ಫಳಫಳ ಹೊಳೆಯುವ ತ್ವಚೆ- ಕೂದಲಿಗೆ ನ್ಯಾಚುಲರ್​ ಪೇಸ್ಟ್ ತಯಾರಿಕೆ ಹೇಗೆ? ಅದಿತಿ ಪ್ರಭುದೇವ ಟಿಪ್ಸ್​ ಕೇಳಿ

By Suvarna NewsFirst Published Dec 11, 2023, 11:01 AM IST
Highlights

ಮುಖ ಮತ್ತು ಕೂದಲ ಸೌಂದರ್ಯಕ್ಕೆ ನೈಸರ್ಗಿಕವಾಗಿಯೇ ಮನೆಯಲ್ಲಿ ತಯಾರಿಸಿಕೊಳ್ಳಬಹುದಾದ ಕೆಲವೊಂದು ಪದಾರ್ಥಗಳ ಮಾಹಿತಿ ನೀಡಿದ್ದಾರೆ ನಟಿ ಅದಿತಿ ಪ್ರಭುದೇವ.
 

 ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.  

ಸುರಸುಂದರ ನಟರನ್ನು ತಿರಸ್ಕರಿಸಿ, ಬಾಲ್ಡಿಯನ್ನು ಮದ್ವೆಯಾದ ಗುಟ್ಟು ಬಹಿರಂಗಗೊಳಿಸಿದ 'ಅಣ್ಣಯ್ಯ' ನಟಿ ಮಧುಬಾಲ!

 ಮಾರುಕಟ್ಟೆಯಲ್ಲಿ ಸಿಗುವ ರಸಾಯನಿಕಯುಕ್ತ ಪ್ರಾಡಕ್ಟ್​ಗಳಿಂದ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟದ್ದೇ. ಆದ್ದರಿಂದ ಮನೆಯಲ್ಲಿಯೇ ಫಳಫಳ ಹೊಳೆಯುವ ತ್ವಚೆ ಮತ್ತು ಕೂದಲಿಗೆ ಪೇಸ್ಟ್​ ಹೇಗೆ ತಯಾರಿಸಿಕೊಳ್ಳಬಹುದು ಎಂದು ನಟಿ ಹೇಳಿಕೊಟ್ಟಿದ್ದಾರೆ. ಅವರು ಹೇಳಿರೋ ಟಿಪ್ಟ್​ ಇಲ್ಲಿದೆ ನೋಡಿ. 

ತ್ವಚೆಯ ಪೇಸ್ಟ್​ ಮಾಡುವುದು ಹೀಗೆ. 
ಕಡಲೆ ಬೇಳೆ, ಮಸೂರು ದಾಲ್​, ತೊಗರಿ ಬೇಳೆ. ಹೆಸರು ಕಾಳು, ಸ್ವಲ್ಪ ಅಕ್ಕಿ, ಕಸ್ತೂರಿ ಮಂಜಲ್​, ಸೀಗೆ ಕಾಯಿ, ಬೆಟ್ಟದ ನೆಲ್ಲಿಕಾಯಿ, ರೀತಾ, ಬಾದಾಮಿ, ನೀಮ್​ ಮತ್ತು ರೋಸ್​ ಪೌಡರ್​, ಸ್ಯಾಂಡಲ್​ವುಡ್​ ಪೌಡರ್​. ಕೆಲವೊಂದು ವಸ್ತುಗಳು ಇಲ್ಲದಿದ್ದೂ ಪರವಾಗಿಲ್ಲ. ಮೊದಲು ಇವೆಲ್ಲಾ ಬೇಕು. ಇಲ್ಲಿ ಎಲ್ಲಾ ಕಾಳುಗಳನ್ನು ಸಮ ಪ್ರಮಾಣದಲ್ಲಿ ಬಳಸಲಾಗಿದೆ. ಪೌಡರ್​ಗಳನ್ನು 2-3 ಚಮಚ ಹಾಕಬೇಕು. ನಿಧಾನ ಉರಿಯಲ್ಲಿ 5-6 ನಿಮಿಷ ಫ್ರೈಮಾಡಿಕೊಳ್ಳಬೇಕು. ನಂತರ ಬಾದಾಮಿಯನ್ನು ಫ್ರೈ ಮಾಡಿಕೊಳ್ಳಬೇಕು. ಕಸ್ತೂರಿ ಮೇಥಿಯನ್ನು ಬೇಕಿದ್ದರೆ ಹಾಕಬಹುದು. ಇವುಗಳೆಲ್ಲಾ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಮಿಕ್ಸ್​ ಮಾಡಿ ತಣ್ಣಗಾದ ಮೇಲೆ ಒಂದು ಜಾರ್​ನಲ್ಲಿ ಶೇಖರಣೆ ಮಾಡಿ ಇಡಬಹುದು. ಬೇಕಿದ್ದರೆ ಮುಲ್ತಾನಿ ಮಿಟ್ಟಿ ಹಾಕಬಹುದು. ಸ್ನಾನಕ್ಕೆ ಹೊರಡುವ 5-10 ನಿಮಿಷ ಮುಂಚೆ ನೀರಿನಲ್ಲಿ, ರೋಸ್ ವಾಟರ್​ನಲ್ಲಿ ಅಥವಾ ಅಲೋವಿರಾ ಜೆಲ್​ನಲ್ಲಿ ಪೇಸ್ಟ್​ ಮಾಡಿಕೊಳ್ಳಬೇಕು. ಇದನ್ನು ಬಳಸುವುದರಿಂದ ಬ್ಯೂಟಿಫುಲ್​ ರಿಸಲ್ಟ್​ ಬರುತ್ತದೆ. 

ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಫ್ಯಾನ್ಸ್​ ಗರಂ- ಟಿಆರ್​ಪಿಗಾಗಿ ಪ್ಲೀಸ್​ ಹೀಗೆ ಮಾಡ್ಬೇಡಿ: ಅಭಿಮಾನಿಗಳ ಕಣ್ಣೀರು

ಇನ್ನು ಮೆಹಂದಿ ಕಲಸುವ ಬಗ್ಗೆ ನಟಿ ಹೇಳಿದ್ದಾರೆ. ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯ ಹಾಗೂ ಒಂದು ಟೀ ಚಮಚ ಟೀ ಪೌಡರ್​ ಹಾಕಿ ಕುದಿಸಬೇಕು. ಅದರ ನೀರನ್ನು ಸೋಸಿ ಇಟ್ಟುಕೊಳ್ಳಬೇಕು. ಕಬ್ಬಿಣದ ಬೌಲ್​ನಲ್ಲಿ ಸೀಗೆಕಾಯಿ ಪೌಡರ್​ ಮತ್ತು ಹೀನಾ ಪೌಡರ್​ 2-3 ಚಮಚ ಹಾಕಬೇಕು. ಇಷ್ಟವಾದ್ರೆ ಬೀಟ್​ರೂಟ್​ ಪೌಡರ್​ ಹಾಕಬೇಕು. ಒಂದು ಚಮಚ ಮೊಸರು ಹಾಗೂ ಮೊದಲೇ ರೆಡಿ ಮಾಡಿದ ನೀರನ್ನು ಹಾಕಬೇಕು. ರಾತ್ರಿಯಿಡೀ ಇದನ್ನು ನೆನೆಸಿ ಇಡಬೇಕು. ಮಾರನೆಯ ದಿನ 4-5 ಗಂಟೆ ಇದನ್ನು ಸರಿಯಾಗಿ ಅಪ್ಲೈ ಮಾಡಿಕೊಂಡು ಸ್ನಾನ ಮಾಡಬೇಕು. ಗ್ರೇ ಹೇರ್​ ಸಮಸ್ಯೆ ಇರುವವರು ಮಾರನೆಯ ದಿನ ಇಂಡಿಗೋ ಪೌಡರ್​ ನೀರಿನಲ್ಲಿ ಕಲಸಿ ತಲೆಗೆ ಲೇಪಿಸಿದರೆ ಫಳಫಳ ಹೊಳೆಯುವ ಕೂದಲು ಸಿಗುತ್ತದೆ. 
 

click me!