ತೆರೆದ ಹೃದಯ ಚಿಕಿತ್ಸೆ; 3 ದಿನದ ಬೇಬಿ ಜೀರೋ ಟ್ರಾಫಿಕ್‌ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಶಿಫ್ಟ್!

By Ravi Janekal  |  First Published Jul 17, 2023, 12:12 PM IST

ತೆರೆದ ಹೃದಯದ ಶಸ್ತ್ರ ಚಿಕಿತ್ಸೆಯ ಹಿನ್ನೆಲೆ ಮೂರು ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಜೀರೋ ಟ್ರಾಫಿಕ್‌ನಲ್ಲಿ ಶಿಫ್ಟ್ ಮಾಡಲಾಗಿದೆ


ಶಿವಮೊಗ್ಗ (ಜು.17) ತೆರೆದ ಹೃದಯದ ಶಸ್ತ್ರ ಚಿಕಿತ್ಸೆಯ ಹಿನ್ನೆಲೆ ಮೂರು ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಜೀರೋ ಟ್ರಾಫಿಕ್‌ನಲ್ಲಿ ಶಿಫ್ಟ್ ಮಾಡಲಾಗಿದೆ

ಶಿವಮೊಗ್ಗದ ವೆಂಕಟೇಶ ನಗರದ ನೀಲೇಶ್ ಮತ್ತು ಮೋನಿಕ ದಂಪತಿಗಳ ಮೂರು ದಿನಗಳ ಮಗು ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ತರಲಾಗಿದೆ. ಕಳೆದ ರಾತ್ರಿ 10 ಗಂಟೆಗೆ ಶಿವಮೊಗ್ಗದಿಂದ ಹೊರಟ ಆಂಬುಲೆನ್ಸ್, ಬೆಂಗಳೂರಿಗೆ 1.20ಕ್ಕೆ ತಲುಪಿತು.

Tap to resize

Latest Videos

ಶಿವಮೊಗ್ಗದ ವೆಂಕಟೇಶ ನಗರದ ನೀಲೇಶ್ ಮತ್ತು ಮೋನಿಕ ದಂಪತಿಗಳ ಮೂರು ದಿನಗಳ ಮಗು. ಹೆತ್ತ ಮೂರು ದಿನಗಳಲ್ಲೇ ಹೆಣ್ಣು ಮಗುವಿಗೆ ಹೃದಯದಲ್ಲಿ ತೊಂದರೆ ಕಾಣಿಸಿಕೊಂಡಿತ್ತು  ಹೃದಯ ಚಿಕಿತ್ಸೆಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೇಬಿ ಮೋನಿಕಾ.  ತುರ್ತು ತೆರೆದ ಹೃದಯದ ಚಿಕಿತ್ಸೆ ನಡೆಸಬೇಕಾದ ಕಾರಣ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಗಿದೆ.

ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್‌ ಆರೋಗ್ಯ ಏರುಪೇರು: ಜೀರೋ ಟ್ರಾಫಿಕ್‌ನಲ್ಲಿ ಆಸ್ಪತ್ರೆಗೆ ದಾಖಲು

ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ರವಾನೆ ಮಾಡಲು ಮಗುವಿನ ಪೋಷಕರ ಸ್ನೇಹಿತರ ಪ್ರಯತ್ನ  ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಎಸ್ ಪಿ ಮಿಥುನ್ ಕುಮಾರ್ ರನ್ನು ಸಂಪರ್ಕಿಸಿದ್ದರು. ತಕ್ಷಣವೇ ಎಸ್‌ಪಿ ಮಿಥುನ್ ಕುಮಾರ್ ರಿಂದ ಪೋಷಕರ ಮನವಿಗೆ ಸ್ಪಂದನೆ. ಕೆಲವೇ ನಿಮಿಷಗಳಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ ಎಸ್‌ಪಿ.

ಶಿವಮೊಗ್ಗದ ಅಂಬುಲೆನ್ಸ್ ಚಾಲಕ ಸದ್ದಾಮ್ ಹುಸೇನ್ ಮತ್ತು ಜಗದೀಶ್ ಇಬ್ಬರು ಆಂಬುಲೆನ್ಸ್ ಅನ್ನು ಮೂರು ಗಂಟೆ 20 ನಿಮಿಷದೊಳಗೆ ತಲುಪಿಸಿದ್ದಾರೆ. ಈ ಮೊದಲು ಕೂಡ ಶಿವಮೊಗ್ಗದಿಂದ ಬೆಂಗಳೂರಿಗೆ ಐದು ಬಾರಿ ಜೀರೋ ಟ್ರಾಫಿಕ್ ನಲ್ಲಿ ಸದ್ದಾಂ ಅಂಬುಲೆನ್ಸ್ ಚಾಲನೆ ಮಾಡಿದ್ದರು.  ರಾತ್ರಿ 10.10 ಕ್ಕೆ ಶಿವಮೊಗ್ಗದಿಂದ ಹೊರಟಿದ್ದ ಆ್ಯಂಬುಲೆನ್ಸ್. ಮಧ್ಯರಾತ್ರಿ 1.30 ಕ್ಕೆ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯಕ್ಕೆ ಆಗಮನ. ಶಿವಮೊಗ್ಗದಿಂದ ಮಗುವನ್ನು ಕರೆತಂದ ಚಾಲಕ ಆ್ಯಂಬುಲೆನ್ಸ್ ಜಗದೀಶ ಸ್ಟಾಫ್ ನರ್ಸ್ ಗಳಾದ ವಿನಯ್ ಹಾಗೂ ಹನುಮಂತ. ಇದೀಗ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಮಗುವಿಗೆ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

4 ದಿನಗಳ ಹಸುಗೂಸಿಗಾಗಿ ಶಿವಮೊಗ್ಗದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ..!

 

click me!