ಎಲ್ಲಾ ಹುಡುಗೀರೂ ನನ್ನ ಹಿಂದೆಯೇಬರ್ತಾರೆ, ಇದು ಹುಡುಗನ ಭ್ರಮೆಯೋ, ರೋಗವೋ?

By Suvarna NewsFirst Published Apr 6, 2024, 11:09 AM IST
Highlights

ನಾನು ಚೆನ್ನಾಗಿದ್ದೇನೆ, ಎಲ್ಲರೂ ನನ್ನನ್ನೇ ನೋಡ್ತಿದ್ದಾರೆ ಅಂತ ಅನೇಕರು ಭಾವಿಸ್ತಿರುತ್ತಾರೆ. ಎಲ್ಲ ಹುಡುಗಿಯರೂ ನನ್ನನ್ನೇ ಪ್ರೀತಿ ಮಾಡ್ತಾರೆ ಎಂಬ ನಂಬಿಕೆಯಲ್ಲಿರುತ್ತಾರೆ. ಆದ್ರೆ ವಾಸ್ತವವೇ ಬೇರೆ ಆಗಿರುತ್ತದೆ. ಇದೊಂದು ಖಾಯಿಲೆ ಅನ್ನೋದೇ ಜನರಿಗೆ ಗೊತ್ತಾಗೋದಿಲ್ಲ.  
 

ಮಾನಸಿಕ ಸಮಸ್ಯೆಗಳನ್ನು ಬೇಗ ಗುರುತಿಸೋದು ಕಷ್ಟ. ನಾವದನ್ನು ಸಾಮಾನ್ಯ ಎಂದುಕೊಳ್ತೇವೆ. ಅನೇಕ ವಿಷ್ಯಗಳನ್ನು ಗಂಭೀರವಾಗಿ ಪರಿಗಣಿಸೋದೇ ಇಲ್ಲ. ಸಮಸ್ಯೆ ಉಲ್ಬಣಿಸಿದಾಗ ಜನರು ವೈದ್ಯರ ಬಳಿ ಹೋಗ್ತಾರೆ. ಈ ಸಮಯದಲ್ಲೂ ಅದು ಮಾನಸಿಕ ಖಾಯಿಲೆ ಎಂಬುದನ್ನು ಜನರು ಸುಲಭವಾಗಿ ಒಪ್ಪಿಕೊಳ್ಳೋದಿಲ್ಲ. ದೈಹಿಕ ಖಾಯಿಲೆಯಂತೆ ಮಾನಸಿಕ ಖಾಯಿಲೆಗೆ ಕೂಡ ಚಿಕಿತ್ಸೆ ಅಗತ್ಯ. ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕಾಗ ಮಾನಸಿಕ ರೋಗ ಕೂಡ ಶೀಘ್ರದಲ್ಲೇ ಗುಣವಾಗುತ್ತದೆ. 

ಚೀನಾ (China) ದಲ್ಲಿ ಯುವಕನೊಬ್ಬ ಸದ್ಯ ಸುದ್ದಿಯಲ್ಲಿದ್ದಾನೆ. ಆತನ ಸಮಸ್ಯೆ ಎಲ್ಲರನ್ನು ಬೆರಗುಗೊಳಿಸಿದೆ. 20 ವರ್ಷದ ಲಿಯು ಹೆಸರಿನ ಈ ವ್ಯಕ್ತಿಗೆ ವಿಚಿತ್ರ ಖಾಯಿಲೆ (Disease) ಕಾಡ್ತಿದೆ. ಚೀನಾದ ಯುವಕನಿಗೆ ತನ್ನ ಸುತ್ತಮುತ್ತಲಿರುವ ಎಲ್ಲ ಹುಡುಗಿಯರು ತನ್ನನ್ನೇ ಪ್ರೀತಿ (Love) ಮಾಡ್ತಿದ್ದಾರೆ ಎನ್ನುವ ಭ್ರಮೆ ಶುರುವಾಗಿದೆ. ಹುಡುಗಿಯರು ಬಾಯಿಗೆ ಬಂದಹಾಗೆ ಈತನಿಗೆ ಬೈದ್ರೂ ಈತ ತಲೆಕೆಡಿಸಿಕೊಳ್ಳೋದಿಲ್ಲ. ಅವರ ಬೈಗುಳ ಕೂಡ ಈತನಿಗೆ ಪ್ರೀತಿಯ ಮಾತಿನಂತೆ ಕೇಳುತ್ತದೆ. 

ಬೆಳಗ್ಗೆದ್ದು ಈ ತಪ್ಪು ಮಾಡ್ತಿರೋದಕ್ಕೆ ನಿಮ್ಗೆ ದಿನವಿಡೀ ಸುಸ್ತಾಗ್ತಿದೆ ಅಂತ ಫೀಲ್ ಆಗೋದು!

ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಲಿಯು, ಅಲ್ಲಿರುವ ಎಲ್ಲ ಯುವಕರಿಗಿಂತ ತಾನು ಸುರ ಸುಂದರಾಂಗ ಎನ್ನುವ ಭ್ರಾಂತಿಯಲ್ಲಿದ್ದಾನೆ. ಎಲ್ಲ ಹುಡುಗಿಯರು ತನ್ನ ಹಿಂದೆ ಬರ್ತಾರೆ ಎಂಬ ಭ್ರಮೆಯಲ್ಲಿದ್ದಾನೆ. ಅನೇಕ ಹುಡುಗಿಯರಿಗೆ ಲಿಯು ದೊಡ್ಡ ಸಮಸ್ಯೆಯಾಗಿದ್ದೂ ಇದೆ. ಆರಂಭದಲ್ಲಿ ಇದ್ರ ಬಗ್ಗೆ ಲಿಯು ಹೆಚ್ಚು ಗಮನ ಹರಿಸಿರಲಿಲ್ಲ. ಆದ್ರೆ ವಿದ್ಯಾಭ್ಯಾಸದ ಮೇಲೆ ಇದರ ಪರಿಣಾಮ ಕಾಣಿಸಿತ್ತು. ರಾತ್ರಿ ಸರಿಯಾಗಿ ನಿದ್ರೆ ಬರ್ತಿರಲಿಲ್ಲ. ಆ ನಂತ್ರ ವೈದ್ಯರನ್ನು ಭೇಟಿಯಾದಾಗ ಈತನ ಸಮಸ್ಯೆ ಏನು ಎಂಬುದು ಗೊತ್ತಾಗಿದೆ.

ಈ ವರ್ಷ ಫೆಬ್ರವರಿಯಲ್ಲೇ ಲಿಯುಗೆ ಸಮಸ್ಯೆ ಕಾಣಿಸಿಕೊಂಡಿದೆ. ದಿನ – ರಾತ್ರಿ ಲಿಯು, ಹುಡುಗಿಯರು ತನ್ನನ್ನು ಪ್ರೀತಿ ಮಾಡ್ತಾರೆ, ತಾನೆಂದ್ರೆ ಎಲ್ಲರಿಗೂ ಇಷ್ಟ ಎನ್ನುವ ನಂಬಿಕೆಯಲ್ಲಿ ಬದುಕಲು ಶುರು ಮಾಡಿದ್ದ. ಆತನಿಗೆ ವಾಸ್ತವ ಹಾಗೂ ಕಲ್ಪನೆ ಮಧ್ಯೆ ವ್ಯತ್ಯಾಸ ಗೊತ್ತಾಗ್ತಿರಲಿಲ್ಲ. ಯಾಕೆ ಹೀಗಾಗ್ತಿದೆ ಎಂಬುದನ್ನು ತಿಳಿಯಲು ಲಿಯು ಆಸ್ಪತ್ರೆಗೆ ಹೋಗಿದ್ದಾನೆ. ಆಗ ಲಿಯುಗೆ ಡಿಲುಶನಲ್ ಲವ್ ಡಿಸಾರ್ಡರ್ (Delusional Love Disorder) ಎಂಬ ಖಾಯಿಲೆ ಕಾಡ್ತಿದೆ ಎಂಬುದು ಗೊತ್ತಾಗಿದೆ. ಈ ಖಾಯಿಲೆಯಲ್ಲಿ ಜನರಿಗೆ ಪ್ರೀತಿಯ ಭಮೆ ಕಾಡುತ್ತದೆ.  

ಡಿಲುಶನಲ್ ಲವ್ ಡಿಸಾರ್ಡರ್ ಎಂದರೇನು? : ಡಿಲುಶನಲ್ ಲವ್ ಡಿಸಾರ್ಡರ್ ಎಂಬುದು ಮಾನಸಿಕ ಆರೋಗ್ಯ ಸ್ಥಿತಿ. ಭ್ರಮೆಗೆ ಸಂಬಂಧಿಸಿದ ಖಾಯಿಲೆಯ ಒಂದು ಭಾಗ ಇದು. ವಾಸ್ತವಿಕತೆಯನ್ನು ಕಲ್ಪನೆಯಿಂದ ಬೇರ್ಪಡಿಸಲು ಈ ಸ್ಥಿತಿಯಲ್ಲಿ ಕಷ್ಟವಾಗುತ್ತದೆ. ಇದ್ರಲ್ಲಿ ಕಿರುಕುಳ, ಅಸೂಯೆ ಕಾಣಿಸಿಕೊಳ್ಳುತ್ತದೆ. ತನ್ನ ಸುತ್ತಮುತ್ತ ಇರುವ ಜನರು ನನ್ನ ಮೇಲೆ ಪ್ರೀತಿಯ ಭಾವನೆ ಹೊಂದಿದ್ದಾರೆ, ರೋಮ್ಯಾಂಟಿಕ್ ಆಗಿದ್ದಾರೆ ಎಂದು ಈ ಅಸ್ವಸ್ಥತೆಯಿಂದ ಬಳಲುವ ಜನರಿಗೆ ಕಾಡುತ್ತದೆ. ಇದು ದೈನಂದಿನ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ. ನಿತ್ಯದ ಕೆಲಸಕ್ಕೆ ಅಡ್ಡಿಯಾಗುತ್ತದೆ. ಸುತ್ತಮುತ್ತಲಿನ ಜನರ ಜೊತೆ ಸಂವಹನ ನಡೆಸಲು ಸಾಧ್ಯವಾಗೋದಿಲ್ಲ. ಓದು, ಕೆಲಸ, ನಿದ್ರೆಗೆ ಇದ್ರಿಂದ ಸಮಸ್ಯೆಯಾಗುತ್ತದೆ. ಈ ಸ್ಥಿತಿಯು ಸಾಮಾನ್ಯವಾಗಿ ವಸಂತ ಋತುವಿನಲ್ಲಿ ರೋಗಿಯಲ್ಲಿ ಕಂಡುಬರುತ್ತದೆ. 

ಊಟ ಆದ್ಮೇಲೆ ಇದನ್ನು ತಿಂದ್ರೆ ಲೈಂಗಿಕ ಶಕ್ತಿ ಹೆಚ್ಚಿಸುವುದಲ್ಲದೇ, ಹೃದಯದ ಆರೋಗ್ಯವನ್ನೂ ಸುಧಾರಿಸುತ್ತೆ!

ಡಿಲುಶನಲ್ ಲವ್ ಡಿಸಾರ್ಡರ್ ಖಾಯಿಲೆಯಲ್ಲಿ ಲೈಂಗಿಕ ವ್ಯಸನದಂತಹ ವಿಷಯಗಳು ಕಾಡುವುದಿದೆ. ಅನೇಕ ಬಾರಿ ರೋಗಿಗಳು ಆಕ್ರಮಣಕಾರಿಯಾಗಿರುತ್ತಾರೆ. ಸಾಮಾಜಿಕ ಜಾಲತಾಣ ಬಳಕೆ ಮಾಡುವ ಜನರಲ್ಲಿ ಈ ಸಮಸ್ಯೆ ಹೆಚ್ಚಾಗ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸ್ಥಿತಿಯನ್ನು ಶೀಘ್ರ ಪತ್ತೆ ಮಾಡಿ ರೋಗ ಉಲ್ಬಣಗೊಳ್ಳುವ ಮೊದಲೇ ತ್ವರಿತ ಚಿಕಿತ್ಸೆ ನೀಡಿದ್ರೆ ಸಮಸ್ಯೆಯನ್ನು ಬೇಗ ಕಡಿಮೆ ಮಾಡಬಹುದು. 

click me!