ಮಕ್ಕಳನ್ನು ಹೆತ್ತ ತಾಯಂದಿರ ಜೀವನಶೈಲಿ ಸಂಪೂರ್ಣವಾಗಿ ಬದಲಾಗುತ್ತದೆ. ಹಿಂದಿನ ಕಾಲದಲ್ಲಿ ದೊಡ್ಡವರು ಅಂತಹ ಆಹಾರ ಪದ್ಧತಿಗಳನ್ನು ಮಾಡುತ್ತಿದ್ದರು. ಮಕ್ಕಳಿಗೆ ಬೇಕಾದಷ್ಟು ಹಾಲುಣಿಸಲು ಅವರು ತಿನ್ನುವ ಆಹಾರದಲ್ಲಿ ಹೆಚ್ಚು ಪೋಷಕಾಂಶಗಳಿರುವಂತೆ ನೋಡಿಕೊಳ್ಳುತ್ತಿದ್ದರು. ಏಕೆಂದರೆ ಮಕ್ಕಳಿಗೆ ಒಂದು ವಯಸ್ಸಿನವರೆಗೆ ಹಾಲು ಮಾತ್ರ ಕೊಡಬೇಕು. ಹಾಗಾಗಿ ತಾಯಿಯ ಹಾಲು ಹೆಚ್ಚಾಗಿ ಉತ್ಪತ್ತಿಯಾಗುವ ಆಹಾರಗಳನ್ನು ಹೆಚ್ಚಾಗಿ ನೀಡುತ್ತಿದ್ದರು. ಆದರೆ ಈಗಿನ ಬಿಜಿ ಲೈಫ್‌ನಲ್ಲಿ ಬಹಳಷ್ಟು ಜನರಿಗೆ ಯಾವ ಆಹಾರ ತಿಂದರೆ ತಾಯಿಗೆ ಹಾಲು ಹೆಚ್ಚು ಉತ್ಪತ್ತಿಯಾಗುತ್ತದೆ ಎಂದು ತಿಳಿದಿಲ್ಲ. ತಾಯಂದಿರು ಯಾವ ಆಹಾರ.. ಮುಖ್ಯವಾಗಿ ಯಾವ ಹಣ್ಣುಗಳನ್ನು ತೆಗೆದುಕೊಳ್ಳಬೇಕೆಂದು ಈಗ ನೋಡೋಣ.
ನಮ್ಮ ಸುತ್ತಮುತ್ತಲೇ ಎಷ್ಟೋ ರೀತಿಯ ಪೌಷ್ಟಿಕ ಆಹಾರವಿರುತ್ತದೆ. ಆದರೆ ಅದರ ಬೆಲೆ ತಿಳಿಯದೆ ಬಹಳಷ್ಟು ಜನರು ತಿನ್ನುವುದಿಲ್ಲ. ಮುಖ್ಯವಾಗಿ ಗರ್ಭಿಣಿಯರು, ಬಾಣಂತಿಯರು ಯಾವ ಆಹಾರ ತೆಗೆದುಕೊಳ್ಳಬೇಕೆಂದು ಈ ಕಾಲದ ಯುವತಿಯರಿಗೆ ಹೆಚ್ಚಾಗಿ ತಿಳಿದಿಲ್ಲ. ಕೇವಲ ಕೆಲವು ರೀತಿಯ ಹಣ್ಣುಗಳನ್ನು ತಿಂದರೆ ಮಕ್ಕಳಿಗೆ ಬೇಕಾಗುವ ಪೋಷಕಾಂಶಗಳು ತಾಯಿಯ ಹಾಲಿನಲ್ಲಿಯೇ ಉತ್ಪತ್ತಿಯಾಗುತ್ತವೆ.
ಕೆಲವು ಹಣ್ಣುಗಳು ಹಾಲುಣಿಸುವ ತಾಯಂದಿರಿಗೆ ಬೇಕಾಗುವ ಶಕ್ತಿಯನ್ನು ಕೂಡ ಕೊಡುತ್ತವೆ. ಆದ್ದರಿಂದ ಪೋಷಕಾಂಶಗಳು ಕಡಿಮೆಯಿರುವ ತಾಯಂದಿರು, ಒಳ್ಳೆಯ ಆರೋಗ್ಯಕರವಾದ ಹಾಲು ಉತ್ಪಾದನೆ ಮಾಡಲು ಇಲ್ಲಿ ಹೇಳಿರುವ ಹಣ್ಣುಗಳನ್ನು ಖಂಡಿತ ತಿನ್ನಬೇಕು.
ಸಪೋಟ ತಾಯಿ ಹಾಲು ಕೊಡುವಾಗ ಕೆಲವರಿಗೆ ವಾಂತಿ, ತಲೆ ತಿರುಗುವುದು, ವಾಕರಿಕೆ ಬರುತ್ತದೆ. ಇವುಗಳನ್ನು ಎದುರಿಸಲು ದೇಹಕ್ಕೆ ಹೆಚ್ಚು ಶಕ್ತಿ ಅವಶ್ಯಕತೆ ಇರುತ್ತದೆ. ಸಪೋಟ ತಿಂದರೆ ಬೇಕಾಗುವ ಶಕ್ತಿ ಸಿಗುತ್ತದೆ.
ಸ್ಟ್ರಾಬೆರಿ ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಜಾಸ್ತಿ ಇರುತ್ತದೆ. ಅದಕ್ಕೆ ವೈದ್ಯರು ಈ ಹಣ್ಣು ತಿನ್ನಲು ಹೇಳುತ್ತಾರೆ. ಇದರಲ್ಲಿ ನೀರಿನ ಅಂಶ ಕೂಡ ಹೆಚ್ಚಾಗಿರುವುದರಿಂದ ದೇಹವನ್ನು ಹೈಡ್ರೇಟೆಡ್ ಆಗಿ ಇಡುತ್ತದೆ. ಇದರಿಂದ ತಾಯಿಯ ಹಾಲು ಕೂಡ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ.
ಬ್ಲೂಬೆರ್ರಿ ಬ್ಲೂಬೆರ್ರಿಯಲ್ಲಿ ಸಿಟ್ರಸ್ ಆಸಿಡ್, ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಾಗಿರುತ್ತವೆ. ಆದ್ದರಿಂದ ತಾಯಿಯ ಹಾಲಿನಲ್ಲಿ ಹೆಚ್ಚಾಗಿರುವ ಆಂಟಿ ಆಕ್ಸಿಡೆಂಟ್‌ಗಳು ತಾಯಿಯ ಹಾಲಿನ ಮೂಲಕ ಮಗುವಿಗೆ ತಲುಪುತ್ತವೆ.
ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಹೆಚ್ಚಾಗಿರುವುದರಿಂದ ಇದು ಹಾಲುಣಿಸುವ ತಾಯಂದಿರಿಗೆ ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಇದು ದೇಹದಲ್ಲಿ ಲಿಕ್ವಿಡ್ ಬ್ಯಾಲೆನ್ಸಿಂಗ್ ಮಾಡಲು ಸಹಾಯ ಮಾಡುತ್ತದೆ.
ಹಸಿ ಪಪ್ಪಾಯಿ ತಾಯಿಯ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಈ ಹಣ್ಣು ಚೆನ್ನಾಗಿ ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ ಈ ಹಣ್ಣಿನಲ್ಲಿರುವ ವಿಟಮಿನ್ ಎ, ಬಿ, ಸಿ, ಇ ಹಾಲುಣಿಸುವ ತಾಯಂದಿರಿಗೆ ತುಂಬಾ ಒಳ್ಳೆಯದು.
ಅವಕಾಡೊ ತಾಯಂದಿರ ದೇಹದಲ್ಲಿ ಸಾಕಷ್ಟು ಪೋಷಕಾಂಶಗಳಿದ್ದರೆ ಮಾತ್ರ ಅವರು ಮಕ್ಕಳಿಗೆ ಹಾಲು ಕೊಡಬಲ್ಲರು. ಆದ್ದರಿಂದ ಪೋಷಕಾಂಶಗಳು ತುಂಬಿರುವ ತಾಯಿಯ ಹಾಲು ಕೊಡಬೇಕೆಂದರೆ ಅವಕಾಡೊ ತಿನ್ನಿ. ಏಕೆಂದರೆ ಈ ಹಣ್ಣಿನಲ್ಲಿ ಒಮೆಗಾ-3, ಒಮೆಗಾ-9 ಅಗತ್ಯವಾದ ಅಮೈನೋ ಆಮ್ಲಗಳು ಮುಂತಾದ ಪೋಷಕಾಂಶಗಳಿವೆ. ಇದು ಮಗುವಿಗೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತದೆ.