
ಬೆಳಿಗ್ಗೆ (Morning) ಎದ್ದು ನಿತ್ಯ ಕರ್ಮ ಮುಗಿಸಿದ ತಕ್ಷಣ ಅನೇಕರು ಆಹಾರ (Food) ಸೇವನೆ ಅಭ್ಯಾಸ (Practice) ಹೊಂದಿರುತ್ತಾರೆ. ಮತ್ತೆ ಕೆಲವರು ಕೆಲಸ (Work)ದ ಒತ್ತಡದಲ್ಲಿ 12 ಗಂಟೆಯಾದ್ರೂ ಆಹಾರ ತಿನ್ನುವುದಿಲ್ಲ. ಬೆಳಗಿನ ಉಪಹಾರ ಬಿಡುವುದು ಒಳ್ಳೆಯದಲ್ಲ. ಬೆಳಿಗ್ಗೆ 8 ಗಂಟೆಯೊಳಗೆ ಆಹಾರ ಸೇವನೆ ಮಾಡ್ಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ಬೆಳಗಿನ ಉಪಹಾರದಲ್ಲಿ ಏನು ಸೇವನೆ ಮಾಡ್ಬೇಕು ಎಂಬುದೂ ಮುಖ್ಯವಾಗುತ್ತದೆ. ಹೆಚ್ಚು ಪೌಷ್ಟಿಕಾಂಶವಿರುವ ಆಹಾರವನ್ನು ಬೆಳಿಗ್ಗೆ ತಿನ್ನಬೇಕು. ಆದ್ರೆ ಈವರೆಗೂ ನೀವು ಬೆಳಿಗ್ಗೆ ಬಾಳೆಹಣ್ಣು ಹಾಗೂ ಮೊಸರನ್ನು ಉಪಹಾರದಲ್ಲಿ ಸೇರಿಸಿಲ್ಲವೆಂದಾದ್ರೆ ಇಂದೇ ಅದನ್ನು ಡಯಟ್ ನಲ್ಲಿ ಸೇರ್ಪಡೆ ಮಾಡಿ.
ಬೆಳಗಿನ ಉಪಹಾರಕ್ಕೆ ಬಾಳೆಹಣ್ಣು-ಮೊಸರು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದನ್ನು ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಮೂಲವೆಂದು ಪರಿಗಣಿಸಲಾಗುತ್ತದೆ. ಮೊಸರು ಮತ್ತು ಬಾಳೆಹಣ್ಣಿನ ಮಿಶ್ರಣ ಕೇವಲ ಆರೋಗ್ಯಕರವೊಂದೇ ಅಲ್ಲ. ಅದನ್ನು ತಯಾರಿಸುವುದು ಕೂಡ ಬಹಳ ಸುಲಭ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ 6, ಮೆಗ್ನೀಸಿಯಮ್ ಮತ್ತು ಕಬ್ಬಿಣ ಕಂಡು ಬರುತ್ತದೆ. ಮೊಸರಿನಲ್ಲಿ ಪ್ರೋಟೀನ್, ಸೋಡಿಯಂ ಮತ್ತು ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಕಂಡುಬರುವ ಕಾರಣ ಇದು ಸಾಕಷ್ಟು ಪ್ರಯೋಜನಕಾರಿಯಾಗಿದೆ.
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಮೊಸರು ಮತ್ತು ಬಾಳೆಹಣ್ಣಿನ ಮಿಶ್ರಣ ಒಳ್ಳೆಯ ಆಯ್ಕೆಯಾಗಿದೆ. ಇದು ಹೊಟ್ಟೆಯ ಸಮಸ್ಯೆಯುಳ್ಳವರಿಗೆ ಕೂಡ ಪ್ರಯೋಜನಕಾರಿಯಾಗಿದೆ. ಮಲಬದ್ಧತೆ ಅಥವಾ ಪೈಲ್ಸ್ ಅಥವಾ ಅಜೀರ್ಣದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಪ್ರತಿದಿನ ಬೆಳಿಗ್ಗೆ ಇದನ್ನು ಸೇವಿಸಿದ್ರೆ ಪ್ರಯೋಜನ ಸಿಗಲಿದೆ. ಬೆಳಿಗ್ಗೆ ಮೊಸರು ಮತ್ತು ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇಂದು ತಿಳಿಯೋಣ.
ಬೆಳಿಗ್ಗೆ ಮೊಸರು-ಬಾಳೆಹಣ್ಣು ಸೇವನೆಯಿಂದಾಗುವ ಪ್ರಯೋಜನಗಳು
ಮೂಳೆಗಳಿಗೆ ಬಲ : ಮೊಸರಿನಲ್ಲಿ ಇರುವ ಉತ್ತಮ ಬ್ಯಾಕ್ಟೀರಿಯಾ ಮತ್ತು ಬಾಳೆಹಣ್ಣಿನಲ್ಲಿರುವ ಫೈಬರ್ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಕೀಲು ನೋವನ್ನು ಕಡಿಮೆ ಮಾಡುತ್ತದೆ. ಸದಾ ಕುಳಿತುಕೊಂಡು ಕೆಲಸ ಮಾಡ್ತಿದ್ದರೆ ಕೀಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕುಳಿತೇ ಕೆಲಸ ಮಾಡುವವರು ಆಹಾರದಲ್ಲಿ ಇದನ್ನು ಅಗತ್ಯವಾಗಿ ಸೇರಿಸಬೇಕು.
HEALTH TIPS: ಹೊಟ್ಟೆಯ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಬೇಡ. ಇದು ಖಿನ್ನತೆಗೂ ಕಾರಣವಾಗುತ್ತೆ !
ಒತ್ತಡ ನಿವಾರಕವಾಗಿ ಕೆಲಸ ಮಾಡುತ್ತೆ ಬಾಳೆಹಣ್ಣು-ಮೊಸರು : ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಸ್ನಾಯುಗಳನ್ನು ವಿಶ್ರಾಂತಿಗೊಳಿಸುತ್ತದೆ. ಮೊಸರಿನ ಜೊತೆ ಬಾಳೆಹಣ್ಣು ಸೇವನೆ ಮಾಡಿದ್ರೆ,ಪೋಷಕಾಂಶಗಳು ಜೀವಕೋಶಗಳಿಗೆ ಸುಲಭವಾಗಿ ಸಾಗುತ್ತವೆ. ಬಾಳೆಹಣ್ಣಿನಲ್ಲಿರುವ ಟ್ರಿಪ್ಟೊಫಾನ್ ಅಂಶವು ನರಪ್ರೇಕ್ಷಕ ಸಿರೊಟೋನಿನ್ ಆಗಿ ಪರಿವರ್ತನೆಯಾಗುತ್ತದೆ. ಇದು ವಿಶ್ರಾಂತಿ ನೀಡಲು ನೆರವಾಗುತ್ತದೆ. ಇದ್ರಿಂದ ಮನಸ್ಸಿನಲ್ಲಿರುವ ಒತ್ತಡ ಕಡಿಮೆಯಾಗುತ್ತದೆ.
ಮಲಬದ್ಧತೆಗೆ ಮದ್ದು : ಮಲಬದ್ಧತೆ ದೊಡ್ಡ ಸಮಸ್ಯೆ. ಅದ್ರಿಂದ ಹೊರಬರಲು ಆಹಾರದಲ್ಲಿ ಬದಲಾವಣೆ ಮಾಡುವುದು ಮುಖ್ಯವಾಗುತ್ತದೆ. ಬಾಳೆಹಣ್ಣಿನಲ್ಲಿರುವ ಫೈಬರ್ ಮತ್ತು ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಹಾಗಾಗಿ ಮಲಬದ್ಧತೆ ಇರುವವರು ಇದನ್ನು ಸೇವನೆ ಮಾಡ್ಬೇಕು ಎನ್ನಲಾಗುತ್ತದೆ.
Home Remedies : ಸಿಕ್ಕಿದ್ದೆಲ್ಲ ತಿಂದು ವಾಂತಿ ಶುರುವಾದ್ರೆ ಕ್ವಿಕ್ ರಿಲೀಫ್ ಗೆ ಈ ಟಿಪ್ಸ್ ಬಳಸಿ
ದಿನವಿಡಿ ದೇಹಕ್ಕೆ ಶಕ್ತಿ ನೀಡುತ್ತೆ ಬಾಳೆಹಣ್ಣು-ಮೊಸರು : ಬೆಳಿಗಿನ ಉಪಹಾರವನ್ನು ನಾವು ತೆಗೆದುಕೊಳ್ಳದೆ ಹೋದ್ರೆ ದೇಹದಲ್ಲಿ ಶಕ್ತಿಯಿರುವುದಿಲ್ಲ. ದೇಹ ಶಕ್ತಿ ಕಳೆದುಕೊಂಡರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ದಿನಪೂರ್ತಿ ಉತ್ಸಾಹದಿಂದ ಕೆಲಸ ಮಾಡಬೇಕೆಂದ್ರೆ ಬೆಳಿಗ್ಗೆ ಒಳ್ಳೆಯ ಆಹಾರ ಸೇವನೆ ಮಾಡ್ಬೇಕು. ಮೊಸರು-ಬಾಳೆಹಣ್ಣು ದೇಹಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತವೆ. ಅದ್ರಲ್ಲಿರುವ ಪೋಷಕಾಂಶಗಳು ದೇಹವನ್ನು ಬಲಗೊಳಿಸುತ್ತವೆ.
ತೆಳ್ಳಗಾಗ್ಬೇಕೆಂದ್ರೆ ಬಾಳೆಹಣ್ಣು-ಮೊಸರು ತಿನ್ನಿ : ಬಾಳೆಹಣ್ಣು ಮತ್ತು ಮೊಸರು ಎರಡರಲ್ಲೂ ನಾರಿನಾಂಶ ಹೆಚ್ಚಿದೆ. ಕೊಬ್ಬನ್ನು ಇದು ವೇಗವಾಗಿ ಬರ್ನ್ ಮಾಡುತ್ತದೆ. ಜಿಮ್ ಗೆ ಹೋಗ್ತಿದ್ದರೆ ಅಥವಾ ಮನೆಯಲ್ಲೇ ವ್ಯಾಯಾಮ ಮಾಡ್ತಿದ್ದರೆ ವರ್ಕ್ ಔಟ್ ಮುಗಿದ ಮೇಲೆ ನೀವು ಬಾಳೆಹಣ್ಣು-ಮೊಸರನ್ನು ಸೇವನೆ ಮಾಡುವುದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.