ಕ್ಯಾನ್ಸರ್ ಅಪಾಯ ಹೆಚ್ಚಿಸುವ ಮೂರು ಕಾರಣಗಳು!

By Suvarna NewsFirst Published Aug 22, 2022, 12:35 PM IST
Highlights

ಕ್ಯಾನ್ಸರ್ ಭಯ ಹುಟ್ಟಿಸುತ್ತದೆ. ಕ್ಯಾನ್ಸರ್ ನೋವು ಅಸಹನೀಯ. ಕ್ಯಾನ್ಸರ್ ಗೆದ್ದು ಬರೋದು ಸುಲಭದ ಕೆಲಸವಲ್ಲ. ಸಾವನ್ನು ಜಯಿಸಿ ಬಂದ್ರೂ ಎಚ್ಚರಿಕೆಯಿಂದ ಹೆಜ್ಜೆ ಹಾಕ್ಬೇಕು. ಅನೇಕ ಬಾರಿ ಕೆಲ ತಪ್ಪುಗಳು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತವೆ.

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೃದ್ರೋಗದ ನಂತರ ವಿಶ್ವದಾದ್ಯಂತ ಸಾವಿಗೆ ಎರಡನೇ ಪ್ರಮುಖ ಕಾರಣ ಕ್ಯಾನ್ಸರ್. ಕ್ಯಾನ್ಸರ್ ದೇಹದಲ್ಲಿ ಹರಡುವ ಮೂಲಕ ಸಾಕಷ್ಟು ಸಮಸ್ಯೆಯುಂಟು ಮಾಡುತ್ತದೆ. ಕ್ಯಾನ್ಸರ್ ರೋಗಕ್ಕೆ ತುತ್ತಾದವರು ಯಮಯಾತನೆ ಅನುಭವಿಸುತ್ತಾರೆ. ಕ್ಯಾನ್ಸರ್ ಲಕ್ಷಣಗಳು ಆರಂಭದಲ್ಲಿ ಪತ್ತೆಯಾದ್ರೆ ಅದನ್ನು ಗುಣಪಡಿಸಬಹುದು. ಆದ್ರೆ ಬಹುತೇಕ ಕ್ಯಾನ್ಸರ್ ಕೊನೆ ಹಂತದಲ್ಲಿ ಪತ್ತೆಯಾಗುತ್ತದೆ.  ಹಾಗೆಯೇ ಕ್ಯಾನ್ಸರ್ ಅಂಶ ದೇಹ ಸೇರಿದ ನಂತ್ರ ಹೆಚ್ಚು ಜಾಗೃತರಾಗಿರಬೇಕು. ಕ್ಯಾನ್ಸರ್ ಒಮ್ಮೆ ಗುಣಮುಖವಾದ್ರೂ ಮತ್ತೆ ಬರುವ ಅಪಾಯವಿರುತ್ತದೆ. ಕ್ಯಾನ್ಸರ್ ರೋಗಿಗಳ ಕೆಲ ಅಭ್ಯಾಸಗಳು ಅವರನ್ನು ಮತ್ತಷ್ಟು ಅಪಾಯಕ್ಕೆ ನೂಕುತ್ತವೆ. ಕ್ಯಾನ್ಸರ್ ಬಗ್ಗೆ ಅನೇಕರ ಸಂಶೋಧನೆ, ಅಧ್ಯಯನ ನಡೆದಿದೆ. ಇತ್ತೀಚಿಗೆ ನಡೆದ ಅಧ್ಯಯನದಲ್ಲಿ ಆತಂಕಕಾಗಿ ಸಂಗತಿ ಹೊರ ಬಿದ್ದಿದೆ. ಕ್ಯಾನ್ಸರ್ ನಿಂದ ಬಳಲುವ ವ್ಯಕ್ತಿಗಳ ಕೆಲ ಅಭ್ಯಾಸ ಅವರನ್ನು ಸಾವಿನ ದವಡೆಗೆ ನೂಕುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ನಾವಿಂದು ಯಾವ ಅಭ್ಯಾಸ ಕ್ಯಾನ್ಸರ್ ರೋಗಿಗೆ ಅಪಾಯ ಎಂಬುದನ್ನು ಹೇಳ್ತೇವೆ.  

ಧೂಮಪಾನ (Smoking) : ಸಿಗರೆಟ್‌ನಲ್ಲಿರುವ ರಾಸಾಯನಿಕಗಳು ನಿಮ್ಮ ಡಿಎನ್‌ಎ (DNA) ಗೆ ಹಾನಿ ಮಾಡುತ್ತದೆ. ಡಿಎನ್‌ಎ ಹಾನಿಯನ್ನು ಸರಿಪಡಿಸುವುದು ಜೀವಕೋಶಗಳಿಗೆ ಕಷ್ಟವಾಗುತ್ತದೆ. ಇದು ಕ್ಯಾನ್ಸರ್ ವಿರುದ್ಧ ರಕ್ಷಿಸಲು ಸಹಾಯ ಮಾಡುವ ಡಿಎನ್‌ಎ ಭಾಗಗಳನ್ನು ಸಹ ಹಾನಿಗೊಳಿಸುತ್ತದೆ. ಕಾಲಾನಂತರದಲ್ಲಿ ಇದೇ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಧೂಮಪಾನ ಕ್ಯಾನ್ಸರ್ ಹೆಚ್ಚು ಮಾಡುವುದಲ್ಲದೆ ಅನೇಕ ಕ್ಯಾನ್ಸರ್ ಗೆ ಇದೇ ಮೂಲವಾಗಿದೆ. ಇದು ಬಾಯಿ (Mouth) ಮತ್ತು ಗಂಟಲು, ಅನ್ನನಾಳ, ಹೊಟ್ಟೆ, ಕೊಲೊನ್, ಗುದನಾಳ, ಯಕೃತ್ತು, ಮೇದೋಜೀರಕ ಗ್ರಂಥಿ, ಗಂಟಲಕುಳಿ, ಶ್ವಾಸನಾಳ, ಮೂತ್ರಪಿಂಡ ಮತ್ತು ಮೂತ್ರಕೋಶ ಮತ್ತು ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗಬಹುದು.
 
ಮಿತಿಮೀರಿದ ಮದ್ಯಪಾನ (Alcohol) : ನಿಯಮಿತ ಮತ್ತು ಅತಿಯಾದ ಆಲ್ಕೊಹಾಲ್ ಸೇವನೆಯು ನಿಮ್ಮ ಯಕೃತ್ತನ್ನು ಹಾನಿಗೊಳಿಸುತ್ತದೆ. ಇದು ಉರಿಯೂತ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆಲ್ಕೊಹಾಲ್ ಸೇವನೆಯು ಕರುಳಿನ ಮತ್ತು ಗುದನಾಳದ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಆಲ್ಕೋಹಾಲ್ ಸೇವನೆ ನಿಯಂತ್ರಣಕ್ಕೆ ಬಂದ್ರೆ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ಈಗಾಗಲೇ ಕ್ಯಾನ್ಸರ್ ನಿಂದ ಬಳಲುತ್ತಿರುವವರು ಹೆಚ್ಚು ಮದ್ಯಪಾನ ಮಾಡಿದ್ರೆ ಕ್ಯಾನ್ಸರ್ ಉಲ್ಬಣಗೊಳ್ಳುತ್ತದೆ. 

ಬೇಗ ತೂಕ ಇಳಿಸ್ಕೊಳ್ಳಿ, ಅಧಿಕ ತೂಕವಿರೋರನ್ನು ಕಾಡುತ್ತೆ ಪ್ರಿಡಯಾಬಿಟಿಸ್ !

ಬೊಜ್ಜು (Obesity) : ನೀವು ಅಧಿಕ ತೂಕ ಹೊಂದಿದ್ದರೆ  ಇದು ಕೆಲವು ರೀತಿಯ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ಮತ್ತೆ ಮರುಕಳಿಸುವ ಅಪಾಯವೂ ಇದ್ರಲ್ಲಿ ಹೆಚ್ಚಿದೆ. ಅಧಿಕ ತೂಕವು ನಿಮ್ಮ ಹಾರ್ಮೋನ್ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೊಬ್ಬಿನ ಅಂಗಾಂಶವು ಈಸ್ಟ್ರೊಜೆನ್ ಎಂಬ ಹಾರ್ಮೋನ್ ಅನ್ನು ಹೆಚ್ಚು ಉತ್ಪಾದಿಸುತ್ತದೆ. ಇದು ಸ್ತನ ಕ್ಯಾನ್ಸರ್ ಬೆಳವಣಿಗೆಗೆ ಸಹಾಯ ಮಾಡುತ್ತದೆ. 

ಸಂಶೋಧಕರ ಅಭಿಪ್ರಾಯ : ಕ್ಯಾನ್ಸರ್‌ಗೆ ಸಂಬಂಧಿಸಿದ ಅಪಾಯಕಾರಿ ಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ ಎಂದು ಸಂಶೋಧಕರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಜನರಿಗೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದ್ರೆ ಭವಿಷ್ಯದಲ್ಲಿ ಕ್ಯಾನ್ಸರ್ ಸಾವಿನ ಸಂಖ್ಯೆ  ಕಡಿಮೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.   

ಲೈಂಗಿಕ ಸಂಪರ್ಕದಿಂದ ಗೌಪ್ಯ ರೋಗಗಳೂ ಹರಡುತ್ತೆ,ಹುಷಾರ್!

2019ರಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ ಶೇಕಡಾ 44.4ರಷ್ಟು ಮಂದಿಯನ್ನು ಬದುಕಿಸಬಹುದಿತ್ತು. ಯಾಕೆಂದ್ರೆ ಇವರೆಲ್ಲರ ಸಾವಿಗೆ ಕಾರಣವಾಗಿದ್ದು, ತಡೆಯಬಹುದಾಗಿದ್ದ ಅಭ್ಯಾಸದಿಂದ. ಅಂದ್ರೆ ಮದ್ಯಪಾನ, ಧೂಮಪಾನ ಹಾಗೂ ಬೊಜ್ಜಿನಿಂದ ಕ್ಯಾನ್ಸರ್ ಕಾಡಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.  

click me!