ಸಾರ್ವಜನಿಕ ಸ್ತನಪಾನ ಕುರಿತ ಕಳಂಕ ತೊಡೆಯಲು ಫೋಟೋ ಅಭಿಯಾನ
First Published | Jul 21, 2020, 5:35 PM ISTಸಾರ್ವಜನಿಕ ಸ್ತನಪಾನದ ಕುರಿತು ಹಬ್ಬಿರುವ ಸ್ಟಿಗ್ಮಾ ತೊಡೆದು ಹಾಕಲು ಫೇಸ್ಬುಕ್‌ನಲ್ಲೊಂದು ಪವರ್‌ಫುಲ್ ಅಭಿಯಾನ ಆರಂಭವಾಗಿದೆ. ಚಿಕಾಗೋ ಮೂಲದ ಐಶ್ವರ್ಯಾ ರಾಜನ್ ಬಾಬು ಈ ಫೋಟೋ ಅಭಿಯಾನದ ರೂವಾರಿ. ಇವರು ಫೇಸ್ಬುಕ್‌ನಲ್ಲಿ ದಿ ಮಾಮಿ ಸೀರೀಸ್ ಎಂಬ ಗ್ರೂಪ್ ಹುಟ್ಟುಹಾಕಿದ್ದು, ಅದರಲ್ಲಿ ಪ್ರಸ್ತುತ 40 ದೇಶಗಳ 4 ಸಾವಿರ ಸದಸ್ಯರಿದ್ದಾರೆ. ಆಗಸ್ಟ್ ಮೊದಲ ವಾರ ಸ್ತನ್ಯಪಾನ ವಾರವಾಗಿರುವುದರಿಂದ ಅದನ್ನು ಆಚರಿಸಲು ಐಶ್ವರ್ಯಾ ಆಸಕ್ತಿಕರ ಕ್ಯಾಂಪೇನ್ ಒಂದನ್ನು ಆರಂಭಿಸಿದ್ದಾರೆ.
ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಕವರ್ ಮಾಡಿಕೊಂಡರೂ ಮಗುವಿಗೆ ಹಾಲೂಡಿಸುವುದನ್ನು ವಿರೋಧಿಸುವವರೇ ಹಲವರು. ಅದನ್ನು ಅವಮಾನ, ಮರ್ಯಾದೆ ಇಲ್ಲದವರ ಕೆಲಸ ಎಂಬಂತೆ ನೋಡಲಾಗುತ್ತದೆ. ಈ ಕಳಂಕವನ್ನು ಹೋಗಲಾಡಿಸಲು ಐಶ್ವರ್ಯಾ ಪಣ ತೊಟ್ಟಿದ್ದು, ಸ್ತನಪಾನದ ಮಹತ್ವ ತಿಳಿಸಲು ಭಾರತದ 9 ಫೋಟೋಗ್ರಾಫರ್‌ಗಳನ್ನು ಬಳಸಿಕೊಂಡು, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಹಾಲೂಡಿಸುತ್ತಿರುವ ತಾಯಂದಿರ ಫೋಟೋಗಳನ್ನು ತೆಗೆಸಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದರ ಭಾಗವಾಗಿ ತೆಗೆಯಲ್ಪಟ್ಟ ಕೆಲ ಚೆಂದದ ಚಿತ್ರಗಳು ಇಲ್ಲಿವೆ.