ಮಗುವೂ ತಿನ್ನಬಲ್ಲದು ಪಪ್ಪಾಯಿ, ಕೊಟ್ಟರೆ ಅನಾರೋಗ್ಯ ದೂರ

By Suvarna News  |  First Published Dec 26, 2022, 4:57 PM IST

ಪ್ರತೀ ದಿನ ಪಪ್ಪಾಯ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲೂ ಶಿಶುಗಳಲ್ಲಿ ರೋಗಗಳ ಅಪಾಯವನ್ನು ತಡೆಗಟ್ಟುವಲ್ಲಿ ಉತ್ತಮ ಔಷಧವೂ ಹೌದು. ಹಾಗಾದರೆ ಶಿಶುಗಳಿಗೆ ಈ ಪಪ್ಪಾಯ ಹಣ್ಣನ್ನು ಕೊಡುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ. 


ಕೇಸರಿ ಬಣ್ಣ, ತಿಂದರೆ ಬಾಯಿ ತುಂಬಾ ಹರಡುವ ರಸವು ಹೊಟ್ಟೆ ತುಂಬಿರುವ ಅನುಭವ ನೀಡುತ್ತೆ ಈ ಪಪ್ಪಾಯ ಹಣ್ಣು. ಆಯುರ್ವೇದದ(Ayurveda) ಪ್ರಕಾರ ಆರೋಗ್ಯ ಉತ್ತೇಜಿಸುವ ಉತ್ತಮ ಔಷಧೀಯ ಗುಣಗಳಿರುವ ಪಪ್ಪಾಯಿ ಬಹಳ ಮಹತ್ವ ಪಡೆದಿದೆ. ಮಕ್ಕಳು ಈ ಹಣ್ಣು ಸೇವಿಸುವುದರಿಂದ ಅವರಲ್ಲಿ ರೋಗಗಳ ಅಪಾಯವನ್ನು ತಡೆಗಟ್ಟುವಲ್ಲಿ ಆಹಾರ ಮತ್ತು ಪೌಷ್ಠಿಕಾಂಶವನ್ನು ಒದಗಿಸುತ್ತದೆ. ನವಜಾತ ಶಿಶುಗಳಲ್ಲಿ ಪೌಷ್ಠಿಕಾಂಶದ ಪ್ರಾಥಮಿಕ ಮೂಲವೇ ಎದೆ ಹಾಲು. ಆದರೂ ಮಗು ಘನ ಆಹಾರವನ್ನು(Solid Food) ಸೇವಿಸಲು ಪ್ರಾರಂಭಿಸಿದಾಗ ಸಾಮಾನ್ಯವಾಗಿ ನಾಲ್ಕು ತಿಂಗಳ ನಂತರ ಅದರ ಸರಿಯಾದ ಬೆಳವಣಿಗೆ(Growth) ಮತ್ತು ಪಕ್ವತೆಗಾಗಿ ಹಣ್ಣು ಮತ್ತು ತರಕಾರಿಗಳನ್ನು(Vegetables) ಹೆಚ್ಚಾಗಿ ಅವರ ಆಹಾರದಲ್ಲಿ ಸೇರಿಸಲಾಗುತ್ತದೆ.

ಮಗುವಿಗೆ ಪಪ್ಪಾಯ ಪರಿಚಯಿಸುವುದು ಯಾವಾಗ?
ಒಂದು ಅಧ್ಯಯನದ ಪ್ರಕಾರ, ಸುಮಾರು ನಾಲ್ಕು ತಿಂಗಳವರೆಗೆ ಶಿಶುಗಳ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳಂತಹ ಘನ ಆಹಾರಗಳ ಪರಿಚಯವು ಅವರು ವಯಸ್ಸಾದಂತೆ ತಿನ್ನಲು ಅವರ ಇಚ್ಛೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಆಹಾರ ಸಮಸ್ಯೆಗಳು(Food Problem), ಸ್ಥೂಲಕಾಯತೆ ಮತ್ತು ಆಹಾರದ ಅಪಾಯವನ್ನು ಕಡಿಮೆ ಮಾಡುತ್ತದೆ.
ಶಿಶುವಿಗೆ ಪಪ್ಪಾಯವನ್ನು ಎದೆ ಹಾಲಿನೊಂದಿಗೆ ಸಣ್ಣ ಪ್ರಮಾಣದಲ್ಲಿ ನೀಡಬಹುದು. ಇದು ನಾಲ್ಕು ವರ್ಷಗಳಲ್ಲಿ ಶಿಶುಗಳಿಗೆ ಸಂಯೋಜಕ ಪೋಷಣೆಯನ್ನು ಒದಗಿಸುತ್ತದೆ. ಈ ಹಣ್ಣು ಶಿಶುವಿನ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ತಾಯಂದಿರಲ್ಲಿ ಕೆಲವು ಪ್ರಸವಾನಂತರದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ.

ಬೀಟ್ರೋಟ್, ಟೊಮೆಟೊ ಮಾತ್ರವಲ್ಲ ಈ ಆಹಾರಗಳೂ ರಕ್ತಕ್ಕೆ ಒಳಿತು

Latest Videos

undefined

ಶಿಶುಗಳಿಗೆ ಪಪ್ಪಾಯಿ ಕೊಡುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು. 
1. ದದ್ದುಗಳಿಗೆ ಚಿಕಿತ್ಸೆ ನೀಡುತ್ತದೆ (Treats Rashes)

ಪಪ್ಪಾಯಿಯ ತಿರುಳು ಶಿಶುಗಳಲ್ಲಿನ ದದ್ದುಗಳಿಗೆ(Acne) ಚಿಕಿತ್ಸೆ ನೀಡಲು ಪರಿಣಾಮಕಾರಿ ಮನೆಮದ್ದು. ಪಪ್ಪಾಯಿಯಲ್ಲಿರುವ ಪಾಪೈನ್(Papain) ಮತ್ತು ಚೈಮೊಪಪೈನ್(Chaimopapain) ಉರಿಯೂತದ ಪರಿಣಾಮವನ್ನು ಹೊಂದಿವೆ. ಚರ್ಮದ ಮೇಲೆ ಸ್ಥಳೀಯವಾಗಿ ಅನ್ವಯಿಸಿದಾಗ, ಸಂಯುಕ್ತಗಳು ಸಣ್ಣ ಉಬ್ಬುಗಳು(Small Bumps), ದದ್ದುಗಳು(Rashes) ಮತ್ತು ನೋವನ್ನು(Pain) ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

2. ಸುಟ್ಟಗಾಯಗಳನ್ನು ಗುಣಪಡಿಸುತ್ತೆ(Treats Burns) 
ಒಂದು ಅಧ್ಯಯನದ ಪ್ರಕಾರ ಆಫ್ರಿಕನ್ ಔಷಧದಲ್ಲಿ(African Medicine) ಮಕ್ಕಳಲ್ಲಿ ಸುಟ್ಟಗಾಯಗಳಾದಲ್ಲಿ ಪಪ್ಪಾಯಿಯನ್ನು ಬಳಸಲಾಗುತ್ತದೆ. ಸುಟ್ಟ ಗಾಯಕ್ಕೆ ಇದನ್ನು ಡ್ರೆಸ್ಸಿಂಗ್(Dressing) ಆಗಿ ಬಳಸಿದಾಗ ಪಪ್ಪಾಯಿ ತಿರುಳನ್ನು(Papaya Pulp) ಮಕ್ಕಳು ಚೆನ್ನಾಗಿ ಸಹಿಸಿಕೊಳ್ಳುತ್ತಾರೆ. ಇದು ವ್ಯಾಪಕವಾಗಿದ್ದು, ಚಿಕಿತ್ಸೆಯ ಅಗ್ಗದ ಮಾರ್ಗವೂ ಹೌದು. ಪಪ್ಪಾಯಿಯ ತಿರುಳು ಪಪೈನ್ ಮತ್ತು ಚೈಮೊಪಪೈನ್‌ನಿಂದಾಗಿ ಆಂಟಿಮೈಕ್ರೊಬಿಯಲ್(Anti microbial) ಕ್ರಿಯೆಗಳನ್ನು ಹೊಂದಿದೆ. ಹಣ್ಣನ್ನು ಹಿಸುಕಿ ಸುಟ್ಟ ಗಾಯಗಳಿಗೆ ಹಚ್ಚಿದಾಗ ಗಾಯವು ವೇಗವಾಗಿ ಗುಣವಾಗುತ್ತವೆ ಮತ್ತು ಗಾಯದ ಸೋಂಕಿನ ಅಪಾಯವೂ ಕಡಿಮೆಯಾಗುತ್ತದೆ.

3. ಮಲಬದ್ಧತೆ ಸರಾಗಗೊಳಿಸುತ್ತದೆ(Clears Constipation) 
ಮಕ್ಕಳಲ್ಲಿ ದೀರ್ಘಕಾಲದ ಮಲಬದ್ಧತೆ ಸಾಮಾನ್ಯ. ಅದರ ಚಿಕಿತ್ಸೆಯು ಔಷಧಿಗಳ ಮೇಲೆ ಮಾತ್ರವಲ್ಲದೇ ಜೀವನಶೈಲಿಯ ಬದಲಾವಣೆ(Lifestyle Changes), ಸರಿಯಾದ ಆಹಾರಕ್ರಮವನ್ನು ಅವಲಂಬಿಸಿರುತ್ತದೆ. ಪಪ್ಪಾಯಿಯಲ್ಲಿ ಫೈಬರ್(Fiber) ಮತ್ತು ಪಪೈನ್ ನಂತಹ ಕಿಣ್ವಗಳಲ್ಲಿ ಸಮೃದ್ಧವಾಗಿರುವ ವಿರೇಚಕವಾಗಿದ್ದು ಜೀರ್ಣಾಂಗ ವ್ಯವಸ್ಥೆಯನ್ನು(Digestive System) ಬೆಂಬಲಿಸುತ್ತದೆ. ಮಕ್ಕಳಲ್ಲಿ ಕರುಳಿನ ಚಲನೆ ಮತ್ತು ಮಲವಿಸರ್ಜನೆಯನ್ನು ಉತ್ತೇಜಿಸುತ್ತದೆ. 

ಪ್ಲೇಟ್ ಲೆಟ್ ಕೊರತೆ ಕಾಡುತ್ತಿದೆಯೇ? ಈ ಎಲೆ ಬಳಸಿ ಮ್ಯಾಜಿಕ್ ನೋಡಿ

4. ಕರುಳಿನ ಹುಳುಗಳಿಗೆ ಚಿಕಿತ್ಸೆ(Clears Intestinal Warms) 
ಅಪೌಷ್ಟಿಕತೆ (Malnutritional), ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರುವುದು(Contact With Infected Person), ಮಣ್ಣಿನಲ್ಲಿ ಬರಿಗಾಲಿನಲ್ಲಿ ನಡೆಯುವುದು ಮತ್ತು ಕಲುಷಿತ ಆಹಾರಗಳನ್ನು ತಿನ್ನುವುದು ಮುಂತಾದ ಅಂಶಗಳು ಶಿಶುಗಳಲ್ಲಿ ಕರುಳಿನ ಹುಳುಗಳ ಸೋಂಕನ್ನು ಉಂಟುಮಾಡಬಹುದು. ಇದರಿಂದ ಅವರ ಆರೋಗ್ಯದ ಮೇಲೆ ಅನೇಕ ರೀತಿಯ ಪರಿಣಾಮ ಬೀರಬಹುದು ಎಂದು ಅಧ್ಯಯನ ಹೇಳುತ್ತವೆ. ಪಪ್ಪಾಯಿ ಮತ್ತು ಅದರ ಬೀಜಗಳು ಆಂಥೆಲ್ಮಿಟಿಕ್ (Anthelmintic) ಮತ್ತು ಅಮೀಬಿಕ್(Amoebic) ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡದೆ ಮಲ ಮೂಲಕ ಪರಾವಲಂಬಿಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಒಂದು ಚಮಚ ಪಪ್ಪಾಯಿ ಬೀಜದ ಪುಡಿಗೆ ಜೇನುತುಪ್ಪ(Honey) ಸೇರಿಸಿ ಸೇವಿಸಿ. ಹೀಗೆ ಒಂದೆರಡು ದಿನ ಸೇವಿಸಿದರೆ ಹುಳುಗಳ ಸಮಸ್ಯೆ ನಿವಾರಣೆಯಾಗುತ್ತದೆ.

5. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ(Boost Immunity Power)
ಟೊಮೆಟೊ(Tomato) ಮತ್ತು ಕ್ಯಾರೆಟ್‌ಗಳಿಗೆ(Carrot) ಹೋಲಿಸಿದರೆ ಪಪ್ಪಾಯಿ ಹಣ್ಣಿನಲ್ಲಿ Vitamin A, C,B ಸಮೃದ್ಧವಾಗಿದೆ. ಇದು ಪ್ಯಾಂಟೊಥೆನಿಕ್ ಆಮ್ಲಗಳು (Pantothenic Acids), ಫೋಲೇಟ್ (Folate), ಪೊಟ್ಯಾಸಿಯಮ್(Potassium), ಮೆಗ್ನೀಸಿಯಮ್(Magnesium) ಮತ್ತು ಫ್ಲೇವನಾಯ್ಡ್‌ನಂಥ (Flavonoids) ಪೋಷಕಾಂಶಗಳನ್ನೂ ಒಳಗೊಂಡಿದೆ. ಇವು ಇಮ್ಯುನೊಮಾಡ್ಯುಲೇಟಿಂಗ್ (Immuno Modulating) ಪರಿಣಾಮಗಳನ್ನು ಹೊಂದಿದ್ದು, ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

click me!