Blood in Urine: ಮೂತ್ರದ ಬಣ್ಣ ಬದಲಾಗೋದ್ಯಾಕೆ? ಎಚ್ಚರಿಕೆ ವಹಿಸಿ

By Suvarna News  |  First Published May 8, 2022, 12:19 PM IST

ಮೂತ್ರದ ಬಣ್ಣ ಬದಲಾಗುವ ಕುರಿತು ಗಮನ ನೀಡಬೇಕು. ಕೆಲವೊಮ್ಮೆ ಮೂತ್ರದಲ್ಲಿ ರಕ್ತವೂ ಹೋಗಬಹುದು. ಅದು ಕ್ಯಾನ್ಸರ್‌ ನಂತಹ ರೋಗದಿಂದಲೂ ಆಗಿರಬಹುದು. ಆದರೆ, ಎಲ್ಲ ಬಾರಿಯೂ ಗಂಭೀರ ಕಾರಣವೇ ಇರಬೇಕಾಗಿಲ್ಲ. ಬೀಟ್‌ ರೂಟ್‌ ತಿಂದರೂ ಮೂತ್ರ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.


ಮೂತ್ರದ (Urine) ಬಣ್ಣ (Colour) ಆರೋಗ್ಯದ ಹಲವು ಸ್ಥಿತಿಗಳನ್ನು ಸೂಚಿಸುತ್ತದೆ. ಹೀಗಾಗಿಯೇ ಮೊದಲೆಲ್ಲ ವೈದ್ಯರು “ಮೂತ್ರ ಯಾವ ಬಣ್ಣದಲ್ಲಿ ಹೋಗುತ್ತಿದೆʼ ಎಂದು ಪ್ರಶ್ನಿಸುತ್ತಿದ್ದರು. ಈಗ ಮೂತ್ರಸಂಬಂಧಿ ವಿವಿಧ ಪರೀಕ್ಷೆಗಳು ಬಂದಿವೆ. ಮೂತ್ರದ ಬಣ್ಣದಿಂದಲೇ ಕೆಲವು ರೋಗ (Disease) ಅಥವಾ ಸಮಸ್ಯೆಗಳನ್ನು ಗುರುತಿಸಬಹುದು. ಹಲವಾರು ಕಾರಣಗಳಿಂದ ಮೂತ್ರದ ತಿಳಿಹಳದಿ (Pale Yellow) ಬಣ್ಣದಿಂದ ಬೇರೆ ಬಣ್ಣಕ್ಕೆ ಬದಲಾಗುತ್ತದೆ. ಕ್ಯಾನ್ಸರ್‌ (Cancer) ನಂತಹ ರೋಗವೂ ಇದಕ್ಕೆ ಕಾರಣವಾಗಿರಬಹುದು. ಹಾಗೆಯೇ, ನಾವು ಸೇವಿಸುವ ಆಹಾರದಿಂದಲೂ ಕೆಲವೊಮ್ಮೆ ಮೂತ್ರದ ಬಣ್ಣ ಬದಲಾಗಬಹುದು. ಹೀಗಾಗಿ, ಅದರ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ.
ಟಾಯ್ಲೆಟ್‌ (Toilet) ಸಂಬಂಧಿತ ವಿಷಯಗಳ ಬಗ್ಗೆ ಅನೇಕರು ಮುಜುಗರ ಪಟ್ಟುಕೊಳ್ಳುತ್ತಾರೆ. ಮುಕ್ತವಾಗಿ ಅನಿಸಿಕೆಗಳನ್ನು ಹಂಚಿಕೊಳ್ಳುವುದಿಲ್ಲ. ಆದರೆ, ಕೆಲವು ವಿಚಾರಗಳನ್ನು ಹಂಚಿಕೊಳ್ಳುವುದರಿಂದ ಆರೋಗ್ಯದ ಮಾಹಿತಿ ತಿಳಿದುಬರುತ್ತದೆ. 
ಮೂತ್ರದ ಬಣ್ಣ ಬದಲಾಗುವುದು ತೀರ ಸಹಜವೇನಲ್ಲ. ಕೆಲವೊಮ್ಮೆ ಮೂತ್ರದಲ್ಲಿ ರಕ್ತ ಹೋದಂತೆ ಭಾಸವಾಗುತ್ತದೆ. ಮೂತ್ರ ತಿಳಿಕೆಂಪು ಬಣ್ಣಕ್ಕೆ ತಿರುಗುತ್ತದೆ. ಅದನ್ನೂ ಸಹ ಗುರುತಿಸದೆ ಇರುವುದರಿಂದ ಮುಂದೆ ಭಾರೀ ಬೆಲೆ ತೆರಬೇಕಾಗಿ ಬರಬಹುದು. ಮೊದಲೇ ಅದನ್ನು ಗುರುತಿಸಿಕೊಂಡರೆ ಮಾರಕ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಬ್ರಿಟನ್‌ ನ ಖ್ಯಾತ ವೈದ್ಯರಾದ ಡಾ.ಮಿರಿಯಮ್‌ ಸ್ಟಪ್ಪರ್ಡ್‌ ಅವರ ಪ್ರಕಾರ, ಕೆಲವರ ಮೂತ್ರದೊಂದಿಗೆ ರಕ್ತ ಬರುತ್ತದೆ, ಹೀಗಾಗಿ, ಮೂತ್ರದ ಬಗ್ಗೆ ಗಮನ ನೀಡಬೇಕು. 

Mother's Day 2022: ಅಮ್ಮನಿಗೆ ಆರೋಗ್ಯದ ಉಡುಗೊರೆ ನೀಡಿ..

ಇತ್ತೀಚೆಗೆ ಡಾ.ಮಿರಿಯಮ್‌ ಸ್ಟಪ್ಪರ್ಡ್‌ ಅವರು ಬರೆದಿರುವ ಪ್ರಬಂಧವೊಂದರಲ್ಲಿ ಮೂತ್ರದಲ್ಲಿ ರಕ್ತ (Blood) ಹೋಗುವುದು ಏಕೆಂದು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಒಮ್ಮೆ ಅವರ ಸ್ನೇಹಿತರೊಬ್ಬರು ಗಾಬರಿಯಿಂದ ಫೋನ್‌ ಮಾಡಿ, “ಮೂತ್ರ ಕೆಂಪಾದ ಹಾಗೆ ಕಾಣಿಸುತ್ತಿದೆ, ಏಕಿರಬಹುದು, ಯಾವುದಾದರೂ ರೋಗ ಇರಬಹುದೇ?ʼಎಂದು ವಿಚಾರಿಸಿದ್ದರು. ಆಗ ಅವರಲ್ಲಿ ಆಹಾರದ ಕುರಿತು ಕೇಳಿದಾಗ ಹಿಂದಿನ ದಿನ ಬೀಟ್‌ ರೂಟ್‌ (Beetroot) ಸೇವನೆ ಮಾಡಿರುವುದನ್ನು ತಿಳಿಸಿದ್ದರು. ಬೀಟ್‌ ರೂಟ್‌ ತಿನ್ನುವುದರಿಂದ ಕೆಲವರ ಮೂತ್ರ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಆಗ ಮೂತ್ರದಲ್ಲಿ ರಕ್ತ ಹೋದಂತೆ ಭಾಸವಾಗುತ್ತದೆ. 
ಬೀಟ್‌ ರೂಟ್‌ ದಟ್ಟ ಗುಲಾಬಿ ಬಣ್ಣದಲ್ಲಿರುತ್ತದೆ. ಬೀಟ್‌ ರೂಟ್‌ ಅನ್ನು ಯಾವುದೇ ಪದಾರ್ಥದಲ್ಲಿ ಬೆರೆಸಿದರೂ ಬಹಳ ಸುಲಭವಾಗಿ ತಿಳಿದುಬಿಡುತ್ತದೆ. ಅಷ್ಟರ ಮಟ್ಟಿಗೆ ಬೀಟ್‌ ರೂಟ್‌ ಬಣ್ಣಕ್ಕೆ ತನ್ನದೇ ಆದ ಗುರುತಿದೆ. ಅಂತಹ ಬೀಟ್‌ ರೂಟ್‌ ಮೂತ್ರದ ಬಣ್ಣವನ್ನೂ ಬದಲಿಸಿಬಿಡುತ್ತದೆ. 

Tap to resize

Latest Videos

ಹಣೆ ಕಪ್ಪಗಿದ್ದರೆ ಈ ರೀತಿ ಪರಿಹಾರ ಕಂಡುಕೊಳ್ಳಿ..

ಮೂತ್ರಕೋಶದ ಕ್ಯಾನ್ಸರ್‌ ನಿಂದಲೂ ಬಣ್ಣ ಬದಲು
ಬ್ಲಾಡರ್‌ (Bladder) ಕ್ಯಾನ್ಸರ್‌ ರೋಗಿಗಳ ಮೂತ್ರದಲ್ಲಿ ರಕ್ತ ಬರುವುದನ್ನು ಗುರುತಿಸಲಾಗಿದೆ. ಇದನ್ನು ಹೆಮಟೂರಿಯಾ ಎನ್ನಲಾಗುತ್ತದೆ. ಲಂಡನ್‌ ನ ಇಂಪೀರಿಯಲ್‌ ಕಾಲೇಜಿನ ಅನಿಕಾ ಮದಾನ್‌ ಅವರ ಪ್ರಕಾರ, ಮೂತ್ರಕೋಶದ ಕ್ಯಾನ್ಸರ್‌ ಇರುವ ಶೇ.80ರಷ್ಟು ರೋಗಿಗಳಲ್ಲಿ ಮೂತ್ರದಲ್ಲಿ ರಕ್ತ ಹೋಗುವ ಸಮಸ್ಯೆ ಕಾಣುತ್ತದೆ. ಇದು ಅವರ ಅನುಭವಕ್ಕೆ ಬಂದಿರುವ ಸಂಗತಿ.
ಹಾಗೆಂದು ಮೂತ್ರ ಕೆಂಪಾಗುವ ಎಲ್ಲ ಪ್ರಕರಣಗಳೂ ಕ್ಯಾನ್ಸರ್‌ ಗೆ ಸಂಬಂಧಿಸಿಲ್ಲ. ಇದಕ್ಕೆ ಇನ್ನೂ ಬೇರೆ ಹಲವಾರು ಕಾರಣ ಇರಬಹುದು. ಪ್ರಾಸ್ಟೇಟ್‌ ದೊಡ್ಡದಾಗಿರುವಾಗ, ಮೂತ್ರನಾಳ, ಮೂತ್ರಕೋಶದ ಸೋಂಕಿದ್ದಾಗಲೂ ಮೂತ್ರದಲ್ಲಿ ರಕ್ತ ಹೋಗುವುದು ಕಂಡುಬರುತ್ತದೆ. ಇನ್ನೂ ಅಚ್ಚರಿಯೆಂದರೆ, ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವ್ಯಾಯಾಮ ಮಾಡಿದರೂ ಮೂತ್ರದಲ್ಲಿ ರಕ್ತ ಹೋಗುವುದು ಸಾಮಾನ್ಯ. ಹೆಚ್ಚು ಸಮಯ ಓಡುವುದು, ಸ್ವಿಮ್ಮಿಂಗ್‌ ಮಾಡುವುದು ಮುಂತಾದ ಚಟುವಟಿಕೆಗಳಿಂದ ಮೂತ್ರದಲ್ಲಿ ರಕ್ತ ಹೋಗುತ್ತದೆ. 
ಹಾಗೆಯೇ, ಕೆಲವು ಔಷಧಗಳಿಂದಲೂ ಮೂತ್ರದಲ್ಲಿ ರಕ್ತ ಹೋದಂತೆ ಭಾಸವಾಗಬಹುದು. ಬ್ಲಾಕ್‌ ಬೆರಿ, ಕೆಲವು ಕೆಂಪು ಬಣ್ಣದ (Red Food) ಆಹಾರ ಪದಾರ್ಥಗಳಿಂದಲೂ ಮೂತ್ರದ ಬಣ್ಣ ಕೆಂಪಾಗಬಹುದು.

click me!