
ಎಐ (AI)ನಿಂದಾಗಿ ಪ್ರತಿಯೊಂದು ಕೆಲಸ ಸುಲಭವಾಗಿದೆ. ಎಲ್ಲ ಕ್ಷೇತ್ರಗಳಿಗೂ ಎಐ ಲಗ್ಗೆ ಇಟ್ಟಿದೆ. ನಮ್ಮ ಕೆಲಸವನ್ನು ಅತಿ ವೇಗವಾಗಿ, ಸುಲಭವಾಗಿ ಹಾಗೂ ಆರಾಮದಾಯಕವಾಗಿ ಮಾಡ್ತಿರುವ ಕಾರಣ, ವ್ಯಕ್ತಿಗಿಂತ ಎಐ ಮೇಲೆ ಭರವಸೆ ಹೆಚ್ಚಾಗ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಮಹತ್ವದ ಬೆಳವಣಿಗೆ ಎಐನಿಂದ ಆಗಿದೆ. ಎಐ ಈಗ ಐವಿಎಫ್ (IVF) ಕ್ಷೇತ್ರವನ್ನು ಪ್ರವೇಶಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಎಐ ಸಹಾಯದಿಂದ IVF ವ್ಯವಸ್ಥೆ ಬಳಸಿಕೊಂಡು ಮಗುವೊಂದು ಜನಿಸಿದೆ. ಇದು ಬಂಜೆತನ ಚಿಕಿತ್ಸೆಯ ದಿಕ್ಕನ್ನೇ ಬದಲಾಯಿಸಿದೆ. ಪ್ರತಿಯೊಬ್ಬ ಮಹಿಳೆ ಇನ್ಮುಂದೆ ತಾಯಿಯಾಗುವ ಕನಸು ಕಾಣ್ಬಹುದು ಎಂಬ ನಂಬಿಕೆ ಹುಟ್ಟಿದೆ. ಈ ಹಿಂದೆ ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯ ಇಂಜೆಕ್ಷನ್ (ICSI) ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಹಸ್ತಚಾಲಿತ ಫಲೀಕರಣ ವಿಧಾನವನ್ನು ಬಳಸಲಾಗ್ತಾ ಇತ್ತು. ಆದ್ರೀಗ ಎಐ ಬಳಸಿಕೊಂಡು ವಿಶ್ವದ ಮೊದಲ ಮಗುವಿನ ಜನನವಾಗಿದೆ. ಎಐ ಬಳಕೆ ಎಂದಾಗ ಜನರು ತಪ್ಪು ತಿಳಿದುಕೊಳ್ಳೊದೇ ಹೆಚ್ಚು. ಪುರುಷನ ವೀರ್ಯ ಹಾಗೂ ಮಹಿಳೆ ಎಗ್ ಇಲ್ಲಿ ಬಳಕೆಯಾಗಿದ್ದು, ಎಐ ಉತ್ತರ ಭ್ರೂಣ ಆಯ್ಕೆ ಸೇರಿದಂತೆ ವೈದ್ಯಕೀಯ ಪ್ರಕ್ರಿಯೆಗೆ ಮಾತ್ರ ನೆರವಾಗಿದೆ.
ಐವಿಎಫ್ (IVF) ನಲ್ಲಿ ಎಐ (AI) ಸಹಾಯ : ಐವಿಎಫ್ನಲ್ಲಿ ಸಾಮಾನ್ಯವಾಗಿ ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯ ಇಂಜೆಕ್ಷನ್ (ಐಸಿಎಸ್ಐ) ನ ಸಾಂಪ್ರದಾಯಿಕ ಹಸ್ತಚಾಲಿತ ವಿಧಾನವನ್ನು ಬಳಸಲಾಗುತ್ತೆ. ಐವಿಎಫ್ ನಲ್ಲಿ ವೀರ್ಯವನ್ನು ನೇರವಾಗಿ ಎಗ್ ಗೆ ಇಂಜೆಕ್ಟ್ ಮಾಡಲಾಗುತ್ತದೆ. ಆದ್ರೆ ಐವಿಎಪ್ ನಲ್ಲಿ ಎಐ ಬಳಕೆ ಮಾಡಿದಾಗ, ಯಾವುದೇ ಮಾನವ ಕೈ ಬಳಸುವ ಅಗತ್ಯವಿಲ್ಲ. ರಿಮೋಟ್ ಡಿಜಿಟಲ್ ಕಂಟ್ರೋಲ್ (ICSI) ಮೂಲಕ ಎಲ್ಲಾ 23 ಹಂತಗಳನ್ನು ಪೂರ್ಣಗೊಳಿಸಬಹುದು.
ಮದ್ಯಪಾನ ಎಷ್ಟು ಹಾನಿಕರ ಗೊತ್ತಾ? ಹೊಸ ಸಂಶೋಧನೆಗಳ ಸತ್ಯಾಂಶ ಬಹಿರಂಗ
ಗ್ವಾಡಲಜಾರಾದ ಹೋಪ್ ಐವಿಎಫ್ ಮೆಕ್ಸಿಕೊದಲ್ಲಿಎಐ ಸಹಾಯದಿಂದ ಮಗು ಜನಿಸಿದೆ. 40 ವರ್ಷದ ತಾಯಿಗೆ ಐವಿಎಪ್ ನಲ್ಲಿ ಎಐ ಬಳಕೆ ಮಾಡಿ ವೈದ್ಯಕೀಯ ತಂಡ ಯಶಸ್ವಿಯಾಗಿದೆ. ನ್ಯೂಯಾರ್ಕ್ ಮತ್ತು ಮೆಕ್ಸಿಕೊದ ಕನ್ಸೀವಬಲ್ ಲೈಫ್ ಸೈನ್ಸಸ್ನ ತಂಡ ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಯು ICSI ಪ್ರಕ್ರಿಯೆಯ ವೀರ್ಯ ಆಯ್ಕೆ, ನಿಶ್ಚಲತೆ ಮತ್ತು ಇಂಜೆಕ್ಷನ್ ಸೇರಿದಂತೆ ಎಲ್ಲಾ 23 ಹಂತಗಳನ್ನು ಸ್ವಯಂಚಾಲಿತವಾಗಿ ಮಾಡಲಾಗಿದೆ.
ಗಂಡಸರಿಗೂ ಬಂದಿದೆ ಗರ್ಭನಿರೋಧಕ ಗುಳಿಗೆ! ರಿಸರ್ಚ್
ಐವಿಎಫ್ ನಲ್ಲಿ ಎಐ ಮಾಡಿದ ಕೆಲಸ ಏನು? : ಎಐ ಮೊದಲು ಫಲವತ್ತಾದ ವೀರ್ಯವನ್ನು ಆಯ್ಕೆ ಮಾಡಿತು. ನಂತರ ಅದನ್ನು ದಾನಿ ಎಗ್ ಗೆ ಇಂಜೆಕ್ಟ್ ಮಾಡಿತು. ಇದರ ಪರಿಣಾಮವಾಗಿ ಐದರಲ್ಲಿ ನಾಲ್ಕು ಯಶಸ್ವಿ ಫಲೀಕರಣಗಳು ನಡೆದವು. ಒಂದು ಆರೋಗ್ಯಕರ ಭ್ರೂಣವನ್ನು ಫ್ರೀಜ್ ಮಾಡಲಾಯಿತು. ಸಾಮಾನ್ಯವಾಗಿ, ಐವಿಎಫ್ನಲ್ಲಿ ಬಹು ಭ್ರೂಣಗಳನ್ನು ರಚಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆರೋಗ್ಯಕರ ಮತ್ತು ಯಶಸ್ವಿ ಗರ್ಭಧಾರಣೆಗೆ ಯಾವ ಭ್ರೂಣ ಹೆಚ್ಚು ಸೂಕ್ತ ಎಂಬುದನ್ನು ಆಯ್ಕೆ ಮಾಡುವುದು ಕೆಲವೊಮ್ಮೆ ತುಂಬಾ ಕಷ್ಟ. ಈ ಸಂದರ್ಭದಲ್ಲಿ ಎಐ, ಅಲ್ಗಾರಿದಮ್ ಸೂಕ್ಷ್ಮದರ್ಶಕ ಚಿತ್ರಗಳನ್ನು ವಿಶ್ಲೇಷಿಸುವ ಮೂಲಕ ಹೆಚ್ಚು ಸೂಕ್ತವಾದ ಭ್ರೂಣವನ್ನು ಆಯ್ಕೆ ಮಾಡಿತು. ಇದನ್ನು ಸಾಮಾನ್ಯ ಕಣ್ಣಿನಿಂದ ಪತ್ತೆ ಹಚ್ಚುವುದು ಕಷ್ಟ. ನಂತರ ಭ್ರೂಣ ವರ್ಗಾವಣೆ ನಡೆದಿದ್ದು, ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಆವಿಷ್ಕಾರವು ಐವಿಎಫ್ ಅನ್ನು ಮತ್ತಷ್ಟು ನಿಖರ, ಸ್ಥಿರ ಮತ್ತು ಮಾನವ ಶ್ರಮ ಕಡಿಮೆ ಮಾಡುವ ವಿಧಾನ ಎಂದು ಸಂಶೋಧಕರು ಹೇಳುತ್ತಾರೆ. ಐವಿಎಫ್ ದುಬಾರಿ ಪ್ರಕ್ರಿಯೆಯಾಗಿದ್ದು, ಎಐ ಪ್ರವೇಶದ ನಂತ್ರ ಸಮಯ ಮತ್ತು ಹಣ ಎರಡೂ ಉಳಿಯಲಿದೆ ಎನ್ನಲಾಗ್ತಿದೆ. ಆದ್ರೆ ಇದ್ರ ಬಗ್ಗೆ ಇನ್ನಷ್ಟು ಅಧ್ಯಯನದ ಅಗತ್ಯವಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.