Health Tips: ಹೈಪರ್‌ ಟೆನ್ಷನ್‌ ದೂರವಾಗಿಸುತ್ತೆ ಎಲ್ಲರಿಗೂ ಲಭ್ಯವಾಗುವ ಈ ಸಾಮಾನ್ಯ ಹಣ್ಣು

By Suvarna News  |  First Published May 22, 2023, 7:00 AM IST

ಬಾಳೆಹಣ್ಣು ಸೇವನೆಯಿಂದ ದೇಹಕ್ಕೆ ಅನೇಕ ರೀತಿಯಲ್ಲಿ ಲಾಭವಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಹೈಪರ್‌ ಟೆನ್ಷನ್‌ ನಿಯಂತ್ರಿಸಲು ಬಾಳೆಹಣ್ಣು ಸಹಕಾರಿ. ರಕ್ತದೊತ್ತಡ ನಿಯಂತ್ರಿಸಲು ಬಾಳೆಹಣ್ಣು ನೆರವಾಗುತ್ತದೆ. ಹೀಗಾಗಿ, ದಿನವೂ ಒಂದು ಬಾಳೆಹಣ್ಣು ತಿನ್ನಿ.
 


ಹೈಪರ್‌ ಟೆನ್ಷನ್‌ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆ ಇಂದಿನ ದಿನಗಳಲ್ಲಿ ಅತಿ ಸಾಮಾನ್ಯ ಎನಿಸಿದೆ. ಈ ಸ್ಥಿತಿಯಲ್ಲಿ, ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತವನ್ನು ಕೊಂಡೊಯ್ಯುವ ನಾಳಗಳಲ್ಲಿ ರಕ್ತದೊತ್ತಡ ಏರಿಕೆಯಾಗುತ್ತದೆ. ರಕ್ತ ಹೆಚ್ಚು ಒತ್ತಡದಿಂದ ವೇಗವಾಗಿ ಚಲಿಸಲು ಶುರುವಾಗುತ್ತದೆ. ಇದರಿಂದಾಗಿ ಕಿಡ್ನಿ, ಶ್ವಾಸಕೋಶ ಮತ್ತು ಹೃದಯಕ್ಕೆ ಹೆಚ್ಚಿನ ಹಾನಿಯಾಗುತ್ತದೆ. ಆದರೆ, ಉತ್ತಮ ಆಹಾರದಿಂದ ಹೈಪರ್‌ ಟೆನ್ಷನ್‌ ಅನ್ನು ತಕ್ಕಮಟ್ಟಿಗೆ ನಿಯಂತ್ರಿಸಲು ಸಾಧ್ಯ. ರಕ್ತದೊತ್ತಡ ನಿಯಂತ್ರಿಸುವಲ್ಲಿ ಆಹಾರ ಮುಖ್ಯವಾದ ಪಾತ್ರ ವಹಿಸುತ್ತದೆ. ಸಹಜ ರಕ್ತದೊತ್ತಡದ ಪ್ರಮಾಣ 120/80 ಅಥವಾ ಇದಕ್ಕಿಂತ ಚೂರು ಕಡಿಮೆ ಇರುತ್ತದೆ. ಆದರೆ, ಇದಕ್ಕಿಂತ ಹೆಚ್ಚಿನ ರಕ್ತದೊತ್ತಡವಿದ್ದಾಗ ಆಹಾರದಲ್ಲಿ ಬದಲಾವಣೆ ತಂದುಕೊಳ್ಳಬೇಕಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ ಹೈಪರ್‌ ಟೆನ್ಷನ್‌ ನಿಯಂತ್ರಿಸಲು ಕೊಬ್ಬು ಕಡಿಮೆ ಇರುವ ಆಹಾರವನ್ನು ಸೇರಿಸಬೇಕು. ಹಲವು ರೀತಿಯ ತರಕಾರಿ ಮತ್ತು ಹಣ್ಣುಗಳ ಸಹ ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ. ಎಲ್ಲೆಡೆ ಸುಲಭವಾಗಿ ಲಭ್ಯವಾಗುವ ಬಾಳೆಹಣ್ಣು ಸಹ ಇದಕ್ಕೆ ಭಾರೀ ಅನುಕೂಲವಾದ ಹಣ್ಣು ಎಂದರೆ ಅಚ್ಚರಿಯಾಗಬಹುದು. 

Tap to resize

Latest Videos

Stress and Happiness: ಒತ್ತಡವನ್ನು ಖುಷಿಯನ್ನಾಗಿ ಬದಲಿಸಿಕೊಳ್ಳಿ!

ಬಾಳೆಹಣ್ಣಿನ (Banana) ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಲಾಭವಿದೆ. ಅದನ್ನು ಯಾವ ಸಮಯದಲ್ಲಿ ಬೇಕಿದ್ದರೂ ಸೇವಿಸಬಹುದು. ಆಸಿಡಿಟಿ (Acidity) ಸಮಸ್ಯೆ ಉಳ್ಳವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನದಿರುವುದು ಉತ್ತಮ. ಉಳಿದಂತೆ ಎಲ್ಲರೂ ನಿರ್ಯೋಚನೆಯಿಂದ ಬಾಳೆಹಣ್ಣು ಸೇವಿಸಬಹುದು. ಬಾಳೆಹಣ್ಣನ್ನು ಯಾವ ರೀತಿ ಸೇವಿಸಿದರೂ ಉತ್ತಮವೇ. ಹಣ್ಣಿನ ರಸ, ಹಣ್ಣಿನ ಹೋಳುಗಳು, ಸಕ್ಕರೆ ಬೆರೆಸದ ಪಾಯಸವನ್ನಾಗಿ ಮಾಡಿಕೊಂಡೂ ತಿನ್ನಬಹುದು.

ನಿಮಗೆ ಅಚ್ಚರಿ ಎನಿಸಬಹುದು, ಪ್ರತಿದಿನ ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ಜ್ಞಾಪಕ ಶಕ್ತಿ (Memory Power) ಹೆಚ್ಚುತ್ತದೆ. ಮೂಡ್‌ ಉತ್ತಮವಾಗಿಸಲು ಇದು ಸಹಕಾರಿ. ಹೊಟ್ಟೆಯ ಪಿಎಚ್‌ ಮಟ್ಟವನ್ನು ಸಮತೋಲನದಿಂದ ಇರಿಸಲು ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು (Nutrients) ಸಹಾಯ ಮಾಡುತ್ತವೆ. ಜತೆಗೆ, ಹೊಟ್ಟೆಯ ಹುಣ್ಣನ್ನು ನಿವಾರಿಸುವ ಶಕ್ತಿ ಹೊಂದಿವೆ. ಮಹಿಳೆಯರಿಗೆ ಬಾಳೆಹಣ್ಣು ಹೆಚ್ಚು ಅನುಕೂಲಕರ ಎನ್ನಲಾಗುತ್ತದೆ. ಇದರಲ್ಲಿರುವ ಗ್ಲುಕೋಸ್‌ (Glucose) ನಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಮಹಿಳೆಯರಲ್ಲಿ ಅತಿಯಾದ ಕೆಲಸದ ಬಳಿಕ ಉಂಟಾಗುವ ದಣಿವು ನಿವಾರಣೆಯಾಗುತ್ತದೆ. 

ಗರ್ಭಾವಸ್ಥೆಯ ಮಧುಮೇಹದಿಂದ ಬಳಲ್ತಿರೋ ನಟಿ ದೀಪಿಕಾ ಕಕ್ಕರ್‌, ಹಾಗಂದ್ರೇನು?

ಬಾಳೆಹಣ್ಣು ಹೈಪರ್‌ ಟೆನ್ಷನ್‌ ನಿಯಂತ್ರಣಕ್ಕೆ ಹೇಗೆ ಸಹಕಾರಿ?
ಬಾಳೆಹಣ್ಣಿನಲ್ಲಿ ಹಲವು ರೀತಿಯ ಪೋಷಕ ತತ್ವಗಳು ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ. ನಾರಿನಂಶ (Fibre) ಮತ್ತು ವಿಟಮಿನ್‌ ಸಿ ಅಧಿಕ ಪ್ರಮಾಣದಲ್ಲಿ ಇರುತ್ತವೆ. ಜತೆಗೆ, ಕರಗಬಲ್ಲ ನಾರಿನಂಶವೂ ಇರುತ್ತದೆ. ಇದು ಕೊಬ್ಬಿನ ಪ್ರಮಾಣ ಕಡಿಮೆಗೊಳಿಸಲು ಸೂಕ್ತ. ಬಾಳೆಹಣ್ಣಿನಿಂದ ಹೃದಯದ ರೋಗಗಳ ಅಪಾಯ ಕಡಿಮೆಯಾಗುತ್ತದೆ. ವಿಟಮಿನ್‌ ಬಿ 6 ಮತ್ತು ಮೆಗ್ನೀಸಿಯಂ ಅಂಶಗಳು ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ರಾಹೀನತೆ (Sleep Disorder) ಸಮಸ್ಯೆಯನ್ನು ದೂರ ಮಾಡುತ್ತವೆ. 

•    ಆಂಟಿಆಕ್ಸಿಡೆಂಟ್ಸ್‌ ನಿಂದ ಸಮೃದ್ಧ
ಬಾಳೆಹಣ್ಣಿನಲ್ಲಿ ಹಲವು ರೀತಿಯ ಆಂಟಿಆಕ್ಸಿಡೆಂಟ್ಸ್‌ ಸಮೃದ್ಧವಾಗಿರುತ್ತವೆ. ಇವುಗಳಿಂದ ಹಲವು ರೀತಿಯ ಸೋಂಕುಗಳಿಂದ ರಕ್ಷಣೆ ಸಿಗುತ್ತದೆ. ಆಂಟಿಆಕ್ಸಿಡೆಂಟ್‌ ಗಳು ನೈಸರ್ಗಿಕವಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

•    ಪೊಟ್ಯಾಷಿಯಂಗೆ ಉತ್ತಮ ಮೂಲ
ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ಹೈಪರ್‌ ಟೆನ್ಷನ್‌ ನಿಯಂತ್ರಿಸಲು ಅತ್ಯುತ್ತಮ ಅಂಶವಾಗಿದೆ. ಪೊಟ್ಯಾಷಿಯಂ ಸೇವನೆಯಿಂದ ಹೃದಯದ ರೋಗ ಉಂಟಾಗುವ ಅಪಾಯ ಕಡಿಮೆಯಾಗುತ್ತದೆ. ರಕ್ತದೊತ್ತಡ ಇಳಿಕೆಯಾಗುತ್ತದೆ. ತಜ್ಞರ ಪ್ರಕಾರ, ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ೪೫೦ ಗ್ರಾಮ್‌ ಪೊಟ್ಯಾಷಿಯಂ ಲಭ್ಯವಾಗುತ್ತದೆ.

Healthy Food : ಬಾಳೆ ಹಣ್ಣನ್ನಲ್ಲ ಕಾಯಿ ತಿಂದು ಹೃದಯ ಕಾಪಾಡಿಕೊಳ್ಳಿ

•    ಸೋಡಿಯಂ ಕಡಿಮೆಯಾಗುತ್ತದೆ
ಬಾಳೆಹಣ್ಣಿನಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಇರುತ್ತದೆ. ಇದರಿಂದಾಗಿ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿಯಾಗುತ್ತದೆ. ನೀವು ಎಷ್ಟು ಹೆಚ್ಚು ಪೊಟ್ಯಾಷಿಯಂ ಸೇವನೆ ಮಾಡುತ್ತೀರೋ ಅಷ್ಟು ಉತ್ತಮ ಪ್ರಮಾಣದಲ್ಲಿ ಸೋಡಿಯಂ ನಿಮ್ಮ ದೇಹದಿಂದ ಹೊರ ಹೋಗುತ್ತದೆ. 

click me!