Kids Care : ಮಕ್ಕಳ ದೇಹ ಬೇಗ ಸೇರುತ್ತೆ ಈ ರೋಗ

Published : Sep 06, 2022, 01:34 PM IST
Kids Care : ಮಕ್ಕಳ ದೇಹ ಬೇಗ ಸೇರುತ್ತೆ ಈ ರೋಗ

ಸಾರಾಂಶ

ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚು ಚಿಂತೆಗೊಳಗಾಗಿರ್ತಾರೆ. ಆಗಾಗ ಅನಾರೋಗ್ಯಕ್ಕೀಡಾಗುವ ಮಕ್ಕಳ ಬಗ್ಗೆ ಆತಂಕವಿರುತ್ತದೆ. ಆದ್ರೆ ಕೆಲ ಖಾಯಿಲೆ ಬಗ್ಗೆ ಪಾಲಕರು ಚಿಂತಿಸಬೇಕಾಗಿಲ್ಲ. ಅದು ಮಕ್ಕಳಿಗೆ ಆಗಾಗ ಬರ್ತಿದ್ದರೂ ಹೆಚ್ಚು ಹಾನಿ ಮಾಡುವುದಿಲ್ಲ.  

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತೆ. ಇದೇ ಕಾರಣಕ್ಕೆ ಮಕ್ಕಳು ಅನಾರೋಗ್ಯಕ್ಕೆ ಒಳಗಾಗೋದು ಹೆಚ್ಚು. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗ್ತಾರೆ. ಸಾಮಾನ್ಯವಾಗಿ ಋತು ಬದಲಾಗುವ ಸಂದರ್ಭದಲ್ಲಿ ಖಾಯಿಲೆ ಬೀಳೋದು ಸಾಮಾನ್ಯ. ಅದ್ರಲ್ಲೂ ಮಕ್ಕಳಿಗೆ ಋತುವಿನ ಖಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಕಾಡದಿರಲಿ ಎಂದು ಪಾಲಕರು ಎಚ್ಚರಿಕೆ ವಹಿಸ್ತಾರೆ. ಕೆಲವೊಮ್ಮೆ ಎಷ್ಟೇ ಎಚ್ಚರಿಕೆ ತೆಗೆದುಕೊಂಡ್ರೂ ಮಕ್ಕಳು ಅನಾರೋಗ್ಯಕ್ಕೆ ಒಳಗಾಗ್ತಿದ್ದಾರೆ. ಮಕ್ಕಳಿಗೆ ಕೆಲ ಅನಾರೋಗ್ಯ ಸಮಸ್ಯೆ ಕಾಡುವುದು ಮಾಮೂಲಿ. ಇದ್ರ ಬಗ್ಗೆ ಪೋಷಕರು ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಇದು ಬೇಗ ಗುಣಮುಖವಾಗುವ ಖಾಯಿಲೆಗಳಾಗಿರುತ್ತವೆ. ಆದ್ರೆ ಪಾಲಕರು  ಅದ್ಯಾವುದು ಎಂಬುದನ್ನು   ತಿಳಿದಿದ್ದರೆ ಸಮಸ್ಯೆ ಅರ್ಧ ಕಡಿಮೆಯಾದಂತೆ. ನವಜಾತ ಶಿಶುಗಳಿಗೆ ಕಾಡುವ ರೋಗ ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.

ಮಕ್ಕಳ (Children) ಲ್ಲಿ ಕಾಡುವ ಸಾಮಾನ್ಯ ಖಾಯಿಲೆ (Diseases) : 
ಕಣ್ಣು ಮತ್ತು ಕಿವಿ ಸೋಂಕು (Infection) :
ಕಿವಿ ಮತ್ತು ಕಣ್ಣಿನ ಸೋಂಕು ಚಿಕ್ಕ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಖಾಯಿಲೆಯಾಗಿದೆ. ಕಿವಿ ನೋವು, ಕಿವಿಯಿಂದ ದ್ರವ ಹೊರಗೆ ಬರುವುದು ಹಾಗೆ ಕಣ್ಣು ಕೆಂಪಾಗುವುದು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಇದು ಚಿಕಿತ್ಸೆ ನಂತ್ರ ಗುಣವಾಗುವ ಖಾಯಿಲೆಯಾಗಿದೆ.

ನೆಗಡಿ (Cold) : ನೆಗಡಿ  ಚಿಕ್ಕ ಮಕ್ಕಳಲ್ಲಿ ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದೆ. ಶೀತ ಗಂಭೀರ ರೋಗವಲ್ಲ. ಶೀತದ ಲಕ್ಷಣಗಳು  ಸುಮಾರು 3 ರಿಂದ 4 ದಿನಗಳವರೆಗೆ ಇರುತ್ತದೆ.  ವರ್ಷದಲ್ಲಿ ಅನೇಕ ಬಾರಿ ಮಕ್ಕಳಿಗೆ ಶೀತದ ಸಮಸ್ಯೆ ಕಾಡುತ್ತದೆ. ಇದ್ರ ಬಗ್ಗೆ ಪಾಲಕರು ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ನೆಗಡಿ ಹೆಚ್ಚಾಗಿದ್ದರೂ ವೈದ್ಯರ ಚಿಕಿತ್ಸೆ ನಂತ್ರ ನೆಗಡಿಯನ್ನು ಸುಲಭವಾಗಿ ಗುಣಪಡಿಸಬಹುದಾಗಿದೆ. 

ಗ್ಯಾಸ್ಟ್ರೋಎಂಟರೈಟಿಸ್ : ಗ್ಯಾಸ್ಟ್ರೋಎಂಟರೈಟಿಸ್ ಅನ್ನು ಹೊಟ್ಟೆ ಜ್ವರ ಎಂದೂ ಕರೆಯುತ್ತಾರೆ. ಇದು ವೈರಸ್ ನಿಂದ ಬರುವ ರೋಗವಾಗಿದೆ. ನವಜಾತ ಶಿಶುಗಳಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ. ಈ ರೋಗದ ಲಕ್ಷಣವೆಂದ್ರೆ ಮಗುವಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹಾಗೆಯೇ ಹಸಿವು ಮಕ್ಕಳಿಗೆ ಕಡಿಮೆಯಾಗುತ್ತದೆ. ಮಕ್ಕಳು ಯಾವುದೇ ಆಹಾರ ಸೇವನೆ ಮಾಡಲು ಆಸಕ್ತಿ ತೋರುವುದಿಲ್ಲ. ಗ್ಯಾಸ್ಟ್ರೋಎಂಟರೈಟಿಸ್ ರೋಗ ತಡೆಯಲು ಸ್ವಚ್ಛತೆ ಬಹಳ ಮುಖ್ಯವಾಗುತ್ತದೆ. ಶುದ್ಧ ಸ್ಥಳದಲ್ಲಿ ತಯಾರಿಸಿದ ಆಹಾರವನ್ನು ಮಕ್ಕಳಿಗೆ ನೀಡಬೇಕಾಗುತ್ತದೆ. 

Women Health : ಮುಟ್ಟು ನಿಲ್ಲವಾಗ ಸೌಂದರ್ಯ ಟ್ರೀಟ್ಮೆಂಟ್‌ಗೆ ಹಾಕಿ ಬ್ರೇಕ್!

ರೋಸೋಲಾ (HHV-6) : ರೋಸೋಲಾ (Roseola) ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಮಗುವಿನ ದೇಹದಲ್ಲಿ ಕೆಂಪು ದದ್ದು ಕಾಣಿಸಿಕೊಳ್ಳುತ್ತದೆ. ಇದ್ರ ಜೊತೆ ಮಗುವಿಗೆ ಜ್ವರ ಕೂಡ ಕಾಡುವ ಸಾಧ್ಯತೆಯಿದೆ. ಈ ರೋಗ ಲಾಲಾರಸ, ಆಟಿಕೆಗಳಿಂದಲೂ ಹರಡುತ್ತದೆ. ಮಗುವಿನ ದೇಹದಲ್ಲಿ ನೀರಿನಾಂಶ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಹಾಗೆ ಜ್ವರಕ್ಕೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸರಿಯಾದ ಸಮಯಕ್ಕೆ ಮಕ್ಕಳಿಗೆ ಔಷಧಿ ಬಿದ್ರೆ ಹೆಚ್ಚಿನ ಯಾವುದೇ ಸಮಸ್ಯೆ ಇದ್ರಿಂದಾಗುವುದಿಲ್ಲ.

ಜ್ವರ ಮತ್ತು ಕೆಮ್ಮು (Fever and cough)) : ಮಕ್ಕಳಿಗೆ ಇದು ಕೂಡ ಆಗಾಗ ಬರುವ ಖಾಯಿಲೆಯಾಗಿದೆ. ನವಜಾತ ಶಿಶುಗಳಿಗೆ ಆಗಾಗ ಜ್ವರ ಬರ್ತಿರುತ್ತದೆ. ಇದು ಕೂಡ ಮೂರ್ನಾಲ್ಕು ದಿನಗಳಲ್ಲಿ ಕಡಿಮೆಯಾಗುವ ಖಾಯಿಲೆ. ಕೆಮ್ಮು ಕೂಡ ಒಂದೆರಡು ದಿನಗಳಲ್ಲಿ ಕಡಿಮೆಯಾಗುವ ಖಾಯಿಲೆಯಾಗಿದೆ.

ಮಕ್ಕಳಿಗೆ Good Eating Habit ಕಲಿಸೋದನ್ನು ಮರೀಬೇಡಿ

ಇತರ ಖಾಯಿಲೆ : ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಹಾಗಾಗಿ ಮಕ್ಕಳಿಗೆ ಮಲೇರಿಯಾ, ನ್ಯುಮೋನಿಯಾ, ಇನ್ಫ್ಲುಯೆನ್ಸ್, ಕ್ಷಯ ಸೇರಿದಂತೆ ಕೆಲ ಗಂಭೀರ ಕಾಯಿಲೆ ಕಾಡುವ ಸಂಭವವಿದೆ. ರೋಗ ಲಕ್ಷಣ ಕಾಣಿಸಿಕೊಳ್ತಿದ್ದಂತೆ ಪಾಲಕರು ಚಿಕಿತ್ಸೆ ನೀಡುವುದು ಇಲ್ಲಿ ಅಗತ್ಯವಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!