
ನವದೆಹಲಿ(ಮೇ.19) ಕೋವಿಡ್ ವೈರಸ್ ಮತ್ತೆ ಕಾಣಿಸಿಕೊಂಡಿದೆ. ಈ ಬಾರಿ ಕೆಲ ಅಪಾಯದ ಸೂಚನೆಯನ್ನು ನೀಡುತ್ತಿದೆ. ಹಾಂಕಾಂಗ್, ಥಾಯ್ಲೆಂಡ್, ಸಿಂಗಾಪುರ, ಚೀನಾ ಸೇರಿದಂತೆ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ಸ್ಫೋಟಗೊಂಡಿದೆ. ಪ್ರತಿ ದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಆತಂಕದ ಬೆನ್ನಲ್ಲೇ ಭಾರತದಲ್ಲಿ ಕೋವಿಡ್ ಪ್ರಕರಣ ದಾಖಲಾಗಿದೆ.18ನೇ ಆವೃತ್ತಿ ಬಿಗ್ ಬಾಸ್ ಖ್ಯಾತಿಯ ಶಿಲ್ಪಾ ಶಿರೋಡ್ಕರ್‌ಗೆ ಕೋವಿಡ್ ವೈರಸ್ ಅಂಟಿಕೊಂಡಿದೆ. ಏಷ್ಯಾದಲ್ಲಿ ಸ್ಫೋಟಗೊಂಡಿರುವ ಕೋವಿಡ್ ವೈರಸ್ ಕೆಲ ವರ್ಷಗಳ ಹಿಂದೆ ಕಾಣಿಸಿಕೊಂಡ ಒಮಿಕ್ರಾನ್ ಉಪತಳಿಯಾಗಿರುವ JN.1 ವೈರಸ್.
JN.1 ವೈರಸ್ ತಳಿ
JN.1 ಕೋವಿಡ್ ವೈರಸ್ ತಳಿ ಹೊಸದೇನಲ್ಲ. ಇದು 2023ರ ಆಗಸ್ಟ್ ತಿಂಗಳಲ್ಲಿ ಸದ್ದು ಮಾಡಿದ ಕೋವಿಡ್ ಒಮಿಕ್ರಾನ್ ವೇರಿಯೆಂಟ್‌ನ BA.2.86 ರೂಪಾಂತರ ತಳಿಯಾಗಿದೆ. 2023ರ ಡಿಸೆಂಬರ್ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ತಳಿಯನ್ನು ಕೋವಿಡ್ ರೂಪಾಂತರ ತಳಿಗಲ್ಲಿ ಸೇರಿಸಿ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಲ್ಲ ಸಾಧ್ಯತೆಯನ್ನೂ ಸೂಚಿಸಿತ್ತು. ಈ ಒಮಿಕ್ರಾನ್ ವೈರಸ್ ಬರೋಬ್ಬರಿ 30 ರೂಪಾಂತರಗೊಳ್ಳುವ ಸಾಮರ್ಥ್ಯ ಹೊಂದಿದೆ. ಈ 30 ರೂಪಾಂತರಗಳಲ್ಲಿ ಇದೀಗ ಕಾಣಿಸಿಕೊಂಡ JN.1 ತಳಿ ಒಂದಾಗಿದೆ. 2023ರಲ್ಲಿ BA.2.86 ವೈರಸ್ ಅಪಾಯಾಕಾರಿಯಾಗಿಲ್ಲ. ಕೆಲ ಪ್ರಕರಣಗಳು ದಾಖಲಾಗಿ ಬಳಿ ನಶಿಸಿತ್ತು. ಆದರೆ ಈ ಬಾರಿ ಕಾಣಿಸಿಕೊಂಡಿರುವ ಜೆನ್.1 ವೈರಸ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಅನ್ನೋದರ ಕುರಿತು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೆರಿಲ್ಯಾಂಡ್‌ನ ಜಾನ್ ಹಾಪ್‌ಕಿನ್ಸ ವಿಶ್ವವಿದ್ಯಾಲಯದ ಪ್ರಕಾರ, JN.1 ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ವೇಗ ಹೆಚ್ಚು. ಇದು ಮತ್ತೊಂದು ರೂಪಾಂತರಗೊಳ್ಳುವ ಸಾಧ್ಯತೆಯೂ ಇದೆ. ಸದ್ಯ ಹರಡತ್ತಿರುವ JN.1 ವೈರಸ್ ಹೆಚ್ಚು ಪರಿಣಾಮಕಾರಿಯಾಗಿದೆ. ಅತೀ ಬೇಗದಲ್ಲಿ ಮನುಷ್ಯನ ಪ್ರತಿರೋಧ ಶಕ್ತಿಯನ್ನು ಕುಗ್ಗಿಸಿ ಆರೋಗ್ಯವಂತರನ್ನು ಅನಾರೋಗ್ಯಪೀಡಿತರನ್ನಾಗಿ ಮಾಡಲಿದೆ. ಹೀಗಾಗಿ ಮುಂಜಾಗ್ರತೆ ಅತೀ ಅವಶ್ಯಕ ಎಂದು ಹಾಪ್‌ಕಿನ್ಸ ವಿಶ್ವವಿದ್ಯಾಲಯದ ಅಧ್ಯಯನ ವರದಿ ಹೇಳುತ್ತಿದೆ.
JN.1 ವೈರಸ್ ರೋಗ ಲಕ್ಷಣ
JN.1 ವೈರಸ್ ತಳಿಯ ರೋಗ ಲಕ್ಷಣದಲ್ಲಿ ಹೊಸತನವಿಲ್ಲ. ಕೋವಿಡ್ 19 ರೋಗ ಲಕ್ಷಣಗಳೇ ಇಲ್ಲೂ ಪ್ರಧಾನ. ಗಂಟಲು ನೋವು, ವಿಪರೀತ ಶೀತ, ಕೆಮ್ಮು, ಜ್ವರ, ತಲೆನೋವು, ಮೈಕೈ ನೋವು, ಸುಸ್ತು, ಉಸಿರಾಟದ ಸಮಸ್ಯೆ, ಆಹಾರ ವಸ್ತುಗಳ ರುಚಿ, ವಾಸನೆ ತಿಳಿಯದಾವುದುದು ಸೇರಿದತೆ ನಿರ್ಜಲೀಕರಣ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ. ಮೈಲ್ಡ್ ಪ್ರಕರಣಗಳಿಗೆ ಮನೆಯಲ್ಲಿ ಕ್ವಾರಂಟೈನ್ ಆಗುವುದು ಉತ್ತಮ. ಆದರೆ ಉಸಿರಾಟ, ತೀವ್ರ ಸುಸ್ತು ಕಾಣಿಸಿಕೊಂಡರೆ ಆಸ್ಪತ್ರೆ ದಾಖಲಾಗುವುದ ಉತ್ತಮ.
ಬೇಸಿಗೆಯ ಕೊನೆಯಲ್ಲಿ ಕಾಣಿಸಿಕೊಂಡ ವೈರಸ್ ಅಪಾಯಕಾರಿ
ಏಷ್ಯಾದಲ್ಲಿ ದಾಖಲಾಗುತ್ತಿರುವ ಬಹುತೇಕ ಕೋವಿಡ್ ಪ್ರಕರಣಗಳು JN.1 ವೈರಸ್. ಇದು ದೇಹದಲ್ಲಿ ಅತೀ ಬೇಗನ ರೋಗ ನಿರೋಧಕ್ಷ ಶಕ್ತಿಯನ್ನು ಕುಗ್ಗಸುತ್ತದೆ. ಪ್ರತಿಕಾಯಗಳನ್ನು ದುರ್ಬಲಗೊಳಿಸುತ್ತದೆ. ಅತೀವ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಕೋವಿಡ್ ಹಲವು ರೂಪಾಂತರಗೊಂಡು ವರ್ಷದಲ್ಲಿ ಕೆಲ ಪ್ರಕರಣಗಳು ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಅದರ ಪರಿಣಾಮ ಎಷ್ಟು ಗಂಭೀರ ಅನ್ನೋದು ಮುಖ್ಯ. ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವು ರೂಪಾಂತರ ಕೋವಿಡ್ ವೈರಸ್ ಕಾಣಿಸಿಕೊಂಡಿದೆ. ಆದರೆ ಇದ್ಯಾವುದು ಭಾರತದಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ. ಆದರೆ ಈ ಬಾರಿ ಕಾಣಿಸಿಕೊಂಡಿರುವ JN.1 ವೈರಸ್ ಎಷ್ಯಾದ ಕೆಲ ರಾಷ್ಟ್ರಗಳಲ್ಲಿ ಆತಂಕ ಹೆಚ್ಚಿಸಿದೆ. ಇದು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಸುಲಭವಾಗಿ ಭಾರತದಲ್ಲಿ ಹರಡಬಲ್ಲದು ಎಂದು ಮ್ಯಾಕ್ಸ್ ಹೆಲ್ತ್‌ಕೇರ್‌ನ ಗ್ರೂಪ್ ವೈದ್ಯಕೀಯ ನಿರ್ದೇಶಕ ಡಾ. ಸಂದೀಪ್ ಬುಧಿರಾಜ ಹೇಳಿದ್ದಾರೆ. ಬೇಸಿಗೆಯ ಕೊನೆಯ ತಿಂಗಳಲ್ಲಿ ಕೋವಿಡ್ ಅಲೆ ಕಾಣಿಸಿಕೊಂಡಿದೆ. ಇದು ಆತಂತಕಾರಿ. ಕಾರಣ ಉಸಿರಾಟದ ಸಮಸ್ಯೆಗಳು ಹೆಚ್ಚಾಗುವ ಈ ಸಮಯದಲ್ಲೇ ಕೋವಿಡ್ ವೈರಸ್ ಕಾಣಿಸಿಕೊಂಡಿರುವುದು ಜನರ ಆರೋಗ್ಯದ ಮೇಲೆ, ಪ್ರತಿಕಾಯಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು ಎಂದು ಸಂದೀಪ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.