ವರದಿ: ಚಿದಾನಂದ ಮುದ್ದಿ, ಏಷ್ಯಾನೆಟ್ ಸುವರ್ಣನ್ಯೂಸ್
ರಾಜ್ಯದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಅತೀ ದೊಡ್ಡ ಹನಿಬಾಂಬ್ ಸ್ಟೋಟಗೊಂಡಿದೆ. ರಾಜ್ಯ ಇತಿಹಾಸದಲ್ಲೇ ಅತೀ ದೊಡ್ಡ ಹನಿಟ್ರ್ಯಾಪ್ ಆರೋಪ ಕೇಳಿ ಬರ್ತಿದೆ. 48 ನಾಯಕರ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಸಹಕಾರ ಸಚಿವ ಕೆ ಎನ್. ರಾಜಣ್ಣ ಆರೋಪಿಸಿದ್ದಾರೆ. ಕೆಲವೊಂದಿಷ್ಟು ನಾಯಕರನ್ನು ಹನಿಟ್ರ್ಯಾಪ್ ಮಾಡಿ ವಿಡಿಯೋಗಳನ್ನು ಪೆನ್ಡ್ರೈವ್ನಲ್ಲಿ ಇಡಲಾಗಿದೆ ಎಂದು ಆರೋಪಿಸಲಾಗಿದೆ. ಹಾಗೆನೇ ಹನಿಟ್ರ್ಯಾಪ್ ನಡೆಯುತ್ತಿರುವುದು ನಿಜ ಎಂದು ಯತ್ನಾಳ್ ಸಹ ಆರೋಪಿಸಿದ್ದಾರೆ. ಎಲ್ಲ ಪಕ್ಷದ ನಾಯಕರುಗಳ ಮೇಲೂ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹಾಗೆನೇ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಗೃಹಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಹಾಗಿದ್ರೆ ಈ ಹನಿಟ್ರ್ಯಾಪ್ ಎಂದ್ರೆ ಏನು? ಯಾಕಾಗಿ ಹನಿಟ್ರ್ಯಾಪ್ ಮಾಡಲಾಗುತ್ತೆ? ಜಗತ್ತಿಗೆ ಹನಿಟ್ರ್ಯಾಪ್ ಪರಿಚಯವಾಗಿದ್ದು ಯಾವಾಗ ಅನ್ನೋದರ ಜೊತೆಗೆ ಹನಿಟ್ರ್ಯಾಪ್ ಮೂಲಕ ಜಗತ್ತನ್ನೇ ನಡುಗಿಸಿದ ಜಗತ್ ಸುಂದರಿಯರ ಕಥೆ ಇಲ್ಲಿದೆ.
ಮನಮೋಹಿನಿ, ಗೂಢಚಾರಿಣಿ
ಹನಿಟ್ರ್ಯಾಪ್ ಕೇಳೋದಕ್ಕೆ ಎಷ್ಟು ಸ್ವೀಟಾಗಿರುತ್ತೋ ಅಷ್ಟೇ ಅಪಾಯಕಾರಿ. ಹನಿಟ್ರ್ಯಾಪ್ ಎಂಬ ಗುಪ್ತ ಲೋಕದಲ್ಲಿ ಚೆಲುವೆಯರೇ ಆಯುಧ. ಯಾರಿಂದಲೂ ಸಾಧ್ಯವಾಗದ್ದು ಇಲ್ಲಿ ಸಾಧ್ಯವಾಗುತ್ತೆ. ಹನಿಟ್ರ್ಯಾಪ್ ಬಲೆಯಲ್ಲಿ ಬಲಿಷ್ಠ ನಾಯಕರೆಲ್ಲ ಸುಲಭವಾಗಿ ಬಂಧಿಯಾಗ್ತಾರೆ. ಮೋಹಕ ಚಲುವೆಯರನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ನಡೆಸಲಾಗುತ್ತೆ. ಸುಂದರ ಮುಖದ ಚೆಂದುಳ್ಳ ಚೆಲುವೆಯರು ಈ ಹನಿಟ್ರ್ಯಾಪ್ ಎಂಬ ಗುಪ್ತ ಲೋಕವನ್ನು ಆಳುತ್ತಿರುತ್ತಾರೆ. ಈ ಹನಿಟ್ರ್ಯಾಪ್ ಎಂಬ ಮಾಯಾಲೋಕವನ್ನು ಜಗತ್ತಿಗೆ ಮೊದಲು ಪರಿಚಯ ಮಾಡಿದ್ದು ಜರ್ಮನ್ನ ಮಾತಾಹರಿ ಎಂಬ ಸ್ಪುರದ್ರೂಪ ಸುಂದರಿ. ಹಾಗೆನೇ ಹನಿಟ್ರ್ಯಾಪ್ ಪ್ರಕರಣದಲ್ಲಿ ಜಗತ್ತಿನಲ್ಲಿ ಮೊದಲ ಮರಣದಂಢನೆ ಶಿಕ್ಷೆಗೆ ಗುರಿಯಾಗಿದ್ದು ಇದೇ ಸುಂದರಿ ಮಾತಾಹರಿ.
ಜಗತ್ತಿನ ಮೊದಲ ರಹಸ್ಯ ಸುಂದರಿ ಮಾತಾಹರಿ
ಈ ಮಾತಾಹರಿ ಜಗತ್ತನ್ನೇ ನಡುಗಿಸಿದ್ದ ಸುಂದರಿ. ಮೊದಲ ಮಹಾಯುದ್ಧ ಸಂದರ್ಭದಲ್ಲಿ ಮದ್ದು ಗುಂಡುಗಳಿಗಿಂತ ಹೆಚ್ಚು ಸದ್ದು ಮಾಡಿದ್ದಳು, ಕೈಯಲ್ಲಿ ಆಯುಧ ಹಿಡೆಯದೇ ಬಲಿಷ್ಠ ನಾಲ್ಕು ದೇಶಗಳೊಂದಿಗೆ ಯುದ್ಧ ಆಡಿದ್ದ ಗಟ್ಟಿಗತ್ತಿ ಇವಳು. ಹಾಗೆನೇ ಮೊದಲ ಮಹಾಯುದ್ಧದಲ್ಲಿ ಯುದ್ಧ ಭೂಮಿಗೆ ಇಳಿಯದೇ 50 ಸಾವಿರ ಸೈನಿಕರು, ಅಧಿಕಾರಿಗಳನ್ನು ಸಾಯಿಸಿದ್ದ ಸುಂದರಿ ಇವಳು.
ಫೆಬ್ರವರಿ 13, 1917 ರಹಸ್ಯ ಸುಂದರಿಯ ಬಂಧನ
ಹೌದು 1917ರ ಫೆಬ್ರವರಿ 13ರಂದು ಮಾತಾಹರಿಯ ಬಂಧನವಾಗುತ್ತೆ. ಸ್ಕಾಟ್ಲ್ಯಾಂಡ್ ಪೊಲೀಸರು ಗೂಢಚಾರಿಣಿ ಆರೋಪದಲ್ಲಿ ಮಾತಾಹರಿಯನ್ನು ಬಂಧಿಸುತ್ತಾರೆ. ಬಂಧನಕ್ಕೊಳಗಾದಾಗ ಮಾತಾಹರಿ ಫ್ಯಾರೆಸ್ನ ಪ್ರತಿಷ್ಠಿತ ಹೋಟೆಲ್ವೊಂದರಲ್ಲಿದ್ದಳು. ಇವಳನ್ನು ಬಂಧಿಸಿ ವಿಚಾರಣೆಗೆ ನಿಂತ ಸ್ಕಾಟ್ಲ್ಯಾಂಡ್ ಪೊಲೀಸರಿಗೆ ನಡುಕ ಶುರುವಾಗಿತ್ತು. ನಿಂತಲ್ಲೇ ಬೆವರೋದಕ್ಕೆ ಶುರು ಮಾಡಿದ್ರು. ಯಾಕೆಂದ್ರೆ ಅಷ್ಟು ಭಯಾನಕವಾಗಿತ್ತು ಈ ರಹಸ್ಯ ಸುಂದರಿಯ ರೋಚಕ ಕಹಾನಿ.
ನಾಲ್ಕು ದೇಶಗಳನ್ನು ನಡುಗಿಸಿದ್ದ ರಹಸ್ಯ ಸುಂದರಿ
ಈ ಮಹಾತಾಹರಿ ರಹಸ್ಯ ಸುಂದರಿ ತನ್ನ ಗೂಢಚಾರ್ಯದ ಮೂಲಕ ಮೊದಲ ಮಹಾಯುದ್ಧದಲ್ಲಿ ನಾಲ್ಕು ದೇಶಗಳನ್ನು ನಡುಗಿಸಿದ್ದಳು. ನಾಲ್ಕು ದೇಶಗಳ ಭಯಾನಕ ರಹಸ್ಯಗಳನ್ನು ಹೆಕ್ಕಿ ತೆಗೆದಿದ್ದಳು. ಮಾತಾಹರಿ ಮೊದಲು ಜರ್ಮನ್ ಗೂಢಚಾರಿಣಿಯಾಗಿ ಕೆಲಸ ಆರಂಭಿಸುತ್ತಾಳೆ. ಆದ್ರೆ ಕೊನೆಯಲ್ಲಿ ಜರ್ಮನ್ಗೂ ಗೊತ್ತಿಲ್ಲದೇ ರಷ್ಯಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ಪರವಾಗಿಯೂ ಗೂಢಚಾರ್ಯ ನಡೆಸಿದ್ದಳು. ತನ್ನ ಮೋಹಕ ಮೈಮಾಟದಿಂದ ದೊಡ್ಡ ದೊಡ್ಡ ಅಧಿಕಾರಿಗಳನ್ನು ಬರಸೆಳೆಯುತ್ತಿದ್ದಳು. ಅವರೊಂದಿಗೆ ಆತ್ಮೀಯವಾಗಿ ಹೊಂದಿಕೊಳ್ಳುತ್ತಿದ್ದಳು. ಅವರೊಂದಿಗೆ ರಹಸ್ಯ ಸಮಯಗಳನ್ನು ಕಳೆಯುತ್ತಿದ್ದಳು. ಅದೇ ಸಂದರ್ಭದಲ್ಲಿ ಅಧಿಕಾರಿಗಳ ಬಳಿ ಇದ್ದ ದೇಶದ ಬಹಳ ಪ್ರಮುಖ ರಹಸ್ಯಗಳನ್ನು ಹೆಕ್ಕುತ್ತಿದ್ದಳು.
ಇದೇ ರೀತಿಯಾಗಿ ಈ ಮಾತಾಹರಿ ರಷ್ಯಾ ರಹಸ್ಯಗಳನ್ನು ಕದ್ದು ಜರ್ಮನ್ಗೆ, ಜರ್ಮನ್ ರಹಸ್ಯಗಳನ್ನು ಕದ್ದು ರಷ್ಯಾಗೆ ಕೊಡ್ತಿದ್ಲು. ಹಾಗೆನೇ ಫ್ರಾನ್ಸ್ ಮತ್ತು ಇಂಗ್ಲೆಂಡ್ಗೆ ಬೇಕಾದ ಮಾಹಿತಿಯನ್ನೂ ಇವಳು ಕೊಡುತ್ತಿದ್ದಳು. 1917ರ ಫೆಬ್ರವರಿಯಲ್ಲಿ ಇವಳನ್ನು ಅರೆಸ್ಟ್ ಮಾಡಿದ ಮೇಲೆ ಸತತ ಐದು ತಿಂಗಳು ಸ್ಕಾಟ್ಲೆಂಡ್ ಪೊಲೀಸರು ಇವಳನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ವಿಚಾರಣೆ ಮಾಡ್ತಾರೆ. ಆ ಸಂದರ್ಭದಲ್ಲಿ ಪ್ರಮುಖವಾದ ರಹಸ್ಯಗಳು ಇವಳಿಂದ ಸಿಗುತ್ತವೆ. ಇವಳು ಜರ್ಮನ್ ಸ್ಪೈ ಮಾತ್ರವಲ್ಲದೇ ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ದೇಶಗಳ ಪರವಾಗಿಯೂ ಸ್ಪೈ ಕೆಲಸ ಮಾಡಿದ್ದಾಳೆ ಅನ್ನೋದು ಕಂಡು ಅಚ್ಚರಿಗೊಳ್ತಾರೆ. ಇದರ ಪರಿಣಾಮ ಅಲ್ಲಿನ ಕಾನೂನು ಈ ಸುಂದರಿಗೆ ಮರಣದಂಡನೆ ಶಿಕ್ಷೆ ನೀಡುತ್ತೆ. 1917ರ ಆಕ್ಟೋಬರ್ 15ರಂದು ಈ ಸುಂದರಿ ಬದುಕು ಅಂತ್ಯವಾಗುತ್ತೆ. ಕೋರ್ಟ್ ಆಜ್ಞೆಯಂತೆ ಗುಂಡಿಟ್ಟು ಕೊಲ್ಲಲಾಗುತ್ತೆ.
ಗೂಢಚಾರಿ ಆಗಿದ್ದೇ ರೋಚಕ ಕತೆ
ಈ ಮತಾಹರಿ ಚೂಢಚಾರಿಣಿಯಾಗಿದ್ದೇ ರೋಚಕ ಕಥೆ ಇದೆ. ಮೂಲತಃ ಇವಳ ಹೆಸರು ಮಾತಾಹರಿಯಲ್ಲ. ಇವಳ ಮೂಲ ಹೆಸರು ಮಾರ್ಗರೇಟ್ ಝೆಲ್ಲೆ . ಇವಳು ಡಚ್ ಮೂಲದ ಆಡಮ್ ಝೆಲ್ಲೆ ದಂಪತಿಗೆ 1876 ಆಗಸ್ಟ್ 7ರಂದು ಜನಿಸುತ್ತಾಳೆ. ಇವಳ ತಂದೆ ಟೋಪಿ ವ್ಯಾಪಾರಿಯಾಗಿರ್ತಾನೆ. ಇವಳ ಬಾಲ್ಯ ತುಂಬಾ ಕಷ್ಟದಿಂದ ಕೂಡಿರುತ್ತೆ. ಯಾಕೆಂದ್ರೆ ಇವಳು ಚಿಕ್ಕವಳಿದ್ದಾಗಲೇ ತಂದೆ ತಾಯಿಯ ವಿಚ್ಛೇದನವಾಗುತ್ತೆ. ಬೇಗ ತಾಯಿಯನ್ನು ಕಳೆದುಕೊಳ್ತಾಳೆ. ತಂದೆ ಎರಡನೇ ಮದುವೆಯಾಗ್ತಾನೆ. ಆಗ ಇವಳು ಅನಾಥೆಯಾಗ್ತಾಳೆ. ಒಂದಿಷ್ಟು ಕಾಲ ಅವರಿವರ ಸಂಬಂಧಿಗಳ ಮನೆಯಲ್ಲಿ, ನಂತರ ಒಂದಿಷ್ಟು ಕಾಲ ವಸತಿ ಶಾಲೆಯಲ್ಲಿ ವಿಧ್ಯಾಭ್ಯಾಸ ಜೀವನ ಎರಡೂ ಸಾಗುತ್ತೆ. ಅದರ ನಂತರ ರುಡಾಲ್ಫ್ ಮ್ಯಾಕ್ಲಿಯೋಡ್ ಎಂಬ ಡಚ್ ಸೈನ್ಯಾಧಿಕಾರಿ ತಮಗೆ ಹೆಣ್ಣು ಬೇಕೆಂದು ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟಿರ್ತಾನೆ. ಮಾರ್ಗರೆಟ್ ಜಾಹಿರಾತು ಪೇಪರ್ ಹಿಡಿದು ಆ ಅಧಿಕಾರಿಯ ಬಳಿ ಹೋಗ್ತಾಳೆ. ಇವಳ ಸೌಂದರ್ಯಕ್ಕೆ ಮನಸ್ಸೋತ ಆ ಅಧಿಕಾರಿ ಒಪ್ಪಿ ಮದುವೆಯಾಗ್ತಾನೆ.
ಮದುವೆ ನಂತರ ಇನ್ನೇನು ಕಷ್ಟ ಮುಗೀತು ಎಂದುಕೊಳ್ತಾರೆ ಮಾರ್ಗರೆಟ್. ಆದ್ರೆ ಅವಳ ಬದುಕಿನ ಅಗ್ನಿ ಪರೀಕ್ಷೆ ಶುರುವಾಗೋದೇ ಅಲ್ಲಿಂದ. ಇವಳನ್ನು ಮದುವೆಯಾದ ಡಚ್ ಅಧಿಕಾರಿ ದೊಡ್ಡ ಕುಡು, ಹೆಣ್ಣು ಪೀಡಕ, ಸೈಕೋ ಕ್ಯಾರೆಕ್ಟರ್ ಆಗಿರ್ತಾನೆ. ಇವಳಿಗೆ ಪ್ರತಿ ನಿತ್ಯ ಕೊಡಬಾರದ ಕಾಟ ಕೊಡ್ತಾನೆ, ದೈಹಿಕ, ಮಾನಸಿಕವಾಗಿ ನೋವು ಕೊಡ್ತಾನೆ. ಅದೆಲ್ಲವನ್ನು ಅನುಭವಿಸಿಕೊಂಡೇ ಇವನೊಟ್ಟಿಗೆ ಎರಡು ಮಕ್ಕಳನ್ನು ಹೆರುತ್ತಾಳೆ. ಆದರೂ ಈತನ ಕಾಟ ನಿಲ್ಲೋದಿಲ್ಲ. ಇವಳ ಮುಂದೆನೇ ಬೇರೆ ಹೆಂಗಸರೊಂದಿಗೆ ಸಂಬಂಧ ಶುರು ಮಾಡ್ತಾನೆ. ಆಗ ಇವನ ಜೊತೆ ಜೀವನ ಸಾಕೆಂದು ಅವನಿಂದ ವಿಚ್ಛೇದನ ಪಡೆದು ಹೊರಡ್ತಾಳೆ. ಅಲ್ಲಿಂದ ಹೊರಟಾಗಲೇ ನೋಡಿ ಅವಳ ಬದುಕಿನ ದಿಕ್ಕೇ ಬದಲಾಗುತ್ತೆ.
ಮತ್ತೆ ಶುರುವಾಗಿತ್ತು ಹೋರಾಟದ ಬದುಕು
ಗಂಡನಿಂದ ದೂರವಾದ ಮೇಲೆ ಇದ್ದ ಇಬ್ಬರು ಮಕ್ಕಳಲ್ಲಿ ಹಿರಿ ಮಗ ಐದು ವರ್ಷದವನಿದ್ದಾಗಲೇ ಕಾಯಿಲೆಗೆ ತುತ್ತಾಗುತ್ತೆ. ಇದ್ದೊಬ್ಬ ಮಗನನ್ನು ಕಂಕಳಲ್ಲಿಟ್ಟುಕೊಂಡು ಬದುಕಿನ ಹೋರಾಟಕ್ಕೆ ನಿಲ್ತಾಳೆ. ನೃತ್ಯ ಶಾಲೆಗೆ ಸೇರಿ ಭಾರತೀಯ ಶೈಲಿ ಸೇರಿದ ಹಾಗೆ ಅನೇಕ ದೇಶಗಳ ನೃತ್ಯಶೈಲಿ ಕಲಿಯುತ್ತಾಳೆ. ನೃತ್ಯ ಕಲಿಯೋ ಸಂದರ್ಭದಲ್ಲಿ ಸರ್ಕಸ್ ಕಂಪನಿಯೊಂದರಲ್ಲಿ ಕುದುರೆ ಸವಾರಿ ಕೆಲಸ ಮಾಡ್ತಿರ್ತಾಳೆ. ನಂತರ ಡ್ಯಾನ್ಸ್ ಬಾರಲ್ಲಿ ನೃತ್ಯ ಶುರು ಮಾಡ್ತಾಳೆ. ಆಗಿನ ಕಾಲದಲ್ಲಿ ನೃತ್ಯ ಮಾಡುತ್ತಲೇ ತನ್ನ ಮೈ ಮೇಲಿನ ಬಟ್ಟೆ ಕಳಚೋ ಅಭ್ಯಾಸ ಮಾಡ್ತಾಳೆ. ಅಂದ್ರೆ ತುಂಡುಗೆಯಲ್ಲಿ ಸೊಂಟಬಳುಕಿಸಿ ನರೆದಿದ್ದವರನ್ನು ಮತ್ತೇರಿಸುತ್ತಾಳೆ. ಹೀಗಾಗಿ ಈವಳ ನೃತ್ಯ ಕಾರ್ಯಕ್ರಮಕ್ಕೆ ಇನ್ನಿಲ್ಲದ ಬೇಡಿಕೆ ಬರುತ್ತೆ. ಈ ಸಂದರ್ಭದಲ್ಲೇ ನೋಡಿ ಆ ಒಬ್ಬ ಅಧಿಕಾರಿಯ ಕಣ್ಣು ಇವಳ ಮೇಲೆ ಬೀಳುತ್ತೆ.
ವೆಪನ್ ಹಿಡಿಯದೇ ಯುದ್ಧ ಮಾಡಿದ್ದ ಸುಂದರಿ
ಅದು ಮೊದಲ ಮಹಾಯುದ್ಧದ ಸಮಯ. ಜರ್ಮನಿ ಮತ್ತು ಫ್ರಾನ್ಸ್ ನಡುವೆ ದೊಡ್ಡ ಯುದ್ಧವೇ ನಡೆದಿರುತ್ತೆ. ಫ್ರಾನ್ಸ್ ದೇಶವನ್ನು ಹೇಗಾದ್ರು ಮಾಡಿ ಸೋಲಿಸುವ ಪ್ರಯತ್ನದಲ್ಲಿ ಜರ್ಮನ್ ದೇಶವಿರುತ್ತೆ. ಆ ಸಂದರ್ಭದಲ್ಲಿ ಜರ್ಮನ್ ಅಧಿಕಾರಿಯೊಬ್ಬನ ಕಣ್ಣಿಗೆ ಮಾರ್ಗರೇಟ್ ಬೀಳ್ತಾಳೆ. ಅವಳ ಸೌಂದರ್ಯ ಮತ್ತು ಬುದ್ದಿವಂತಿಕೆಗೆ ಶಹಬ್ಬಾಸ್‌ಗಿರಿ ಕೊಟ್ಟ ಅಧಿಕಾರಿ, ವೆಪನ್ ಇಲ್ಲದೇ ಫ್ರಾನ್ಸ್ ವಿರುದ್ಧ ಯುದ್ಧಕ್ಕೆ ಇವಳನ್ನು ಜರ್ಮನಿ ಸಿದ್ಧಗೊಳಿಸುತ್ತೆ. ಆಗ ಮಾರ್ಗರೆಟ್ ಮಾತಾಹರಿಯಾಗಿ ಬದಲಾಗ್ತಾಳೆ.
ಮಾತಾಹರಿ ಬುದ್ದಿವಂತಿಕೆಯಿಂದ ಫ್ರಾನ್ಸ್ ಅಧಿಕಾರಿಗಳನ್ನು ಈಕೆಯ ಮೋಹದ ಬಲೆಗೆ ಮೀನಿಂನಂತೆ ಬೀಳ್ತಾರೆ. ಯುದ್ಧ ರಹಸ್ಯಗಳನ್ನು ಸೇರಿದಂತೆ ಹಲವು ಗುಪ್ತ ಮಾಹಿತಿ ಹೆಕ್ಕಿ ತಂದು ಜರ್ಮನ್ಗೆ ಕೊಡ್ತಾಳೆ. ಈ ರಹಸ್ಯ ಆಟ ಮಜಾ ಮತ್ತು ಮನರಂಜನೆ ಕೊಡುತ್ತೆ. ಆಗ ತನ್ನದೇ ಚಕ್ರವ್ಯೂಹ ಸೃಷ್ಟಿಮಾಡಿಕೊಂಡು ಭಯಾನಕ ಆಟವನ್ನಾಡೋದಕ್ಕೆ ಆರಂಭಿಸುತ್ತಾಳೆ. ಅವಳ ಆಟದಿಂದ 4ದೇಶಗಳ ಯುದ್ಧದ ದಿಕ್ಕನೇ ಬದಲಿಸುತ್ತಾಳೆಂದು ಇತಿಹಾಸ ಹೇಳುತ್ತೆ. ಕೊನೆಗೆ ತನ್ನ 41ನೇ ವಯಸ್ಸಿನಲ್ಲಿ ತಾನೇ ಹೆಣೆದಿದ್ದ ರಹಸ್ಯ ಚಕ್ರವ್ಯೂಹದಲ್ಲಿ ಬದುಕನ್ನು ಕೊನೆಯಾಗಿಸಿಕೊಳ್ತಾಳೆ.
1960ರಲ್ಲಿ ಜಗತ್ತನ್ನೇ ನಡುಗಿಸಿದ್ದ ರಷ್ಯಾ ಸ್ಪೈ
1960ರಲ್ಲಿ ರಷ್ಯಾದ ಗೂಢಚಾರಿಣಿಯೊಬ್ಬಳು ಜಗತ್ತನ್ನೇ ನಡುಗಿಸಿದ್ದಳು. ಅವಳ ಹೆಸರು ಯೆವ್ಗಿನಿ ಇವನೊವ್ ಎಂದು. ರಷ್ಯಾದ ಗೂಢಚಾರಿಣಿಯಾದ ಮೇಲೆ ಯೆವ್ಗಿನಿ ಇವನೊವ್ ಕ್ರಿಸ್ಟೇನ್ ಕೀಲರ್ ಎಂದು ಹೆಸರು ಬದಲಿಸಿಕೊಳ್ಳುತ್ತಾಳೆ. ರಷ್ಯಾ ಇವಳನ್ನು 1960ರ ಸಂದರ್ಭದಲ್ಲಿ ಇಂಗ್ಲೆಂಡ್ಗೆ ಸ್ಪೈಯಾಗಿ ಕಳುಹಿಸುತ್ತೆ. ಇಂಗ್ಲೆಂಡ್ನ ಸೇನಾ ರಹಸ್ಯಗಳನ್ನು, ಪರಮಾಣು ಮತ್ತು ಶಸ್ತ್ರಾಸ್ತ್ರಗಳ ಶಕ್ತಿ ಕುರಿತು ರಷ್ಯಾಗೆ ಮಾಹಿತಿ ನೀಡುವ ಜವಾಬ್ದಾರಿಯನ್ನು ಅವಳಿಗೆ ಕೊಡಲಾಗಿರುತ್ತೆ. ಆಗ 19 ವರ್ಷದ ಸುಂದರ ಚೆಲುವೆಯಾಗಿದ್ದ ಕ್ರಿಸ್ಟೇನ್ ಇಂಗ್ಲೆಂಡ್ಗೆ ತೆರಳಿದ ಮೇಲೆ ತಾನೊಬ್ಬ ಮಾಡೆಲ್ ಆಗಿ ಪರಿಚಯ ಮಾಡಿಕೊಳ್ತಾಳೆ. ತಾನು ಹೋಗಿದ್ದ ಜವಾಬ್ದಾರಿ ನಿಭಾಯಿಸಲು ಇಂಗ್ಲೆಂಡ್ನ ಎಂಪಿಯೊಬ್ಬರನ್ನೇ ಮದುವೆಯಾಗುತ್ತಾಳೆ. ಅದರ ನಂತರ ಇವಳು ರಷ್ಯಾ ದೇಶಕ್ಕೆ ಇಂಗ್ಲೆಂಡ್ನ ಹಲವು ರಹಸ್ಯಗಳನ್ನು ರಷ್ಯಾಗೆ ಕಳುಹಿಸಿದ್ದಳು.
ಹಾಗೆನೇ 1961ರಲ್ಲಿ ಇಂಗ್ಲೆಂಡ್ನಲ್ಲಿ ಬೆಳಕಿಗೆ ಬಂದ ಒಂದು ಲೈಂಗಿಕ ಹಗರಣ ಇಂಗ್ಲೆಂಡ್ ಸರ್ಕಾರವನ್ನೇ ಅಲ್ಲಾಡಿಸಿತ್ತು. ಈ ಮಾದಕ ಸುಂದರಿ ಕ್ರಿಸ್ಟೇನ್ ಬ್ರಿಟಿಷ್ ಸೇನಾ ಕಾರ್ಯದರ್ಶಿ ಜಾನ್ ಪ್ರೊಫುಮ್ ಮತ್ತು ಸೋವಿಯತ್ನ ಅಧಿಕಾರಿಯೊಬ್ಬನೊಂದಿಗೆ ಒಟ್ಟಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಬೆಳಕಿಗೆ ಬರುತ್ತೆ. ಆ ಸಮಯದಲ್ಲಿ ಪ್ರೊಫುಮ್ ಹಗರಣ ದೊಡ್ಡ ಮಟ್ಟದ ಸದ್ದು ಮಾಡುತ್ತೆ. ಇಂಗ್ಲೆಂಡ್ ಸರ್ಕಾರವನ್ನು ಅಲ್ಲಾಡಿಸುತ್ತೆ. ಆಗ ಇವಳು ರಷ್ಯಾ ಸ್ಪೈ ಅನ್ನೋದು ಗೊತ್ತಾಗುತ್ತೆ. ಈ ಸುದ್ದಿ ಇಂಗ್ಲೆಂಡ್ನಲ್ಲಿ ಹರಡುವ ಮುನ್ನವೇ ಅಂದಿನ ಸೋವಿಯತ್ ಒಕ್ಕೂಟ ಅವಳನ್ನು ರಕ್ಷಣೆ ಮಾಡಿ ರಷ್ಯಾಗೆ ಕರೆದು ತರುತ್ತೆ. ಅದರ ನಂತರ ಅವಳ ಇಡೀ ಬದುಕಿನಲ್ಲಿ ಕಾರ್ಮೋಡ ಕವಿದಿರುತ್ತೆ. 1961 ರಿಂದ ಕಷ್ಟದ ಬದುಕಿನಲ್ಲೇ ನರಳಿ ನರಳಿ ಜೀವಿಸುತ್ತಾಳೆ. 2017ರಲ್ಲಿ ತನ್ನ 75 ವಯಸ್ಸಿನಲ್ಲಿ ಈ ರಷ್ಯಾ ಸುಂದರಿ ಸಾವನ್ನಪ್ಪುತ್ತಾಳೆ. ಅವರ ಸತ್ತ ಮೇಲೂ ಪ್ರೊಫುಲ್ ಹಗರಣ ಮಾತ್ರ ಇಂಗ್ಲೆಂಡ್ನಲ್ಲಿ ಈಗಲೂ ಆಗಾಗ ಸುದ್ದಿಗೆ ಬರ್ತಾನೇ ಇರುತ್ತೆ.