
ಕೊರೋನಾ (Corona) ಸೋಂಕಿನ ಪ್ರಭಾವ ಕಡಿಮೆಯಾಗುತ್ತಾ ಬರುತ್ತಿರುವಾಗಲೇ ಸ್ಥಗಿತಗೊಂಡಿದ್ದ ಎಲ್ಲಾ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ಜಿಮ್, ಥಿಯೇಟರ್, ಮಾಲ್‌ಗಳಲ್ಲಿ ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಮಧ್ಯೆ ಎರಡು ವರ್ಷಗಳಿಂದ ವರ್ಕ್ ಫ್ರಂ ಹೋಮ್ (Work from Home) ಮಾಡುತ್ತಿರುವ ಉದ್ಯೋಗಿಗಳನ್ನು (Employees) ಕಂಪೆನಿಗಳು ಮತ್ತೆ ವರ್ಕ್ ಫ್ರಂ ಆಫೀಸ್‌ಗೆ ಕರೆಯುತ್ತಿವೆ. ಅದೆಷ್ಟೋ ಉದ್ಯೋಗಿಗಳು ಅಸಮಾಧಾನದಿಂದಲೇ ಕೆಲಸದ ಸ್ಥಳಕ್ಕೆ ಮರಳುತ್ತಿದ್ದಾರೆ. ಹಲವರ ಪಾಲಿಗೆ ಮನೆಯಲ್ಲಿದ್ದುಕೊಂಡು ಸಂಪೂರ್ಣ ಆರಾಮವಾಗಿ ಕೆಲಸ ಮಾಡುತ್ತಿದ್ದ ವಾತಾವರಣ ತಪ್ಪಿದೆ. ಮನೆಯಲ್ಲಿದ್ದಾಗ ಹೊತ್ತಿಗೆ ಸರಿಯಾಗಿ ಊಟ, ತಿಂಡಿ, ನಿದ್ದೆ ಎಲ್ಲವೂ ಮಾಡಲು ಸಾಧ್ಯವಾಗುತ್ತಿತ್ತು.
ಆಫೀಸಿನಿಂದ ವರ್ಕ್ ಮಾಡುವುದು ಹಲವರ ಪಾಲಿಗೆ ಬೋರಿಂಗ್ ವಿಷಯ. ಕೆಲವೊಬ್ಬರು ಕೆಲಸದ ಮಧ್ಯೆ ತೂಕಡಿಸುತ್ತಲೂ ಇರುತ್ತಾರೆ. ಮಧ್ಯಾಹ್ನ ಊಟ ಮಾಡಿದ ಮೇಲಂತೂ ತೂಕಡಿಯಲ್ಲೆ ಸಮಯ ಕಳೆದು ಹೋಗಿರುತ್ತದೆ. ಉದ್ಯೋಗಿಗಳ ಇಂಥಾ ಸಮಸ್ಯೆಯನ್ನು ಮನಗಂಡ ಬೆಂಗಳೂರಿನ ಕಂಪೆನಿಯೊಂದು ಕೆಲಸದಲ್ಲಿ 30 ನಿಮಿಷಗಳ ಅಧಿಕೃತ ನಿದ್ರೆಯ ಸಮಯವನ್ನು ಪ್ರಕಟಿಸಿದೆ. ಕೆಲಸದಲ್ಲಿ 30 ನಿಮಿಷಗಳ ಅಧಿಕೃತ ನಿದ್ದೆ ಸಮಯವನ್ನು ಬೆಂಗಳೂರು ಸ್ಟಾರ್ಟ್ಅಪ್ (Startup) ಪ್ರಕಟಿಸಿದೆ. ಉದ್ಯೋಗಿಗಳಿಗೆ ಉತ್ತಮ ನಿದ್ದೆ ಪಾಡ್‌ಗಳು ಮತ್ತು ಶಾಂತ ಕೊಠಡಿಗಳನ್ನು ರೂಪಿಸುತ್ತಿದೆ.
ಪೋಷಕರು ಮತ್ತು ಮಗು ಪ್ರತ್ಯೇಕ ಹಾಸಿಗೆಯಲ್ಲಿ ಮಲಗಬೇಕು ಅನ್ನೋದು ಯಾಕೆ ?
ಬೆಂಗಳೂರಿನ ಸ್ಟಾರ್ಟ್‌ಅಪ್ ವೊಂದು ಇಮೇಲ್‌ನಲ್ಲಿ ಉದ್ಯೋಗಿಗಳಿಗೆ ನಿದ್ರೆ ಮಾಡಲು ಸಮಯವನ್ನು ನಿಗದಿಪಡಿಸಿದ್ದು, ಎಲ್ಲರಿಗೂ ನಿದ್ರೆ ಮಾಡುವ ಹಕ್ಕು ಇದೆ ಎಂದು ಘೋಷಿಸಿದೆ. ವೇಕ್‌ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ತನ್ನ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ 30 ನಿಮಿಷಗಳ ಅಧಿಕೃತ ನಿದ್ರೆಯ ಸಮಯವನ್ನು ಘೋಷಿಸಿದ್ದಾರೆ. ಇಮೇಲ್‌ನಲ್ಲಿ ರಾಮಲಿಂಗೇಗೌಡ ಅವರು ಹೀಗೆ ಬರೆದಿದ್ದಾರೆ, 'ನಾವು ಆರು ವರ್ಷಗಳಿಂದ ವ್ಯವಹಾರದಲ್ಲಿದ್ದೇವೆ. ಆದರೆ ವಿಶ್ರಾಂತಿಯ ನಿರ್ಣಾಯಕ ಅಂಶವಾದ ಮಧ್ಯಾಹ್ನದ ನಿದ್ದೆಯನ್ನೇ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಉದ್ಯೋಗಿಗಳ ಕಷ್ಟ ನನಗೆ ತಿಳಿದಿದೆ. ಹೀಗಾಗಿ ನಾನು ಚಿಕ್ಕನಿದ್ರೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ನಿದ್ದೆ ಮಾಡಲು ನ್ಯಾಪ್ ಬ್ರೇಕ್ ನೀಡುತ್ತೇವೆ' ಎಂದಿದ್ದಾರೆ.
ನಾಸಾದ ಅಧ್ಯಯನದ ಪ್ರಕಾರ, 26 ನಿಮಿಷಗಳ ಕ್ಯಾಟ್‌ನ್ಯಾಪ್ ಕಾರ್ಯಕ್ಷಮತೆಯನ್ನು ಶೇಕಡಾ 33ರಷ್ಟು ಹೆಚ್ಚಿಸಬಹುದು. ಹಾರ್ವರ್ಡ್ ಅಧ್ಯಯನವು ನಿದ್ದೆಯು ಆಯಾಸವನ್ನು ಹೇಗೆ ಬಗೆಹರಿಸಿದೆ ಎಂಬುದನ್ನು ತೋರಿಸಿದೆ ಎಂದು ಅವರು ಹೇಳಿದರು. ನಾವು ಕೆಲಸದಲ್ಲಿ ಮಧ್ಯಾಹ್ನದ ನಿದ್ರೆಯನ್ನು ಸಾಮಾನ್ಯಗೊಳಿಸಲು ನಿರ್ಧರಿಸಿದ್ದೇವೆ ಮತ್ತು ನಮ್ಮ ಎಲ್ಲಾ ಉದ್ಯೋಗಿಗಳಿಗೆ 2 ರಿಂದ 2:30 ರವರೆಗೆ ಅಧಿಕೃತ ನಿದ್ರೆಯ ಸಮಯ ಎಂದು ಘೋಷಿಸಿದ್ದೇವೆ. ಇನ್ನು ಮುಂದೆ, ನೀವು 2 ರಿಂದ 2:30 ರವರೆಗೆ ಕೆಲಸ ಮಾಡದೆ ನಿದ್ದೆ ಮಾಡುವ ಹಕ್ಕನ್ನು ಹೊಂದಿರುತ್ತೀರಿ ಎಂದು ಇಮೇಲ್ ನಲ್ಲಿ ವೇಕ್‌ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಮಾಹಿತಿ ನೀಡಿದ್ದಾರೆ.
ಯಾವಾಗ್ಲೂ ಆಕ್ಟಿವ್ ಆಗಿರಲು ದೇಹಕ್ಕೆ ಈ 7 ಬಗೆಯ ವಿಶ್ರಾಂತಿ ಸಿಗಲೇಬೇಕು
ವೇಕ್‌ಫಿಟ್ ತನ್ನ ಉದ್ಯೋಗಿಗಳಿಗೆ ಪರಿಪೂರ್ಣ ನಿದ್ರೆಯ ವಾತಾವರಣವನ್ನು ನಿರ್ಮಿಸಲು ಕಚೇರಿಯಲ್ಲಿ ಸ್ನೇಹಶೀಲ ಚಿಕ್ಕನಿದ್ರೆ ಪಾಡ್‌ಗಳು ಮತ್ತು ಸ್ತಬ್ಧ ಕೊಠಡಿಗಳನ್ನು ರಚಿಸಲು ಕೆಲಸ ಮಾಡುತ್ತಿದೆ. ಈ ಅರ್ಧ ಗಂಟೆಯ NAP ಒಂದು ದಿನವನ್ನು ಎರಡು ಗುಣಮಟ್ಟದ ಕೆಲಸದ ಅವಧಿಗಳಾಗಿ ಪರಿವರ್ತಿಸುತ್ತದೆ. ನೀವು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌ಗಳನ್ನು ಹೊಂದಿಸಲಿದ್ದೀರಿ. ಅದನ್ನು ಮುಂದುವರಿಸಿ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ನೀವು ಕಾರ್ಪೊರೇಟ್ ಸಂಸ್ಕೃತಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸಂಪೂರ್ಣ ಪ್ರಕ್ರಿಯೆಯನ್ನು ಮರುರೂಪಿಸಲಿದ್ದೀರಿ, ಇದು ಗೇಮ್ ಚೇಂಜರ್ ನಿರ್ಧಾರ. ಇದರಿಂದ ಕೆಲಸದಲ್ಲಿ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚುತ್ತದೆ ಎಂಬುದನ್ನು ನಾನು ನಂಬುತ್ತೇನೆ ಎಂದು ಸಂಸ್ಥೆಯ ಮುಖ್ಯಸ್ಥ ರಾಮಲಿಂಗೇಗೌಡ ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.