ಮನೆ ಅಂದ್ಮೇಲೆ ಕುರ್ಚಿ, ಸೋಫಾ ಇರ್ಲೇಬೇಕು. ಯಾರೇ ಬಂದ್ರೂ ಕುರ್ಚಿ ಮೇಲೆ ಕುಳಿತುಕೊಳ್ತಾರೆ. ನೆಲದ ಮೇಲೆ ಕುಳಿತುಕೊಳ್ಳುವವರ ಸಂಖ್ಯೆ ಬಹಳ ಅಪರೂಪ. ಆದ್ರೆ ನೆಲದ ಮೇಲೆ ಕುಳಿತ್ರೆ ಸಾಕಷ್ಟು ಪ್ರಯೋಜವಿದೆ ಎಂಬುದು ಅನೇಕರಿಗೆ ಗೊತ್ತಿಲ್ಲ.
ಹಿಂದಿನ ಕಾಲದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು. ಬಹುತೇಕ ಎಲ್ಲ ಕೆಲಸವನ್ನು ಜನರು ನೆಲದ ಮೇಲೆ ಕುಳಿತು ಮಾಡ್ತಿದ್ದರು. ಈಗ್ಲೂ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ನೆಲದ ಮೇಲೆ ಕುಳಿತುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಸುಸ್ತಾಗಿ ಬಂದಾಗ ನೀವು ನೆಲದ ಮೇಲೆ ಕುಳಿತುಕೊಂಡ್ರೆ ಆರಾಮವೆನಿಸುತ್ತದೆ. ಆಯಾಸವೆಲ್ಲ ಕಡಿಮೆಯಾಗುತ್ತದೆ. ಈಗಿನ ಐಷಾರಾಮಿ (Luxury) ಸಮಯದಲ್ಲಿ ಜನರು ನೆಲ (Ground) ದ ಮೇಲೆ ಕುಳಿತುಕೊಳ್ಳುವುದು ಅಪರೂಪವಾಗಿದೆ. ಡೈನಿಂಗ್ ಟೇಬಲ್, ಕುರ್ಚಿ, ಸೋಫಾ ಬಳಕೆ ಹೆಚ್ಚಾಗಿದೆ. ಆದ್ರೆ ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಅನೇಕ ಪ್ರಯೋಜನ (Benefit) ಗಳಿವೆ. ನೆಲದ ಮೇಲೆ ಕುಳಿತುಕೊಳ್ಳುವುದ್ರಿಂದ ಪೋಶ್ಚರ್ (Posture) ಸುಧಾರಿಸುತ್ತದೆ. ನಾವಿಂದು ನೆಲದ ಮೇಲೆ ಕುಳಿತುಕೊಳ್ಳುವುದ್ರಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ಹೇಳ್ತೆವೆ.
ನೆಲದ ಮೇಲೆ ಕುಳಿತುಕೊಳ್ಳುವುದ್ರಿಂದ ಆಗುವ ಆರೋಗ್ಯ ಪ್ರಯೋಜನ :
ಬೆನ್ನುಮೂಳೆಯ ಆರೋಗ್ಯಕ್ಕೆ ಒಳ್ಳೆಯದು : ನಮ್ಮ ಬೆನ್ನುಮೂಳೆ ನೇರವಾಗಿರುವುದಿಲ್ಲ. ಇದು ನಮ್ಮ ಕುತ್ತಿಗೆ, ಎದೆಗೂಡಿನ ಮತ್ತು ಸೊಂಟದ ಪ್ರದೇಶಗಳಲ್ಲಿ ನೈಸರ್ಗಿಕ ವಕ್ರಾಕೃತಿಗಳನ್ನು ಹೊಂದಿರುತ್ತದೆ. ಇದು S ಆಕಾರದ ರಚನೆಯಾಗಿರುತ್ತದೆ. ಜನರು ತಪ್ಪಾಗಿ ಕುಳಿತುಕೊಳ್ಳುವುದ್ರಿಂದ ಬೆನ್ನು ನೋವಿನ ಸಮಸ್ಯೆಯನ್ನು ಎದುರಿಸುತ್ತಾರೆ. ಬೆನ್ನುಮೂಳೆ ಆರೋಗ್ಯವಾಗಿರಬೇಕು ಎಂದಾದ್ರೆ ನೀವು ಹೆಚ್ಚಿನ ಸಮಯ ನೆಲದ ಮೇಲೆ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಕುಳಿತುಕೊಳ್ಳುವಾಗ ಮತ್ತು ನಡೆಯುವಾಗ ನಿಮ್ಮ ದೇಹದ ಭಂಗಿ ಬಹಳ ಮುಖ್ಯ. ನೀವು ತಪ್ಪು ಭಂಗಿಯಲ್ಲಿ ಕುಳಿತಾಗ ಅದ್ರ ಒತ್ತಡ ಬೆನ್ನಿನ ಮೇಲಾಗುತ್ತದೆ. ಇದ್ರಿಂದ ಬೆನ್ನು ನೋವು ಕಾಡಲು ಶುರುವಾಗುತ್ತದೆ. ನೆಲಕ್ಕಿಂತ ನಾವು ಕುರ್ಚಿ ಮೇಲೆ ತಪ್ಪು ಭಂಗಿಯಲ್ಲಿ ಕುಳಿತುಕೊಳ್ಳುವುದು ಹೆಚ್ಚು.
ಕೊಬ್ಬು ಹೆಚ್ಚಿರೋರಿಗೆ ಈ ಆ್ಯಪಲ್ ವಿನೆಗರ್ ಬೆಸ್ಟ್ ಮೆಡಿಸನ್!
ಬಲವಾಗುತ್ತೆ ಸೊಂಟದ ಸ್ನಾಯು : ಸೊಂಟದ ಸ್ನಾಯು, ತೊಡೆ ಮತ್ತು ಕೆಳ ಬೆನ್ನು ಮತ್ತು ಸೊಂಟವನ್ನು ಸಂಪರ್ಕಿಸುವ ಸ್ನಾಯುಗಳಾಗಿವೆ. ಕುರ್ಚಿಗಿಂತ ನೀವು ನೆಲದ ಮೇಲೆ ಕುಳಿತುಕೊಳ್ಳುವುದು ಸೊಂಟಕ್ಕೆ ಹೆಚ್ಚು ಪ್ರಯೋಜನಕಾರಿ. ಇದು ಸೊಂಟದ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಭಂಗಿ ಸುಧಾರಿಸುತ್ತದೆ : ನಾವು ಕುರ್ಚಿ ಮೇಲೆ ಕುಳಿತಾಗ ಕಾಲನ್ನು ಅಲುಗಾಡಿಸುತ್ತಿರುತ್ತೇವೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಾವು ನೆಲದ ಮೇಲೆ ಕುಳಿತಾಗ ಕಾಲು ಕುಣಿಸುವ ಸಾಧ್ಯತೆ ಇರುವುದಿಲ್ಲ. ಹಾಗೆಯೇ ದೆಹದ ಕೆಳ ಭಾಗದ ಸ್ನಾಯುಗಳು ಸುಧಾರಿಸುತ್ತವೆ.
ಹೆಚ್ಚುತ್ತೆ ಆಯಸ್ಸು : ನೆಲದ ಮೇಲೆ ಕುಳಿತುಕೊಳ್ಳುವುದ್ರಿಂದ ನಿಮ್ಮ ಆಯಸ್ಸಿನಲ್ಲಿ ವೃದ್ಧಿಯನ್ನು ನೀವು ಪಡೆಯಬಹುದು. ಪ್ರಿವೆಂಟಿವ್ ಕಾರ್ಡಿಯಾಲಜಿ ಜರ್ನಲ್‌ನಲ್ಲಿನ ಅಧ್ಯಯನದ ಪ್ರಕಾರ, ಯಾವುದೇ ಬೆಂಬಲವಿಲ್ಲದೆ ನೆಲದಿಂದ ಮೇಲಕ್ಕೆ ಏಳುವುದು ಮತ್ತು ಕೆಳಗೆ ಕುಳಿತುಕೊಳ್ಳುವುದು ಮಾಡಿದ್ರೆ ದೀರ್ಘಾಯುಷ್ಯವನ್ನು ಪಡೆಯಬಹುದು. ಇದು ಬೆನ್ನುಮೂಳೆಯನ್ನು ಬಲಪಡಿಸಲು, ಹೊಂದಿಕೊಳ್ಳಲು ಮತ್ತು ಸ್ಥಿರವಾಗಿಸಲು ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಪೈನಾಪಲ್ ಡಯಟ್: ಸೈಡ್ ಎಫೆಕ್ಟ್ಸ್ ಒಂದೆರಡಲ್ಲ!
ನೆಲದ ಮೇಲೆ ಕುಳಿತುಕೊಳ್ಳುವಾಗ ಇದನ್ನು ನೆನಪಿಡಿ :
ಮೇಲಿನ ಪ್ರಯೋಜನವನ್ನು ನೀವು ಪಡೆಯಬೇಕು ಎಂದಾದ್ರೆ ನೀವು ಪ್ರತಿ ದಿನ ಸ್ವಲ್ಪ ಸಮಯ ನೆಲದ ಮೇಲೆ ಕುಳಿತುಕೊಳ್ಳಿ. ಸಮಯವಿಲ್ಲ ಎನ್ನುವವರು ಊಟದ ಸಮಯದಲ್ಲಿ ನೆಲದ ಮೇಲೆ ಕುಳಿತುಕೊಳ್ಳಬಹುದು. ಅಲ್ಲದೆ ಕುಳಿತುಕೊಳ್ಳುವಾಗ ಕೆಲ ನಿಯಮ ಪಾಲನೆ ಮಾಡಬೇಕು. ನೀವು ನೆಲದ ಮೇಲೆ ಸುಖಾಸನದಲ್ಲಿ ಕುಳಿತುಕೊಳ್ಳಬಹುದು. ಕಾಲುಗಳನ್ನು ಅಡ್ಡ ಹಾಕಿ ಅಥವಾ ಉದ್ದ ಚಾಚಿಯೂ ನೀವು ಕುಳಿತುಕೊಳ್ಳಬಹುದು. ಆದ್ರೆ ಕುಳಿತುಕೊಂಡಾಗ ಬೆನ್ನು ನೇರವಾಗಿರುವಂತೆ ನೋಡಿಕೊಳ್ಳಬೇಕು. ಒಂದ್ವೇಳೆ ನಿಮಗೆ ನೇರವಾಗಿ ಕುಳಿತುಕೊಳ್ಳಲು ಸಮಸ್ಯೆಯಾಗ್ತಿದೆ ಎಂದಾದ್ರೆ ಸೊಂಟದ ಕೆಳಗೆ ಒಂದು ದಿಂಬನ್ನು ಅಥವ ಟವೆಲ್ ಇಟ್ಟು ಕುಳಿತುಕೊಳ್ಳಿ.
ನೆಲದ ಮೇಲೆ ಒಂದೇ ಭಂಗಿಯಲ್ಲಿ ತುಂಬಾ ಸಮಯ ಕುಳಿತುಕೊಳ್ಳಬೇಕಾಗಿಲ್ಲ. ನೀವು ಭಂಗಿಯನ್ನು ಆಗಾಗ ಬದಲಿಸಬಹುದು.