ಮೈಯ ತೂಕ ಇಳಿಸಲು ಮನುಷ್ಯ ನಾನಾ ವಿಧಾನಗಳ ಮೊರೆ ಹೋಗುತ್ತಾನೆ. 2019ರಲ್ಲಿ ಅಂಥ ಹಲವು ವಿಚಿತ್ರ ಟ್ರೆಂಡ್‌ಗಳು ಪ್ರಚಲಿತಕ್ಕೆ ಬಂದವು. ಅವುಗಳ ಬಗ್ಗೆ ಒಂದು ನೋಟ ಇಲ್ಲಿದೆ.
ಹತ್ತು ವರ್ಷಗಳ ಹಿಂದಿನ ಫೋಟೊ
ಕೆಲವರು ತಮ್ಮ ಈಗಿನ ಫೋಟೋ ಹಾಗೂ ಹತ್ತು ವರ್ಷಗಳ ಹಿಂದಿನ ಫೋಟೋ ಅಕ್ಕಪಕ್ಕದಲ್ಲಿ ಇಟ್ಟುಕೊಂಡು ನೋಡಿಕೊಂಡರು. ಹತ್ತು ವರ್ಷ ಹಿಂದೆ ತಾವು ಎಷ್ಟು ಸ್ಲಿಮ್ ಆಗಿ ಇದ್ದೆವೋ ಅದೇ ಶೇಪಿಗೆ ಮರಳಿ ಬರುವ ಪ್ರಯತ್ನ ಶುರುವಿಟ್ಟುಕೊಂಡರು. ಹತ್ತು ವರ್ಷ ಹಿಂದೆ ಭಾರವಾಗಿದ್ದು, ಈಗ ಮೈಯಿಳಿಸಿದವರು ಈ ಟ್ರೆಂಡ್‌ನ ತಂಟೆಗೆ ಹೋಗಲಿಲ್ಲ.
ಬೇಬಿ ಫುಡ್ ಡಯಟ್
ಮಾಮೂಲಿ ಆಹಾರದ ಬದಲು ಬೇಬಿ ಫುಡ್ ತಿನ್ನುವ ಚಟವನ್ನು ಕೆಲವರು ರೂಢಿಸಿಕೊಂಡರು. ಇದ್ಯಾಕೆ ಅಂತ ಕೇಳಿದರೆ, ಬೇಬ ಫುಡ್‌ನಲ್ಲಿರುವ ಕಡಿಮೆ ಕ್ಯಾಲೊರಿಯ ಕಾರಣಕ್ಕೆ. ಬೇಬಿ ಅಂದರೆ ಒಂದೆರಡು ವರ್ಷಗಳ ವಯಸ್ಸಿನ ಮಗುವಿನ ಆಹಾರದಲ್ಲಿ ಹೆಚ್ಚಿನ ಕ್ಯಾಲೊರಿಗಳಿರುವುದಿಲ್ಲ. ಹೊಟ್ಟೆ ತುಂಬಿದ ಅನುಭವ ಆಗುತ್ತದೆ; ಆದರೆ ಅದರಲ್ಲಿ ಕ್ಯಾಲೊರೆಗಳಿಲ್ಲದಿರುವುದರಿಂದ ಬೊಜ್ಜು ಸೇರುವುದಿಲ್ಲವಂತೆ.
ಹೊಟ್ಟೆ ಬೊಜ್ಜು ಕರಗಿಸೋದು ಕಷ್ಟವಲ್ಲ; ಇಲ್ಲಿದೆ ಸಿಂಪಲ್ ಟಿಪ್ಸ್!
ತರಕಾರಿ ಜ್ಯೂಸ್‌ಗಳು
ಹೆಚ್ಚಿನವರು ತರಕಾರಿ ಜ್ಯೂಸ್‌ಗಳ ಮೊರೆ ಹೋದರು. ಕ್ಯಾರೆಟ್ ಜ್ಯೂಸ್, ಗೋಧುಹುಲ್ಲಿನ ಜ್ಯೂಸ್ ಇತ್ಯಾದಿಗಳು ಫೇವರಿಟ್ ಅನಿಸಿಕೊಂಡವು. ಹಸಿರು ತರಕಾರಿಗಳಲ್ಲಿ ಜ್ಯೂಸ್ ಕಷ್ಟಪಟ್ಟು ಕುಡಿದರು. ಇವುಗಳಲ್ಲಿ ಕ್ಯಾಲೊರಿ ಅಂಶ ಕಡಿಮೆ. ದೇಹದ ಶಕ್ತಿಗೂ ಚಟುವಟಿಕೆಗೂ ಇದು ಸಾಲದು. ಇತರ ಫುಡ್ ಅಗತ್ಯ.
ಕನ್ನಡಿಯ ಮುಂದೆ ಊಟ
ದಿನಕ್ಕೊಮ್ಮೆ ಕನ್ನಡಿ ನೋಡಿಕೊಳ್ಳುವುದು ಇದ್ದದ್ದೇ. ಆದರೆ ಕೆಲವರು, ಕನ್ನಡಿಯ ಮುಂದೇ ಕುಳಿತು ಊಟ ಮಾಡಿದರು! ಅದಕ್ಕೆ ಕಾರಣ, ಊಟದ ಪ್ರಮಾಣದ ಮೇಲಿನ ಹತೋಟಿ ಸಾಧಿಸಲು. ತನ್ನನ್ನೇ ತಾನು ನೋಡಿಕೊಳ್ಳುತ್ತ ಊಟ ಮಾಡುವಾಗ, ಸಹಜವಾಗಿಯೇ, ಅಯ್ಯೋ ನಾನು ಎಷ್ಟೊಂದು ತಿನ್ನುತ್ತಿದ್ದೇನಪ್ಪ ಅಂತ ಯಾರಿಗಾದರೂ ಅನ್ನಿಸುವುದು ಸಹಜವೇ. ಈ ಭಾವನೆಯೇ ಈ ಟ್ರೆಂಡ್‌ನ ಹಿಂದಿನ ಉದ್ದೇಶ.
ಆಯುರ್ವೇದಿಕ್ ಡಯಟ್; ತೂಕ ಇಳಿಸೋಕೂ ಸಹಕಾರಿನಾ?
ದಟ್ಟ ನೇರಳೆ ಪ್ಲೇಟ್‌ನಲ್ಲಿ ತಿಂಡಿ
ಕೆಲವರು ದಟ್ಟ ನೇರಳೆ, ದಟ್ಟ ನೀಲಿ ಬಣ್ಣದ ಪ್ಲೇಟ್‌ನಲ್ಲಿ ಊಟ ಅಥವಾ ತಿಂಡಿ ಬಡಿಸಿಕೊಂಡು ತಿಂದರು. ಇಂಥ ಪ್ಲೇಟ್‌ನಲ್ಲಿ ಹಾಕಿಕೊಂಡ ತಿನ್ನುವ ಆಹಾರ ಮಿತಿಯಲ್ಲಿರುತ್ತದೆ ಅಂತ ನಂಬಿದರು. ಬಹುಶಃ ಅದಕ್ಕೆ ಕಾರಣ ಹೀಗಿದ್ದೀತು- ದಟ್ಟ ಪ್ಲೇಟ್‌ನಲ್ಲಿ ಆಹಾರ ಸ್ವಲ್ಪವೇ ಹಾಕಿದರೂ ಅದು ತುಂಬಿದಂತೆ ಅನಿಸುತ್ತದೆ. ಪ್ಲೇನ್ ತಿಳಿಬಣ್ಣದ ಪ್ಲೇಟ್‌ನಲ್ಲಿ ಅದು ಎಷ್ಟು ತುಂಬಿದರೂ ಖಾಲಿ ಖಾಲಿ ಅನಿಸುತ್ತದೆ ಎಂಬುದು ನಮಗೆಲ್ಲರಿಗೂ ಅನುಭವ ಆಗಿರುವುದೇ.
ಹಸಿ ಹಸಿ ಆಹಾರ
ಕೆಲವರು ಬೇಯಿಸಿದ ಆಹಾರವನ್ನು ಬದಿಗಿಟ್ಟು, ದಿನಕ್ಕೆ ಎರಡು ಹೊತ್ತು ಹಸಿ ತರಕಾರಿ, ಹಣ್ಣು ಮುಂತಾದ ಆಹಾರಗಳ ಮೊರೆ ಹೋದರು. 46 ಡಿಗ್ರಿಗಿಂತ ಹೆಚ್ಚು ಬೇಯಿಸಿದ ಯಾವುದೇ ಆಹಾರವಾದರೂ ತನ್ನ ಪೋಷಕಾಂಶಗಳಲ್ಲಿ ಕೆಲವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ನಾವು ಅಗತ್ಯಕ್ಕಿಂತ ಹೆಚ್ಚು ಬೇಯಿಸಿದ ಆಹಾರ ಸೇವಿಸುತ್ತೇವೆ. ಆದರೆ ಹಸಿ ತರಕಾರಿ ಸೇವಿಸುವಾಗ, ನಾವು ಸೇವಿಸಿದ ಅಷ್ಟೂ ಆಹಾರವೂ ಕ್ಯಾಲೊರಿಯಾಗಿ ಪರಿವರ್ತನೆಯಾಗುತ್ತದೆ ಎಂಬುದು ಇದರ ಹಿಂದಿನ ಥಿಯರಿ.
ಲಯನ್ ಡಯಟ್!
ಲಯನ್ ಅಂದರೆ ಸಿಂಹದ ಡಯಟ್ ಫಾಲೋ ಮಾಡಿದವರು ಕೆಲವರು. ಹಾಗೆಂದರೆ ಸಿಂಹದಂತೆ ಹಸಿ ಮಾಂಸ ತಿಂದರು ಅಂತ ಅರ್ಥವಲ್ಲ. ಸಿಂಹಕ್ಕೆ ದಿನಕ್ಕೊಮ್ಮೆ ಮಾತ್ರ, ಕೆಲವೊಮ್ಮೆ ಎರಡು ದಿನಕ್ಕೊಮ್ಮೆ ಊಟ ಮಾಡುತ್ತದೆ. ಕೆಲವೊಮ್ಮೆ ಮೂರು ದಿನಕ್ಕೊಮ್ಮೆ ಹೊಟ್ಟೆ ತುಂಬಾ ತಿಂದು ನಿದ್ದೆ ಹೋಗುತ್ತದೆ. ಈ ನರಮನುಷ್ಯರು ದಿನಕ್ಕೊಮ್ಮೆ ಎಷ್ಟು ಕಿಲೋ ತಿಂದರೋ ಗೊತ್ತಿಲ್ಲ, ಹೆಸರಂತೂ ಲಯಟ್ ಡಯಟ್ ಅಂತ ಇಟ್ಟರು!
ಬೇಕೆಂದಷ್ಟು ತಿಂದೂ ತೂಕ ಇಳಿಸುವ ಆಸೆಯೇ? ಹಾಗಿದ್ರೆ ಈ ಡಯಟ್ ಮಾಡಿ
ಝೆನ್ ಆಹಾರ
ಪ್ರಾಚೀನ ಜಪಾನ್ ಹಾಗೂ ಚೀನಾದ ಯತಿಗಳು ಅನುಸರಿಸುತ್ತಿದ್ದ ಆಹಾರ ಪದ್ಧತಿ ಇದು. ಮಾಂಸಾಹಾರ ಸೇವಿಸದೆ ಬರಿಯ ಸಸ್ಯಾಹಾರ ಸೇವನೆ, ಜಾಸ್ತಿ ಮಸಾಲೆ ಹಾಕದೆ ಇರುವುದು, ದಿನಕ್ಕೆ ಮೂರು ಬಾರು ಸ್ವಲ್ಪ ಸ್ವಲ್ಪವೇ ಆಹಾರ ತೆಗೆದುಕೊಳ್ಳುವುದು- ಇದು ಜೆನ್ ಡಯಟ್.