ಸೆಕ್ಸ್ ವರ್ಕರ್ಸ್‌ಗೆ ಸಲಾಂ ಹೇಳಲು ಬದಲಾದ ಕೋಲ್ಕತ್ತಾದ ರಸ್ತೆಗಳು

Suvarna News   | Asianet News
Published : Aug 03, 2020, 05:09 PM IST

ಲೈಂಗಿಕ ಕಾರ್ಯಕರ್ತರೆಂದರೆ ಸಮಾಜ ಅವರನ್ನು ಬಳಸಿಕೊಳ್ಳುವ ಜೊತೆಗೇ ಕೀಳಾಗಿಯೂ ಕಾಣುತ್ತದೆ. ಅವರಿಗೆ ಯಾವ ಸ್ಥಾನಮಾನವನ್ನೂ ನೀಡುವುದಿಲ್ಲ. ಸಭೆಸಮಾರಂಭಗಳಿಗೆ ಕರೆಯುವುದಿಲ್ಲ. ಯಾವ ಕಾರಣಗಳಿಗಾಗಿ ಅವರು ಆ ಕಾರ್ಯಕ್ಕಿಳಿದಿರಬಹುದು, ಅವರ ಹಿನ್ನೆಲೆ ಏನು ಎಂಬುದನ್ನೆಲ್ಲ ಯಾರೂ ಯೋಚಿಸುವುದಿಲ್ಲ. ಆದರೆ, ಕೋಲ್ಕತ್ತಾದಲ್ಲೊಂದು ಅಪರೂಪದ ಕಾರ್ಯ ನೋಡಬಹುದು. ಇಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ರಸ್ತೆಯ ಮೇಲೆ ಅಪರೂಪದ ಗ್ರಾಫಿಟಿ ಬಿಡಿಸಲಾಗಿದೆ. ಆ ಮೂಲಕ ಅವರ ಜೀವನಕ್ರಮಗಳನ್ನು ಬಿಂಬಿಸಲಾಗಿದೆ. 

PREV
18
ಸೆಕ್ಸ್ ವರ್ಕರ್ಸ್‌ಗೆ ಸಲಾಂ ಹೇಳಲು ಬದಲಾದ ಕೋಲ್ಕತ್ತಾದ ರಸ್ತೆಗಳು

ಇದು ಸೆಕ್ಸ್ ವರ್ಕರ್ಸ್‌ ಕಾರ್ಯಕ್ಕೆ ಗೌರವ ಸಲ್ಲಿಸಿ ರಚಿಸಲಾದ ಜಗತ್ತಿನ ಮೊದಲ ಸ್ಟ್ರೀಟ್ ಗ್ರಾಫಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

28

ಕೋಲ್ಕತ್ತಾದ ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳನ್ನು ಬಿಂಬಿಸುವ ಥೀಮ್ ಇದರದ್ದಾಗಿದೆ.  

38

ಕೋಲ್ಕತ್ತಾದ ದುರ್ಗಾಪೂಜೆಯು ಹಿಜಡಾಗಳಿಂದ ಹಿಡಿದು ವೇಶ್ಯೆಯರವರೆಗೆ ಎಲ್ಲರನ್ನೂ ಒಳಗೊಂಡು ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ.

48

ಬೆಂಗಾಲಿಗಳು ಬಹಳ ಹಿಂದಿನಿಂದಲೂ ವೇಶ್ಯಾಗೃಹದ ನೆಲದಲ್ಲಿರುವ ಮಣ್ಣಿನಿಂದಲೇ ದುರ್ಗಾಮಾತೆಯ ವಿಗ್ರಹಗಳನ್ನು ಮಾಡುತ್ತಾ ಬಂದಿರುವುದು ಸಂಪ್ರದಾಯವಾಗಿದೆ. 

58

ಹಾಗಿದ್ದೂ ಕೂಡಾ ಸೆಕ್ಸ್‌ ವರ್ಕರ್‌ಗಳನ್ನು ಸಮಾಜ ಕಡೆಗಣಿಸುವುದು ಮುಂದುವರಿದೇ ಇದೆ. ಈ ಬಗ್ಗೆ ಜಾಗೃತಿ ಮೂಡಿಸಲು, ಅವರ ಜೀವನ ಹಾಗೂ ಹೋರಾಟಗಳನ್ನು ಬಿಂಬಿಸುವ ಸಲುವಾಗಿ ಕೋಲ್ಕತ್ತಾದ ಅಹಿರಿತೋಲಾ ಪ್ರದೇಶದ ಬೀದಿಗಳನ್ನು ವಿವಿಧ ಬಣ್ಣಗಳನ್ನು ತುಂಬಿ ವೇಶ್ಯೆಯರ ಬದುಕನ್ನು ಬಿಂಬಿಸಲಾಗಿದೆ. 

68

ಬಹುತೇಕರು ಕಳ್ಳಸಾಗಣಿಕೆಯ ಕಾರಣದಿಂದ ಇಲ್ಲವೇ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಈ ವೃತ್ತಿಗಿಳಿಯುತ್ತಾರೆ. ಅವರ ಈ ಅನಿವಾರ್ಯತೆಯ ಕಡೆಗೆ ಸಮಾಜದ ದೃಷ್ಟಿ ಸೆಳೆಯುವುದು ಗ್ರಾಫಿಟಿಯ ಉದ್ದೇಶ.

78

ಏಷ್ಯಾದ ಅತಿ ದೊಡ್ಡ ರೆಡ್ ಲೈಟ್ ಏರಿಯಾ ಕೋಲ್ಕತ್ತಾದ ಸೋನಾಗಚಿ ಪ್ರದೇಶವಾಗಿದ್ದು, ಇಲ್ಲಿನ ಮಹಿಳೆಯರ ಬದುಕನ್ನು ಗ್ರಾಫಿಟಿ ಬಿಂಬಿಸಿದೆ.

88

ಅಹಿರಿತೋಲಾ ಜುಬಾಕ್‌ಬೃಂದಾ ದುರ್ಗಾ ಪೂಜಾ ಸಮಿತಿಯು ಈ ಯೋಜನೆಯ ನಿರ್ಧಾರ ತೆಗೆದುಕೊಂಡು ಪ್ರಶಂಸೆಗೆ ಪಾತ್ರವಾಗಿದೆ. 

click me!

Recommended Stories