
ಬ್ರೆಜಿಲ್(ಜ.23) ಟ್ಯಾಟೂ ಹಾಕಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಕಳೆದ ಹಲವು ವರ್ಷಗಳಿಂದ ಟ್ಯಾಟೂ ಟ್ರೆಂಡ್ ಹೆಚ್ಚು. ಕೆಲವರಿಗೆ ಟ್ಯಾಟೂ ಅಪಾಯ ತಂದೊಡ್ಡಿದೆ. ಹೀಗೆ ಅಪಾಯಕ್ಕೆ ಸಿಲುಕಿದ ಸಾಲಿಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಾರುಗಳ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ಇನ್‌ಫ್ಲುಯೆನ್ಸರ್ ರಿಕಾರ್ಡೊ ಗೊಡೊಯ್ ಸೇರಿದ್ದಾರೆ. ಸಂಪೂರ್ಣ ಬೆನ್ನಿಗೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದ ಆಟೋ ಇನ್‌ಫ್ಲುಯೆನ್ಸರ್ ರಿಕಾರ್ಡೋ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಬ್ರೆಜಿಲ್‌ನ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ರಿಕಾರ್ಡೋ ಸಾವು ಆತಂಕ ಹೆಚ್ಚಿಸಿದೆ. ಅನಸ್ತೇಶಿಯಾ ನೀಡಿದ ಬಳಿಕ ಟ್ಯಾಟೂ ಹಾಕಿಸಿಕೊಳ್ಳುತ್ತಿರುವಾಗಲೇ ಈ ಘಟನೆ ನಡೆದಿದೆ.
ಐಷಾರಾಮಿ ಪ್ರೀಮಿಯಂ ಕಾರು, ಸೂಪರ್ ಕಾರು ಸೇರಿದಂತೆ ದುಬಾರಿ ಕಾರುಗಳ ಕುರಿತು ಇಂಚಿಂಚು ಮಾಹಿತಿ ನೀಡುವ ಮೂಲಕ ಅಪಾರ ಅಭಿಮಾನಿ ಬಳಕ ಹೊಂದಿರುವ 45 ವರ್ಷದ ರಿಕಾರ್ಡೋ ಅತ್ಯಂತ ಜನಪ್ರಿಯರಾಗಿದ್ದರು. ಪ್ರತಿ ದಿನ ಹೊಸ ಹೊಸ ಕಾರುಗಳ ಮೂಲಕ ಕಾಣಸಿಕೊಳ್ಳುತ್ತಿದ್ದರು. ಇಷ್ಟೇ ರಿಕಾರ್ಡ್ ಬಳಿ ಕೂಡ ಹಲವು ದುಬಾರಿ ಕಾರುಗಳಿವೆ. ಇದರ ನಡುವೆ ರಿಕಾರ್ಡ್ ಕೈ, ಕತ್ತಿನ ಭಾಗದಲ್ಲಿ ಈಗಾಗಲೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇತ್ತೀಚೆಗೆ ಸಂಪೂರ್ಣ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಈತನ ಬೆನ್ನ ಮೇಲೆ 631 ಯೋಧರ ಟ್ಯಾಟೂ! ವೈದ್ಯರ ಎಚ್ಚರಿಕೆ ಕಡೆಗಣಿಸಿದ ಯುವಕನ ದೇಶಪ್ರೇಮದ ಕಥೆಯಿದು...
ತನ್ನ ಟ್ಯಾಟೂ ಕಲಾವಿದನ ಬಳಿ ಡೇಟ್ ಫಿಕ್ಸ್ ಮಾಡಿದ್ದಾರೆ. ಟ್ಯಾಟೂ ಕಲಾವದಿ ರಿಕಾರ್ಡೋ ಬೆನ್ನ ಹಿಂದೆ ಲಿಕ್ವಿಡ್ ಮೂಲಕ ಶುಚಿಗೊಳಿಸಿ ಟ್ಯಾಟೂ ಆರಂಭಿಸಿದ್ದಾರೆ. ಆದರೆ ಟ್ಯೂಟೂ ಹಾಕಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ರಿಕಾರ್ಡೋ ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಅಸ್ವಸ್ಥಗೊಂಡು ಕುಸಿದ ರಿಕಾರ್ಡೋನ ಟ್ಯಾಟೂ ಕಲಾವಿದ ಹಾಗೂ ಸಿಬ್ಬಂದಿಗಳು ಆಸ್ಪತ್ರೆ ದಾಖಲಿಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ರಿಕಾರ್ಡೋ ಮೃತಪಟ್ಟಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ತೀವ್ರ ಹೃದಯಾಘಾತಕ್ಕೆ ರಿಕಾರ್ಡೋ ಬಲಿಯಾಗಿರುವುದಾಗಿ ಖಚಿತಪಡಿಸಿದ್ದಾರೆ.ರಿಕಾರ್ಡೋ ಗೊಡೊಯ್ ನಿಧನಕ್ಕೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ. ಇತ್ತ ಅಭಿಮಾನಿಗಳು ಆತಂಕ ಹೊರಹಾಕಿದ್ದಾರೆ. ಅಭಿಮಾನಿಗಳು ರಿಕಾರ್ಡೋ ಕುಟುಂಬದ ವಿಡಿಯೋಗಳು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ಪ್ರಮುಖವಾಗಿ ರಿಕಾರ್ಡೋ ಮಕ್ಕಳು ಸ್ವಿಮ್ಮಿಂಗ್ ಪೂಲ್‌ನಲ್ಲಿ ಆಟವಾಡುತ್ತಿರುವ ವಿಡಿಯೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ರಿಕಾರ್ಡೋಗೆ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಳ್ಳಲು ಅನಸ್ತೇಶಿಯಾ ನೀಡಲಾಗಿತ್ತು. ಇದು ರಿಯಾಕ್ಟ್ ಆಗಿರುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ.
ಹಲವರು ತಜ್ಞರು ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಟ್ಯಾಟೂ ಕಾರಣದಿಂದ ಹೃದಯಾಘಾತವಾಗಿದೆಯಾ ಅನ್ನೋ ಅನುಮಾನ ಹೆಚ್ಚಾಗಿದೆ. ಈ ಕುರಿತು ಎಲ್ಲರು ವೈದ್ಯರ ವರದಿಗಾಗಿ ಕಾಯುತ್ತಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಎಲ್ಲರಿಗೆ ಆರೋಗ್ಯ ದೃಷ್ಟಿಯಿಂದ ಟ್ಯಾಟೂ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.