ಚಿಕಿತ್ಸೆ ಇಲ್ಲದ MPOX ವೈರಸ್ ಪ್ರಕರಣ ರಾಜ್ಯದಲ್ಲಿ ಪತ್ತೆ: ದುಬೈಗೆ ಹೋಗಿ ಬಂದ ವ್ಯಕ್ತಿಗೆ ಪಾಸಿಟಿವ್‌

Published : Jan 23, 2025, 11:11 AM ISTUpdated : Jan 23, 2025, 11:33 AM IST
ಚಿಕಿತ್ಸೆ ಇಲ್ಲದ MPOX ವೈರಸ್ ಪ್ರಕರಣ ರಾಜ್ಯದಲ್ಲಿ ಪತ್ತೆ: ದುಬೈಗೆ ಹೋಗಿ ಬಂದ ವ್ಯಕ್ತಿಗೆ ಪಾಸಿಟಿವ್‌

ಸಾರಾಂಶ

ಮತ್ತೆ ರಾಜ್ಯದಲ್ಲಿ ಹೊಸ ವೈರಸ್ ಭಯ ಶುರುವಾಗಿದೆ.  ರಾಜ್ಯದಲ್ಲಿ MPOX ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 40 ವರ್ಷದ ವ್ಯಕ್ತಿಗೆ MPOX ವೈರಸ್ ಪಾಸಿಟಿವ್ ಬಂದಿದೆ.

ಬೆಂಗಳೂರು: ಮತ್ತೆ ರಾಜ್ಯದಲ್ಲಿ ಹೊಸ ವೈರಸ್ ಭಯ ಶುರುವಾಗಿದೆ.  ರಾಜ್ಯದಲ್ಲಿ MPOX ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 40 ವರ್ಷದ ವ್ಯಕ್ತಿಗೆ MPOX ವೈರಸ್ ಪಾಸಿಟಿವ್ ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬ್ ನಲ್ಲಿ ತಪಾಸಣೆ ಮಾಡಿದಾಗ 40 ವರ್ಷದ ವ್ಯಕ್ತಿಗೆ  MPOX ವೈರಸ್ ಪಾಸಿಟಿವ್ ಬಂದಿದೆ. ಈ ವ್ಯಕ್ತಿ ದುಬೈ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ (ದುಬೈಗೆ ಹೋಗಿ ಬಂದಿರುವುದು). MPOX ವೈರಸ್ಸನ್ನು ವಿಶ್ವ ಆರೋಗ್ಯ ಸಂಸ್ಥೆ  WHO ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದೆ. 

ಇತ್ತ ಸೋಂಕು ಹೊಂದಿರುವ  ವ್ಯಕ್ತಿ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಇದು ಈ ವರ್ಷದ ಮೊದಲ MPOX ವೈರಸ್ ಪ್ರಕರಣವಾಗಿದೆ. ಇದಕ್ಕೂ ಮೊದಲು 2024ರ ಸಪ್ಟೆಂಬರ್​​​ನಲ್ಲಿ ಮೊದಲ MPOX ವೈರಸ್ ಪತ್ತೆಯಾಗಿತ್ತು. 

Mpox ಎಂದರೇನು?
ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ವೈರಲ್ ಸೋಂಕು MPOX ಆಗಿದ್ದು, ಇದು ಸೋಂಕಿತನ ಲಾಲಾರಸ, ಬೆವರಿನ ಮೂಲಕ ಹರಡುತ್ತದೆ.  ಈ ರೋಗಕ್ಕೆ ಯಾವುದೇ ಲಸಿಕೆ ಅಥವಾ ಔಷಧಿ ಇಲ್ಲ, ಇದು ಮಂಕಿಪಾಕ್ಸ್ ರೋಗಿಯ ಚರ್ಮ, ಉಸಿರಾಟದ ನಾಳದ ಮೇಲೆ ಪರಿಣಾಮ ಬೀರುವುದು. ಕೆಲವು ರೋಗಿಗಳಿಗೆ ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರುವುದು ಈ ವೈರಸ್​​ನಿಂದ ಮೆದುಳಿನ ಜೀವಕೋಶಗಳಿಗೆ ತೀವ್ರ ಹಾನಿಯಾಗುವುದು.

ಈ ರೋಗದ ಲಕ್ಷಣಗಳೇನು?

  • ಗಂಟಲು ಊದುವಿಕೆ
  • ಮೈಮೇಲೆ ಕೆಂಪು ಗುಳ್ಳೆಗಳು
  • ಜ್ವರ, ಚಳಿ ಅನುಭವ
  • ಸ್ನಾಯುನೋವು
  • ತಲೆನೋವು, ಸುಸ್ತು ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ