
ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ, ಇಗೀನ ಆಧುನಿಕ ಯುಗದಲ್ಲಿ ಮನೆಯಲ್ಲಿಯೆ ಕಾಯಿಲೆಯನ್ನ ಗುಣಪಡಿಸಿಕೊಳ್ಳುವಂತಹ ಔಷಧಿಯ ಗುಣವಿರುವ ಗಿಡಗಳು ಇದ್ದರು ಅವುಗಳನ್ನ ನಾವು ನಿರ್ಲಕ್ಷಿಸಿ ಚಿಕ್ಕ ಪುಟ್ಟ ಕಾಯಿಲೆಗಳಿಗೂ ವೈದ್ಯರ(Doctors) ಮೊರೆ ಹೋಗುತ್ತೇವೆ. ಆದರೆ ಮನೆ ಅಂಗಳದಲ್ಲೇ ಇರುವಂತಹ ಗಿಡಗಳತ್ತ ಗಮನ ಹರಿಸುವುದನ್ನ ಇತ್ತೀಚಿಗೆ ಬಿಟ್ಟುಬಿಟ್ಟಿದ್ದೇವೆ. ನಮ್ಮ ಪೂರ್ವ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ ಒಂದು ಗಿಡಗಳಲ್ಲಿ ದೊಡ್ಡಪತ್ರೆಯೂ(Doddapatre) ಒಂದು. ಆರೋಗ್ಯಕ್ಕೆ ಅಮೃತ ಅಂತನೇ ಕರೆಸಿಕೊಳ್ಳುವಂತಹ ದೊಡ್ಡ ಪತ್ರೆ ಎಲೆಗಳು ಮನೆಯಲ್ಲಿದ್ದರೆ ಖಂಡಿತವಾಗಿಯೂ ಆರೋಗ್ಯವನ್ನ(Health) ಉತ್ತಮವಾಗಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ.
ಏಕೆಂದರೆ ಇದನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡುವುದರಿಂದ ಹಲವಾರು ರೀತಿಯ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ದೊಡ್ಡ ಪತ್ರೆಯ ಎಲೆಗಳು ನೆಗಡಿ ಮತ್ತು ಕೆಮ್ಮಿನಂತಹ ಸಾಮಾನ್ಯ ಸಮಸ್ಯೆಗಳಿಂದ ಹಿಡಿದು ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆವರೆಗೆ ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತವೆ.
ದೊಡ್ಡ ಪತ್ರೆಗಳನ್ನ ಬೆಳೆಯುವುದಕ್ಕೆ ಹೆಚ್ಚು ಶ್ರಮಹಾಕಬೇಕಿಲ್ಲ. ಸಾಮಾನ್ಯ ಸೌಕರ್ಯವನ್ನ ಒದಗಿಸಿದರೆ ಸಾಕು,. ತನ್ನಷ್ಟಕ್ಕೆ ತಾನು ಬೆಳೆದುಕೊಳ್ಳುತ್ತದೆ. ಹೆಚ್ಚಾಗಿ ಸ್ವಲ್ವ ನೀರನ್ನ ಬೇಡುವಂತಹ ಗಿಡ ಇದಾಗಿದ್ದು, ಹೆಚ್ಚಾಗಿ ನೀರು ಹೋಗುವ ಜಾಗಗಳಲ್ಲಿ ನೆಟ್ಟರೆ ತನ್ನಷ್ಟಕ್ಕೆ ತಾನೇ ದಷ್ಟ ಪುಷ್ಟವಾಗಿ ಬೆಳೆದುಕೊಂಡು ಬಿಡುತ್ತದೆ.
ದೊಡ್ಡಪತ್ರೆಯು (Doddapatre) ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯುತ್ತದೆ, ಇದರ ಎಲೆಗಳು ದೊಡ್ಡ ಮತ್ತು ದಪ್ಪವಾಗಿದ್ದು ಸುವಾಸನೆಯನ್ನು ಹೊಂದಿರುತ್ತವೆ. ಕೆಲವು ಕಡೆ ದೊಡ್ಡಪತ್ರೆ ಎಲೆಯನ್ನ ಚಟ್ನಿ, ತಂಬುಳಿ ಮಾಡಿ ಸೇವಿಸುತ್ತಾರೆ. ದೊಡ್ಡ ಪತ್ರೆಯನ್ನ, ಸಾಂಬಾರ್ ಸೊಪ್ಪು ಸಾಂಬ್ರಾಣಿ ಎಲೆ ಹೀಗೆ ನಾನಾ ಹೆಸರುಗಳಿವೆ. ಈ ಗಿಡ ಅಮೃತಕ್ಕೆ ಸಮಾನವಾದ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಮನೆಯ ಹಿತ್ತಲಿನಲ್ಲಿ ಈ ಒಂದು ಗಿಡವಿದ್ದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು.
ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಬಹಳ ಪ್ರಮುಖ ಸ್ಥಾನವಿದೆ. ಇನ್ನು ಇದರ ಉಪಯೋಗ ಸಹ ಸಾಕಷ್ಟಿದೆ. ಈ ದೊಡ್ಡಪತ್ರೆಯು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಬಹಳ ಉಪಕಾರಿಯಾದಂತಹ ಸಸ್ಯ ಇದಾಗಿದೆ. ಇದನ್ನ ಆಫ್ರಿಕಾ ದೇಶಗಳಲ್ಲಿ ಪುದಿನಾಕೆ ಪರ್ಯಾಯವಾಗಿ ಬಳಸಲಾಗುತ್ತದೆ. ಹೂವಿನ ಗಿಡಗಳ ಜೊತೆ ಬೆಳೆದು ಆರೋಗ್ಯ ವೃದ್ಧಿಸುವ ಈ ಪುಟ್ಟ ಗಿಡದ ಆರೋಗ್ಯ (Health) ಗುಣ ಮಾತ್ರ ಬಹು ದೊಡ್ಡದು.
ಇದರ ಕೆಲವು ಉಪಯೋಗಗಳು(Benefits) ಇಲ್ಲಿವೆ.
ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ರಸವನ್ನ ಬಳಸಲಾಗುತ್ತದೆ.
ದೊಡ್ಡ ಪತ್ರೆ ಎಲೆಗಳನ್ನ ಉಸಿರಾಟದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಇದರ ರಸವನ್ನ ಎದೆಯ ಮೇಲೆ ಹಚ್ಚುವುದರಿಂದ ಉಸಿರಾಟದ ಸಮಸ್ಯೆ ಸುಲಭವಾಗುತ್ತದೆ.
ಈ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಲೆಯನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಅಜೀರ್ಣ, ಮಲಬದ್ಧತೆ ಮತ್ತು ಹೊಟ್ಟೆ ಉರಿಯುವಿಕೆಯಿಂದ ಬಳಲುತ್ತಿರುವವರಿಗೆ ಇದರ ಎಲೆಯ ಔಷಧ ರಾಮ ಬಾಣದಂತೆ ಕೆಲಸ ಮಾಡುತ್ತದೆ.
ಚಿಕ್ಕ ಮಕ್ಕಳಿಗೆ ಜ್ವರ (Fever) ಬಂದಾಗ ಈ ಎಲೆಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ.
ಒಂದು ವಾರದ ವರೆಗೆ ಪ್ರತಿನಿತ್ಯ ತಪ್ಪದೆ ದೊಡ್ಡಪತ್ರೆ ಎಲೆಯ ರಸವನ್ನು ಸೇವನೆ ಮಾಡಿದಲ್ಲಿ ಕಾಮಾಲೆ ರೋಗ ನಿವಾರಣೆಯಾಗುತ್ತದೆ.
ತುರಿಕೆ, ಕಜ್ಜಿಗೆ ಇದರ ರಸವನ್ನ ಹಚ್ಚಿದರೆ ತುರಿಕೆ ಕಜ್ಜಿಯಂತಹ ರೋಗಗಳು ಕಡಿಮೆಯಾಗುತ್ತದೆ.
ದೊಡ್ಡ ಪತ್ರೆ ತೂಕ ಕಡಿಮೆ(Weight loss) ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಬಹಳ ಸಹಕಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.