ಪೈಲ್ಸ್ ಇರೋರು ಆಲೂಗಡ್ಡೆ ಸೇವಿಸಬಹುದಾ?

By Suvarna News  |  First Published Sep 2, 2023, 7:00 AM IST

ಎಲ್ಲ ತರಕಾರಿ ಎಲ್ಲರಿಗೂ ಯೋಗ್ಯವಲ್ಲ. ಕೆಲವೊಂದು ತರಕಾರಿ ಸೇವನೆ ಮಾಡಿದ್ರೆ ನಮ್ಮಲ್ಲಿರುವ ರೋಗ ಉಲ್ಬಣಿಸಬಹುದು. ಅದ್ರಲ್ಲಿ ಪೈಲ್ಸ್ ಕೂಡ ಒಂದು. ಅದಕ್ಕೆ ನಾವು ಏನು ಆಹಾರ ಸೇವನೆ ಮಾಡ್ತೇವೆ ಎಂಬುದು ಬಹುಮುಖ್ಯವಾಗುತ್ತೆ.
 


ಆಲೂಗಡ್ಡೆ ಇಷ್ಟವಿಲ್ಲ ಎನ್ನುವವರು ನಿಮಗೆ ಸಿಗೋದು ಅಪರೂಪ. ಯಾಕೆಂದ್ರೆ ಆಲೂಗಡ್ಡೆ ಬಹುತೇಕ ಎಲ್ಲರ ಫೆವರೆಟ್. ದೋಸೆ ಮಾಡಿದ್ರೆ, ಚಪಾತಿ ಮಾಡಿದ್ರೆ ಆಲೂಗಡ್ಡೆ ಪಲ್ಯದಿಂದ ಶುರುವಾಗುವ ರೆಸಿಪಿ, ಆಲೂ ಪರೋಟಾ, ಆಲೂ ಚಿಪ್ಸ್, ಆಲೂ ಪಿಂಗರ್ ಚಿಪ್ಸ್ ಹೀಗೆ ಫಾಸ್ಟ್ ಫುಡ್ ಗೆ ಬಂದು ನಿಲ್ಲುತ್ತೆ. ಬರ್ಗರ್ ರುಚಿ ಹೆಚ್ಚಾಗಬೇಕೆಂದ್ರೆ ಆಲೂ ಟಿಕ್ಕಾ ಇರಬೇಕು. ನಾನು ಆಲೂಗೆಡ್ಡೆಯನ್ನು ನಾನಾ ರೀತಿಯಲ್ಲಿ ಸೇವನೆ ಮಾಡ್ತೇವೆ.

ಆಲೂಗಡ್ಡೆ (Potatoes)  ರುಚಿ ಮಾತ್ರವಲ್ಲ ಆರೋಗ್ಯ (Health) ಕ್ಕೂ ಒಳ್ಳೆಯದು. ಆಲೂಗಡ್ಡೆ ಶಕ್ತಿಯಿಂದ ಸಮೃದ್ಧವಾಗಿದೆ. ಇವುಗಳಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಅವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತವೆ.  ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುವ ಕೆಲಸವನ್ನು ಆಲೂಗಡ್ಡೆ ಮಾಡುತ್ತದೆ. ನಮ್ಮ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳಾದ ವಿಟಮಿನ್ ಬಿ 1, ಬಿ 2, ಬಿ 3, ಬಿ 6, ವಿಟಮಿನ್ ಸಿ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ 421, ಸೋಡಿಯಂ ಸೇರಿದಂತೆ ಅನೇಕ ಅಂಶವನ್ನು ನಾವು ಆಲೂಗಡ್ಡೆಯಿಂದ ಪಡೆಯಬಹುದು. ಆಲೂಗೆಡ್ಡೆ ಸಿಪ್ಪೆಯಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಹಾಗಾಗಿಯೇ ಆಲೂಗಡ್ಡೆಯನ್ನು ಸಿಪ್ಪೆ ಸಮೇತ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು ಎನ್ನಲಾಗುತ್ತದೆ.  

Latest Videos

undefined

ಭಾವನಾತ್ಮಕ ಪ್ರಬುದ್ಧತೆ ಹೆಚ್ಬೇಕಾ? ಕೊರಿಯನ್ ಪದ್ಧತಿ ನುಂಚಿ ಟಿಪ್ಸ್ ಫಾಲೋ ಮಾಡಿ

ಗ್ಯಾಸ್ಟ್ರಿಕ್ ಸಮಸ್ಯೆಯಿದೆ ಎನ್ನುವವರು ಆಲೂಗಡ್ಡೆಯಿಂದ ದೂರವಿರಲು ಶುರು ಮಾಡ್ತಾರೆ. ಅದೇ ರೀತಿ ಪೈಲ್ಸ್ (Piles) ಸಮಸ್ಯೆ ಇರುವವರು ಆಲೂಗಡ್ಡೆ ಸೇವನೆಯಿಂದ ಹಿಂದೆ ಸರಿಯುವುದು ಸಾಮಾನ್ಯ. ಪೈಲ್ಸ್ ಒಂದು ರೀತಿಯ ಚಿತ್ರಹಿಂಸೆ ನೀಡುವ ಖಾಯಿಲೆ. ಹೇಳಿಕೊಳ್ಳಲಾಗದ, ಕಾಣಿಸಿದ, ಅನುಭವಿಸಲಾಗದ ನೋವು ಅದ್ರಲ್ಲಿ ಕಾಡುತ್ತದೆ. ಪೈಲ್ಸ್ ಇರುವವರು ಆಲೂಗಡ್ಡೆ ಸೇವನೆ ಮಾಡ್ಬೇಕಾ ಬೇಡ್ವಾ ಎನ್ನುವ ಗೊಂದಲ ಅನೇಕರಿಗಿದೆ. 

ತಜ್ಞರ ಪ್ರಕಾರ, ಆಲೂಗಡ್ಡೆಯನ್ನು ಪೈಲ್ಸ್ ಸಮಸ್ಯೆ ಹೊಂದಿರುವ ವ್ಯಕ್ತಿ ಕೂಡ ಸೇವನೆ ಮಾಡಬಹುದು. ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ಪೈಲ್ಸ್ ರೋಗಿಗಳು ಯಾವುದೇ ಹಿಂಜರಿಕೆಯಿಲ್ಲದೆ ಆಲೂಗಡ್ಡೆ ಸೇವಿಸಬಹುದು. ನಾವು ಬೇಯಿಸಿದ ಆಲೂಗಡ್ಡೆಯನ್ನು ಸೇವಿಸಿದಾಗ, ಅದು ನಮ್ಮ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಲೂಗಡ್ಡೆ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದು ಪೈಲ್ಸ್ ರೋಗಿಗಳಲ್ಲಿ ಮಲಬದ್ಧತೆಯನ್ನು ನಿಯಂತ್ರಿಸಲು ಮತ್ತು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಪೈಲ್ಸ್ ನಿಂದ ಬಳಲುತ್ತಿರುವವರು ಆಲೂಗಡ್ಡೆಯನ್ನು ತಮ್ಮ ಆಹಾರದಲ್ಲಿ ನಿಶ್ಚಿತವಾಗಿ ಬಳಕೆ ಮಾಡಬೇಕು ಎನ್ನುತ್ತಾರೆ ತಜ್ಞರು. 

ಗರ್ಭಿಣಿಯರು ಕೇಸರಿ ಹಾಲು ಕುಡಿದ್ರೆ ಹುಟ್ಟೋ ಮಗು ಬಿಳಿಯಾಗಿರೋದು ಹೌದಾ?

ಪೈಲ್ಸ್ ರೋಗಿಗಳು ಆಲೂಗಡ್ಡೆ ತಿನ್ನುವ ವಿಧಾನ ಯಾವುದು? : ನೀವು ಹೇಗೆ ಆಲೂಗಡ್ಡೆ ಸೇವನೆ ಮಾಡ್ತೀರಿ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಆಲೂಗಡ್ಡೆಗೆ ಒಂದಿಷ್ಟು ಮಸಾಲೆ ಬೆರೆಸಿ ಸೇವನೆ ಮಾಡಿದ್ರೆ ಆಗ ನಿಮ್ಮ ಸಮಸ್ಯೆ ಹೆಚ್ಚಾಗುವ ಅಪಾಯವಿರುತ್ತದೆ. ಹಾಗಾಗಿ ಅತಿ ಕಡಿಮೆ ಮಸಾಲೆಯಿರುವ ಆಲೂಗಡ್ಡೆಯನ್ನು ಪೈಲ್ಸ್ ರೋಗಿಗಳು ತೆಗೆದುಕೊಳ್ಳಬೇಕು. ಇದಲ್ಲದೆ ನೀವು ಆಲೂಗಡ್ಡೆಗೆ ಹೆಚ್ಚು ಆಯಿಲ್ ಬಳಸುವುದನ್ನು ತಪ್ಪಿಸಬೇಕು. ನೀವು ಆಲೂಗಡ್ಡೆಯನ್ನು ಬೇಯಿಸಿ ತಿನ್ನುವುದು ಉತ್ತಮ ಮಾರ್ಗ. ಬೇಯಿಸುವ ವೇಳೆ ಅದಕ್ಕೆ ಎಣ್ಣೆ ಹಾಕಬೇಡಿ. ಆದಷ್ಟು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀವು ಬೇಯಿಸಿದ ಆಲೂಗಡ್ಡೆ ಸೇವನೆ ಮಾಡಲು ಪ್ರಯತ್ನಿಸಿ. ಇದು ಮಲಬದ್ಧತೆಯನ್ನು ನಿಯಂತ್ರಿಸಿ, ನಿಮ್ಮ ಸಮಸ್ಯೆಯನ್ನು ಕಡಿಮೆ ಮಾಡುವುದಲ್ಲದೆ ನಿಮ್ಮ ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ.

ಆಲೂಗಡ್ಡೆ ನಮ್ಮ ಜೀರ್ಣಾಂಗಕ್ರಿಯೆಗೆ ಬಹಳ ಒಳ್ಳೆಯದು. ಇದು ಮಧುಮೇಹಿಗಳಿಗೂ ಒಳ್ಳೆಯ ಮದ್ದು ಎಂದು ತಜ್ಞರು ಹೇಳ್ತಾರೆ.

click me!