ನಿಮ್ಮ ಮನಸ್ಸು ಸದಾ ಶಾಂತವಾಗಿರೋಕೆ ಈ ಆಹಾರಗಳನ್ನು ಸೇವಿಸಿ!

By Suvarna News  |  First Published May 5, 2022, 1:11 PM IST

ಆಹಾರದ ಮೂಲಕವೂ ನಿಮ್ಮ ಮನಸ್ಸಿನ ಒತ್ತಡಗಳನ್ನು  ಬೀಟ್ ಮಾಡಿ ನೆಮ್ಮದಿ ಪಡೆಯಬಹುದು ಎಂಬುದು ನಿಮಗೆ ಗೊತ್ತೇ?
 


ಕೆಲಸದ ಸ್ಥಳದಲ್ಲಿನ ಒತ್ತಡಗಳು ಹಾಗೂ ಕೌಟುಂಬಿಕ ಒತ್ತಡಗಳು ಎಲ್ಲರಿಗೂ ಇರುತ್ತವೆ. ತುಂಬಾ ಮಂದಿ ಈ ಒತ್ತಡದಿಂದಾಗಿಯೇ ಬಿಪಿ, ಮಧುಮೇಹ ಬರಿಸಿಕೊಳ್ಳುತ್ತಾರೆ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಯೋಗ ಅಥವಾ ಧ್ಯಾನವನ್ನು ಶಿಫಾರಸು ಮಾಡಲಾಗುತ್ತದೆ. ಆದರೆ ಅಷ್ಟೇ ಮುಖ್ಯವಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವು ಫುಡ್‌ಗಳನ್ನು ಅಳವಡಿಸಿಕೊಂಡರೆ ಅವು  ನಿಮ್ಮನ್ನು ಒತ್ತಡದ ಸಮಸ್ಯೆಯಿಂದ ಸಂಪೂರ್ಣವಾಗಿ ದೂರವಿರಿಸಬಲ್ಲದು. ಇಲ್ಲಿ, ಅಂಥ ಕೆಲವು ಪ್ರಮುಖವಾದ ಆಹಾರ ಪದಾರ್ಥಗಳನ್ನು ನೀಡಲಾಗಿದೆ.

1. ಬೀಜಗಳು
ಬೀಜಗಳು ಸೇಲೆನಿಯಂ ಅಂಶವನ್ನು ಹೊಂದಿವೆ. ಇದು ಬಳಲುವಿಕೆ, ಆತಂಕ ಹಾಗೂ ಇತರ ಮಾನಸಿಕ ಒತ್ತಡಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತವೆ. ಎಲ್ಲಾ ವಿಧದ ನಟ್ಸ್ ಗಳೂ ಕೂಡ ನಿಮ್ಮ ಮನಸ್ಸು ಶಾಂತವಾಗಿರಲು ಸಹಾಯ ಮಾಡುತ್ತವೆ.

Tap to resize

Latest Videos

2. ಚಾಕಲೇಟ್
ಚಾಕಲೇಟ್‌ನ ಗುಣವೇ ನಮ್ಮನ್ನು ಸದಾ ಚುರುಕಾಗಿರುವಂತೆ ಮಾಡುವುದು. ಇದರಿಂದ ಬುದ್ಧಿ ಹಾಗೂ ದೇಹವೂ ಚುರುಕಾಗಿರುತ್ತದೆ. ಮನಸ್ಸು ಸದಾ ಶಾಂತವಾಗಿರುವಂತೆ ಮಾಡುತ್ತದೆ. ಆದರೆ ಅತಿಯಾಗಿ ಸೇವಿಸಬಾರದು.

Health Tips: ಸಿಕ್ಕಾಪಟ್ಟೆ ಮಸಾಲೆ ಪದಾರ್ಥ ತಿಂತೀರಾ, ಕಡಿಮೆ ಮಾಡದಿದ್ರೆ ಕಾಡಲಿದೆ ಸಮಸ್ಯೆ

3. ಪಾಲಾಕ್
ಮ್ಯಾಗ್ನೀಶಿಯಂ ಸಮೃದ್ಧ ಅಂಶವನ್ನು ಹೊಂದಿರುವ ಪಾಲಾಕ್ ಮನಸ್ಸನ್ನು ಸದಾ ನಿರಾಳವಾಗಿರುವಂತೆ ಮಾಡುತ್ತದೆ. ಸರಿಯಾದ ಪ್ರಮಾಣದ ವಿಟಮಿನ್ ಎ ಹಾಗೂ ಸಿಯ ಜೊತೆಗೆ ಕಬ್ಬಿಣದ ಅಂಶ ಆರೋಗ್ಯಕರ ಮನಸ್ಸನ್ನು ನಿಮ್ಮದಾಗಿಸುತ್ತದೆ.

4. ಪಾಸ್ತಾ
ಸಮೃದ್ಧ ಮ್ಯಾಗ್ನೀಶಿಯಂ ಅಂಶವನ್ನು ಹೊಂದಿರುವ ಪಾಸ್ತಾವನ್ನು ಹಲವು ಧಾನ್ಯಗಳಿಂದ ತಯಾರಿಸಲಾಗುತ್ತದೆ. ಇದು ಮನದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯಕಾರಿ.

5. ಬ್ರೆಡ್
ಬ್ರೆಡ್‌ನಲ್ಲಿಯೂ ಪಾಸ್ತಾದಲ್ಲಿರುವ ಅಂಶಗಳೇ ಅಧಿಕವಾಗಿರುತ್ತದೆ. ಇದು ಮ್ಯಾಗ್ನೀಶಿಯಂ ಕೊರತೆ ಪ್ರಮಾಣವನ್ನು ನಿಯಂತ್ರಿಸುತ್ತದೆ.

6. ಬೆರ್ರಿಗಳು
ರುಚಿಕರವಾದ ಬೆರ್ರಿಹಣ್ಣುಗಳು ಒತ್ತಡ ನಿವಾರಿಸುವ ಅತ್ಯಂತ ಪರಿಣಾಮಕಾರಿ ಹಣ್ಣುಗಳು. ಇದರಲ್ಲಿರುವ ಉರಿಯೂತ ನಿರೋಧಕಗಳು ನಿಮ್ಮನ್ನು ಒತ್ತಡದಿಂದ ದೂರವಿರಿಸುತ್ತದೆ.

7. ಬಾದಾಮಿ
ಸತು ಮತ್ತು ವಿಟಮಿನ್ ಬಿ 12 ಅಂಶಗಳು ಬಾದಾಮಿಯಲ್ಲಿ ಇರುತ್ತವೆ. ಈ ಪೋಷಕಾಂಶಗಳು ಸಮತೋಲಿತ ಚಿತ್ತ ನಿರ್ವಹಿಸಲು ಮತ್ತು ಆತಂಕ ದೂರಗೊಳಿಸಲು ಸಹಾಯಕ. ಬೆಳಗ್ಗೆ ಖಾಲಿ ಹೊಟ್ಟೆಗೆ ರಾತ್ರಿ ನೆನೆಸಿಟ್ಟ ಬಾದಾಮಿ ಸೇವನೆ ಹೆಚ್ಚು ಫಲಪ್ರದ.

8. ಗ್ರೀನ್ ಟೀ
ಒಂದು ಕಪ್ ಗ್ರೀನ್ ಟೀ ನಮ್ಮ ಮನಸ್ಸಿನ ಮೇಲೆ ನಿಶ್ಚಲವಾದ ಪರಿಣಾಮ ಬೀರಬಹುದು. ತಕ್ಷಣದಲ್ಲಿ ಆರಾಮವನ್ನು ನೀಡುವ ಗ್ರೀನ್ ಟೀ ಜಠರದ ಆರೋಗ್ಯಕ್ಕೂ ಒಳ್ಳೆಯದು.

9. ಮೀನು
ಸಾಲ್ಮನ್ ಮತ್ತು ಬಂಗಡೆಯಂತಹ ಮೀನುಗಳು ಶಾಂತ ಮನಸ್ಸಿಗೆ ಅತ್ಯಗತ್ಯ. ಇದು ಮೆದುಳಿಗೆ ಸೆಲೆನಿಯಮ್ ಮತ್ತು ಟ್ರಿಪ್ಟೊಫಾನ್ ಒದಗಿಸುವ ಒಮೆಗಾ -3 ಕೊಬ್ಬಿನ ಆಮ್ಲವನ್ನು ಹೊಂದಿರುತ್ತದೆ.

Summer Tips : ರೋಗದಿಂದ ದೂರವಿರ್ಬೇಕೆಂದ್ರೆ ಪ್ರತಿ ದಿನ ಮಾವು ತಿನ್ನಿ

10. ಓಟ್ಸ್
ದೇಹಕ್ಕೆ ಅಗತ್ಯವಿರುವ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಇದು ಪ್ರಯೋಜನಕಾರಿ. ಜೊತೆಗೆ ಓಟ್ಸ್ ಪ್ರಶಾಂತ ಮನಸ್ಸಿನಿಂದ ದಿನ ಕಳೆಯುವಂತೆ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಉತ್ತಮ ಹಾದಿಯಾಗಿದೆ ಓಟ್ಸ್.

11. ಹಾಲು
ಸಿರೊಟೋನಿನ್ ನ್ನು ಹೆಚ್ಚಿಸುವ ಟ್ರಿಪ್ಟೊಫಾನ್ ಒಳಗೊಂಡಿರುವ ಹಾಲು ಮನಸ್ಸಿನ ಒತ್ತಡ ನಿವಾರಣೆಗೆ ಅತ್ಯಂತ ಅಗತ್ಯ.

12 . ಬ್ರೊಕೋಲಿ
ಬ್ರೊಕೊಲಿಯಲ್ಲಿ ಸಾಕಷ್ಟು ಪೊಟ್ಯಾಸಿಯಂ ಇದೆ. ಆಯಾಸ ಮತ್ತು ಒತ್ತಡ ಕಡಿಮೆಮಾಡಲು ಇದು ಸಹಕರಿಸುತ್ತದೆ.  

13. ಕಿವಿ ಹಣ್ಣು
ಇದೂ ಸಹ ಮೆದುಳಿನ ಆತಂಕ ತಗ್ಗಿಸುತ್ತದೆ. ಮೆದುಳಿಗೆ ಅಗತ್ಯವಾದ ಟ್ರಿಪ್ಟೊಫಾನ್ ಅನ್ನು ಸಿರೊಟೋನಿನ್ ಆಗಿ ಪರಿವರ್ತಿಸಲು ಸಹಾಯಕ.

14. ಬಾಳೆಹಣ್ಣು
ಕಡಿಮೆ ಪ್ರಮಾಣದ ಫೈಬರ್ ಹೊಂದಿರುವ ಬಾಳೆಹಣ್ಣು ಗ್ಯಾಸ್ ಸಮಸ್ಯೆಯನ್ನು ತಗ್ಗಿಸುತ್ತದೆ. ಈ ಮೂಲಕ ನೀವು ಶಾಂತ ಮತ್ತು ಒತ್ತಡಮುಕ್ತರಾಗಿ ಉಳಿಯಲು ಸಾಧ್ಯ.

Health Tips : ಬೇಸಿಗೆಯಲ್ಲಿ ಹೆಚ್ಚು ಕಾಡುವ ಫುಡ್ ಪಾಯಿಸನ್ ನಿಂದ ರಕ್ಷಣೆ ಹೇಗೆ?

click me!