ಅಬ್ಬಬ್ಬಾ..ಮೂರು ಹೊತ್ತು ಕೂದಲನ್ನೇ ತಿನ್ತಿದ್ಲಾ? ಬಾಲಕಿ ಹೊಟ್ಟೆಯಲ್ಲಿತ್ತು ಬರೋಬ್ಬರಿ 1 ಕೆಜಿ ಕೂದಲು!

By Vinutha Perla  |  First Published Feb 3, 2023, 10:22 AM IST

ಸಾಮಾನ್ಯವಾಗಿ ಎಲ್ಲರೂ ಆಹಾರ ತಿನ್ನುತ್ತಾರೆ. ಆದ್ರೆ ಇದಲ್ಲದೆ ಕೆಲವೊಬ್ಬರಿಗೆ ವಿಚಿತ್ರವಾಗಿ ಮಣ್ಣು, ಸಿಮೆಂಟ್, ಮರಳು ಮೊದಲಾದವುಗಳನ್ನು ತಿನ್ನುವ ಅಭ್ಯಾಸವಿರುತ್ತದೆ. ಹಾಗೆ ಈಕೆ ತಿನ್ತಿದ್ದು ತನ್ನ ಕೂದಲನ್ನೇ. ಆಪರೇಷನ್ ನಡೆಸಿದ ವೈದ್ಯರು ಆಕೆಯ ಹೊಟ್ಟೆಯೊಳಗಿಂದ ಬರೋಬ್ಬರಿ ಒಂದು ಕಿಲೋಗೂ ಹೆಚ್ಚು ಕೂದಲಿನ ಉಂಡೆಯನ್ನು ಹೊರತೆಗೆದಿದ್ದಾರೆ


ಆಂಧ್ರಪ್ರದೇಶ: ಬಾಲಕಿಯ ಹೊಟ್ಟೆಯಿಂದ ಒಂದು ಕಿಲೋಗೂ ಹೆಚ್ಚು ಕೂದಲು ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡದಲ್ಲಿರುವ ಶ್ರೀರಾಮ ನರ್ಸಿಂಗ್ ಹೋಂಗೆ ದಾಖಲಾಗಿದ್ದ 14 ವರ್ಷದ ಬಾಲಕಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.ಬಾಲಕಿಯ ಹೊಟ್ಟೆಯಿಂದ 1 ಕೆಜಿ ಕೂದಲು ಹೊರತೆಗೆಯಲಾಗಿದೆ. ವಿವರಗಳ ಪ್ರಕಾರ, ಬಾಲಕಿ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹೊಟ್ಟೆ ನೋವು (Stomach pain), ವಾಂತಿ ಕಾಣಿಸಿಕೊಂಡಿತ್ತು. ತೂಕ ಸಹ ಕಡಿಮೆಯಾಗಿತ್ತು. ಹೀಗಾಗಿ ಈಕೆಯ ಕುಟುಂಬಸ್ಥರು ತಕ್ಷಣ ಗುಡಿವಾಡದ ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಎಂಡೋಸ್ಕೋಪಿ ಮತ್ತು ಸ್ಕ್ಯಾನಿಂಗ್ ಮಾಡಿ ಬಾಲಕಿಯ (Girl) ಹೊಟ್ಟೆಯಲ್ಲಿ ಕಪ್ಪು ಗಡ್ಡೆ ಇರುವುದನ್ನು ಕಂಡು ಶಸ್ತ್ರಚಿಕಿತ್ಸೆ (Operation) ನಡೆಸಲು ನಿರ್ಧರಿಸಿದ್ದಾರೆ.

ಹೊಟ್ಟೆಯಲ್ಲಿ ಗೆಡ್ಡೆಯಾಗಿ ಮಾರ್ಪಟ್ಟಿದ್ದ ಕೂದಲು
ಮಂಗಳವಾರ ಬಾಲಕಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಒಂದು ಕಿಲೋ ಗಡ್ಡೆ ತೆಗೆಯಲಾಗಿದೆ. ವೈದ್ಯರು ಇದನ್ನು ಕೂದಲು ಉಂಡೆ ಎಂದು ಗುರುತಿಸಿದ್ದಾರೆ. ಟ್ರೈಕೋಬಿಝೋರ್ ಕಾಯಿಲೆ (Disease)ಯಿಂದ ಕೆಲವರಿಗೆ ಚಿಕ್ಕಂದಿನಿಂದಲೂ ಕೂದಲು ತಿನ್ನುವ ಅಭ್ಯಾಸವಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಕೂದಲುಗಳು (Hair) ಸಣ್ಣ ಪ್ರಮಾಣದಲ್ಲಿ ಹೊರಬರುತ್ತವೆ ಎಂದು ಅವರು ಹೇಳಿದರು ಮತ್ತು ಹುಡುಗಿ ಬಹಳಷ್ಟು ಕೂದಲುಗಳನ್ನು ತಿನ್ನುತ್ತಿದ್ದಳು ಮತ್ತು ಆದ್ದರಿಂದ ಅವು ಹೊಟ್ಟೆಯಲ್ಲಿ ಸಂಗ್ರಹಗೊಂಡು ಜೀರ್ಣಾಂಗದಲ್ಲಿ ದೊಡ್ಡ ಗಡ್ಡೆಯಾಗಿ ಮಾರ್ಪಟ್ಟಿವೆ ಎಂದು ಹೇಳಿದರು. 

Latest Videos

undefined

Childhood Obesity: ಐದು ವರ್ಷಕ್ಕೇ ಈಕೆ ತೂಕ 45KG: ಕಾರಣವೇನು ಗೊತ್ತಾ?

ಜೀರ್ಣಾಂಗವನ್ನು ತುಂಬಿದ್ದ ಕೂದಲಿನಿಂದ ಬಾಲಕಿಗೆ ಅಸ್ವಸ್ಥತೆ
ಹುಡುಗಿ ಸುಮಾರು ಒಂದು ಕಿಲೋ ತೂಕದ ಕೂದಲನ್ನು ತಿಂದ ನಂತರ ಅದು ಅವಳ ಜೀರ್ಣಾಂಗವನ್ನು ತುಂಬಿತು ಮತ್ತು ಅವಳು ತಿಂದ ಅನ್ನವು ಹೊರಬಂದಿತು ಎಂದು ಅವರು ಹೇಳಿದರು. ಉಳಿದ ಆಹಾರವು (Food) ಜೀರ್ಣವಾಗದ ಕಾರಣ ಹುಡುಗಿ ಶಕ್ತಿ ಕಳೆದುಕೊಂಡಿದ್ದಾಳೆ ಎಂದು ಅವರು ಹೇಳಿದರು. ರಕ್ತಹೀನತೆ ಇರುವವರು ಈ ರೀತಿಯ ಆಹಾರವನ್ನು ಸೇವಿಸುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

ವೈದ್ಯ ಪೊಟ್ಲೂರಿ ವಂಶಿಕೃಷ್ಣ ಎಂಬುವವರು ಎಂಡೋಸ್ಕೋಪಿ ಸೇರಿದಂತೆ ಹಲವು ಪ್ಯಾಥಲಾಜಿಕಲ್ ಪರೀಕ್ಷೆ (Test)ಗಳನ್ನು ನಡೆಸಿ ಆಕೆಗೆ ಕೂದಲು ತಿನ್ನುವ ಅಭ್ಯಾಸವಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ನಂತರ ಬಾಲಕಿಗೆ ಕೂದಲು ತಿನ್ನುವ ಹವ್ಯಾಸವಿದೆ ಎಂಬ ವಿಚಾರ  ತಿಳಿದುಬಂದಿದೆ. ವೈದ್ಯರು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.

ದಿನಾ ಮೊಟ್ಟೆ ಸೇವಿಸಿದ್ರೆ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಹೆಚ್ಚುತ್ತಾ?

15,000 ಜನರಲ್ಲಿ ಒಬ್ಬರಿಗೆ ಬರುವ ಅಪರೂಪದ ಕಾಯಿಲೆ
ಈ ವೇಳೆ ವೈದ್ಯ ಪೊಟ್ಲೂರಿ ವಂಶಿಕೃಷ್ಣ ಎಂಬುವವರು ಎಂಡೋಸ್ಕೋಪಿ ಸೇರಿದಂತೆ ಹಲವು ಪ್ಯಾಥಲಾಜಿಕಲ್ ಪರೀಕ್ಷೆಗಳನ್ನು ನಡೆಸಿ ಆಕೆಗೆ ಕೂದಲು ತಿನ್ನುವ ಅಭ್ಯಾಸವಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ನಂತರ ಬಾಲಕಿಗೆ ಕೂದಲು ತಿನ್ನುವ ಹವ್ಯಾಸ (Habit)ವಿದೆ ಎನ್ನುವುದು ತಿಳಿದುಬಂದಿದೆ. ಶಸ್ತ್ರ ಚಿಕಿತ್ಸೆ ಕುರಿತು ವಿವರ ನೀಡಿದ ಡಾ.ವಂಶಿಕೃಷ್ಣ, ಬಾಲಕಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು, ರಕ್ತಹೀನತೆಯಿಂದ ಕೂದಲು ತಿನ್ನುವ ಅಭ್ಯಾಸ ಹೊಂದಿದ್ದಳು. ಇದು ಅಪರೂಪದ ಕಾಯಿಲೆಯಾಗಿದ್ದು, 15,000 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಅದೇನೆ ಇರ್ಲಿ ತಲೆಯಲ್ಲಿರಬೇಕಾದ ರಾಶಿ ರಾಶಿ ಕೂದಲನ್ನು ಹೊಟ್ಟೆಯಲ್ಲಿ ನೋಡಿ ವೈದ್ಯರು ಸಹ ಅವಕ್ಕಾಗಿದ್ದಂತೂ ನಿಜ.

ವಿಶ್ವದ Ugly Woman ಯಾರು ಗೊತ್ತಾ? ಅದ್ಯಾಕೆ ಇವರನ್ನು ಕುರೂಪಿ ಅಂತಾರೆ?

click me!