ಹಾವೇರಿ (ಆ.22) : ವಕೀಲರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ನ್ಯಾಯಾಲಯಗಳ ಮೂಲಸೌಕರ್ಯಕ್ಕೆ ನಮ್ಮ ಸರ್ಕಾರ .800 ಕೋಟಿ ಅನುದಾನ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಾವರ್ಕರ್ ಈ ದೇಶದ ಶ್ರೇಷ್ಠ ಪುತ್ರ ಎಂದು ಸ್ವತಃ ಇಂದಿರಾ ಗಾಂಧಿ ಹೇಳಿದ್ದರು: ಸಿಎಂ ಬೊಮ್ಮಾಯಿ
undefined
ಜಿಲ್ಲೆಯ ಶಿಗ್ಗಾಂವಿ(Shiggavi) ಪಟ್ಟಣದ ಕೋರ್ಚ್ ಆವರಣದಲ್ಲಿ ವಕೀಲರ ಸಂಘದ ಕಟ್ಟಡಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ದೇಶದಲ್ಲೇ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ಅತ್ಯುತ್ತಮವಾಗಿದೆ. ಕರ್ನಾಟಕ ನ್ಯಾಯಾಂಗ ವ್ಯವಸ್ಥೆಯ ಮೂಲಭೂತ ಸೌಕರ್ಯಕ್ಕಾಗಿ .800 ಕೋಟಿಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ. ಇದರಿಂದ ಕೆಳಹಂತದ ನ್ಯಾಯಾಲಯಗಳಿಗೆ ಅತ್ಯುತ್ತಮ ವ್ಯವಸ್ಥೆಗಳು ದೊರೆಯಲಿದೆ. ಜನಸಂಖ್ಯೆ ಹೆಚ್ಚಾದಾಗ ನ್ಯಾಯಾಲಯಗಳು, ಅದರ ಸೌಕರ್ಯಗಳು ಹೆಚ್ಚಾಗಬೇಕಾಗುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನ್ಯಾಯಾಂಗಕ್ಕೆ ಪ್ರಾಶಸ್ತ್ಯ ನೀಡುತ್ತಿದೆ ಎಂದರು.
ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಪಾತ್ರ ಮುಖ್ಯವಾಗಿದ್ದು, ಇವೆಲ್ಲವನ್ನೂ ಗಮನಿಸುವ ಮಹತ್ವದ ಕಾರ್ಯವು ಪತ್ರಿಕಾರಂಗಕ್ಕೆ ಇದೆ. ಈ ನಾಲ್ಕೂ ಕಂಬದ ಮೇಲೆ ನಿಂತಿರುವ ಪ್ರಜಾಪ್ರಭುತ್ವದ ಯಶಸ್ಸು, ಇಡೀ ಜಗತ್ತಿಗೆ ಮಾದರಿಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಬೇರು ಗಟ್ಟಿಯಾಗಿದ್ದು, ಅದರ ಆದರ್ಶಗಳು ಇಂದಿಗೂ ಜೀವಂತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಿಲ್ಲದಿದ್ದರೆ ಬದುಕಿಗೆ ಸಮಭಾವ ಸಿಗುವುದೂ ಕಷ್ಟವಾಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನ್ಯಾಯಾಂಗಕ್ಕೆ ವಿಶೇಷ ಸ್ಥಾನ, ಜವಾಬ್ದಾರಿ ಮತ್ತು ಅಧಿಕಾರ ನೀಡಿದ್ದಾರೆ. ನಾವು ಇತ್ತೀಚೆಗೆ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ಆಚರಿಸಿದ್ದೇವೆ. ಅದು 75ನೇ ಜನತಂತ್ರದ ಆಚರಣೆಯೂ ಆಗಿದೆ. ಬೇರೆ ದೇಶಗಳಲ್ಲಿ ವ್ಯವಸ್ಥೆ ಬುಡಮೇಲಾಗಿರುವುದನ್ನು ಕಾಣುತ್ತೇವೆ. ಆದರೆ, ಭಾರತದಲ್ಲಿ ತತ್ವ, ಆದರ್ಶಗಳ ಬುನಾದಿ ಭದ್ರವಾಗಿರುವುದರಿಂದ ಪ್ರಜಾಪ್ರಭುತ್ವ ಜೀವಂತವಾಗಿದೆ. ಇಲ್ಲದಿದ್ದರೆ ಜನರಿಗೆ ನ್ಯಾಯ ಸಿಗುವುದಿರಲಿ, ಬದುಕಿಗೆ ಸಮಭಾವ ಸಿಗುವುದು ಕೂಡ ಕಷ್ಟವಾಗುತ್ತಿತ್ತು ಎಂದರು.
ಮೊಟ್ಟೆ ಪ್ರತಿಭಟನೆ ಬಿಸಿ: ಸಿದ್ದರಾಮಯ್ಯ ತವರೂರಿಗೆ ಆಗಮಿಸಲು ಸಿಎಂ ಬೊಮ್ಮಾಯಿ ಹಿಂದೇಟು!
ಕಾನೂನು ರೂಪಿಸುವಾಗ ಗೊಂದಲವಿಲ್ಲದೇ ನಿಖರತೆ ಇರಬೇಕು. ಕಾನೂನಿನ ನಿಖರತೆಯಿಂದ ಪ್ರಕರಣಗಳು ಕಡಿಮೆಯಾಗುತ್ತವೆ. ನ್ಯಾಯಾಲಯ ಪ್ರಕರಣ ಮಾನಿಟರಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಕರ್ನಾಟಕದಲ್ಲಿ ಉನ್ನತ ಮಟ್ಟದ ನ್ಯಾಯಾಂಗ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯ ಇದೆ. ನಮ್ಮಲ್ಲಿ ನ್ಯಾಯಾಂಗ ವ್ಯವಸ್ಥೆ ಉತ್ತಮವಾಗಿರುವ ಕಾರಣ ಬಂಡವಾಳ ಹೂಡಿಕೆಗೆ ಬಹುರಾಷ್ಟ್ರೀಯ ಕಂಪನಿಗಳು ಆಸಕ್ತಿ ತೋರುತ್ತಿವೆ. ನ್ಯಾಯಾಂಗ ಮತ್ತು ವಕೀಲರ ನಡುವಿನ ವೃತ್ತಿ ಸಂಬಂಧ ಉತ್ತಮವಾಗಿದ್ದರೆ ಕಕ್ಷಿದಾರರಿಗೆ ಬೇಗ ನ್ಯಾಯ ಸಿಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೈಕೋರ್ಚ್ ನ್ಯಾಯಮೂರ್ತಿ ಸಚಿನ್ ಎಸ್. ಮಗದುಮ್ ಮಾತನಾಡಿ, ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಬಂದಿರುವುದು ನ್ಯಾಯಾಂಗಕ್ಕೆ ಬೇಕಾಗಿರುವ ಸೌಲಭ್ಯ ಕೊಡಲು ಸಿದ್ಧರಿದ್ದೇವೆ ಎಂಬುದರ ಸಂಕೇತವಾಗಿದೆ. ಹೈಕೋರ್ಚ್‌ನಿಂದ ಹೋಗಿರುವ ಪ್ರಸ್ತಾವನೆಗಳಿಗೆ ಸರ್ಕಾರ ಸ್ಪಂದಿಸಿದೆ. ಸವಣೂರು, ಶಿಗ್ಗಾಂವಿಯ ವಕೀಲರ ಕಟ್ಟಡ ನಿರ್ಮಾಣದ ಕಾರ್ಯ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ವಕೀಲರು- ನ್ಯಾಯಾಧೀಶರು ಎರಡು ಚಕ್ರಗಳಿದ್ದಂತೆ. ಇಬ್ಬರೂ ಒಂದಾಗಿ ಹೋದಾಗ ಮಾತ್ರ ತೀವ್ರಗತಿಯಲ್ಲಿ ನ್ಯಾಯ ಕೊಡಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿಗ್ಗಾಂವಿ ವಕೀಲರ ಸಂಘದ ಅಧ್ಯಕ್ಷ ಎಂ.ಎಚ್. ಬೆಂಡಿಗೇರಿ ಇದ್ದರು. ಜಿಲ್ಲಾ ನ್ಯಾಯಾಧೀಶ ಯಾದವ ವನಮಾಲ ಆನಂದರಾವ್ ಸ್ವಾಗತಿಸಿದರು.