Health Tips: ಹೊಟ್ಟೆಯ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಬೇಡ. ಇದು ಖಿನ್ನತೆಗೂ ಕಾರಣವಾಗುತ್ತೆ !

By Suvarna News  |  First Published Mar 15, 2022, 12:00 PM IST

ಹೊಟ್ಟೆನೋವು (Stomach Pain), ಕರುಳಿನ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುತ್ತೆ. ಆದ್ರೆ ಇದೆಲ್ಲಾ ಸಾಮಾನ್ಯ ಸಮಸ್ಯೆ ಅಲ್ವಾ ಅಂತ ಸುಮ್ನಾಗ್ಬೇಡಿ. ಇದು ಆತಂಕ (Anxiety) ಮತ್ತು ಖಿನ್ನತೆ (Depression)ಗೂ ಕಾರಣವಾಗುತ್ತೆ ಹುಷಾರ್‌.


ಒತ್ತಡದ ಜೀವನಶೈಲಿ (Lifestyle), ಬದಲಾದ ಆಹಾರಪದ್ಧತಿಯಿಂದ ಎಲ್ಲರಲ್ಲೂ ಆರೋಗ್ಯ (Health) ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೊಟ್ಟೆನೋವು, ಅಸಿಡಿಟಿ, ಕರುಳಿನ ಸಮಸ್ಯೆ, ಅಜೀರ್ಣ ಮೊದಲಾದ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿವೆ. ಯಾವಾಗಲೂ ಇಂಥಾ ಸಮಸ್ಯೆ ಕಂಡು ಬಂದಾಗಲ್ಲೆಲ್ಲಾ ನಿನ್ನೆ ಏನೋ ತಿಂದಿದ್ದು ಸರಿಯಾಗಿಲ್ಲ. ಅದಕ್ಕೆ ಹೀಗಾಗಿದೆ ಎಂದು ಅಂದುಕೊಳ್ಳುವವರೇ ಹೆಚ್ಚು. ಇದಕ್ಕಾಗಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆದುಕೊಳ್ಳುವವರೂ ಕಡಿಮೆ. ಆದ್ರೆ ನಿಮ್ಗೆ ಗೊತ್ತಾ ಕರುಳಿನ ಸಮಸ್ಯೆ (Gut Problem) ಗಳು ಆತಂಕ ಮತ್ತು ಖಿನ್ನತೆಗೂ ಕಾರಣವಾಗಬಹುದು. ಉರಿಯೂತ ಮತ್ತು ನ್ಯೂನತೆಗಳು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪ್ರಚೋದಿಸಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.

ಇತ್ತೀಚಿನ ಅಧ್ಯಯನದಿಂದ ಕರುಳು ಮತ್ತು ಮೆದುಳಿನ ನಡುವೆ ನಿಕಟ ಸಂಪರ್ಕವಿದೆ ಎಂಬುದು ತಿಳಿದುಬಂದಿದೆ. ಹೊಟ್ಟೆಯಲ್ಲಿ ತೊಳೆಸಿದಂತಾದಾಗ ವಾಕರಿಕೆ ಉಂಟಾಗುತ್ತದೆ. ಅಸಿಡಿಟಿಯಿಂದ ತಲೆಸುತ್ತಿದಂತಾಗುತ್ತದೆ. ಇಂಥಾ ಬಾಹ್ಯ ಸನ್ನಿವೇಶಗಳು ನಮ್ಮ ಕರುಳಿನ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಕರುಳಿನ ಸಮಸ್ಯೆಗಳು ಸಹ ಆತಂಕ, ಖಿನ್ನತೆ (Depression) ಮತ್ತು ಅತಿಯಾದ ನಕಾರಾತ್ಮಕ ಆಲೋಚನೆಗಳಂತಹ ಮಾನಸಿಕ ಆರೋಗ್ಯ (Mental Health) ತೊಂದರೆಗಳಿಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ. 

Tap to resize

Latest Videos

Healthy Gut: ಆರೋಗ್ಯಪೂರ್ಣ ಕರುಳಿನಿಂದ ಹೆಚ್ಚುತ್ತೆ ರೋಗ ನಿರೋಧಕ ಶಕ್ತಿ

ಪೌಷ್ಟಿಕತಜ್ಞ ಮತ್ತು ಕರುಳಿನ ಆರೋಗ್ಯ ತಜ್ಞರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ನಕಾರಾತ್ಮಕ ಆಲೋಚನೆಗಳು ಮತ್ತು ಕರುಳಿನ ಆರೋಗ್ಯದ ನಡುವಿನ ಸಂಪರ್ಕದ ಬಗ್ಗೆ ಮಾತನಾಡಿದ್ದಾರೆ.

ಪೌಷ್ಟಿಕತಜ್ಞೆ ಸ್ಮೃತಿ ಕೋಚಾರ್ ಅವರ ಪ್ರಕಾರ, ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಮಂದಿ ಹೆಚ್ಚಾಗಿ ಕರುಳಿನ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. 'ಯಾವಾಗಲೂ ಋಣಾತ್ಮಕ ಆಲೋಚನೆಗಳು ಬರುವುದು ಆತಂಕದ ಒಂದು ಲಕ್ಷಣವಾಗಿದ್ದು, ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ, ಏಕೆಂದರೆ ಇದನ್ನು ರೋಗಲಕ್ಷಣವೆಂದು ಯಾರೂ ಭಾವಿಸುವುದಿಲ್ಲ. ಇದನ್ನು ಎದುರಿಸುವ ಜನರು ಸಾಮಾನ್ಯವಾಗಿ ತಮ್ಮನ್ನು ತಾವು ದೂಷಿಸಿಕೊಳ್ಳುತ್ತಾರೆ, ನಾನು ಈ ನಕಾರಾತ್ಮಕ ವ್ಯಕ್ತಿಯಾಗಿದ್ದೇನೆ ಮತ್ತು ನಾನು ಉತ್ತಮವಾಗಿ ಯೋಚಿಸಲು ಸಾಧ್ಯವಿಲ್ಲ. ಆದರೆ ಅದು ನಿಜವಲ್ಲ, ಬದಲಾಗಿರುವುದು ನಿಮ್ಮ ವ್ಯಕ್ತಿತ್ವವಲ್ಲ, ಬದಲಾಗಿ ನಿಮ್ಮ ಕರುಳು'  ಎಂದು ಕೊಚಾರ್ ಬರೆಯುತ್ತಾರೆ.

ನಕಾರಾತ್ಮಕ ಆಲೋಚನೆಗಳು ಬರುವ ಜನರು ತಮ್ಮ ಮನಸ್ಥಿತಿಯನ್ನು ದೂಷಿಸಬಾರದು ಆದರೆ ಅವರ ಕರುಳಿನಲ್ಲಿ ಏನೋ ತಪ್ಪಾಗಿದೆ ಎಂಬುದನ್ನು ಕಂಡುಹಿಡಿಯಬೇಕು ಎಂದು ಕೋಚಾರ್ ಹೇಳುತ್ತಾರೆ. ಕರುಳಿನ ಉರಿಯೂತ, ಮತ್ತು ತೀವ್ರವಾದ ಆಮ್ಲೀಯತೆ, ಅನಿಲ, ಮಲಬದ್ಧತೆ ಮೊದಲಾದ ಸಮಸ್ಯೆಗಳನ್ನು ಎದುರಿಸುವಾಗ ಮನಸ್ಸು ಒತ್ತಡಕ್ಕೆ ಒಳಗಾಗುತ್ತದೆ. ಇದರಿಂದ ನೀವು ಆತಂಕಕ್ಕೊಳಗಾಗುತ್ತೀರಿ, ಕೆಲವೊಮ್ಮೆ ನೀವು ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗುತ್ತೀರಿ, ನೀವು ಸುಲಭವಾಗಿ ವಿಷಯಗಳನ್ನು ಮರೆತುಬಿಡುತ್ತೀರಿ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಹೊಟ್ಟೆನೋವು, ಕರುಳಿನ ಸಂಬಂಧಿತ ಕಾಯಿಲೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ.

Raw Banana Health Benefits: ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿ ಕೂಡಾ ತಿನ್ನಿ

ಉರಿಯೂತ ಮತ್ತು ಕರುಳಿನ ಸಮಸ್ಯೆಗಳು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪ್ರಚೋದಿಸಬಹುದುಎಂದು ಕೊಚಾರ್ ಸೇರಿಸುತ್ತಾರೆ. ಈ ಮಾನಸಿಕ ಸಮಸ್ಯೆಗಳ ಬಗ್ಗೆ ನಾವು ಯೋಚಿಸುವುದನ್ನು ನಿಲ್ಲಿಸುವ ಸಮಯ ಬಂದಿದೆ. ನಮ್ಮ ದೇಹದಲ್ಲಿನ ಪ್ರತಿಯೊಂದೂ ಉರಿಯೂತ ಮತ್ತು ನ್ಯೂನತೆಗಳಿಗೆ ಸಂಬಂಧಿಸಿದೆ ಮತ್ತು ಔಷಧಿಗಳ ಬಳಕೆಯಿಲ್ಲದೆ ದೊಡ್ಡ ಪ್ರಮಾಣದಲ್ಲಿ ನೈಸರ್ಗಿಕವಾಗಿ ಸರಿಪಡಿಸಬಹುದು ಎಂದು ಕರುಳಿನ ಆರೋಗ್ಯ ತಜ್ಞರು ಹೇಳುತ್ತಾರೆ.

ಯಾವಾಗಲೂ ಋಣಾತ್ಮಕವಾಗಿ ಯೋಚಿಸಲು ಪ್ರಾರಂಭಿಸುವ ಜನರು ಸಿರೊಟೋನಿನ್, ಗಾಬಾ, ಬಿ ಜೀವಸತ್ವಗಳ ಕೊರತೆಯನ್ನು ಹೊಂದಿರುತ್ತಾರೆ. ಇನ್ನೂ ಕೆಲವರು ಹಾರ್ಮೋನ್ ಅಸಮತೋಲನವನ್ನು ಹೊಂದಿರುತ್ತಾರೆ. ಇದರಿಂದಾಗಿ ಹೊಟ್ಟೆನೋವು, ಅಜೀರ್ಣ, ಕರುಳಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಒತ್ತಡ, ಆತಂಕ ಉಂಟಾಗುತ್ತದೆ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ. ಹೀಗಾಗಿ ಜಸ್ಟ್ ಹೊಟ್ಟೆನೋವು ಅಂತ ಸುಮ್ನಾಗುವ ಬದಲು ತಕ್ಷಣ ಚಿಕಿತ್ಸೆ ಪಡೆಯದಿದ್ದರೆ ಇದು ಮಾನಸಿಕ ಆರೋಗ್ಯ ಹದಗೆಡಲು ಸಹ ಕಾರಣವಾಗಬಹುದು.

click me!