Kids Health : ಮಕ್ಕಳಿಗೆ ಹೀಗೆ ನೀಡಿ ಏಲಕ್ಕಿ

By Suvarna NewsFirst Published May 9, 2022, 12:21 PM IST
Highlights

ಲಕ್ಕಿಯು ಮಗುವಿನ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. ಇದರಲ್ಲಿ ವಿಟಮಿನ್ ಎ ಹೇರಳವಾಗಿದ್ದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ವಿಟಮಿನ್ ಎ ಕೂಡ ಕಣ್ಣುಗಳಿಗೆ ಒಳ್ಳೆಯದು. ಸೋಂಕಿನ ವಿರುದ್ಧ ದೇಹವನ್ನು ಇದು ರಕ್ಷಿಸುತ್ತದೆ.

ಮಕ್ಕಳ (Children ) ಹೊಟ್ಟೆ (Stomach) ಚಿಕ್ಕದಾಗಿರುತ್ತದೆ. ಅವರಿಗೆ ದೊಡ್ಡವರಂತೆ ಒಂದೇ ಬಾರಿ ಹೆಚ್ಚು ಆಹಾರ (Food) ಸೇವನೆ ಮಾಡಲು ಸಾಧ್ಯವಿಲ್ಲ.  ಸ್ವಲ್ಪ ಆಹಾರ ಸೇವಿಸಿದ್ರೆ ಹೊಟ್ಟೆ ತುಂಬುತ್ತದೆ. ಮಕ್ಕಳು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುವುದ್ರಿಂದ ಎಲ್ಲ ರೀತಿಯ ಪೌಷ್ಟಿಕಾಂಶ (Nutrition) ವಿರುವ ಆಹಾರ ಸೇವನೆ ಮಾಡುವುದು ಮುಖ್ಯವಾಗುತ್ತದೆ. ಮಗು ಆಹಾರ ಸೇವನೆ ಮಾಡುವಾಗ ನಾವು ಒಂದೇ ರೀತಿಯ ಆಹಾರವನ್ನು ಪದೇ ಪದೇ ನೀಡಬಾರದು. ಮಗುವಿಗೆ ವಿವಿಧ ರೀತಿಯ ಆಹಾರವನ್ನು ನೀಡಬೇಕು. ಪ್ರತಿ ಆಹಾರದಿಂದ ಮಕ್ಕಳಿಗೆ ಸಾಕಷ್ಟು  ಮತ್ತು ವಿಭಿನ್ನ ಪೋಷಕಾಂಶಗಗಳು ಸಿಗುತ್ತವೆ. ಮಕ್ಕಳಿಗೆ ಮಸಾಲೆ ಪದಾರ್ಥವನ್ನು ನಾವು ಕಡಿಮೆ ಪ್ರಮಾಣದಲ್ಲಿ ನೀಡ್ತೇವೆ. ಅದ್ರಲ್ಲೂ ಏಲಕ್ಕಿ ನೀಡುವಾಗ ಪಾಲಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳಿರುತ್ತವೆ. ಏಲಕ್ಕಿಯನ್ನು ಮಕ್ಕಳಿಗೆ ನೀಡಬಹುದೇ ಎಂಬ ಗೊಂದಲವಿರುತ್ತದೆ. ಎಲ್ಲರಿಗೂ ತಿಳಿದಿರುವಂತೆ ಏಲಕ್ಕಿಯನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುತ್ತೇವೆ. ಆದ್ರೆ ರುಚಿ ಹೆಚ್ಚಿಸಲು ಮಾತ್ರವಲ್ಲ ಮಗುವಿಗೆ ಅನೇಕ ಪೋಷಕಾಂಶಗಳನ್ನು ಏಲಕ್ಕಿ ಒದಗಿಸುತ್ತದೆ.  ಮಗುವಿಗೆ ಏಲಕ್ಕಿಯನ್ನು ಹೇಗೆ ನೀಡಬೇಕು ಹಾಗೆ ಏಲಕ್ಕಿಯಿಂದ ಮಗುವಿಗೆ ಏನು ಪ್ರಯೋಜನ ಎಂಬುದನ್ನು ಇಂದು ಹೇಳ್ತೇವೆ.

ಏಲಕ್ಕಿಯು ಆಹ್ಲಾದಕರ ಸುವಾಸನೆಯನ್ನು ಹೊಂದಿದೆ. ಏಲಕ್ಕಿ ಹಾಕಿದ ಆಹಾರ ಎಲ್ಲರನ್ನು ಸೆಳೆಯುತ್ತದೆ. ಏಲಕ್ಕಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಏಲಕ್ಕಿಯಲ್ಲಿ ಸಾಕಷ್ಟು ಔಷಧಿಗುಣವಿದೆ. ಏಲಕ್ಕಿಯು ಜೀರ್ಣಕ್ರಿಯೆಯನ್ನು ಸುಧಾರಿಸಲು, ಆರೋಗ್ಯಕರ ಚರ್ಮವನ್ನು ಮತ್ತು ಶೀತ ಮತ್ತು ಜ್ವರದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಏಲಕ್ಕಿಯು ಉತ್ಕರ್ಷಣ ನಿರೋಧಕ, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಕ್ಯಾನ್ಸರ್ ಗುಣಲಕ್ಷಣಗಳನ್ನು ಹೊಂದಿದೆ. ಏಲಕ್ಕಿ ತಿನ್ನುವುದರಿಂದ ಮಗುವಿನ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

ಮಗುವಿಗೆ ಏಲಕ್ಕಿ ತಿನ್ನಿಸುವುದು ಹೇಗೆ ? : ಮಗುವಿಗೆ ನೀವು ಏಲಕ್ಕಿಯನ್ನು ಹಲವು ವಿಧಗಳಲ್ಲಿ ತಿನ್ನಿಸಬಹುದು. ಆದ್ರೆ ಬೀಜದ ಬಗ್ಗೆ ಗಮನವಿರಲಿ. ಬೀಜ ತೇವ ಹಾಗೂ ಮೃದುವಾಗಿರಬೇಕು. ಏಲಕ್ಕಿ ಬೀಜ, ಮಗುವಿನ ಗಂಟಲಿಗೆ ಸಿಲುಕಿಕೊಳ್ಳುವ ಅಪಾಯವಿರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ನೀಡಬೇಕು.  ಏಲಕ್ಕಿ ಬೀಜಗಳನ್ನು ಕೆಲವು ಗಂಟೆಗಳ ಕಾಲ ಇಲ್ಲವೆ ಐದು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದು ಬೀಜವನ್ನು ಮೃದುಗೊಳಿಸುತ್ತದೆ.  

ಏಲಕ್ಕಿ ತಿನ್ನುವುದು ಹೇಗೆ ? : ಏಲಕ್ಕಿಯನ್ನು ನೀರಿನಲ್ಲಿ ನೆನೆಸಿಟ್ಟು ನಂತ್ರ ನೀಡುವುದು ಸಮಸ್ಯೆ ಎಲ್ಲಿಸಿದ್ರೆ ನೀವು ಏಲಕ್ಕಿಯನ್ನು ಕುಟ್ಟಿ ಪುಡಿಯನ್ನು ತಯಾರಿಸಿ. ನಂತರ ಈ ಪುಡಿಯನ್ನು ಹಾಲಿಗೆ ಸೇರಿಸಿ ಮಗುವಿಗೆ ನೀಡಬಹುದು ಅಥವಾ ಸ್ಮೂಥಿಯಲ್ಲಿ ಬೆರೆಸಿ ಕೊಡಬಹುದು. ಏಲಕ್ಕಿ ಪುಡಿಯನ್ನು ಸಿಹಿತಿಂಡಿಗಳು, ಮೊಸರುಗಳಿಗೆ ಕೂಡ ಸೇರಿಸಬಹುದು.

ರಾತ್ರಿ ಮಲಗುವ ಮುನ್ನ ಈ ಆಹಾರ ಸೇವಿಸ್ಬೇಡಿ

ಏಲಕ್ಕಿ ಸೇವನೆಯಿಂದ ಮಕ್ಕಳಿಗೆ ಆಗಲಿದೆ ಈ ಎಲ್ಲ ಪ್ರಯೋಜನ :  

ಕೊಬ್ಬಿನ ಸಮಸ್ಯೆಯಿಲ್ಲ : ಒಂದು ಅಧ್ಯಯನದ ಪ್ರಕಾರ, ಏಲಕ್ಕಿ ಪುಡಿ ಬೊಜ್ಜು ಅಥವಾ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ. ಇದು ಡಿಸ್ಲಿಪಿಡೆಮಿಯಾ, ಆಕ್ಸಿಡೇಟಿವ್ ಒತ್ತಡ ಮತ್ತು ಯಕೃತ್ತಿನ ಹಾನಿಯಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ.

ಹೊಟ್ಟೆಯ ಆರೋಗ್ಯ ವೃದ್ಧಿ : ಏಲಕ್ಕಿಯಲ್ಲಿ ಜೀರ್ಣಕಾರಿ ಕಿಣ್ವಗಳಿವೆ. ಇದು ಮಕ್ಕಳ ಜೀರ್ಣಕ್ರಿಯೆ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಏಲಕ್ಕಿಯಿಂದ ಚಯಾಪಚಯ ಕ್ರಿಯೆ ವೃದ್ಧಿಸುತ್ತದೆ. ಮಗುವಿಗೆ ಹೊಟ್ಟೆನೋವು ಅಥವಾ ಮಲಬದ್ಧತೆ ಇದ್ದರೆ ಮಗುವಿನ ಆಹಾರದಲ್ಲಿ ಏಲಕ್ಕಿಯನ್ನು ಪುಡಿ ಮಾಡಿ ನೀಡಬೇಕು.  

BLOOD IN URINE: ಮೂತ್ರದ ಬಣ್ಣ ಬದಲಾಗೋದ್ಯಾಕೆ? ಎಚ್ಚರಿಕೆ ವಹಿಸಿ

ಯಕೃತ್ತಿನ ರಕ್ಷಣೆ :  ಏಲಕ್ಕಿಯು ಮಗುವಿನ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. ಇದರಲ್ಲಿ ವಿಟಮಿನ್ ಎ ಹೇರಳವಾಗಿದ್ದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ವಿಟಮಿನ್ ಎ ಕೂಡ ಕಣ್ಣುಗಳಿಗೆ ಒಳ್ಳೆಯದು. ಸೋಂಕಿನ ವಿರುದ್ಧ ದೇಹವನ್ನು ಇದು ರಕ್ಷಿಸುತ್ತದೆ.

click me!