Asianet Suvarna News Asianet Suvarna News

ನಂಗೂ ಹಾರ್ಟ್ ಅಟ್ಯಾಕ್ ಆಗಬಹುದು, ಅನಿಸಿದ್ದುಂಟಾ? ಈ ಲಕ್ಷಣಗಳ ಕಡೆ ಇರಲಿ ಗಮನ

ಈಗೀಗಂತೂ ಗ್ಯಾಸ್ಟ್ರಿಕ್‌ಗೆ ಅನ್ ಈಸಿನೆಸ್ ಫೀಲ್ ಆದರೂ ಹಾರ್ಟ್ ಅಟ್ಯಾಕ್ ಆಗುತ್ತೇನೋ, ಡಾಕ್ಟರ್ ಹತ್ತಿರ ಹೋಗೋಣ ಅನಿಸಿಬಿಡುತ್ತದೆ. ಹತ್ತಿರದವರ ಸಾವು ಪ್ರತಿಯೊಬ್ಬರಲ್ಲಿಯೂ ಒಂದು ಆತಂಕ ಸೃಷ್ಟಿಸಿದ್ದಂತೂ ಸುಳ್ಳಲ್ಲ. ಅಯ್ಯೋ ನಾವು ಸಾಯುತ್ತೇವೆನೋ ಎಂಬ ಭಯದಿಂದಲೇ ಹೃದಯ ಒಡೆದು ಹೋಗಬಹುದು. ಅಷ್ಟಕ್ಕೂ ನಿಜವಾಗಲೂ ಈ ಹಾರ್ಟ್ ಅಟ್ಯಾಕ್ ಆಗೋದಾದರೆ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕೆಲವು ಸಿಂಪಲ್ ಲಕ್ಷಣಗಳಿವು. ಹೆದರೋ ಅಗತ್ಯವಿಲ್ಲ. ಆದರೆ, ಅಲರ್ಟ್ ಆಗಿರಿ ಅಷ್ಟೇ. 

Common symptoms of sweating tiredness heart burning might of heart attack
Author
First Published Sep 5, 2022, 1:02 PM IST

ಹಾರ್ಟ್ ಅಟ್ಯಾಕ್ ಆಗುತ್ತೆ ಅಂದಾಗ ಎದೆ ನೋವೇ ಬರಬೇಕು ಅಂದೇನೂ ಇಲ್ಲ. ಕೆಲವೊಮ್ಮೆ ಸೈಲೆಂಟಾಗಿಯೇ ಈ ರೋಗ ಒಕ್ಕರಿಸಿ ಸತ್ತೇ ಹೋಗಬಹುದು. ಹೇಳದೇ, ಕೇಳದೇ ಬರಬಹುದು. ಹಾಗಂತ ಎದೆ ನೋವು ಬಂತು ಎಂದ ಕೂಡಲೇ ಹಾರ್ಟ್ ಆಟ್ಯಾಕ್ ಆಗಿದೆ ಅಂತಾನೂ ಅರ್ಥವಲ್ಲ. ಬೇರೆ ಬೇರೆ ಕಾರಣಗಳಿಂದಲೂ ಎದೆ ಹಾಗೂ ಆ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಅಷ್ಟಕ್ಕೂ ಹೃದಯ ಸಂಬಂಧಿ ಕಾಯಿಲೆ ಇದೆ ಎಂದಾಗ ಯಾವ ರೀತಿಯ ನೋವು ಕಾಣಿಸಿಕೊಳ್ಳುತ್ತದೆ. ಏನೇನೋ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ? 

ಮನುಷ್ಯ ಆರೋಗ್ಯವಾಗಿದ್ದಾನೆಂದರೆ ಸರಿಯಾಗಿಯೇ ಊಟ ಮಾಡುತ್ತಾನೆ, ನಿದ್ರಿಸುತ್ತಾನೆ. ಮಲ-ಮೂತ್ರ ವಿಸರ್ಜನೆ ಸರಿಯಾಗಿಯೇ ಆಗುತ್ತಿರುತ್ತದೆ. ಸುಸ್ತು ಸ್ವಲ್ಪ ದೂರವೇ ಇರುತ್ತೆ. ಆದರೆ, ಯಾವಾಗ ಸುಸ್ತು, ಎದೆಯುರಿಯಂಥ ಲಕ್ಷಗಳು ಕಾಣಿಸಿಕೊಳ್ಳುವುದೋ ಅದಕ್ಕೆ ಒತ್ತಡವೂ ಕಾರಣವಾಗಿರಬಹುದು. ನಿದ್ರೆ ಬರೋಲ್ಲ. ಊಟ ಸೇರೋಲ್ಲ. ಒಂದಕ್ಕೊಂದು ರಿಲೇಟ್ ಆಗಿ ಅನ್‌ಈಸಿನೆಸ್ ಕಾಡುತ್ತೆ. ಅದೆಷ್ಟು ಕಿರಿ ಕಿರಿ ಉಂಟು ಮಾಡುತ್ತೆ ಅಂದ್ರೆ ಇದರಿಂದ ಹೊರ ಬರುವುದು ಹೇಗೆ ಎಂಬುವುದೇ ಅರ್ಥವಾಗೋಲ್ಲ. ಆ ಕ್ಷಣದಲ್ಲಿ ಸತ್ತೇ ಹೋಗಿ ಬಿಡುತ್ತೇವೇನೋ ಎಂಬ ಮಟ್ಟಿಗೆ ಅನಾರೋಗ್ಯ ಕಾಡುತ್ತದೆ. ಆದರೆ, ಇವುಗಳಲ್ಲಿ ಕೆಲವು ಸೂಚನೆಗಳು ಹಾರ್ಟ್ ಅಟ್ಯಾಕ್‌ಗೂ ಸಂಬಂಧಿಸಿದ್ದು ಆಗಿರಬಹುದು. ಏನವು? 

ಸುಸ್ತು (Tiredness)
ಒತ್ತಡ ಹೆಚ್ಚಾದರೆ ಸರಿಯಾಗಿ ನಿದ್ರಿಸಲು ಆಗೋಲ್ಲ. ಸುಸ್ತು ಸಹಜವಾಗಿಯೇ ಮನುಷ್ಯನನ್ನು ಕಾಡುತ್ತೆ. ಹೆಲ್ತ್ ಪಬ್ಲಿಶಿಂಗ್ ರಿಪೋರ್ಟ್ ಪ್ರಕಾರ, ಹೃದಯಾಘಾತವಾಗುವ 1 ತಿಂಗಳ ಮುಂಚೆಯಿಂದಲೇ ಈ ರೀತಿಯ ಸುಸ್ತು ಕಾಡಬಹುದು. ನಿರಂತರವಾಗಿ ಸುಸ್ತಿದ್ದು, ಏನು ಮಾಡಿದರೂ ಕಡಿಮೆಯಾಗಿಲ್ಲವೆಂದರೆ ಎಚ್ಚೆತ್ತುಕೊಳ್ಳಿ. 

ಸೊಂಟದ ಕೊಬ್ಬು ಹೆಚ್ಚಳ ಹೃದಯಾಘಾತದ ಅಪಾಯ ಹೆಚ್ಚಿಸುತ್ತೆ!

ಸ್ನಾಯು ಸೆಳೆತ
ಭುಜಗಳು ಹಾಗೂ ಬೆನ್ನಿನ ಮೇಲ್ಭಾಗದಲ್ಲಿ ಏನೇ ಪೆಟ್ಟಾಗದೇ ಹೋದರೂ ಸ್ನಾಯುಸೆಳೆತ ಹಾಗೂ ನೋವು ಕಾಣಿಸಿಕೊಳ್ಳುತ್ತಿದ್ದರೆ, ಸೈಲೆಂಟ್ ಹಾರ್ಟ್ ಅಟ್ಯಾಕ್‌ (Silent Heart Attack) ಆಗಿರೋ ಸಾಧ್ಯತೆ ಇರುತ್ತದೆ.  ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಪ್ರಕಾರ ಸೈಲೆಂಟ್ ಹಾರ್ಟ್ ಅಟ್ಯಾಕ್ ಆದಾಗ ಹಲವು ಬಾರಿ ಯಾವುದೇ ಗುರುತಿಸಬಲ್ಲ ಲಕ್ಷಣಗಳು ಇರೋಲ್ಲ. ಜೀವಕ್ಕೇ ಅಪಾಯಕಾರಿ.  

ದವಡೆ ನೋವು
ಎಡ ಭಾಗದ ಕೆಳ ದವಡೆಯಲ್ಲಿ ನೋವಿದ್ದರೆ, ಹಾರ್ಟ್ ಅಟ್ಯಾಕ್ ಸೂಚನೆ ಇರಬಹುದು. ಅದರಲ್ಲಿಯೂ ಹೆಣ್ಣು ಮಕ್ಕಳು ಇದನ್ನು ಅನುಭವಿಸಿದರೆ ಹಾರ್ಟ್ ಅಟ್ಯಾಕ್ ಲಕ್ಷಣವೂ ಆಗಿರಬಹುದು. 

ದೇಹದ ಇತರ ಭಾಗಗಳಲ್ಲಿ ನೋವು
ಎದೆ, ಭುಜ, ಬೆನ್ನು ಮತ್ತು ಕತ್ತು ನೋವು ಮಾತ್ರ ಹಾರ್ಟ್ ಅಟ್ಯಾಕ್ ನೋವಲ್ಲ. ಹೃದಯ ನಾಳಗಳು ಕಟ್ಟಿಕೊಂಡಾಗ ಏನೋ ಸಮಸ್ಯೆ ಆಗಿರಬಹುದೆಂಬ ಸೂಚನೆ ನೀಡುತ್ತೆ. ಆಗ ನೋವು ಸಹಜವಾಗಿಯೇ ಕಾಡುತ್ತದೆ. ಈ ವೇಗಸ್ ನರ್ವ್ ಕೇವಲ ಹೃದಯಕ್ಕಷ್ಟೇ ಅಲ್ಲ. ಮೆದುಳು (Brain), ಎದೆ, ಹೊಟ್ಟೆ ಹಾಗೂ ಕತ್ತಿನವರೆಗೂ ತನ್ನ ಬಾಹುಗಳನ್ನು ಚಾಚಿರುತ್ತದೆ. ಹೀಗಾಗಿ, ಈ ಯಾವುದೇ ಭಾಗದಲ್ಲಿ ಬೇಕಾದರೂ ಈ ನೋವು ಕಾಡಬಹುದು. 

ಎದೆ ಬಿಗಿತ
ಎದೆ ಒತ್ತಿದಂತಾಗುವುದು ಹಾರ್ಟ್ ಅಟ್ಯಾಕ್‌ನ ಅತಿ ಮುಖ್ಯ ಸೂಚನೆ. ಹಿಂಡಿದಂಥ ಅನುಭವವೂ ಆಗುತ್ತದೆ. ಎದೆ ಮಧ್ಯೆಯಲ್ಲಿ ಅತೀವ ನೋವು. ಈ ಎದೆ ಬಿಗಿತವು ಕೆಲ ನಿಮಿಷಗಳ ಕಾಲ ಮಂದವರಿದರೆ ಸ್ವಲ್ಪ ಅಲರ್ಟ್ ಆಗೋದು ಒಳ್ಳೆಯದು. 

ತಲೆ ಸುತ್ತು
ಬಿಪಿ ಹೆಚ್ಚು ಕಡಿಮೆಯಾದಾಗ, ಸರಿಯಾಗಿ ನಿದ್ರೆ, ಊಟ ಮಾಡದಿದ್ದಾಗ ತಲೆ ಸುತ್ತೋದು ಕಾಮನ್. ಕೆಲವೊಮ್ಮೆ ಕೂತು ಸಡನ್ನಾಗಿ ಎದ್ದರೂ ತಲೆ ಸುತ್ತುತ್ತ. ಹೀಗೆ ಆಗುವಾಗ ಭುಜ, ಎದೆ ಭಾಗದಲ್ಲಿ ಅನ್ ಈಸಿನೆಸ್ ಕಾಣಿಸಿಕೊಂಡು, ಉಸಿರಾಡಲೂ ತೊಂದರೆಯಾಗುತ್ತಿದ್ದರೆ, ರಕ್ತದೊತ್ತಡದಲ್ಲಿ ಏರುಪೇರಾಗಿದೆ ಎಂದರ್ಥ. ಹೃದಯಕ್ಕೆ ಸಂಬಂಧಿಸಿದ ರೋಗ ನಿಮ್ಮ ಕಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. 

ಎದೆ ನಿಜಕ್ಕೂ ಒಡೆದು ಹೋಗುತ್ತೆ, ಇದು ಬ್ರೋಕನ್‌ ಹಾರ್ಟ್‌ ಡಿಸೀಸ್‌

ಸಿಕ್ಕಾಪಟ್ಟೆ ಬೆವರ್ತಾ ಇದೀರಾ? 
ಮಹಿಳೆಯರಿಗೆ ಮೆನೋಪಾಸ್ ಸಮಯದಲ್ಲಿ ಅತಿಯಾಗಿ ಬೆವರೋದು ಸಹಜ. ಆದರೆ, ವ್ಯಾಯಾಮದ ಬಳಿಕವಲ್ಲದೆ, ಮತ್ತೇನೂ ಕಾರಣವಲ್ಲದೇ ಇದ್ದಕ್ಕಿದ್ದಂತೆ ಮೈಯ್ಯೆಲ್ಲ ಅತಿಯಾಗಿ ಬೆವರಿದರೆ (Sweat) ಹೃದಯಾಘಾತದ ಸೂಚನೆ ಆಗಿರಬಹುದು. 

ಸಂಕಟ ಹಾಗೂ ಅಜೀರ್ಣ
ವಾಂತಿ, ಹೊಟ್ಟೆನೋವು, ಹೊಟ್ಟೆಯುಬ್ಬರಿಸುವುದು ಮುಂತಾದ ಗ್ಯಾಸ್ಟ್ರಿಕ್ ಲಕ್ಷಣಗಳು ಎಂದು ಹೇಳುತ್ತೆ, ಸ್ಟೋನಿ ಬ್ರೂಕ್ ಮೆಡಿಸಿನ್. ವಾಂತಿ (Vomitting), ಹೊಟ್ಟೆನೋವು (Stomachache), ಹೊಟ್ಟೆಯುಬ್ಬರಿಸುವುದು ಮುಂತಾದ ಗ್ಯಾಸ್ಟ್ರಿಕ್ ಲಕ್ಷಣಗಳು (Gastric Symptoms). ಹೃದಯ ಹಾಗೂ ದೇಹದ ಇತರೆ ಭಾಗಗಳಿಗೆ ರಕ್ತ ಸಂಚಾರ ಕುಂಠಿತವಾದರೆ, ಹೃದಯದ ಸಮಸ್ಯೆ ಇದೆ ಎಂದರ್ಥ. ವೈದ್ಯರ ಬಳಿ ಹೋದರೆ ಸೇಫ್. 
 
ಉಸಿರಾಟ ಸಮಸ್ಯೆ (Breathing Issue)
ಮೆಟ್ಟಿಲು ಹತ್ತಿ ಇಳಿಯೋದು ಮುಂಚಿಗಿಂತ ಈಗ ಕಷ್ಟ ಎನಿಸುತ್ತಿರಬಹುದು. ಅಲ್ಲದೇ ಮಾಸ್ಕ್ ಹಾಕಿಕೊಂಡು ಮೆಟ್ಟಿಲು ಹತ್ತಿದರೆ ಸಹಜವಾಗಿಯೇ ಉಸಿರಾಡಲು ತೊಂದರೆಯಾಗುತ್ತದೆ. ಆದರೆ, ಇವೆಲ್ಲ ತುಂಬಾ ಡಿಸ್ಟರ್ಬ್ ಆಗುವಂತಿದ್ದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಆದರೆ, ನೀವು Stress Free ಆಗಿದ್ದೀರಿ ಎಂಬುದನ್ನು ಕನ್ಫರ್ಮ್ ಮಾಡಿಕೊಳ್ಳಿ. ಒತ್ತಡ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕುಂದು ತರೋದು ಕಾಮನ್. 

ಜಿಮ್ ಮಾಡೋವಾಗ್ಲೆ ಹೃದಯಾಘಾತ ! ಇದ್ಯಾಕೆ ಈಗ ಕಾಮನ್ ಆಗುತ್ತಿದೆ!

ಹೃದಯ ಬಡಿತ (Heart Beat)
ಹೃದಯಕ್ಕೆ ಪೋಷಕತ್ವಗಳನ್ನು ಹೊತ್ತು ಸೂಕ್ತ ರಕ್ತ ಸಂಚಾರವಾಗಬೇಕು. ಅಗತ್ಯ ಪ್ರಮಾಣದಲ್ಲಿ ರಕ್ತ ಸಪ್ಲೈಯಾಗದಿದ್ದಾಗ ಹೃದಯ ಬಡಿತ ಜೋರಾಗಿ ಬಡಿತ ಹೆಚ್ಚುತ್ತದೆ. ಒಂದು ವೇಳೆ ಈ ಅನುಭವವಾದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದೊಳಿತು. 

Common symptoms of sweating tiredness heart burning might of heart attack


 

Follow Us:
Download App:
  • android
  • ios