ಅಪರೂಪದ ಆಸ್ಟಿಯೋಪೋರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ಶಿಶುವನ್ನು ಗುಣಪಡಿಸಿದ ವೈದ್ಯರು!

By Govindaraj S  |  First Published Sep 18, 2023, 8:43 PM IST

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಭೌಗೋಳಿಕ ಗಡಿಗಳನ್ನು ಮೀರಿ ಮಹತ್ತರ ಮತ್ತು ಪವಾಡ ಸದೃಶ ವೈದ್ಯಕೀಯ ಆವಿಷ್ಕಾರದ ಮೂಲಕ ಪಾಕಿಸ್ತಾನದ ಪುಟ್ಟ ಶಿಶುವಿಗೆ ಯಶಸ್ವಿ ಚಿಕಿತ್ಸೆ ನೀಡಿದೆ. 


ಬೆಂಗಳೂರು (ಸೆ.18): ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಭೌಗೋಳಿಕ ಗಡಿಗಳನ್ನು ಮೀರಿ ಮಹತ್ತರ ಮತ್ತು ಪವಾಡ ಸದೃಶ ವೈದ್ಯಕೀಯ ಆವಿಷ್ಕಾರದ ಮೂಲಕ ಪಾಕಿಸ್ತಾನದ ಪುಟ್ಟ ಶಿಶುವಿಗೆ ಯಶಸ್ವಿ ಚಿಕಿತ್ಸೆ ನೀಡಿದೆ. ಐದು ತಿಂಗಳ ಪುಟ್ಟ ಪಾಕಿಸ್ತಾನದ ಮಗು ಸಮವಿಯ್ಯಾಗೆ ಅಪರೂಪದ ಮತ್ತು ಜೀವಕಂಟಕವಾಗಿದ್ದ ಇನ್ಪೆಂಟೈಲ್ ಆಸ್ಟಿಯೊಪೋರೋಸಿಸ್ ಕಂಡು ಬಂದಿತ್ತು. ಇನ್ಪೆಂಟೈಲ್ ಆಸ್ಟಿಯೋಪೋರೋಸಿಸ್ ಅನ್ನು ಸಾಮಾನ್ಯವಾಗಿ 'ಮಾರ್ಬಲ್ ಬೋನ್ ಡಿಸೀಸ್' ಎಂದು ಕರೆಯಲಾಗುತ್ತಿದ್ದು ಹಲವಾರು ಸವಾಲುಗಳನ್ನು ಒಡ್ಡುತ್ತದೆ, ಅದರಲ್ಲಿ ಮೂಳೆ ಗಟ್ಟಿಯಾಗುವುದು, ದೃಷ್ಟಿ ಮತ್ತು ಶ್ರವಣ ಶಕ್ತಿ ಕ್ರಮೇಣ ಕುಂದುವುದು ಮತ್ತು ಅಸ್ತಿಮಜ್ಜೆಯ ಸಂಕೀರ್ಣತೆಗಳಿಂದ ಅಂತಿಮವಾಗಿ ಜೀವಿತಾವಧಿ ಕಡಿಮೆಯಾಗುತ್ತದೆ. 

ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಈ ಸಮಸ್ಯೆಯನ್ನು ಗುಣಪಡಿಸುವ ಭರವಸೆ ನೀಡಿದರೂ ತಿರಸ್ಕಾರ ಮತ್ತು ಸಂಕೀರ್ಣತೆಗಳ ಗಮನಾರ್ಹ ತೊಂದರೆಗಳನ್ನು ಒಳಗೊಂಡಿರುತ್ತದೆ. ಸಮವಿಯ್ಯಾ ಪ್ರಕರಣದಲ್ಲಿ ಆಕೆಯ ಕುಟುಂಬ ಅಥವಾ ಪಾಕಿಸ್ತಾನದ ದಾನಿಗಳ ರಿಜಿಸ್ಟ್ರಿಯಲ್ಲಿ ಪೂರ್ಣ ಹೊಂದುವ ದಾನಿಗಳಿರಲಿಲ್ಲ. ಈ ಅಡೆತಡೆಯಿಂದ ಆಕೆಯ ಕುಟುಂಬ ಮತ್ತು ವೈದ್ಯರು ಹೊರದೇಶದಲ್ಲಿ ಚಿಕಿತ್ಸೆ ಕೊಡಿಸಲು ನಿರ್ಧರಿಸಿದರು, ಇದರಿಂದ ಅವರು ನಾರಾಯಣ ಹೆಲ್ತ್ ಸಿಟಿಗೆ ಬರುವಂತಾಯಿತು.  ಮಾರ್ಚ್ ತಿಂಗಳಲ್ಲಿ ಪರೀಕ್ಷಿಸಿದಾಗ ಸಮವಿಯ್ಯಾ ಆಗಲೇ ಅಲ್ಪ ಪ್ರಮಾಣದ ದೃಷ್ಟಿ ದೋಷಕ್ಕೆ ಒಳಗಾಗಿದ್ದು ಇದರಿಂದ ತುರ್ತಾಗಿ ಆಕೆಯ ದೃಷ್ಟಿ ರಕ್ಷಿಸಲು ಕ್ರೇನಿಯಲ್ ಡೀಕಂಪ್ರೆಷನ್ ಪ್ರೊಸೀಜರ್ ನಡೆಸಬೇಕಾಯಿತು. 

Latest Videos

undefined

ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್‌ ದುರಹಂಕಾರದ ಮಾತುಗಳನ್ನಾಡುತ್ತಿದೆ: ಅಶ್ವತ್ಥನಾರಾಯಣ

ನಂತರ ಆಕೆಗೆ ಎಚ್ಚರಿಕೆಯ ಪ್ರಿ-ಟ್ರಾನ್ಸ್ ಪ್ಲಾಂಟ್ ಸಿದ್ಧತೆ ನಡೆಸಲಾಯಿತು ಮತ್ತು ಮೇ 16ರಂದು ಆಕೆಯ ತಂದೆ ಸ್ಟೆಮ್ ಸೆಲ್ ಗಳ ಮೂಲಕ ಅರ್ಧ ಹೊಂದುವ ದಾನಿಯ ಬದಲಾವಣೆ ನಡೆಸಲಾಯಿತು. ಸಮವಿಯ್ಯಾ ಪ್ರಕರಣವು ಅತ್ಯಂತ ವಿಶೇಷವಾಗಿಸಿದ್ದು ಬದಲಾವಣೆಯಲ್ಲಿ ಆವಿಷ್ಕಾರಕ ಟಿಸಿಆರ್ ಆಲ್ಫಾ ಬೀಟಾ ಮತ್ತು ಸಿಡಿ 45 ಆರ್,ಎ. ಡಿಪ್ಲೀಷನ್ ತಂತ್ರದ ಬಳಕೆ. ಈ ಅತ್ಯಾಧುನಿಕ, ಪೂರ್ಣ ಹೊಂದುವ ದಾನಿಗಳಿಲ್ಲದವರಿಗೆ ರೂಪಿಸಲಾಗಿದ್ದು ಮಹತ್ತರ ಫಲಿತಾಂಶಗಳನ್ನು ನೀಡಿದೆ.  ಇಂದು ಬದಲಾವಣೆಯ ನಾಲ್ಕು ತಿಂಗಳ ನಂತರ ಸಮವಿಯ್ಯಾ ಆಕೆಯ ರಕ್ತದಲ್ಲಿ ಶೇ.100ರಷ್ಟು ದಾನಿಗಳ ಜೀವಕೋಶಗಳ ಮೂಲಕ ಇನ್ಪೆಂಟೈಲ್ ಆಸ್ಟಿಯೋಪೋರೋಸಿಸ್ ನಿಂದ ಮುಕ್ತ ಎಂದು ಪ್ರಕಟಿಸಲಾಯಿತು. ಆಕೆಯ ಗುಣವಾಗುವಿಕೆ ಪ್ರಯಾಣ ಸಾಗುತ್ತಿದೆ ಮತ್ತು ಬೋನ್ ರೀಮಾಡೆಲ್ಲಿಂಗ್ ನಿಂದ ಸಕಾರಾತ್ಮಕವಾಗಿ ವೃದ್ಧಿಸುತ್ತಿದೆ. 

ನಾರಾಯಣ ಹೆಲ್ತ್ ಸಿಟಿಯ ಆಂಕಾಲಜಿಯ ಉಪಾಧ್ಯಕ್ಷ ಮತ್ತು ಪೀಡಿಯಾಟ್ರಿಕ್ ಹೆಮಟಾಲಜಿ ಆಂಕಾಲಜಿ ಅಂಡ್ ಬಿಎಂಟಿಯ ಮುಖ್ಯಸ್ಥ ಡಾ.ಸುನಿಲ್ ಭಟ್, 'ನಾವು ಈಗ ಆಕೆ ಇತರೆ ಎಲ್ಲ ಮಕ್ಕಳಂತೆ ಸಹಜವಾಗಿರುತ್ತಾಳೆ ಎಂಬ ಭರವಸೆ ಹೊಂದಿದ್ದೇವೆ ಮತ್ತು ಈ ಅಪರೂಪದ ಆದರೆ ಮಾರಣಾಂತಿಕ ರೋಗದಿಂದ ಈಗ ಗುಣವಾಗಿದ್ದಾಳೆ. ಆಕೆ ತನ್ನ ಊರಿಗೆ ಮರಳುತ್ತಿದ್ದಾಳೆ. ಈ ಕುಟುಂಬವು ಪಾಕಿಸ್ತಾನದಿಂದ ಬಂದಿದೆ ಎನ್ನುವುದು ಮತ್ತಷ್ಟು ಸಂತೋಷ. ಆಕೆ ಅದ್ಭುತ ಮುದ್ದು ಮಗುವಾಗಿದ್ದು ಭಾರತದಲ್ಲಿ ಆಕೆಯ ಆಸ್ಪತ್ರೆವಾಸದಲ್ಲಿ ವಿಶೇಷ ಆರೈಕೆ ವಹಿಸಿದ ಅದ್ಭುತ ತಂದೆ ತಾಯಿಯರನ್ನು ಹೊಂದಿದ್ದಾಳೆ. ಆ ಮಗುವಿಗೆ ನನ್ನ ಶುಭ ಹಾರೈಕೆಗಳು ಮತ್ತು ಆಕೆಗೆ ಯಶಸ್ವಿ ಮತ್ತು ಆರೋಗ್ಯಕರ ಜೀವನ ದೊರೆಯಲಿ ಎಂದು ನಿರೀಕ್ಷಿಸುತ್ತೇನೆ' ಎಂದರು. 

ಭಾರತ ದೇಶದಲ್ಲಿ ಸಂವಿಧಾನವೇ ಸಾರ್ವಭೌಮ: ಸಚಿವ ಚಲುವರಾಯಸ್ವಾಮಿ

ಸಮವಿಯ್ಯಾ ಪವಾಡ ಸದೃಶ ರೀತಿಯಲ್ಲಿ ಗುಣವಾಗಿರುವುದು ಅತ್ಯಂತ ಕಠಿಣ ವೈದ್ಯಕೀಯ ಸವಾಲುಗಳನ್ನು ಆಧುನಿಕ ಚಿಕಿತ್ಸಾ ವಿಧಾನದಿಂದ ಎದುರಿಸಬಹುದು ಎನ್ನುವುದನ್ನು ತೋರಿಸಿದೆ. ಆಕೆಯ ಕಥೆಯು ಜೀವಗಳನ್ನು ಉಳಿಸುವಲ್ಲಿ ಕಠಿಣ ಬದ್ಧತೆ, ವೈದ್ಯಕೀಯ ಪರಿಣಿತಿ ಮತ್ತು ಅಂತಾರಾಷ್ಟ್ರೀಯ ಸಹಕಾರದ ಮಹತ್ವಕ್ಕೆ ಸಾಕ್ಷಿಯಾಗಿದೆ. ನಾರಾಯಣ ಹೆಲ್ತ್ ಸಿಟಿ ಕುರಿತು ಬೆಂಗಳೂರಿನಲ್ಲಿರುವ ನಾರಾಯಣ ಹೆಲ್ತ್ ಸಿಟಿ ತಮ್ಮ ವಿಶ್ವಮಟ್ಟದ ವೈದ್ಯಕೀಯ ಸೇವೆಗಳು ಮತ್ತು ಅತ್ಯಾಧುನಿಕ ಚಿಕಿತ್ಸೆಗಳಿಗೆ ಖ್ಯಾತಿ ಪಡೆದಿದೆ. ವಿಶೇಷ ಆರೋಗ್ಯಸೇವಾ ವೃತ್ತಿಪರರ ತಂಡ ಮತ್ತು ವೈದ್ಯಕೀಯ ಆರೈಕೆಯಲ್ಲಿ ಆವಿಷ್ಕಾರಕ ವಿಧಾನಗಳಿಂದ ನಾರಾಯಣ ಹೆಲ್ತ್ ಸಿಟಿಯು ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ಮಹತ್ತರ ಸಾಧನೆ ಮುಂದುವರಿಸಿದೆ.

click me!