ಉತ್ತಮ ಕ್ವಾಲಿಟಿಯ ವಿಸ್ಕಿಯಲ್ಲಿ ಮೊಸರು, ನಿಂಬೆರಸ ಅಥವಾ ಜೇನು ಬೆರೆಸಿ ಫೇಶಿಯಲ್ ಮಾಡಲಾಗುತ್ತದೆ. ಇದರಿಂದ ಮುಖದ ಮೇಲೆ ಬೆಸ್ಟ್ ಎಫೆಕ್ಟ್ ಮೂಡುತ್ತದೆ. ಫೇಶಿಯಲ್ ಮಾಡುವ ಮುನ್ನ ಮುಖವನ್ನು ಚೆನ್ನಾಗಿ ಸ್ಕ್ರಬ್ ಮಾಡಬೇಕು. ಇದರ ನಂತರ ಬಿಸಿ ನೀರಿನಿಂದ ನೆನೆಸಿದ ಟವೆಲ್‌ನಿಂದ ಮುಖಕ್ಕೆ ಮಸಾಜ್ ಮಾಡಿ. ಇದರ ನಂತರ ವಿಸ್ಕಿ ಫೇಶಿಯಲ್ ಮಾಡಿ.
ಈ ವಿಸ್ಕಿ ಫೇಶಿಯಲ್ ಮಾಡೋದು ಹೇಗೆ ನೋಡಿ...ವಿಸ್ಕಿ ಮತ್ತು ನೀರುವಿಸ್ಕಿ 1 ಚಮಚನೀರು 3 ಎಂಎಲ್
ವಿಧಾನ : ವಿಸ್ಕಿ ಮತ್ತು ನೀರನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ನಂತರ 5 ನಿಮಿಷಗಳ ಕಾಲ ಮುಖವನ್ನು ಒದ್ದೆ ಕೈಗಳಿಂದ ಮಸಾಜ್ ಮಾಡಿ. ಇದರ ನಂತರ ಮುಖವನ್ನು ನೀರಿನಲ್ಲಿ ತೊಳೆಯಿರಿ. ಇದರಿಂದ ತ್ವಚೆ ಕ್ಲೀನ್ ಆಗಿ ಫ್ರೆಶ್ ಆಗುತ್ತದೆ.
ನಿಂಬೆ ರಸ ಮತ್ತು ವಿಸ್ಕಿವಿಸ್ಕಿ 2 ಚಮಚನಿಂಬೆ ರಸ : 12 ಚಮಚ
ವಿಧಾನ : ವಿಸ್ಕಿ ಮತ್ತು ನಿಂಬೆರಸವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ನಂತರ 15-20 ನಿಮಿಷಗಳ ಕಾಲ ಹಾಗೆ ಬಿಡಿ. ಇದರ ನಂತರ ಮುಖವನ್ನು ನೀರಿನಲ್ಲಿ ತೊಳೆಯಿರಿ. ನಂತರ ಟವೆಲ್‌ನಿಂದ ಮುಖ ಒರೆಸಿ ಮಾಯಿಶ್ಚರೈಸರ್ ಹಾಕಿ. ಇದರಿಂದ ತ್ವಚೆಯಲ್ಲಿನ ಕಲೆ, ಸುಕ್ಕು ನಿವಾರಣೆಯಾಗಿ ಕ್ಲೀನ್ ಆಗಿ ಫ್ರೆಶ್ ಆಗುತ್ತದೆ.
ವಿಸ್ಕಿ ಮತ್ತು ಜೇನುವಿಸ್ಕಿ 2 ಚಮಚಜೇನು 12 ಚಮಚ
ವಿಧಾನ : ವಿಸ್ಕಿ ಮತ್ತು ಜೇನನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ನಂತರ 5 ನಿಮಿಷಗಳ ಕಾಲ ಮುಖವನ್ನು ಕೈಗಳಿಂದ ಮಸಾಜ್ ಮಾಡಿ. ಇದರ ನಂತರ 15 ನಿಮಿಷ ಹಾಗೆ ಬಿಡಿ. ಬಳಿಕ ಮುಖವನ್ನು ತಂಪಾದ ನೀರಿನಲ್ಲಿ ತೊಳೆಯಿರಿ. ನಂತರ ಮುಖಕ್ಕೆ ಮಾಯಿಶ್ಚರೈಸ್ ಮಾಡಿ. ಇದರಿಂದ ಮುಖ ಸ್ಮೂತ್ ಆಗುತ್ತದೆ.
ಮುಂದಿನ ಬಾರಿ ಮನೆಯಲ್ಲಿ ವಿಸ್ಕಿ ತಂದರೆ ಅದನ್ನು ಈ ರೀತಿಯಾಗಿ ಬಳಸಿ ಸೌಂದರ್ಯವನ್ನು ಹೆಚ್ಚಿಸಿ.