ಮಕ್ಕಳನ್ನು ಕಾಡ್ತಿದೆ ಅಪಾಯಕಾರಿ ಶ್ವಾಸಕೋಶ ರೋಗ, ಏನಿದು ವೈಟ್ ಲಂಗ್ ಸಿಂಡ್ರೋಮ್?

By Vinutha PerlaFirst Published Dec 3, 2023, 3:25 PM IST
Highlights

ಕೋವಿಡ್ ಬಳಿಕ ಇದೀಗ ಚೀನಾದಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಸೋಂಕು ಜಗತ್ತಿನ ನಿದ್ದೆಗೆಡಿಸಿದೆ. ನಿಗೂಢ ಸ್ವರೂಪದ ನ್ಯುಮೋನಿಯಾ ಸೋಂಕು ಮಕ್ಕಳ ಆರೋಗ್ಯ ಹದಗೆಡಲು ಕಾರಣವಾಗುತ್ತಿದೆ. ಇಷ್ಟಕ್ಕೂ ಏನಿದು ವೈಟ್ ಲಂಗ್‌ ಸಿಂಡ್ರೋಮ್‌?

ಕೋವಿಡ್ ಬಳಿಕ ಇದೀಗ ಚೀನಾದಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಸೋಂಕು ವಿಶ್ವದ ನಿದ್ದೆಗೆಡಿಸಿದೆ. ನಿಗೂಢ ಸ್ವರೂಪದ ನ್ಯುಮೋನಿಯಾ ಸೋಂಕು ಚೀನಾ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ದಿನದಂದ ದಿನಕ್ಕೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಓಹಿಯೋದಲ್ಲಿ ನಿಗೂಢ ನ್ಯುಮೋನಿಯಾದಿಂದ ಅಪಾರ ಸಂಖ್ಯೆಯ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾರೆನ್ ಕೌಂಟಿಯ ಆರೋಗ್ಯ ಅಧಿಕಾರಿಗಳ ಪ್ರಕಾರ, ಆಗಸ್ಟ್‌ನಿಂದ ಈ ಸ್ಥಿತಿಯ 142 ಮಕ್ಕಳ ಪ್ರಕರಣಗಳನ್ನು 'ಬಿಳಿ ಶ್ವಾಸಕೋಶದ ಸಿಂಡ್ರೋಮ್' ಎಂದು ಗುರುತಿಸಲಾಗಿದೆ.

ಹಲವಾರು ಯುರೋಪಿಯನ್ ರಾಷ್ಟ್ರಗಳು ಈ ಅಪಾಯಕಾರಿ ವೈರಸ್‌ನಿಂದ ಆತಂಕದಲ್ಲಿವೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಯ ಮೂಲ ಇದು ಸಾಮಾನ್ಯವಾದ ವೈರಸ್‌ ಅಲ್ಲ ಎಂದು ಹೇಳಿದೆ. ಮೂರಕ್ಕಿಂತ ಕಡಿಮೆ ವಯಸ್ಸಿನವರು, ಮೈಕೋಪ್ಲಾಸ್ಮಾ ನ್ಯುಮೋನಿಯಾ, ಬ್ಯಾಕ್ಟೀರಿಯಾದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ. ಬ್ಯಾಕ್ಟೀರಿಯಾದ ಉಸಿರಾಟದ ಸೋಂಕುಗಳು ಸಾಮಾನ್ಯವಾಗಿ ಪ್ರತಿ ಕೆಲವು ವರ್ಷಗಳಿಗೊಮ್ಮೆ ಉಲ್ಬಣಗೊಳ್ಳುತ್ತವೆ, ಸಾಮಾನ್ಯವಾಗಿ ಜನರು ಜ್ವರ ಅಥವಾ ಇತರ ವೈರಲ್ ಕಾಯಿಲೆಗಳಿಂದ ಬಳಲುತ್ತಾರೆ.

Latest Videos

ಚೀನಾದಲ್ಲಿ ಹೊಸ ವೈರಸ್ : ರೋಗ ನಿರೋಧಕ ಶಕ್ತಿ ಹಚ್ಚಳ ಕುರಿತು ಅರಿವು

ವೈಟ್ ಲಂಗ್ ಸಿಂಡ್ರೋಮ್ ಎಂದರೇನು?
ಎಲ್ಲೆಡೆ ಹರಡುತ್ತಿರುವ ವೈಟ್ ಲಂಗ್‌ ಸಿಂಡ್ರೋಮ್‌, ಮೂರರಿಂದ ಎಂಟು ವರ್ಷದೊಳಗಿನ ಮಕ್ಕಳ (Kids) ಮೇಲೆ ಪರಿಣಾಮ ಬೀರುತ್ತದೆ. ಇದು ಉಸಿರಾಟದ ಸೋಂಕುಗಳಿಗೆ ಕಾರಣವಾಗುವ ಸಾಮಾನ್ಯ ಬ್ಯಾಕ್ಟೀರಿಯಂಗೆ ಸಂಬಂಧಿಸಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. ಚೀನಾ, ಡೆನ್ಮಾರ್ಕ್, ಯುನೈಟೆಡ್ ಸ್ಟೇಟ್ಸ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಹಲವು ದೇಶಗಳು ಹೆಚ್ಚಾಗಿ ಮೂರರಿಂದ ಎಂಟು ವರ್ಷ ವಯಸ್ಸಿನ ಮಕ್ಕಳ ಮೇಲೆ ಸೋಂಕು (Virus) ಪರಿಣಾಮ ಬೀರಿರುವ ಬಗ್ಗೆ ವರದಿ ಮಾಡಿದ್ದಾರೆ.

ವೈಟ್ ಲಂಗ್ ಸಿಂಡ್ರೋಮ್ ಒಂದು ರೀತಿಯ ನ್ಯುಮೋನಿಯಾವಾಗಿದ್ದು ಅದು ಶ್ವಾಸಕೋಶದ (Lungs) ಉರಿಯೂತಕ್ಕೆ ಕಾರಣವಾಗುತ್ತದೆ. ಈ ರೋಗದ ಲಕ್ಷಣಗಳು ಈ ಕೆಳಗಿನಂತಿವೆ.
ಜ್ವರ
ಕೆಮ್ಮು
ಆಯಾಸ
ಎದೆ ನೋವು
ಉಸಿರಾಟದ ತೊಂದರೆ
ಕೆಲವು ಸಂದರ್ಭಗಳಲ್ಲಿ, ಶ್ವಾಸಕೋಶ ಮತ್ತು ಗಂಟಲಿನಲ್ಲಿ ಹುಟ್ಟುವ ಒಂದು ನಿರ್ದಿಷ್ಟ ರೀತಿಯ ಲೋಳೆಯ ಉಸಿರಾಟದ ತೊಂದರೆ ಮತ್ತು ಕಫವನ್ನು ಸಹ ಅನುಭವಿಸಬಹುದು.

ಮಕ್ಕಳಲ್ಲಿ ದಿಢೀರ್‌ ನ್ಯುಮೋನಿಯಾಕ್ಕೆ ಪರಿಚಿತ ವೈರಸ್‌ ಕಾರಣ ಎಂದ ಚೀನಾ

ವೈರಸ್ ಹರಡದಂತಿರಲು ಏನು ಮಾಡಬೇಕು?
ಬಿಳಿ ಶ್ವಾಸಕೋಶದ ಸಿಂಡ್ರೋಮ್ ಕೆಮ್ಮುವುದು, ಸೀನುವುದು, ಮಾತನಾಡುವುದು, ಹಾಡುವುದು ಮತ್ತು ಉಸಿರಾಟ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಹರಡುತ್ತದೆ. ರೋಗವು ಸಣ್ಣ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ನಿಯಮಿತವಾಗಿ ಕೈಗಳನ್ನು ತೊಳೆಯುವುದು, ಸೀನುವಾಗ ಅಥವಾ ಕೆಮ್ಮುವಾಗ ಬಾಯಿಯನ್ನು ಮುಚ್ಚಿಕೊಳ್ಳುವುದು ಮಾಡಬೇಕು. ಅನಾರೋಗ್ಯದ ಸಂದರ್ಭದಲ್ಲಿ ಸಾಮಾಜಿಕ ಸಂವಹನವನ್ನು ತಪ್ಪಿಸುವುದು ಅಥವಾ ಮನೆಯಲ್ಲಿಯೇ ಇರುವ ಮೂಲಕ ವೈಟ್ ಲಂಗ್ ಸಿಂಡ್ರೋಮ್ ಅನ್ನು ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ.

click me!