ಎದೆಹಾಲು ಕುಡಿಯದೆ ಅಳ್ತಿತ್ತು ಮಗು, ಎಕ್ಸ್‌ರೇ ತೆಗೆದ್ರೆ ಶ್ವಾಸಕೋಶದಲ್ಲಿತ್ತು ಕಾಲುಂಗುರ !

By Suvarna NewsFirst Published Aug 20, 2022, 12:19 PM IST
Highlights

ಪುಟ್ಟಮಕ್ಕಳು ಆಗಾಗ ಸಣ್ಣಪುಟ್ಟ ಯೆಡವಟ್ಟುಗಳನ್ನು ಮಾಡಿಕೊಳ್ತಾನೆ ಇರ್ತಾರೆ. ಮಣ್ಣು ತಿನ್ನೋದು, ನೀರು ಚೆಲ್ಲೋದು ಹೀಗೆ ಮಕ್ಕಳು ಮಾಡೋ ಕಿತಾಪತಿಗಳು ಒಂದೆರಡಲ್ಲ. ಆದ್ರೆ ಮಹಾರಾಷ್ಟ್ರದಲ್ಲಿ ಮಗು ಮಾಡಿರೋ ಎಡವಟ್ಟಿಗೆ ತಾಯಿ ಕಂಗಾಲಾಗಿದ್ದಾಳೆ. ಅಷ್ಟಕ್ಕೂ ಮಗು ಮಾಡಿರೋದೇನು ?

ಮನೆಯಲ್ಲಿ ಮಕ್ಕಳಿದ್ದರೆ ಮೈಯೆಲ್ಲಾ ಕಣ್ಣಿರಬೇಕು ಎಂದು ಹಿರಿಯರು ಹೇಳಿರೋದನ್ನು ಕೇಳಿರಬಹುದು. ಯಾಕೆಂದರೆ ಮಕ್ಕಳಿಗೆ ತುಂಟತನ ಜಾಸ್ತಿ. ಅಪಾಯದ ಅರಿವಿರುವುದಿಲ್ಲ. ಯಾವ ವಸ್ತು ಮುಟ್ಟಿದರೆ ಏನಾಗುತ್ತದೆ ಎಂಬುದು ಸಹ ಗೊತ್ತಿರುವುದಿಲ್ಲ. ಹೀಗಾಗಿ ನೀರು, ಬೆಂಕಿ, ಕರೆಂಟ್‌, ಹೀಗೆ ಎಲ್ಲೆಂದರಲ್ಲಿ ಕೈ ಹಾಕಿ ಅಪಾಯ ತಂದುಕೊಳ್ಳುತ್ತಾರೆ. ಹಾಗೇ ಇಲ್ಲೊಂದು ಮಗು ಯಡವಟ್ಟು ಮಾಡಿಕೊಂಡು ಮನೆಮಂದಿಯಲ್ಲಿ ಆತಂಕ ಮೂಡಿಸಿದೆ. ಅಷ್ಟಕ್ಕೂ ಆ ಮಗು ಮಾಡಿರೋದೇನು ?

ಎದೆಹಾಲು ಕುಡಿಯದೆ ಅಳುತ್ತಿತ್ತು ಮಗು
ಮಗುವಿಗೆ ತಾಯಿಯ ಎದೆಹಾಲೇ (Breast milk) ಮುಖ್ಯ ಆಹಾರ. ಆದ್ರೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ಎಂಟು ತಿಂಗಳ ಮಗುವೊಂದು ಎಷ್ಟು ಒತ್ತಾಯ ಮಾಡಿದರೂ ಎದೆಹಾಲು ಕುಡಿಯುತ್ತಲೇ ಇರಲ್ಲಿಲ್ಲ. ಮಗುವಿನ ಇಂಥಾ ವರ್ತನೆಯಿಂದ ತಾಯಿ (Mother) ಸೇರಿದಂತೆ ಮನೆಯವರೆಲ್ಲರೂ ಕಂಗಾಲಾಗಿದ್ದರು. ತಿಂಗಳ ಮಗುವಿಗೆ ಎದೆಹಾಲೇ ಆಹಾರ. ಹೀಗಾಗಿ ಮಗು ಎದೆಹಾಲು ಕುಡಿಯದೇ ಆರೋಗ್ಯ ಸಮಸ್ಯೆ ಎದುರಾಗಬಹುದು ಎಂಬ ಭಯ ಶುರುವಾಗಿತ್ತು. ಎಂಟು ತಿಂಗಳ ಪುಟಾಣಿ ಕಾರ್ತಿಕ್​ ಸಿಂಗ್​ ಇದ್ದಕ್ಕಿದ್ದಂತೆಯೇ ಅಮ್ಮನ ಎದೆಹಾಲು ಕುಡಿಯುವುದನ್ನು ನಿಲ್ಲಿಸಿಬಿಟ್ಟ. ಹಸಿವಿನಿಂದ ಅಳುತ್ತಿದ್ದನೇ ವಿನಾ ಹಾಲು ಕೊಟ್ಟರೆ ಕುಡಿಯುತ್ತಿರಲಿಲ್ಲ. ತಿಂಡಿ ತಿನಿಸಲು ಮುಂದಾದರೂ ಅದನ್ನು ತಿನ್ನುತ್ತಿರಲಿಲ್ಲ. ಇದಕ್ಕೆ ಕಾರಣ ಮಾತ್ರ ಪಾಲಕರಿಗೆ ತಿಳಿಯಲೇ ಇಲ್ಲ. 

ಅವಳಿ ಮಕ್ಕಳಲ್ಲಿ ಸಾಮ್ಯತೆಯೇ ಇಲ್ಲ, ಕಪ್ಪು, ಬಿಳಿ ಮಗುವಿಗೆ ಜನ್ಮ ನೀಡಿದ ಮಹಿಳೆ !

ಎಕ್ಸ್‌ರೇ ತೆಗೆದರೆ ಹೊಟ್ಟೆಯಲ್ಲಿತ್ತು ಕಾಲುಂಗುರ !
ಕೆಲವು ದಿನಗಳ ಮಗು ಹಾಲು ಕುಡಿಯಲು ಹಿಂಜರಿದಾಗ ಪೋಷಕರ ಆತಂಕ ಹೆಚ್ಚಾಯಿತು.. ಕೂಡಲೇ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋದರು. ಆಸ್ಪತ್ರೆಯಲ್ಲಿ ವೈದ್ಯರು ಆರಂಭದಲ್ಲಿ ಮಗು ಹಸಿವಿನಿಂದ ಹಾಲು ಕುಡಿಯುವಂತಾಗಲು ಕೆಲವೊಂದು ಮಾತ್ರೆ ನೀಡಿದರು. ಆದ್ರೆ ಏನೇ ಮಾಡಿದರೂ ಮಗು ಹಾಲು ಕುಡಿಯಲೇ ಇಲ್ಲ, ಅಳುವುದನ್ನು ನಿಲ್ಲಿಸಲ್ಲಿಲ್ಲ. ಸ್ವಲ್ಪ ದಿನದಲ್ಲಿಯೇ ಉಸಿರಾಡಲೂ ಕಷ್ಟ ಪಡುವಂತಾಯಿತು. ಇದರಿಂದ ಅಪ್ಪ-ಅಮ್ಮ ಗಾಬರಿಗೊಂಡರು. ನಂತರ ಬೇರೊಬ್ಬ ವೈದ್ಯರ ಬಳಿ ಹೋದಾಗ ಹೊಟ್ಟೆಯಲ್ಲಿ ಏನೋ ಸಿಲುಕಿರಬಹುದು ಎಂದು ಅಂದುಕೊಂಡ ಎಕ್ಸ್​ರೇ ಮಾಡಲು ಸೂಚಿಸಿದರು. ಎಕ್ಸ್‌ರೇ ಮಾಡಿ ನೋಡಿದಾಗ ಶಾಕಿಂಗ್ ವಿಚಾರ ಬಯಲಾಯ್ತು. ಏಕೆಂದರೆ ಶ್ವಾಸಕೋಶದಲ್ಲಿ (Lungs) ಒಂದು ಗೋಲಾಕಾರದ ಚಿಕ್ಕ ವಸ್ತು ಕಾ:ಣಿಸಿಕೊಂಡಿತ್ತು.

ಜೀವಕ್ಕೇ ಅಪಾಯ ಆಗುವ ಸಾಧ್ಯತೆ ಇತ್ತೆಂದ ವೈದ್ಯರು
ಅದೇನೆಂದು ನೋಡಿದಾಗ, ಅಲ್ಲಿ ಕಂಡದ್ದು ತಾಯಿಯ ಕಾಲುಂಗುರ. ತಾಯಿಯ ಕಾಲುಂಗುರ ಅದ್ಹೇಗೋ ಮಗುವಿನ ಹೊಟ್ಟೆ ಸೇರಿಬಿಟ್ಟಿತ್ತು. ತಾಯಿಗೆ ಬಳಿ ಈ ಬಗ್ಗೆ ಕೇಳಿದಾಗ ಅವರು, ಹೌದು ನನ್ನ ಕಾಲುಂಗುರ (Toe ring) ಇದ್ದಕ್ಕಿದ್ದ ಹಾಗೇ ಕಾಣೆಯಾಗಿತ್ತು. ಎಲ್ಲಿ ಹುಡುಕಾಡಿದರೂ ಸಿಗಲಿಲ್ಲ, ಎಲ್ಲೋ ಕಳೆದುಹೋಗಿರಬೇಕು ಎಂದುಕೊಂಡು ಸುಮ್ಮನಾಗಿದ್ದೆ, ಆದರೆ ಮಗು ಅದನ್ನು ಬಾಯೊಳಗೆ ಹಾಕಿಕೊಂಡದ್ದು ಗೊತ್ತೇ ಆಗಲಿಲ್ಲ ಎಂದು ತಿಳಿಸಿದರು. ಮಗು ಅಮ್ಮನ ಕಾಲ ಬಳಿ ಆಡುತ್ತಿದ್ದ ವೇಳೆ, ಗೊತ್ತಿಲ್ಲದೇ ಕಾಲುಂಗುರ ತೆಗೆದು ಅದನ್ನು ಬಾಯಿಗೆ ಹಾಕಿಕೊಂಡಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಈ ಜೋಡಿ ನಡುವಿನ ಅಂತರ 19 ವರ್ಷ: ತಾನೇ ಎತ್ತಿ ಆಡಿಸಿದ ಮಗುವೇ ಈಗ ಮಡದಿ!

ವೈದ್ಯರು ಆಪರೇಷನ್ ಮಾಡಿ ಶ್ವಾಸನಾಳದಿಂದ ಕಾಲುಂಗುರವನ್ನು ಹೊರತೆಗೆದಿದ್ದಾರೆ. ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಸ್ವಲ್ಪ ದಿನ ಕಳೆದಿದ್ದರೆ ಆತನ ಜೀವಕ್ಕೇ ಅಪಾಯ ಆಗುವ ಸಾಧ್ಯತೆ ಇತ್ತು ಎಂದು ವೈದ್ಯರು ಹೇಳಿದ್ದಾರೆ. ಒಟ್ನಲ್ಲಿ ಮನೆಮಂದಿಯ ಅಜಾಗರೂಕತನಕ್ಕೆ ಪುಟ್ಟ ಮಗು ಅಪಾಯಕ್ಕೆ ಸಿಲುಕಿತ್ತು. ಮಗುವಿನ ಅಕ್ಕಪಕ್ಕ ಇಂಥಾ ವಸ್ತುಗಳನ್ನು ಇಡೋ ಪೋಷಕರು ಮುಂದಾದರೂ ಈ ವಿಚಾರಗಳ ಬಗ್ಗೆ ಗಮನಹರಿಸಬೇಕು. 

click me!