ಸಂಗೀತ,ನಾಟಕ ಕಲಾ ಪ್ರದರ್ಶನಕ್ಕೆ ಹೋದರೆ ಹೆಚ್ಚು ವರ್ಷ ಆಯಸ್ಸು!

By Suvarna News  |  First Published Jan 5, 2020, 3:44 PM IST

ಆಯಸ್ಸು ವೃದ್ಧಿಯಾಗುತ್ತೆಂದರೆ ಯಾರಿಗಿಷ್ಟವಿಲ್ಲ ಹೇಳಿ? ಎಲ್ಲರಿಗೂ ಆಯಸ್ಸು ಹೆಚ್ಚಾಗಲಿ ಎಂದೇ ಆಸೆ ಇರುತ್ತದೆ. ಹಾಗಾಗಬೇಕೆಂದರೆ ತಪ್ಪದೇ ಮ್ಯೂಸಿಕ್ ಕೇಳಿ. 


ಹೆಚ್ಚು ವರ್ಷ ಬದುಕಲು ಏನು ಮಾಡಬೇಕು? ದಿನಾ ಬೆಳಿಗ್ಗೆ ಎದ್ದು ಓಡಬೇಕು, ವ್ಯಾಯಾಮ ಮಾಡಬೇಕು, ಒಳ್ಳೆಯ ಆಹಾರ ಸೇವಿಸಬೇಕು, ಆರೋಗ್ಯಕರ ಜೀವನ ನಡೆಸಬೇಕು. ಹೀಗಂತ ನೀವು ಅಂದುಕೊಂಡಿದ್ದರೆ ಇದಷ್ಟೇ ನಿಜವಲ್ಲ.

ಸಂಗೀತ ಕಚೇರಿ, ನಾಟಕ, ಮ್ಯೂಸಿಯಂ, ಚಿತ್ರಕಲಾ ಪ್ರದರ್ಶನ, ನೃತ್ಯ ಕಾರ್ಯಕ್ರಮಗಳಿಗೆ ಹೋಗುವವರು ಮತ್ತು ಇಂತಹ ಕಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರು ಹೆಚ್ಚು ವರ್ಷ ಬದುಕುತ್ತಾರಂತೆ. ಬ್ರಿಟನ್ನಿನಲ್ಲಿ ನಡೆದ ಅಧ್ಯಯನವೊಂದು ಇದನ್ನು ಪತ್ತೆಹಚ್ಚಿದೆ. ಬಿಎಂಜೆಯಲ್ಲಿ ಈ ಕುರಿತ ಸಂಶೋಧನಾ ಲೇಖನ ಪ್ರಕಟವಾಗಿದೆ. ಸಂಶೋಧಕರು ತಮ್ಮ ಅಧ್ಯಯನಕ್ಕೆ 50 ವರ್ಷ ಮೀರಿದವರನ್ನು ಬಳಸಿಕೊಂಡಿದ್ದಾರೆ.

Latest Videos

undefined

ತಪ್ಪು ಸಲಹೆಗಳಿಗೆ ಕಿವಿ ಕೊಡಬೇಡಿ; ಗರ್ಭಿಣಿ ಹೀಗಿದ್ರೆ ಚಂದ!

ಅವರನ್ನು 14 ವರ್ಷಗಳ ಕಾಲ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಫಲಿತಾಂಶವನ್ನು ವಿಶ್ಲೇಷಿಸಿದಾಗ, ಆಗಾಗ ಕಲಾ ಚಟುವಟಿಕೆಗಳಲ್ಲಿ ಪಾಲ್ಗೊಂಡವರು ಆ 14 ವರ್ಷಗಳ ಅವಧಿಯಲ್ಲಿ ಮರಣಹೊಂದುವ ಸಾಧ್ಯತೆ ಇನ್ನುಳಿದವರಿಗಿಂತ ಶೇ.33 ರಷ್ಟು ಕಡಿಮೆಯಿತ್ತು.

ವರ್ಷಕ್ಕೆ ಒಮ್ಮೆ ಅಥವಾ ಎರಡೇ ಬಾರಿ ಕಲಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡವರು ಆ ಅವಧಿಯಲ್ಲಿ ಮರಣ ಹೊಂದುವ ಸಾಧ್ಯತೆ ಇನ್ನುಳಿದವರಿಗಿಂತ ಶೇ.೧೪ರಷ್ಟು ಕಡಿಮೆಯಿತ್ತು ಎಂಬುದು ಕಂಡುಬಂದಿದೆ. ಜನಲಕ್ಷಣ, ಸಾಮಾಜಿಕ, ಆರ್ಥಿಕ, ಆರೋಗ್ಯ ಸಂಬಂಧಿ ಸಂಗತಿಗಳನ್ನು ಹೊರಗಿಟ್ಟು ಈ ಅಧ್ಯಯನ ನಡೆಸಲಾಗಿದೆ.

ಕೋಲ್ಡ್‌ ಕೋಲ್ಡ್‌ ಪಾದಗಳನ್ನು ಬೆಚ್ಚಗಿಡೋದು ಹೇಗೆ?

ಹಾಗಿದ್ದರೆ ಜಿಮ್, ವ್ಯಾಯಾಮ, ವಾಕಿಂಗ್ ಅಂದರೆ ಅಲರ್ಜಿ ಅನ್ನುವವರು ಇನ್ನುಮುಂದೆ ವೀಕೆಂಡ್‌ನಲ್ಲಿ ನಾಟಕ ನೋಡಲು ಹೋದರಾಯಿತು, ಹಾಯಾಗಿ ಹೆಚ್ಚು ವರ್ಷ ಬದುಕಬಹುದು ಎಂದಾಯಿತು!

 

click me!