ಮುಟ್ಟಿನ ಸಮಯದಲ್ಲಿ ಯುವತಿಯ ಕಣ್ಣಿನಿಂದ ಹರಿದ ರಕ್ತ..!

First Published Mar 18, 2021, 2:27 PM IST

25ರ ಯುವತಿಗೆ ಮುಟ್ಟಿನ ಸಮಯದಲ್ಲಾಯ್ತು ಅಚ್ಚರಿ | ಕಣ್ಣಿನಿಂದ ರಕ್ತದ ಹರಿವು..!

ಮಹಿಳೆಯೊಬ್ಬರು ರಕ್ತ ಕಣ್ಣೀರಿನ ಅನುಭವದ ಬಗ್ಗೆ ಹೇಳಿದಾಗ ವೈದ್ಯರು ಆಶ್ಚರ್ಯಚಕಿತರಾದರು.
undefined
ರಕ್ತದ ಕಣ್ಣೀರು ಸುರಿಸುವುದನ್ನು ಅನುಭವಿಸಿದ ನಂತರ 25 ವರ್ಷದ ಮಹಿಳೆಯನ್ನು ಚಂಡೀಗಡದ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಭೇಟಿ ನೀಡಿದ್ದಾರೆ.
undefined
ರಕ್ತದ ಕಣ್ಣೀರಿನಿಂದ ಮಹಿಳೆ ಯಾವುದೇ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸುತ್ತಿರಲಿಲ್ಲ.
undefined
ಅವರು ವೈದ್ಯರನ್ನು ಸಮಾಲೋಚಿಸುವ ಒಂದು ತಿಂಗಳ ಮೊದಲು ಅದೇ ಅನುಭವವನ್ನು ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.
undefined
ಅವರು ವಿಭಿನ್ನ ನೇತ್ರ ಮತ್ತು ವಿಕಿರಣಶಾಸ್ತ್ರದ ಪರೀಕ್ಷೆಗಳಿಗೆ ಒಳಗಾದರು. ಹೀಗಿದ್ದರೂ ಆಕೆಯ ಎಲ್ಲಾ ವರದಿಗಳು ಸಾಮಾನ್ಯವಾಗಿದ್ದವು.
undefined
ವೈದ್ಯರಿಗೆ ಅವಳ ರಕ್ತಸ್ರಾವದ ಕಾರಣ ಕಂಡುಹಿಡಿಯಲಾಗಲಿಲ್ಲ. ಆಕೆಗೆ ಆಕ್ಯುಲರ್ ರಕ್ತಸ್ರಾವ ಸ್ಥಿತಿಯ ಇತಿಹಾಸ ಅಥವಾ ಅವಳ ಕಣ್ಣುಗಳಲ್ಲಿನ ಯಾವುದೇ ಸಮಸ್ಯೆಗಳಿರಲಿಲ್ಲ.
undefined
ಪ್ರಕರಣವನ್ನು ಹೆಚ್ಚು ವಿವರವಾಗಿ ತನಿಖೆ ಮಾಡಿದ ನಂತರ, ಮಹಿಳೆ ರಕ್ತದ ಕಣ್ಣೀರು ಸುರಿಸಿದ ಎರಡೂ ಬಾರಿ ಆಕೆ ತನ್ನ ಮುಟ್ಟಿನ ದಿನಗಳಲ್ಲಿದ್ದಳು ಎಂದು ವೈದ್ಯರು ಅರಿತುಕೊಂಡರು.
undefined
ಆಕೆಗೆ ಅಂತಿಮವಾಗಿ ಆಕ್ಯುಲರ್ ವಿಕಾರಿಯಸ್ ಮುಟ್ಟಿನ ರೋಗ ಇದೆ ಎಂದು ಹೇಳಲಾಯಿತು.
undefined
ಅಪರೂಪದ ಸ್ಥಿತಿಯನ್ನು ಹೊರಗಿನ ಅಂಗಗಳಿಂದ ಮುಟ್ಟಿನ ಸಮಯದಲ್ಲಿ ಸಂಭವಿಸುವ ಋತುಚಕ್ರದ ರಕ್ತಸ್ರಾವ ಎಂದು ವಿವರಿಸಲಾಗಿದೆ.
undefined
ರಕ್ತಸ್ರಾವಕ್ಕೆ ಸಾಮಾನ್ಯ ಸ್ಥಳವೆಂದರೆ ಮೂಗು. ಆದಾದರೂ ತುಟಿಗಳು, ಕಣ್ಣುಗಳು, ಶ್ವಾಸಕೋಶ ಮತ್ತು ಹೊಟ್ಟೆಯಿಂದಲೂ ರಕ್ತಸ್ರಾವವಾಗಬಹುದು.
undefined
ಇದು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಕ್ಯಾಪಿಲ್ಲರಿಗಳ ಪ್ರವೇಶಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಹೈಪರ್‌ಇಮಿಯಾದಿಂದ ದ್ವಿತೀಯಕ ರಕ್ತಸ್ರಾವವಾಗುತ್ತದೆ ಎಂದು ಅಧ್ಯಯನದ ಹೇಳುತ್ತದೆ.
undefined
ರಕ್ತ ಕಣ್ಣೀರು ಹಿಮೋಕ್ಲೇರಿಯಾ ಎಂದೂ ಕರೆಯಲ್ಪಡುತ್ತದೆ. ಇದು ಬಹಳ ವಿರಳ ಮತ್ತು ಕೆಲವೊಮ್ಮೆ ಮೆಲನೋಮ ಅಥವಾ ಗೆಡ್ಡೆಯಂತಹ ಕಾಯಿಲೆಯಿಂದ ಉಂಟಾಗುತ್ತದೆ.
undefined
ಕಣ್ಣಿಗೆ ನಿರ್ದಿಷ್ಟ ರೀತಿಯಲ್ಲಿ ಗಾಯವಾದರೆ ಈ ಸ್ಥಿತಿಯೂ ಆಗಬಹುದು. ಆದರೆ ಈ ರೋಗಿಯ ವಿಚಾರದಲ್ಲಿ ಇದು ಮುಟ್ಟಿನೊಂದಿಗೆ ಸಂಬಂಧಿಸಿದೆ.
undefined
click me!