Beauty Tips: ವಾರಕ್ಕೊಮ್ಮೆ ಉಪ್ಪು ನೀರಿನಲ್ಲಿ ಸ್ನಾನ ಮಾಡಿ ನೋಡಿ

By Suvarna NewsFirst Published Sep 16, 2022, 2:41 PM IST
Highlights

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಮಾತನ್ನು ನೀವು ಕೇಳಿರ್ತೀರಿ. ಉಪ್ಪು ಬರಿ ರುಚಿಗೆ ಮಾತ್ರವಲ್ಲ ಸೌಂದರ್ಯಕ್ಕೂ ಬಳಕೆಯಾಗುತ್ತದೆ. ನೀರಿಗೆ ಒಂದು ಚಮಚ ಉಪ್ಪನ್ನು ಬೆರೆಸಿ ಸ್ನಾನ ಮಾಡಿದ್ರೆ ನೀವು ನಂಬಲಾರದಷ್ಟು ಲಾಭ ಸಿಗುತ್ತದೆ.
 

ಯಾವುದೇ ಆಹಾರವಿದ್ರೂ ಅದಕ್ಕೆ ಸ್ವಲ್ಪ ಉಪ್ಪು ಹಾಕ್ಲೇಬೇಕು. ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಉಪ್ಪಿಲ್ಲದ ಆಹಾರ ಸೇವನೆ ಮಾಡೋದು ಕಷ್ಟ. ಹಾಗಂತ ಅತಿಯಾಗಿ ಉಪ್ಪಿನ ಸೇವನೆ ಮಾಡೋದು ಕೂಡ ಒಳ್ಳೆಯದಲ್ಲ. ಉಪ್ಪು ಆಹಾರದ ರುಚಿ ಹೆಚ್ಚಿಸುವ ಕೆಲಸವನ್ನು ಮಾತ್ರ ಮಾಡುವುದಿಲ್ಲ ಅದ್ರಿಂದ ಅನೇಕ ಪ್ರಯೋಜನವಿದೆ. ಉಪ್ಪನ್ನು ಜ್ಯೋತಿಷ್ಯ ಶಾಸ್ತ್ರದಲ್ಲೂ ಬಳಕೆ ಮಾಡಲಾಗುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಡೆದು ಹಾಕುವ ಕೆಲಸವನ್ನು ಉಪ್ಪು ಮಾಡುತ್ತದೆ ಎಂದು ನಂಬಲಾಗಿದೆ. ಹಾಗೆಯೇ  ಉಪ್ಪು ಚರ್ಮಕ್ಕೆ ಬಹಳ ಪ್ರಯೋಜನಕಾರಿ. ಉಪ್ಪು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣವನ್ನು ಹೊಂದಿದೆ. ಹಾಗಾಗಿ ಕೆಲ ಚರ್ಮದ ಸಮಸ್ಯೆಗೆ ಉಪ್ಪನ್ನು ಅಗತ್ಯವಾಗಿ ಬಳಸಬೇಕು ಎನ್ನುತ್ತಾರೆ ತಜ್ಞರು. ಸ್ನಾನ ಮಾಡುವ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ಸ್ನಾನ ಮಾಡಿದ್ರೆ ದೇಹದ ಆಯಾಸ, ದಣಿವು, ಊತ ಕಡಿಮೆಯಾಗುತ್ತದೆ. ದೇಹಕ್ಕೆ ಹಿತವೆನ್ನಿಸುತ್ತದೆ.  ಪ್ರಯಾಣದಿಂದ ಸುಸ್ತಾಗಿ ಬಂದವರು ಸ್ನಾನದ ನೀರಿಗೆ ಉಪ್ಪನ್ನು ಬೆರೆಸಿ ಸ್ನಾನ ಮಾಡಬೇಕು. ಇದ್ರಿಂದ ಪ್ರಯಾಣದ ದಣಿವು ಕಡಿಮೆಯಾಗುತ್ತದೆ. ಉಪ್ಪಿನ ನೀರಿನಲ್ಲಿ ಸ್ನಾನ ಮಾಡಿದ್ರೆ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.

ಉಪ್ಪು (Salt) ನೀರಿ(Water)ನಲ್ಲಿ ಸ್ನಾನ ಮಾಡಿದ್ರೆ ಇದೆ ಇಷ್ಟೆಲ್ಲ ಪ್ರಯೋಜನ : 

ಮೃದುವಾದ ಚರ್ಮ (Skin) ಕ್ಕೆ ಪ್ರಯೋಜನಕಾರಿ : ನೀರಿಗೆ ಉಪ್ಪನ್ನು ಬೆರೆಸಿ ಸ್ನಾನ ಮಾಡಿದ್ರೆ ಚರ್ಮ ಮೃದುವಾಗುತ್ತದೆ. ಒಣ ಚರ್ಮದ ಸಮಸ್ಯೆ ಹೊಂದಿರುವವರು ಉಪ್ಪು ನೀರಿನಲ್ಲಿ ಸ್ನಾನ ಮಾಡಿದ್ರೆ ಒಳ್ಳೆಯ ಪ್ರಯೋಜನ ಪಡೆಯಬಹುದು. ಉಪ್ಪಿನಲ್ಲಿ ಮೆಗ್ನೀಸಿಯಮ್ ಇರುತ್ತದೆ. ಇದು ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಉಪ್ಪು ನೀರಿನಲ್ಲಿ ಸ್ನಾನ ಮಾಡಿದ್ರೆ ಚರ್ಮ ಬಿಗಿಯಾಗುತ್ತದೆ. ಇದ್ರಿಂದ ನಿಮ್ಮ ವಯಸ್ಸನ್ನು ಮುಚ್ಚಿಡಬಹುದು. 

ತೂಕ ಇಳಿಕೆಗೆ ಪ್ರಯೋಜನಕಾರಿ ಉಪ್ಪಿನ ನೀರು : ಆಶ್ಚರ್ಯವಾಗ್ಬಹುದು, ಆದ್ರೆ ಇದು ಸತ್ಯ. ನೀರಿಗೆ ಉಪ್ಪು ಸೇರಿಸಿ ಸ್ನಾನ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ. ತೂಕ ಇಳಿಸಬೇಕು ಎನ್ನುವವರು ವಾರಕ್ಕೊಮ್ಮೆ ಉಪ್ಪು ನೀರಿನಲ್ಲಿ ಸ್ನಾನ ಮಾಡಬೇಕು. ಅದು ತೂಕ ಇಳಿಕೆಗೆ ನೆರವಾಗುತ್ತದೆ.ಉಪ್ಪು ಚರ್ಮದ ಕಪ್ಪು ರಂಧ್ರಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಚರ್ಮ ಸ್ವಚ್ಛವಾದ್ರೆ ಸುಲಭವಾಗಿ ಬೆವರು ಬರುತ್ತದೆ. ಬೆವರು ಹೆಚ್ಚು ಕೊಬ್ಬನ್ನು ಸುಡಲು ನೆರವಾಗುತ್ತದೆ. ದೀರ್ಘಾವಧಿಯಲ್ಲಿ ನಿಮ್ಮ ತೂಕ ಇಳಿಸಲು ಇದು ನೆರವಾಗುತ್ತದೆ. 

ಒತ್ತಡ (Stress) ಕಡಿಮೆ ಮಾಡುತ್ತೆ ಉಪ್ಪು ನೀರಿನ ಸ್ನಾನ : ಒತ್ತಡದಿಂದ ಬಳಲುತ್ತಿರುವವರು ಉಪ್ಪು ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಕೆಲಸದ ಕಾರಣ ದಿನಪೂರ್ತಿ ದಣಿದಿದ್ದರೆ, ಮನೆಗೆ ಬಂದ ನಂತ್ರ ಉಪ್ಪು ನೀರನ್ನು ಬಳಕೆ ಮಾಡಿ. ಉಪ್ಪು ನೀರಿನಲ್ಲಿ ಸ್ನಾನ ಮಾಡ್ತಿದ್ದಂತೆ ಸ್ನಾಯುಗಳು ರಿಲ್ಯಾಕ್ಸ್ ಆಗುತ್ತವೆ. ಇದ್ರಿಂದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಮೂಳೆಗಳಲ್ಲಿನ ನೋವಿನಿಂದ ಪರಿಹಾರವನ್ನು ಪಡೆಯುತ್ತೀರಿ. ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಮೂಡ್ ಬದಲಾಗುತ್ತದೆ. 

ಕೂದಲಿಗೆ ಎಣ್ಣೆ ಹಚ್ಚಿ ರಾತ್ರಿ ಪೂರ್ತಿ ಹಾಗೆಯೇ ಬಿಡ್ಬೋದಾ ?

ದೇಹದ ಕಲೆ ತೆಗೆಯುತ್ತೆ ಉಪ್ಪು ನೀರು : ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದ ಮೇಲಿರುವ ಕಲೆಗಳು ಕಡಿಮೆಯಾಗುತ್ತವೆ.  ತ್ವಚೆಗೆ ಉಪ್ಪು ನೀರು ಹೊಳಪು ನೀಡುತ್ತದೆ. ಸ್ನಾನದ ನೀರಿಗೆ ಒಂದು ಚಮಚ ಉಪ್ಪನ್ನು ಸೇರಿಸಿ ಸ್ನಾನ ಮಾಡಬೇಕು. ಹೀಗೆ ಮಾಡಿದ್ರೆ ದೇಹಕ್ಕೆ ತ್ವರಿತ ಹೊಳಪು ಸಿಗುತ್ತದೆ. ದೇಹದಲ್ಲಿ ಯಾವುದೇ ಹಳೆಯ ಕಲೆಯಿದ್ದರೂ ನೀವು ಉಪ್ಪು ನೀರಿನಿಂದ ಅದನ್ನು ತೆಗೆಯಬಹುದು. 

ರೋಗ ನಿರೋಧಕ ಶಕ್ತಿ ಹೆಚ್ಚಳ : ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಉಪ್ಪು ಆಂಟಿಫಂಗಲ್, ಪ್ರತಿಜೀವಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಅಲರ್ಜಿಯಾಗದಂತೆ ತಡೆಯುತ್ತದೆ.  

ಹೃದಯಾಘಾತವಾದಾಗ ಜೀವ ಉಳಿಸಲು ತಕ್ಷಣಕ್ಕೆ ಏನು ಮಾಡಬೇಕು ?

 

click me!