ಹಾಲನ್ನು ಕಾಯಿಸಬೇಕು ನಿಜ. ಆದರೆ, ಬಿಸಿ ಹಾಲು ಆರೋಗ್ಯಕ್ಕೆ ಒಳಿತೋ, ತಣ್ಣನೆಯದ್ದೋ?

By Suvarna NewsFirst Published Aug 20, 2022, 11:10 AM IST
Highlights

ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಬಿಸಿ ಬಿಸಿ ಹಾಲು ಕುಡಿಯೋಕೆ ಹಿತವೆನ್ನಿಸುತ್ತದೆ. ಆದ್ರೆ ಬಿಸಿ ಹಾಲಿಗಿಂತ ತಣ್ಣನೆ ಹಾಲು ಹೆಚ್ಚು ಪ್ರಯೋಜನಕಾರಿ. ಪ್ರತಿ ದಿನ ತಣ್ಣನೆ ಹಾಲು ಕುಡಿದು ಆರೋಗ್ಯ ಸುಧಾರಿಸಿಕೊಳ್ಳಿ.
 

ದೇಹವನ್ನು ಆರೋಗ್ಯವಾಗಿಡಲು ಪೌಷ್ಠಿಕ ಆಹಾರ ಮತ್ತು ಸರಿಯಾದ ಪ್ರಮಾಣದ ಖನಿಜಾಂಶಗಳು, ವಿಟಮಿನ್ ಗಳನ್ನು ಸೇವಿಸುವುದು ಕೂಡ ಅಗತ್ಯ.  ನಾವು ಪ್ರತಿ ದಿನ ಅನೇಕ ಆಹಾರಗಳನ್ನು ಸೇವಿಸ್ತೇವೆ. ಅವು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂಬುದು ನಮಗೆ ತಿಳಿಯೋದಿಲ್ಲ. ಅನೇಕರು ಪ್ರತಿದಿನ ಹಾಲು ಸೇವಿಸ್ತಾರೆ. ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್  ಸೇರಿದಂತೆ ಅನೇಕ ಎಲ್ಲಾ ಅಗತ್ಯ ಪೋಷಕಾಂಶವಿದೆ. ಸಾಮಾನ್ಯವಾಗಿ ನಾವೆಲ್ಲ ಬಿಸಿ ಬಿಸಿ ಹಾಲನ್ನು ಕುಡಿಯುತ್ತೇವೆ. ಬಿಸಿ ಹಾಲಿಗಿಂತ ತಣ್ಣನೆಯ ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ. ತಣ್ಣನೆ ಹಾಲು ರುಚಿಯಿರುತ್ತದೆ. ಹಾಗೆ ನೀವು ಅದಕ್ಕೆ ಏನಾದ್ರೂ ಮಿಕ್ಸ್ ಮಾಡಿ ಕುಡಿಯಬಹುದು. ಆದ್ರೆ ತಣ್ಣನೆಯ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನ ಸಾಕಷ್ಟಿದೆ. ತಣ್ಣನೆ ಹಾಲು ಸೇವನೆ ಮಾಡುವುದ್ರಿಂದ ಏನೆಲ್ಲ ಲಾಭವಿದೆ ಎಂಬುದನ್ನು ನಾವು ಹೇಳ್ತೇವೆ. 

ತಣ್ಣನೆ ಹಾಲು (Cold Milk) ಸೇವನೆ ಮಾಡುವುದ್ರಿಂದ ಆಗುವ ಲಾಭವೇನು? : 
ತೂಕ (Weight) ನಷ್ಟಕ್ಕೆ ಸಹಾಯ :
ತಣ್ಣನೆಯ ಹಾಲನ್ನು ಕುಡಿಯುವ ಮೂಲಕವೂ ತೂಕವನ್ನು ಕಡಿಮೆ ಮಾಡಬಹುದು. ತಣ್ಣನೆಯ ಹಾಲನ್ನು ಜೀರ್ಣಿಸಿಕೊಳ್ಳಲು ದೇಹ ಸಾಮಾನ್ಯ ತಾಪಮಾನಕ್ಕೆ ಬರಲು ಪ್ರಯತ್ನಿಸುತ್ತದೆ. ದೇಹವು ಸಾಮಾನ್ಯ ತಾಪಮಾನಕ್ಕೆ ಬಂದಾಗ ಕ್ಯಾಲೊರಿ ಬೇಗ ಕರಗಲು ಶುರುವಾಗುತ್ತದೆ. ಹಾಗಾಗಿ  ತಣ್ಣನೆ ಹಾಲನ್ನು ಸೇವಿಸುವ ಮೂಲಕ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದಲ್ಲದೇ ತಣ್ಣನೆಯ ಹಾಲನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆಯು ದೀರ್ಘಕಾಲ ತುಂಬಿರುತ್ತದೆ ಮತ್ತು ನೀವು ದೀರ್ಘಕಾಲ ಏನನ್ನೂ ತಿನ್ನಬೇಕಾಗಿಲ್ಲ. ತಣ್ಣನೆ ಹಾಲು ಸೇವಿಸುವುದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.

ಎಸಿಡಿಟಿ ತೊಡೆದುಹಾಕಲು ಹಾಲು ಸಹಕಾರಿ : ತಣ್ಣನೆಯ ಹಾಲು ನಿಮ್ಮ ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಇದರಿಂದ ನಿಮಗೆ ಮಲಬದ್ಧತೆ (Constipation) ಯ ಸಮಸ್ಯೆ ಕಡಿಮೆ ಆಗುತ್ತದೆ.  ಇದಲ್ಲದೆ, ಜಠರ ಹುಣ್ಣಿನಿಂದ ಉಂಟಾಗುವ ಹೊಟ್ಟೆ ನೋವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ನಿಮಗೆ ಮಲಬದ್ಧತೆಯ ಸಮಸ್ಯೆ ಇದ್ದರೆ, ನೀವು ಪ್ರತಿದಿನ ಒಂದು ಲೋಟ ತಣ್ಣನೆಯ ಹಾಲನ್ನು ಸೇವಿಸಬೇಕು. 

ಮಹಿಳೆಯ ಕಾಡುವ ಮೊಣಕಾಲು ನೋವಿಗೆ ಕಾರಣವೇನು?

ಚರ್ಮವನ್ನು ಹೊಳೆಯುವಂತೆ ಮಾಡಿ : ತಣ್ಣನೆಯ ಹಾಲು ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿದೆ. ಈ ಹಾಲು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ನೀರಿನ ಕೊರತೆಯಾಗುವುದಿಲ್ಲ. ತಣ್ಣನೆಯ ಹಾಲನ್ನು ಸೇವಿಸುವ ಮೂಲಕ ದೇಹವನ್ನು ತೇವಾಂಶದಿಂದ ಇಡಬಹುದು. ಇದು ಚರ್ಮಕ್ಕೂ ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ನಿಮ್ಮ ಚರ್ಮವು ಹೊಳಪು ಪಡೆಯುತ್ತದೆ.  

ಶಕ್ತಿ ಪಾನೀಯ : ಜಿಮ್ ಗೆ ಹೋದರೆ ಗಂಟೆಗಟ್ಟಲೆ ಬೆವರು ಸುರಿಸುವವರು  ತಣ್ಣನೆಯ ಹಾಲನ್ನು ಎನರ್ಜಿ ಡ್ರಿಂಕ್ ಆಗಿ ಸೇವಿಸಬಹುದು. ಮಾರ್ಕೆಟ್ ಎನರ್ಜಿ ಡ್ರಿಂಕ್ಸ್ ಕೂಡ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ನೀವು ಇದನ್ನು ಎನರ್ಜಿ ಡ್ರಿಂಕ್ ಆಗಿ ಸೇವಿಸಬಹುದು. ಕ್ಯಾಲೋರಿಗಳು, ವಿಟಮಿನ್ ಗಳು, ಖನಿಜಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಹಾಲಿನಲ್ಲಿ ಕಂಡುಬರುತ್ತವೆ. ಈ ಪೋಷಕಾಂಶಗಳು ನಿಮಗೆ ತ್ವರಿತ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. 

ಅನ್ನವನ್ನು ಈ ರೀತಿಯಾಗಿ ಸೇವಿಸಿ ಆರೋಗ್ಯಯುತವಾಗಿ ತೂಕ ಹೆಚ್ಚಿಸಿ

ಈ ಸಮಯದಲ್ಲಿ ತಣ್ಣನೆಯ ಹಾಲು ಕುಡಿಯಬೇಡಿ : ತಣ್ಣನೆಯ ಹಾಲು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಅದನ್ನು ಸೇವಿಸುವ ಮೊದಲು, ಸಮಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಹ ಅಗತ್ಯವಾಗಿದೆ. ನೀವು ದಿನದಲ್ಲಿಯೇ ತಣ್ಣನೆಯ ಹಾಲನ್ನು ಸೇವಿಸಬೇಕು. ರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಇದಲ್ಲದೆ, ಇದನ್ನು ಬೇಸಿಗೆಯಲ್ಲಿ ಮಾತ್ರ ಸೇವಿಸಿ. ಚಳಿಗಾಲದಲ್ಲಿ ಇದನ್ನು ಕುಡಿಯುವುದರಿಂದ ಕೆಮ್ಮು ಮತ್ತು ಜ್ವರ ನಿಮ್ಮನ್ನು ಕಾಡುವ ಸಾಧ್ಯತೆಯಿರುತ್ತದೆ. 
 

click me!