ಮಕ್ಕಳನ್ನೂ ಬಿಡ್ತಿಲ್ಲ ಹಾರ್ಟ್‌ಅಟ್ಯಾಕ್‌! ಆಟವಾಡಿ ಬಂದು ಮಲಗಿದ್ದ ಬಾಲಕಿ ಹೃದಯಾಘಾತದಿಂದ ಸಾವು

By Vinutha Perla  |  First Published Apr 1, 2023, 11:25 AM IST

ಇತ್ತೀಚಿಗೆ ಹೋದಲ್ಲಿ ಬಂದಲ್ಲಿ ಹೃದಯಘಾತವಾಗಿ ಜನರು ಕುಸಿದುಬಿದ್ದು ಸಾವನ್ನಪ್ಪೋದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದೆಡೆ ಆಟ ಆಡಿ ಬಂದು ಮನೆಯಲ್ಲಿ ಮಲಗಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಹೆಚ್ಚಿನ ಮಾಹಿತಿ ಇಲ್ಲಿದೆ.


ಹೈದರಾಬಾದ್: ಇತ್ತೀಚಿಗೆ ಹೋದಲ್ಲಿ ಬಂದಲ್ಲಿ ಹೃದಯಘಾತವಾಗಿ ಜನರು ಕುಸಿದುಬಿದ್ದು ಸಾವನ್ನಪ್ಪೋದು ಸಾಮಾನ್ಯವಾಗಿದೆ. ಮಕ್ಕಳು, ಹಿರಿಯರು, ವೃದ್ಧರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲರೂ ಹಾರ್ಟ್‌ ಅಟ್ಯಾಕ್‌ಗೆ ಬಲಿಯಾಗುತ್ತಿದ್ದಾರೆ. ಮಹಬೂಬಾಬಾದ್‌ನ ಮಾರಿಪೇಡಾ ಮಂಡಲದ ಅಬ್ಬೈಪಾಲೆಂ ಗ್ರಾಮದಲ್ಲಿ ನಿನ್ನೆ ಮುಂಜಾನೆ 13 ವರ್ಷದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. 6ನೇ ತರಗತಿಯ ವಿದ್ಯಾರ್ಥಿನಿ  ಶ್ರವಂತಿ ಗುರುವಾರ ರಾತ್ರಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು. ಮನೆ ಮಂದಿ ಇದನ್ನು ನೋಡಿ ವೈದ್ಯರ ಬಳಿಗೆ ಕರೆದೊಯ್ಯುವ ಮುನ್ನವೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಆಟ ಆಡಿ ಬಂದು ಮಲಗಿದ್ದ ಬಾಲಕಿಗೆ ಹೃದಯಾಘಾತ
ಗುರುವಾರ ರಾತ್ರಿ ಮಲಗಿದ ಕೆಲವು ಗಂಟೆಗಳ ನಂತರ, 12.30 ರ ಸುಮಾರಿಗೆ ಬಾಲಕಿಗೆ (Girl)ಎಚ್ಚರವಾಯಿತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಅವಳು ತನ್ನ ಎದೆಯಲ್ಲಿ ನೋವು (Chest pain) ಅನುಭವಿಸುತ್ತಿರುವುದನ್ನು ತನ್ನ ಅಜ್ಜಿಗೆ ತಿಳಿಸಿದಳು. ಕುಟುಂಬದ ಸದಸ್ಯರು ಅವಳನ್ನು ವೈದ್ಯರ ಬಳಿಗೆ ಕರೆದೊಯ್ಯಲು ಆಟೋವನ್ನು ಕರೆತರುವ ಹೊತ್ತಿಗೆ, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಾಲಕಿ ಸಾವನ್ನಪ್ಪಿದಳು ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಯ ಚಿಕ್ಕಪ್ಪ ಅವಳಿಗೆ ಸಿಪಿಆರ್ ನೀಡಲು ಪ್ರಯತ್ನಿಸಿದರೂ ಯಶಸ್ವಿಯಾಗಲ್ಲಿಲ್ಲ.

Tap to resize

Latest Videos

ಸೂರ್ಯ ನಮಸ್ಕಾರ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಶಿಕ್ಷಕ ಸಾವು

ಗುರುವಾರ ಶ್ರೀರಾಮ ನವಮಿ ನಿಮಿತ್ತ ಶಾಲೆಗಳಿಗೆ ರಜೆ ಇದ್ದ ಕಾರಣ ಬಾಲಕಿ ತನ್ನ ಸ್ನೇಹಿತರೊಂದಿಗೆ ಆಟವಾಡಿ ಅಜ್ಜಿಯ ಮನೆಯಲ್ಲಿ ಮಲಗಿದ್ದಳು. ಆಕೆ ಮಾರಿಪೇಡಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಬಾಲಕಿಯ ಪೋಷಕರು (Parents) ಕೃಷಿಕರಾಗಿದ್ದ, ಈಕೆ ಎರಡನೇ ಮಗಳು. ಇನ್ನೂ ಬಾಳಿ ಬದುಕಬೇಕಿದ್ದ ಮಗಳ ಸಾವಿನಿಂದ ಕುಟುಂಬದಲ್ಲಿ (Family) ಶೋಕ ಆವರಿಸಿದೆ. ತೆಲಂಗಾಣದಲ್ಲಿ ಕಳೆದ 1-2 ತಿಂಗಳಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಹಠಾತ್ ಹೃದಯಾಘಾತಕ್ಕೆ (Heartattack) ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ. 

ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್‌ ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌!
ನಡುರಸ್ತೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬನಿಗೆ ತಕ್ಷಣವೇ ಸಿಪಿಆರ್‌ ನೀಡುವ ಮೂಲಕ ಟ್ರಾಫಿಕ್‌ ಪೊಲೀಸ್‌ ಒಬ್ಬರು ಅವರ ಜೀವವನ್ನು ಉಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿತ್ತು. ಸೈಬರಾಬಾದ್‌ನ ರಾಜೇಂದ್ರನಗರ ಟ್ರಾಫಿಕ್‌ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ ರಾಜೀಂದರ್‌, ರಸ್ತೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಬಾಲರಾಜು ಎನ್ನುವ ವ್ಯಕ್ತಿಗೆ ಸಿಪಿಆರ್‌ ನೀಡಿದ್ದರು. ಈ ವಿಡಿಯೋವಿಗ ವೈರಲ್‌ ಆಗಿದ್ದು, ತೆಲಂಗಾಣದ ಆರೋಗ್ಯ ಸಚಿವ ಟಿ.ಹರೀಶ್‌ ರಾವ್‌ ಸೇರಿದಂತೆ ಇತರ ವ್ಯಕ್ತಿಗಳು ಇದನ್ನು ಶೇರ್‌ ಮಾಡಿದ್ದರು. 

ಪಾಠ ಮಾಡುತ್ತಿದ್ದಾಗ್ಲೇ ಶಿಕ್ಷಕರಿಗೆ ಹಾರ್ಟ್ ಅಟ್ಯಾಕ್, ಕುರ್ಚಿಯಲ್ಲಿ ಕುಳಿತಲ್ಲೇ ಹೋದ ಜೀವ!

ಎಂದಿನಂತೆ ಶುಕ್ರವಾರವೂ ಅರ್ಮಘರ್‌ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ರಾಜಶೇಖರ್‌, ಈ ವೇಳೆ ಎಲ್‌ಬಿ ನಗರದ ನಿವಾಸಿ ಬಾಲರಾಜು ಎನ್ನುವವರು ಸಡನ್‌ ಆಗಿ ಕುಸಿದು ಬಿದ್ದಿದ್ದನ್ನು ಕಂಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ರಾಜಶೇಖರ್‌ ಅವರಿಗೆ ಹೃದಯಾಘಾತವಾಗಿದೆ ಎನ್ನುವುದನ್ನು ಅರಿತುಕೊಂಡು ತಕ್ಷಣವೇ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ ಅನ್ನು ನೀಡಿ ಅವರ ಜೀವವನ್ನು ರಕ್ಷಣೆ ಮಾಡಿದರು.  ಕಾನ್ಸ್‌ಟೇಬಲ್‌ನ ಸಮಯೋಚಿತ ಸಿಪಿಆರ್‌ನಿಂದಾಗಿ ಬಾಲರಾಜು ಅವರು ಬದುಕುಳಿದಿದ್ದಾರೆ. ವ್ಯಕ್ತಿಗೆ ಸಿಪಿಆರ್‌ ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌ ರಾಜಶೇಖರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು. ಸಮಯಪ್ರಜ್ಞೆಯಿಂದ ಯುವಕನ ಜೀವವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆಗಾಗ ಹೃದಯ ತಪಾಸಣೆ ಮಾಡಿಕೊಳ್ಳೋದ್ರಿಂದ ಹಾರ್ಟ್‌ಅಟ್ಯಾಕ್ ತಪ್ಪಿಸಬಹುದಾ?

click me!