Parenting Tips: ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ, ಫಿಟ್ ಆಗಿರುವಂತೆ ಮಾಡಲೇನು ಮಾಡಬೇಕು?

By Suvarna News  |  First Published Aug 20, 2022, 11:33 AM IST

ಹಿಂದೆ ಸದಾ ಚಟುವಟಿಕೆಯಿಂದ ಇರ್ತಿದ್ದ, ಸ್ಲಿಮ್ ಆಗಿರ್ತಿದ್ದ ಮಕ್ಕಳು ಈಗ ಬೊಜ್ಜಿಗೆ ಬಲಿಯಾಗ್ತಿದ್ದಾರೆ. ಈಗಿನ ಮಕ್ಕಳಿಗೆ ಹೊಟ್ಟೆ ಬರ್ತಿದೆ. ತೂಕ ವಿಪರೀತ ಹೆಚ್ಚಾಗ್ತಿದೆ. ಮಕ್ಕಳ ವೇಟ್ ನೋಡಿ ಪಾಲಕರು ಕಂಗಾಲಾಗಿದ್ದಾರೆ.
 


ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಸ್ಥೂಲಕಾಯಕ್ಕೆ ವಯಸ್ಸಿನ ಮಿತಿಯಿಲ್ಲ. ಚಿಕ್ಕ ಮಕ್ಕಳಿಗೆ ಕೂಡ ಬೊಜ್ಜಿನ ಸಮಸ್ಯೆ ಹೆಚ್ಚಾಗ್ತಿದೆ. ತೂಕ ಹೆಚ್ಚಾಗುವುದರಿಂದ  ಮಕ್ಕಳು ಅನೇಕ ರೋಗಗಳಿಗೆ ತುತ್ತಾಗ್ತಾರೆ. ಇದಲ್ಲದೇ ಹೆಚ್ಚುತ್ತಿರುವ ಬೊಜ್ಜು  ಕೆಲವೊಮ್ಮೆ ಮಕ್ಕಳ ಆತ್ಮವಿಶ್ವಾಸಕ್ಕೆ ಧಕ್ಕೆ ತರ್ತಿದೆ. ಮಕ್ಕಳ ಮನಸ್ಸು ಕುಗ್ಗುತ್ತಿದೆ. ಪಾಲಕರು, ಮಕ್ಕಳ ತೂಕದ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಮಕ್ಕಳ ತೂಕ ಏರ್ತಿದ್ದಂತೆ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಕೆಲವೊಂದು ಅಭ್ಯಾಸದ ಮೂಲಕ ಪಾಲಕರು ಮಕ್ಕಳ ತೂಕವನ್ನು ಕಡಿಮೆ ಮಾಡ್ಬಹುದು. ಮಗುವಿನ ಹೆಚ್ಚುತ್ತಿರುವ ತೂಕವನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ನಾವಿಂದು ಹೇಳ್ತೇವೆ.

ಮಕ್ಕಳ ತೂಕ ನಿಯಂತ್ರಣಕ್ಕೆ ಇಲ್ಲಿದೆ ಉಪಾಯ : 
ಆಹಾರ (Food) ದಲ್ಲಿ ಬದಲಾವಣೆ :
ತಪ್ಪು ಆಹಾರ ಸೇವನೆ ಮಕ್ಕಳ (Children) ತೂಕ (Weight) ಹೆಚ್ಚಿಸುತ್ತದೆ. ಮಕ್ಕಳು ಫಾಸ್ಟ್ ಫುಡ್ ಮೊರೆ ಹೋಗ್ತಿದ್ದಾರೆ. ಮನೆ ಆಹಾರಕ್ಕಿಂತ ಹೊರಗಿನ ಆಹಾರ ಮಕ್ಕಳಿಗೆ ಇಷ್ಟವಾಗ್ತಿದೆ. ಮೊದಲು ಪಾಲಕರು ಮಕ್ಕಳ ಆಹಾರದಲ್ಲಿ ನಿಯಂತ್ರಣ ತರಬೇಕು. ಫಾಸ್ಟ್ ಫುಡ್ ಆಹಾರವನ್ನು ಸಂಪೂರ್ಣ ನಿಲ್ಲಿಸ್ಬೇಕು. ಪೌಷ್ಠಿಕ ಆಹಾರಗಳನ್ನು ಮಕ್ಕಳಿಗೆ ನೀಡ್ಬೇಕು. ಕೆಲವು  ಆಹಾರ ಬದಲಾವಣೆಗಳನ್ನು ಮಾಡುವ ಮೂಲಕ ಅವರ ತೂಕವನ್ನು ನಿಯಂತ್ರಿಸಬಹುದು. ಎಣ್ಣೆಯುಕ್ತ ಆಹಾರ, ಚಾಕೊಲೇಟ್  ಕೂಡ ಮಕ್ಕಳಿಗೆ ಕಡಿಮೆ ನೀಡಬೇಕು.  ಇದಲ್ಲದೆ ಮಕ್ಕಳಿಗೆ ಒಂದೇ ಬಾರಿಗೆ ಹೆಚ್ಚಿನ ಆಹಾರ ನೀಡುವ ಬದಲು ಸಣ್ಣ ಸಣ್ಣ ಪ್ರಮಾಣದಲ್ಲಿ ಆಗಾಗ ನೀಡ್ತಿರಿ.  ಇದಲ್ಲದೆ ನೀವು ಮಕ್ಕಳಿಗೆ  ಸಾಕಷ್ಟು ನೀರನ್ನು ನೀಡಲು ಅಗತ್ಯವಿದೆ.  

Latest Videos

undefined

ಮನೆಯಲ್ಲಿಂದ ಹೊರಗೆ ಆಟ : ನೀವು ಮಕ್ಕಳಿಗೆ ಹೊರಾಂಗಣ ಆಟಗಳನ್ನು ಕಲಿಸುವ ಅಗತ್ಯವಿದೆ. ಫುಟ್ಬಾಲ್, ವಾಲಿಬಾಲ್ ಮತ್ತು ಬೆಟ್ ಬಾಲ್ನಂತಹ ಆಟಗಳನ್ನು ಆಡಲು ಮಕ್ಕಳಿಗೆ ಪ್ರೋತ್ಸಾಹ ನೀಡ್ಬೇಕು. ಹೊರಾಂಗಣ ಆಟಗಳಿಂದ  ಮಗು ತೂಕವನ್ನು ಕಳೆದುಕೊಳ್ಳುತ್ತದೆ ಮತ್ತು ಅವರ ಹೊರಾಂಗಣ ಚಟುವಟಿಕೆಗಳು ಸಹ ಹೆಚ್ಚಾಗುತ್ತದೆ. ಆಟದ ಹೆಸರಿನಲ್ಲಿ ಹೊರಗೆ ಸಮಯ ಕಳೆಯುವುದರಿಂದ ಮಕ್ಕಳ ಗೆಜೆಟ್ ಬಳಕೆ ಸಮಯವೂ ಕಡಿಮೆಯಾಗುತ್ತದೆ. ದಿನವಿಡೀ ಲ್ಯಾಪ್ ಟಾಪ್, ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ಮಕ್ಕಳ ತೂಕ ಹೆಚ್ಚುತ್ತದೆ. ಆದ್ದರಿಂದ ನೀವು ಹೊರಾಂಗಣ ಆಟಗಳನ್ನು ಆಡಲು ಅವರನ್ನು ಪ್ರೇರೇಪಿಸಬೇಕು. 

Eye Health : ಕಣ್ಣಿನ ಕೆಳ ಭಾಗ ಊದಿಕೊಳ್ಳೋದೇಕೆ?

ಗೆಜೆಟ್ ಸಮಯವನ್ನು ಕಡಿಮೆ ಮಾಡಿ : ಟಿವಿ ಮತ್ತು ಲ್ಯಾಪ್ ಟಾಪ್ ಸೇರಿದಂತೆ ಗೆಜೆಟ್ ಹಿಡಿದು ಮಕ್ಕಳು ಒಂದೇ ಕಡೆ ಕುಳಿತುಕೊಳ್ಳುವುದ್ರಿಂದ ಸ್ಥೂಲಕಾಯದ ಸಮಸ್ಯೆ ಕಾಡುತ್ತದೆ. ಒಂದೇ ಕಡೆ ಕುಳಿತುಕೊಳ್ಳುವುದ್ರಿಂದ ಮಕ್ಕಳು ತಿನ್ನುವುದು ಹೆಚ್ಚಾಗುತ್ತದೆ. ಮಕ್ಕಳು ಆಹಾರ ಸೇವನೆ ಮಾಡ್ಲಿ ಎನ್ನುವ ಕಾರಣಕ್ಕೆ ಬಹುತೇಕ ಪಾಲಕರು ಆಹಾರ ಸೇವನೆ ಮಾಡುವಾಗ ಟಿವಿ ತೋರಿಸ್ತಾರೆ. ಇದು ಕೂಡ ತಪ್ಪು. ಯಾಕೆಂದ್ರೆ ಟಿವಿ, ಮೊಬೈಲ್ ವೀಕ್ಷಣೆ ಮಾಡ್ತಾ ಮಕ್ಕಳು ಮಿತಿಗಿಂತ ಹೆಚ್ಚು ಆಹಾರ ಸೇವನೆ ಮಾಡ್ತಾರೆ.  ಇದು ಕೂಡ ಬೊಜ್ಜಿಗೆ ಕಾರಣವಾಗುತ್ತದೆ. ಮಗುವಿನ ವಯಸ್ಸಿಗೆ ಅನುಗುಣವಾಗಿ ಆಹಾರ ನೀಡುವುದು ಅಗತ್ಯವಾಗುತ್ತದೆ.  

Kids Health : ಏಕಾಗ್ರತೆ ಹೆಚ್ಚಲು ಮಕ್ಕಳು ಮಾಡ್ಬೇಕು ಈ ಯೋಗ

ವ್ಯಾಯಾಮ – ಯೋಗ : ಮಕ್ಕಳಲ್ಲಿ ಯೋಗ, ವ್ಯಾಯಾಮ ಮಾಡುವ  ಅಭ್ಯಾಸವನ್ನು ಪಾಲಕರು ಕಲಿಸಬೇಕು,  ವ್ಯಾಯಾಮ ಮಾಡುವುದರಿಂದ ಮಕ್ಕಳ ದೇಹವು ಆರೋಗ್ಯಕರ ಮತ್ತು ಸದೃಢವಾಗಿರುತ್ತದೆ. ಮಕ್ಕಳನ್ನು ಪಾರ್ಕ್ ಗಳಿಗೆ ಕರೆದೊಯ್ಯುವ ಮೂಲಕ ನೀವು ಲಘು ವ್ಯಾಯಾಮ ಮಾಡಿಸಬಹುದು. ಇದರ ಹೊರತಾಗಿ  ನೀವು ವ್ಯಾಯಾಮ ಮಾಡುವ ಮಕ್ಕಳ ಗುಂಪಿಗೆ ನಿಮ್ಮ ಮಗುವನ್ನು ಸೇರಿಸಬಹುದು. ಮಕ್ಕಳು ಒಬ್ಬರನ್ನೊಬ್ಬರು ನೋಡುವ ಮೂಲಕ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. 

ಮಗುವಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ : ಹೆಚ್ಚುತ್ತಿರುವ ತೂಕದಿಂದಾಗಿ  ಮಕ್ಕಳಲ್ಲಿ ಅನೇಕ ರೋಗಗಳು ಸಹ ಕಾಡಬಹುದು.  ಆದ್ದರಿಂದ  ನಿಮ್ಮ ಮಕ್ಕಳಿಗೆ ಆರೋಗ್ಯಕರ ಆಹಾರವನ್ನು ನೀಡಿ. ಹಾಗೆ ಆಹಾರದ ಬಗ್ಗೆ ಅವರಿಗೆ ಜಾಗೃತಿ ಮೂಡಿಸಿ. ಯಾವ ಆಹಾರ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತದೆ ಎಂಬುದನ್ನು ಅವರಿಗೆ ತಿಳಿ ಹೇಳಿ. 

click me!