ಕೂದಲು ಚೆನ್ನಾಗಿರಬೇಕೆಂದರೆ ತಿಳಿಯಲೇಬೇಕಾದ ವಿಚಿತ್ರ ಹೇರ್ ಹ್ಯಾಕ್ಸ್

First Published | Mar 18, 2021, 1:18 PM IST

ಕೂದಲಿನ ಬಗ್ಗೆ ಎಲ್ಲರಿಗೂ ಕೇರ್ ಇರುತ್ತದೆ. ಕೂದಲನ್ನು ಚೆನ್ನಾಗಿ ನೋಡಿಕೊಳ್ಳಲು ಏನೇನೋ ಟಿಪ್ಸ ಪಾಲಿಸುತ್ತಾರೆ. ಬೇರೆ ಬೇರೆ ರೀತಿಯ ಹೇರ್ ಹ್ಯಾಕ್ಸ್ ಬಗ್ಗೆಯೂ ತಿಳಿದುಕೊಂಡಿರುತ್ತಾರೆ. ಹೆಚ್ಚಿನವರಿಗೆ ಒಂದಲ್ಲ ಒಂದು ಹೇರ್ ಹ್ಯಾಕ್ ಬಗ್ಗೆ ತಿಳಿದಿರಬಹುದು. ಆದರೆ ಇಲ್ಲಿ ಕೆಲವೊಂದು ಟ್ರಿಕ್ಸ್ ನೀಡಲಾಗಿದೆ, ಅದನ್ನು ಕೇಳಿರದಿರಬಹುದು, ಅವುಗಳ ಬಗ್ಗೆ ತಿಳಿಯಿರಿ... 

ಪೂಲ್ ಮಾಯಿಶ್ಚರೈಸರ್ಮುಂದಿನ ಬಾರಿ ಈಜುಕೊಳದಲ್ಲಿ ಸ್ನಾನ ಮಾಡಲು ಹೊರಟಾಗ ಕೂದಲಿನಾದ್ಯಂತ ಮಾಯಿಶ್ಚರೈಸಿಂಗ್ ಕಂಡೀಶನರ್ ಅನ್ನು ಉಜ್ಜಿ ಮತ್ತು ಅದನ್ನು ಹಾಗೆಯೇ ಬಿಡಿ. ಇದು ಕೂದಲಿನಲ್ಲಿ ಕ್ಲೋರಿನೇಟೆಡ್ ನೀರು ನೆನೆಯುವುದನ್ನು ತಡೆಯುತ್ತದೆ.
ಮಯಶ್ಚರೈಸರ್ಕಂಡೀಷನರ್ಒದ್ದೆಕೂದಲಿನ ಮೇಲೆ ಮಯಶ್ಚರೈಸರ್ ಹಚ್ಚಿ ಮಸಾಜ್ ಮಾಡಿ, ಕೂದಲಿಗೆ ಪೂರ್ತಿಯಾಗಿ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. 20 ನಿಮಿಷ ಬಿಟ್ಟು ನಂತರ ಕೂದಲನ್ನು ತೊಳೆಯಿರಿ.
Tap to resize

ಡ್ಯಾಂಡ್ರಫ್ ಹೇರ್ ಹ್ಯಾಕ್2 ಚಮಚ ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ತಲೆ ಬುರುಡೆಗೆ ಹಚ್ಚಿಕೊಳ್ಳಿ. 5-10 ನಿಮಿಷ ಕಾಲ ಹಾಗೆ ಬಿಟ್ಟು ನಂತರ ತೊಳೆಯಿರಿ.
ಹ್ಯಾಂಡ್ ಲೋಷನ್ ಆಂಟಿ-ಫ್ರಿಜ್ ಚಿಕಿತ್ಸೆಅಂಗೈಯಲ್ಲಿ ಒಂದು ನಾಣ್ಯದ ಗಾತ್ರದ ಹ್ಯಾಂಡ್ ಲೋಷನ್ ಉಜ್ಜಿ ಮತ್ತು ಕೂದಲಿನ ತುದಿಗಳನ್ನು ಚೆನ್ನಾಗಿ ಮಸಾಜ್ ಮಾಡಿ. ಈ ದ್ರಾವಣವನ್ನು ಎಚ್ಚರಿಕೆಯಿಂದ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಿ.
ರಾತ್ರಿ ವೇಳೆ ಡ್ರೈ ಶಾಂಪೂ ಟ್ರಿಕ್ರಾತ್ರಿ ಕೂದಲಿಗೆ ಡ್ರೈ ಶಾಂಪೂ ಹಾಕಿ ಹಾಗೆ ಬಿಡಿ, ಇದು ಎಣ್ಣೆಯನ್ನು ಹೀರಿಕೊಂಡು ಕೂದಲು ಚೆನ್ನಾಗಿರುವಂತೆ ಕಾಪಾಡುತ್ತದೆ.
ಫ್ರೆಶ್ ಹೇರ್ಕೂದಲನ್ನು ಸತತ ಕೆಲವು ದಿನಗಳವರೆಗೆ ತೊಳೆಯದೆ ಹೋದರೆ ಮತ್ತು ಕೂದಲು ತಾಜಾ ವಾಸನೆಯನ್ನು ಪಡೆಯಬೇಕಾದರೆ, ಬ್ರಶ್ ಮೇಲೆ ಸುಗಂಧ ದ್ರವ್ಯವನ್ನು ಸಿಂಪಡಿಸಿ ಕೂದಲು ಬಾಚಬೇಕು.
ಹೀಟ್ ಲೆಸ್ ಟಾಯ್ಲೆಟ್ ಪೇಪರ್ ರೋಲ್ ಬೌನ್ಸಿ ಗುಂಗುರು ಕೂದಲು ಇಷ್ಟವಾಗಿದ್ದರೆ, ಕೂದಲಿಗೆ ನೀರು ಸ್ಪ್ರೇ ಮಾಡಿ ಮತ್ತು ಟಾಯ್ಲೆಟ್ ಪೇಪರ್ ರೋಲ್ ನ ಸುತ್ತ ಸುತ್ತಿ. ಕೂದಲನ್ನು ಒಣಗಲು ಬಿಡಿ ಮತ್ತು ಬೆರಳುಗಳಿಂದ ಗುಂಗುರು ಕೂದಲನ್ನು ಬಾಚಿಕೊಳ್ಳಿ.

Latest Videos

click me!