ನು  ಡಿಸ್ಚಾರ್ಜ್ ಮಾಡಲಾಯಿತು. 

ಡಾ.ರವಿಮೋಹನ್ಕ, ಡಾ.ಸುನೀಲ್ ಶೇನ್ವಿ, ಡಾ.ಮನೀಶ್ ಜೋಶಿ, ಡಾ.ಮಿಚುವಲ್, ಡಾ.ಮಾಧವಿ, ಡಾ.ಅಮೇಯ ಮತ್ತು ಡಾ.ಎನ್.ಎಸ್.ಚಂದ್ರಶೇಖರ್ ವೈದ್ಯಕೀಯ ತಜ್ಞರು ಈ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿ ಯೋಗೇಶ್ ಬದುಕಿನಲ್ಲಿ ಹೊಸ ಭರವಸೆ ತುಂಬಿದರು. ಜೊತೆಗೆ ಶಸ್ತ್ರಚಿಕಿತ್ಸೆ ಹಾಗೂ ಗುಣಮುಖ ಹೊಂದುವ ಸಮಯದಲ್ಲಿ ರೋಗಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ  ಅಪಾಯವನ್ನು ತಪ್ಪಿಸಲು ದಾದಿಯರು ಮತ್ತು ಕಸಿ ICU ಸಿಬ್ಬಂದಿಯ ತಂಡದವರು ಸಂಪೂರ್ಣವಾದ ಬೆಂಬಲವನ್ನು ನೀಡಿದರು.  

ಇನ್ನು ಯಶಸ್ವಿಯಾಗಿ ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಾಧ್ಯವಾಗಿದ್ದಕ್ಕಾಗಿ ಖುಷಿಪಟ್ಟ ಟ್ರಸ್ಟ್ ವೆಲ್ ಆಸ್ಪತ್ರೆಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರಾದ ಡಾ ಎಚ್ ವಿ ಮಧುಸೂದನ್.ಇದು ನಮ್ಮ ಶಸ್ತ್ರಚಿಕಿತ್ಸಕ ತಂಡದ ಕೌಶಲ್ಯ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಸಾಧನೆಯ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ ಮತ್ತು ನಮ್ಮ ಎಲ್ಲಾ ರೋಗಿಗಳಿಗೆ ಅತ್ಯುನ್ನತ ಮಟ್ಟದ ಆರೈಕೆಯನ್ನು ಒದಗಿಸುತ್ತೇವೆ” ಅಂತ ಆಸ್ಪತ್ರೆ ವೈದ್ಯರು ಹೇಳಿದರು.

ಬೊಜ್ಜು ಹೆಚ್ತಾ ಇದ್ಯಾ, ಇಗ್ನೋರ್ ಮಾಡ್ಬೇಡಿ ಅನಾರೋಗ್ಯ ಲಕ್ಷಣ ಇದಾಗಿರಬಹುದು!

ಯಕೃತ್ತಿನ ಕಸಿ ಮಾಡುವಿಕೆಯು ಜೀವ ಉಳಿಸುವ ವಿಧಾನವಾಗಿದ್ದು, ಇದು  ರೋಗಿಗಳಿಗೆ ಹೊಸ ಜೀವನವನ್ನು ಕಟ್ಟಿಕೊಟ್ಟಂತೆ ಆಗುತ್ತದೆ. ಯಶಸ್ವಿ ಫಲಿತಾಂಶವನ್ನು ಪಡೆಯಲು ನುರಿತ ವೈದ್ಯರ ತಂಡದ ಅಗತ್ಯವಿದೆ. ಟ್ರಸ್ಟ್ ವೆಲ್ ಆಸ್ಪತ್ರೆಯ  ತಂಡವು ಅವರು ಕಾರ್ಯವನ್ನು ಸಮರ್ಪಿತರಾಗಿ ನಿರ್ವಹಿಸುತ್ತಿದ್ದಾರೆ.

Health Tips : ಹಲ್ಲಲ್ಲಿ ಈ ಸಮಸ್ಯೆ ಕಾಣಿಸಿಕೊಂಡ್ರೆ ಲಿವರ್ ಕೈಕೊಡ್ತಿದೆ ಎಂದರ್ಥ..

ಯೋಗಿಶ್ ಮಾತನಾಡಿ ಲಿವರ್ ದಾನ ಶ್ರೇಷ್ಠ ದಾನ. ಈ ವಯಸ್ಸಿನಲ್ಲಿ ಲಿವರ್ ಕಸಿ ಮಾಡಿಸಿಕೊಂಡಿದ್ದು ನನಗೆ ಪುನರ್ ಜನ್ಮ ಸಿಕ್ಕಂತಾಗಿದೆ. ಇದಕ್ಕೆ ದೇವರು ದೊಡ್ಡವನು. ಆಸ್ಪತ್ರೆ ವೈದ್ಯರಿಗೆ ‌ಕೃತಜ್ಞತೆ ತಿಳಿಸಿದ್ರು.

click me!