Hair On Tongue: ನಾಲಿಗೆ ಮೇಲೂ ಕೂದಲು ಹುಟ್ಟುತ್ತೆ, ಇದೆಂಥಾ ವಿಚಿತ್ರ ಕಾಯಿಲೆ !

Suvarna News   | Asianet News
Published : Mar 15, 2022, 01:28 PM ISTUpdated : Mar 15, 2022, 01:32 PM IST
Hair On Tongue: ನಾಲಿಗೆ ಮೇಲೂ ಕೂದಲು ಹುಟ್ಟುತ್ತೆ, ಇದೆಂಥಾ ವಿಚಿತ್ರ ಕಾಯಿಲೆ !

ಸಾರಾಂಶ

ಕಾಲ ಬದಲಾದ ಹಾಗೇ ಹೊಸ ಹೊಸ ಕಾಯಿಲೆ (Disease) ಗಳು ವಕ್ಕರಿಸಿಕೊಳ್ಳುತ್ತವೆ. ಕೆಲವೊಂದು ಅಪರೂಪದ ಕಾಯಿಲೆಗಳು ವಿಚಿತ್ರವಾಗಿದ್ದು, ಭೀತಿಯನ್ನೂ ಹುಟ್ಟಿಸುತ್ತಿವೆ. ಇಲ್ಲಾಗಿರುವುದು ಇದೇ. ವ್ಯಕ್ತಿಯೊಬ್ಬನ ನಾಲಿಗೆ (Tongue)ಯ ಮೇಲೆ  ಕೂದಲು (Hair) ಹುಟ್ಟಿಕೊಂಡಿದೆ. 

ಕೊರೋನಾ ಸಾಂಕ್ರಾಮಿಕದ ನಂತರ ಜನರಲ್ಲಿ ಆರೋಗ್ಯ (Health) ಸಮಸ್ಯೆಗಳು ಹೆಚ್ಚಾಗಿವೆ. ಆಗಿಂದಾಗೆ ಕಾಡುವ ಜ್ವರ, ತಲೆನೋವು, ಮೈಕೈ ನೋವು ಸಾಮಾನ್ಯವಾಗಿಬಿಟ್ಟಿದೆ. ಕೆಲವರಿಗಂತೂ ಶಾಶ್ವತವಾಗಿ ವಾಸನೆಯನ್ನು ಗ್ರಹಿಸುವ ಶಕ್ತಿಯೇ ಹೋಗಿಬಿಟ್ಟಿದೆ. ಇದೆಲ್ಲದರ ಮಧ್ಯೆ ವ್ಯಕ್ತಿಯೊಬ್ಬರಲ್ಲಿ ನಾಲಿಗೆಯಲ್ಲಿ ಕೂದಲು ಬೆಳೆಯುತ್ತಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 50ರ ಹರೆಯದ ವ್ಯಕ್ತಿಯೊಬ್ಬರ  ನಾಲಗೆ (Tongue)ಯಲ್ಲಿ ಕಪ್ಪು ಕೂದಲು (Black Hair) ಬೆಳೆಯುತ್ತಿರುವುದನ್ನು ವೈದ್ಯರು ಗಮನಿಸಿದ್ದಾರೆ. ಈ ವಿಚಿತ್ರ ಕಾಯಿಲೆ (Disease) ಯನ್ನು ಲಿಂಗುವಾ ವಿಲೋನಾ ನಿಗ್ರಾ ಅಥವಾ ಕಪ್ಪು ಕೂದಲುಳ್ಳ ನಾಲಿಗೆ ಎಂದು ಗುರುತಿಸಲಾಗಿದೆ. 

ಸ್ಟ್ರೋಕ್‌ನಿಂದ ಬದುಕುಳಿದವರಲ್ಲಿ 'ಕಪ್ಪು ಕೂದಲುಳ್ಳ ನಾಲಿಗೆ'ಯ ಈ ವಿಚಿತ್ರ ಕಾಯಿಲೆ ಕಂಡುಬರುತ್ತದೆ. ಆದರೆ ಇದು ಅಪಾಯಕಾರಿಯಲ್ಲ ಎಂದು ಗುರುತಿಸಲಾಗಿದೆ.  ಕಪ್ಪು ಕೂದಲುಳ್ಳ ನಾಲಿಗೆ ಒಂದು ಸಾಮಾನ್ಯ ಸ್ಥಿತಿಯಾಗಿದ್ದು, ಇದು ಕಳಪೆ ಹಲ್ಲಿನ ನೈರ್ಮಲ್ಯದ ಕಾರಣದಿಂದಾಗಿ ಸಂಭವಿಸುತ್ತದೆ ಮತ್ತು ಇದು ಸಾಮಾನ್ಯವಾಗಿ ನಿರುಪದ್ರವವಾಗಿದೆ ಎಂದು ತಜ್ಞರು ಹೇಳುತ್ತಾರೆ.

Home Remedy : ಬಿಸಿ ಬಿಸಿ ಟೀ ಕುಡಿದು ನಾಲಿಗೆ ಸುಡ್ತಾ? ಹೀಗ್ಮಾಡಿ..

ನಾಲಗೆಯಲ್ಲಿ ಕಪ್ಪು ಕೂದಲಿಗೆ ಕಾರಣವೇನು ?
ನಾಲಿಗೆಯ ಮೇಲಿನ ದಪ್ಪ ಕಪ್ಪು ಕೂದಲು ನಿಜವಾಗಿಯೂ ಭಯಾನಕವಾಗಿದೆ. ಈ ಸಮಸ್ಯೆಯ ಮೂಲ ಕಾರಣದ ಬಗ್ಗೆ ತಿಳಿಯಲು ಹೋದಾಗ  ಸ್ಟ್ರೋಕ್‌ನಿಂದ ಬದುಕುಳಿದ 50 ವರ್ಷದ ವ್ಯಕ್ತಿಯಲ್ಲಿ ಈ ಸಮಸ್ಯೆ ಇರುವುದು ಕಂಡು ಬಂತು. ಔಷಧಿಗಳ ಹೊರತಾಗಿ ದ್ರವ ಆಹಾರದಲ್ಲಿದ್ದ ವ್ಯಕ್ತಿಯಲ್ಲಿ ಸ್ವಚ್ಛತೆಯ ಕೊರತೆಯಿಂದ ಈ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಕಂಡು ಹಿಡಿಯಲಾಯಿತು. ನಿರಂತರವಾಗಿ ದ್ರವ ಆಹಾರವನ್ನು ಸೇವಿಸುತ್ತಿದ್ದ ಕಾರಣ ರೋಗಿಯ ನಾಲಿಗೆಯಲ್ಲಿ ಕಪ್ಪು  ಹಳದಿ ಕಲೆಗಳು ಕಂಡು ಬಂತು. ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. 20 ದಿನಗಳಲ್ಲಿ ನಾಲಿಗೆಯಿಂದ ಕಪ್ಪು ಕೂದಲನ್ನು ತೆರವುಗೊಳಿಸಲಾಯಿತು.

ಕಪ್ಪು ಕೂದಲುಳ್ಳ ನಾಲಿಗೆ ಎಂದರೇನು ?
ಕಪ್ಪು ಕೂದಲುಳ್ಳ ನಾಲಿಗೆಯು ಸಾಮಾನ್ಯವಾದ ಕಾಯಿಲೆಯಾಗಿದ್ದು, ಅಸಹಜವಾಗಿ ಹೈಪರ್ಟ್ರೋಫಿಡ್ ಮತ್ತು ಉದ್ದವಾದ ಫಿಲಿಫಾರ್ಮ್‌ನಿಂದ ಉಂಟಾಗುತ್ತದೆ ಎಂದು ಬೆಂಗಳೂರಿನ ಚರ್ಮಶಾಸ್ತ್ರಜ್ಞ ಮತ್ತು ಕಾಸ್ಮೆಟಾಲಜಿಸ್ಟ್  ಡಾ.ಸುಷ್ಮಾ ಯಾದವ್ ಹೇಳುತ್ತಾರೆ.

ಕಪ್ಪು ಕೂದಲುಳ್ಳ ನಾಲಿಗೆ ಒಂದು ಸಾಮಾನ್ಯ ಸ್ಥಿತಿಯಾಗಿದ್ದು, ಇದು ಕಳಪೆ ಹಲ್ಲಿನ ನೈರ್ಮಲ್ಯದ ಕಾರಣದಿಂದಾಗಿ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ಹಾನಿಕಾರಕವಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಹೆಚ್ಚಾಗಿ ನೋವುರಹಿತವಾಗಿರುತ್ತದೆ ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ, ಧೂಮಪಾನ ಮತ್ತು ಮದ್ಯಪಾನ ಮಾಡುವವರು, ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಸೇವಿಸುವವರು, ಕೆಲವು ನಿರ್ಧಿಷ್ಟ ಅಂಶಗಳನ್ನ ಸೇರಿಸಿದ ಔಷಧಿಗಳನ್ನು ಸೇವಿಸುವವರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ.

ನಾಲಿಗೆ ಸ್ವಚ್ಛಗೊಳಿಸಲು ಯಾವ ರೀತಿಯ ಟಂಗ್ ಕ್ಲೀನರ್ ಬೇಕು?

ಈ ಸ್ಥಿತಿಯಲ್ಲಿ ನಿಮ್ಮ ನಾಲಗೆಗೆ ಏನಾಗುತ್ತದೆ ?
ಈ ಸ್ಥಿತಿಯಲ್ಲಿ, ಈ ಶಂಕುವಿನಾಕಾರದ ಪ್ರಕ್ಷೇಪಗಳನ್ನು ಹೊಂದಿರುವ ನಾಲಿಗೆಯ ಮುಂಭಾಗದ 2/3 ಭಾಗವು ಗಾತ್ರದಲ್ಲಿ ಹಿಗ್ಗುತ್ತದೆ ಮತ್ತು ಕಂದು ಹಳದಿ ಮತ್ತು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ನಾಲಿಗೆಯ ಬದಿಗಳ ತುದಿಯು ಹೆಚ್ಚಾಗಿ ಇದನ್ನು ಹೊಂದಿರುವುದಿಲ್ಲ. ನಾಲಿಗೆಯ ಮೇಲೆ ಸುಡುವ ಅಥವಾ ಕಚಗುಳಿಯುವಿಕೆಯ ಸಂವೇದನೆ, ತುಂಬಾ ದುರ್ವಾಸನೆ ಮತ್ತು ವಾಕರಿಕೆ ಸಮಸ್ಯೆ ಕಂಡು ಬರುತ್ತದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಮತ್ತು ಕಾಸ್ಮೆಟಾಲಜಿಸ್ಟ್ ಡಾ. ಶ್ರಾವ್ಯಾ ಸಿ ಟ್ರಿಪರ್ನಿ ಹೇಳುತ್ತಾರೆ.

ರೋಗಲಕ್ಷಣಗಳು: ನಾಲಗೆಯ ಕಪ್ಪು ಬಣ್ಣ, ಶುಷ್ಕತೆ, ಹಾಲಿಟೋಸಿಸ್ ಅಥವಾ ದುರ್ವಾಸನೆ, ಬಾಯಿಯಲ್ಲಿ ಲೋಹೀಯ ರುಚಿ ಕಂಡು ಬರುತ್ತದೆ.

ಚಿಕಿತ್ಸೆ: ಈ ಸ್ಥಿತಿಯು ಸಾಮಾನ್ಯವಾಗಿ ಸ್ವಲ್ಪ ಸಮಯದ ನಂತರ ತನ್ನಿಂದ ತಾನೇ ಸರಿಯಾಗುತ್ತದೆ. ಶೀಘ್ರ ಗುಣಮುಖರಾಗದಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಅಲ್ಲದೆ, ಧೂಮಪಾನ ಮತ್ತು ಅತಿಯಾದ ಮದ್ಯಪಾನವನ್ನು ತಪ್ಪಿಸಿ. ಯಾವಾಗಲೂ ಉತ್ತಮವಾದ ಮತ್ತು ಮೃದುವಾದ ಹಲ್ಲುಜ್ಜುವ ಬ್ರಷ್‌ನಿಂದ ಮೃದುವಾದ ನಾಲಿಗೆಯನ್ನು ಉಜ್ಜಬೇಕು. ಶೇಕಡಾ 3ರಷ್ಟು ಹೈಡ್ರೋಜನ್ ಪೆರಾಕ್ಸೈಡ್ ಹೊಂದಿರುವ ದ್ರಾವಣವು ನಂಜುನಿರೋಧಕ ಮೌತ್‌ವಾಶ್‌ನ ಹೊರತಾಗಿ ಸಹಾಯ ಮಾಡುತ್ತದೆ. ಅದಕ್ಕೆ ಸಂಬಂಧಿಸಿದ ಫಂಗಲ್ ಏಜೆಂಟ್ ಇದ್ದರೆ ಅದು ಸಹ ಸಹಾಯ ಮಾಡುತ್ತದೆ ಎಂದು ವೈದ್ಯರು ಸೂಚಿಸುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ