ಬಾಯಿಗೆ ರುಚಿಯಾಗಿರ್ಬೇಕು ಎನ್ನುವ ಕಾರಣಕ್ಕೆ ಆರೋಗ್ಯಕರ ಆಹಾರಕ್ಕಿಂತ ರುಚಿಕರ ಆಹಾರವನ್ನು ನಾವು ಆಯ್ಕೆ ಮಾಡಿಕೊಳ್ತೇವೆ. ನಾಲಿಗೆಗೆ ರುಚಿ ಎನ್ನಿಸುವ ಆಹಾರ, ದೇಹದ ಆರೋಗ್ಯ ಹಾಳು ಮಾಡುತ್ತೆ. ಅದ್ರಲ್ಲೂ ರಾತ್ರಿ ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಗಮನವಿರಬೇಕು.
ಪದೇ ಪದೇ ಆರೋಗ್ಯ (Health) ಹಾಳಾಗ್ತಿದೆ ಅಂದ್ರೆ ನಿಮ್ಮ ಆಹಾರ (Food) ಸರಿಯಾಗಿಲ್ಲ ಎಂದೇ ಅರ್ಥ. ಆರೋಗ್ಯಕರ ದೇಹಕ್ಕೆ ನೀವು ಉತ್ತಮ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಅವಶ್ಯಕ. ಪೋಷಕಾಂಶ (Nutrition) ಗಳಿಂದ ತುಂಬಿರುವ ಆಹಾರವನ್ನು ನಾವು ಸೇವನೆ ಮಾಡ್ಬೇಕಾಗುತ್ತದೆ. ಕೆಲಸ (Work) ದ ಒತ್ತಡ (Stress) ಹಾಗೂ ಬದಲಾದ ಜೀವನ ಶೈಲಿ (Lifestyle) ಯಿಂದಾಗಿ ಜನರು ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆಹಾರದ ಹೆಸರಿನಲ್ಲಿ ಏನೇನೋ ಸೇವನೆ ಮಾಡ್ತಾರೆ. ಈ ಕಾರಣದಿಂದಾಗಿ ದೇಹಕ್ಕೆ ಅಗತ್ಯ ಪೋಷಕಾಂಶ ಸಿಗುವುದಿಲ್ಲ. ಹಾಗೆ ಈ ಆಹಾರಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದಲ್ಲದೆ ಮನೆಯ ಆಹಾರಕ್ಕಿಂತ ಹೊರಗಿನ ಆಹಾರ ಜನರಿಗೆ ಇಷ್ಟವಾಗುತ್ತದೆ. ಇದು ಅವರನ್ನು ಗಂಭೀರ ಕಾಯಿಲೆ (Disease) ಗಳಿಗೆ ನೂಕುತ್ತದೆ. ದಿನವಿಡಿ ನಾವು ಸೇವಿಸುವ ಆಹಾರಕ್ಕಿಂತ ರಾತ್ರಿ ನಾವು ಯಾವ ಆಹಾರ ಸೇವನೆ ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ರಾತ್ರಿ ಏನೇ ತಿಂದರೆ ಆರೋಗ್ಯ ಕೆಡುತ್ತದೆ ಎಂಬುದು ನಮಗೆ ಗೊತ್ತಿರಬೇಕು. ರಾತ್ರಿ ಕೆಲ ಆಹಾರವನ್ನು ಅಪ್ಪಿತಪ್ಪಿಯೂ ಸೇವನೆ ಮಾಡ್ಬಾರದು. ಅವುಗಳನ್ನು ರಾತ್ರಿ ಸೇವನೆ ಮಾಡಿದ್ರೆ ಸಮಸ್ಯೆಯುಂಟಾಗುತ್ತದೆ.
ರಾತ್ರಿ ಮಲಗುವಾಗ ಏನು ಸೇವಿಸಬಾರದು ಗೊತ್ತಾ?
undefined
ಕಿತ್ತಳೆ ಹಣ್ಣಿನ ಜ್ಯೂಸ್ (Orange Fruit Juice) : ರಾತ್ರಿ ಮಲಗುವ ಮುನ್ನ ಅನೇಕರು ಜ್ಯೂಸ್ ಕುಡಿಯುತ್ತಾರೆ. ಜ್ಯೂಸ್ ಕುಡಿಯುವುದು ತಪ್ಪಲ್ಲ, ಆದರೆ ರಾತ್ರಿ ಮಲಗುವ ಮುನ್ನ ಕಿತ್ತಳೆ ಹಣ್ಣಿನ ಜ್ಯೂಸ್ ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ. ರಾತ್ರಿ ಮಲಗಿದ ನಂತರ ಕಿತ್ತಳೆ ಹಣ್ಣಿನ ಜ್ಯೂಸ್ ಜೀರ್ಣವಾಗುವುದಿಲ್ಲ ಮತ್ತು ದೇಹದಲ್ಲಿ ಆಮ್ಲ ರೂಪುಗೊಳ್ಳುತ್ತದೆ. ಹಾಗಾಗಿ ರಾತ್ರಿ ಮಲಗುವ ಮೊದಲು ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡ್ಬೇಡಿ. ಅದರ ಬದಲು ಕಿತ್ತಳೆ ಹಣ್ಣನ್ನು ತಿನ್ನಿ.
Health Tips : ಮಾವು ತಿನ್ನುವ ಮೊದಲು 30 ನಿಮಿಷ ನೀರಿನಲ್ಲಿ ನೆನೆಸಿಟ್ಟು ನೋಡಿ
ಕಾಫಿ : ಬೆಳಿಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವಂತೆ ರಾತ್ರಿ ಮಲಗುವ ಮೊದಲು ಕಾಫಿಯನ್ನು ಸೇವಿಸುವವರಿದ್ದಾರೆ. ನಿಮಗೂ ಈ ಅಭ್ಯಾಸವಿದ್ರೆ ಇಂದೇ ಬಿಟ್ಬಿಡಿ. ಇದು ನಿದ್ರೆ ಬರದಂತೆ ತಡೆಯುತ್ತದೆ. ನಿದ್ರೆ ಕಡಿಮೆಯಾದರೆ ಆರೋಗ್ಯ ಹದಗೆಡುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬರಬೇಕೆಂದ್ರೆ ಕಾಫಿ ಸೇವನೆ ಮಾಡ್ಬೇಡಿ. ಅನೇಕರಿಗೆ ಟೀ ಕೂಡ ನಿದ್ರೆಯನ್ನು ತಡೆಯುತ್ತದೆ. ಅಂಥವರು ಸಂಜೆ ಸಮಯದಲ್ಲಿ ಅಪ್ಪಿತಪ್ಪಿಯೂ ಟೀ ಕುಡಿಯಬೇಡಿ.
ಸೋಡಾದಿಂದ ದೂರವಿರಿ : ರಾತ್ರಿ ಊಟದ ನಂತರ ಸೋಡಾ ಕುಡಿಯುವ ಅಭ್ಯಾಸ ಅನೇಕರಿಗಿರುತ್ತದೆ. ತಿಂದ ಆಹಾರ ಜೀರ್ಣವಾಗುತ್ತದೆ ಎಂಬ ಕಾರಣಕ್ಕೆ ಬಹುತೇಕರು ಸೋಡಾ ಕುಡಿಯುತ್ತಾರೆ. ಆದ್ರೆ ಸೋಡಾ ಸೇವಿಸುವುದರಿಂದ ಹೊಟ್ಟೆಯಲ್ಲಿ ಸಮಸ್ಯೆ ಶುರುವಾಗುತ್ತದೆ. ಹಾಗಾಗಿ ರಾತ್ರಿ ಊಟದ ನಂತ್ರ ನೀರು ಕುಡಿಯಿರಿ, ಸೋಡಾ ಬೇಡ.
Kitchen Tips : ಮಡಿಕೆ ನೀರು ತಣ್ಣಗಿರಲು ಈ ಟಿಪ್ಸ್ ಫಾಲೋ ಮಾಡಿ
ಪಿಜ್ಜಾ ಬೇಡ್ವೇ ಬೇಡ : ಫಾಸ್ಟ್ ಫುಡ್ ಸೇವಿಸಿ ಮಲಗುವವರು ಅನೇಕರಿದ್ದಾರೆ. ಮತ್ತೆ ಕೆಲವರಿಗೆ ಪಿಜ್ಜಾ ಅಂದ್ರೆ ಬಾಯಲ್ಲಿ ನೀರೂರುತ್ತೆ. ಮಧ್ಯ ರಾತ್ರಿ ನೀಡಿದ್ರೂ ಪಿಜ್ಜಾ ತಿನ್ನುತ್ತಾರೆ. ಅವರ ರಾತ್ರಿ ಆಹಾರವೇ ಪಿಜ್ಜಾ ಆಗಿರುತ್ತದೆ. ಪಿಜ್ಜಾ ಮೈದಾದಿಂದ ಮಾಡಿದ ಆಹಾರ. ಅದು ಸುಲಭವಾಗಿ ಜೀರ್ಣವಾಗುವುದಿಲ್ಲ. ಅದರಿಂದ ಅನೇಕ ಸಮಸ್ಯೆಯುಂಟಾಗುತ್ತದೆ. ಹಾಗಾಗಿ ರಾತ್ರಿ ಮಲಗುವ ಮೊದಲು ಪಿಜ್ಜಾ ಸೇವನೆ ತಪ್ಪಿಸಿ. ರಾತ್ರಿ ಪಿಜ್ಜಾ ಸೇವನೆ ಮಾಡಿದ್ರೆ ನಿಮ್ಮ ತೂಕ ಹೆಚ್ಚಾಗುತ್ತದೆ. ತಿಂದ ತಕ್ಷಣ ಯಾವುದೇ ಚಟುವಟಿಕೆ ಇಲ್ಲದೆ ಮಲಗುವುದ್ರಿಂದ ಬೊಜ್ಜು ಹೆಚ್ಚಾಗುವ ಅಪಾಯ ಹೆಚ್ಚಿರುತ್ತದೆ.