ಸಕ್ಕರೆ ಮತ್ತು ನಿಂಬೆ:ಎರಡು ಟೇಬಲ್ ಚಮಚ ಸಕ್ಕರೆ ಮತ್ತು ನಿಂಬೆ ರಸ, ಜೊತೆಗೆ 8-9 ಟೇಬಲ್ ಚಮಚ ನೀರಿನೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಗುಳ್ಳೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುವವರೆಗೆ ಬಿಸಿ ಮಾಡಿ, ನಂತರ ತಣ್ಣಗಾಗಲು ಬಿಡಿ. ಇದನ್ನು ಬಾಧಿತ ಪ್ರದೇಶಗಳಿಗೆ ಹಚ್ಚಿ 20-25 ನಿಮಿಷ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ವೃತ್ತಾಕಾರದಲ್ಲಿ ಉಜ್ಜಿ.
ಜೇನುತುಪ್ಪ ಮತ್ತು ಸಕ್ಕರೆ:ಇದು ವ್ಯಾಕ್ಸಿಂಗ್ ಅನ್ನು ಬದಲಾಯಿಸುವ ಮತ್ತೊಂದು ವಿಧಾನವಾಗಿದೆ. ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ಜೇನುತುಪ್ಪ ವನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ಸುಮಾರು ಮೂರು ನಿಮಿಷ ಬಿಸಿ ಮಾಡಿ, ಅಗತ್ಯವಿದ್ದರೆ ನೀರು ಹಾಕಿ ಮಿಶ್ರಣ ತೆಳುವಾಗಿಸಿ.
ಓಟ್ ಮೀಲ್:ಈ ವಿಧಾನವು ತುಂಬಾ ಅನುಕೂಲಕರವಾಗಿದೆ. ಎರಡು ಚಮಚ ಓಟ್ಸ್ ಅನ್ನು ಹಣ್ಣಾದ ಬಾಳೆಹಣ್ಣಿನೊಂದಿಗೆ ಮಿಶ್ರಮಾಡಿ, ಈ ಪೇಸ್ಟ್ ಅನ್ನು ಬಾಧಿತ ಪ್ರದೇಶಗಳಿಗೆ ಅನ್ವಯಿಸಿ. 15 ನಿಮಿಷ ಕಾಲ ಮಸಾಜ್ ಮಾಡಿ ನಂತರ ತಣ್ಣೀರಿನಿಂದ ತೊಳೆಯಿರಿ.
ಆಲೂಗಡ್ಡೆ ರಸ:ಒಂದು ಟೇಬಲ್ ಚಮಚ ಜೇನು, ನಿಂಬೆ ರಸ, ಐದು ಟೇಬಲ್ ಚಮಚ ಆಲೂಗಡ್ಡೆ ರಸದೊಂದಿಗೆ ಮಿಶ್ರಣ ಮಾಡಿ. ಈ ಮಧ್ಯೆ, ಬೇಳೆಯನ್ನು (ರಾತ್ರಿ ನೆನೆಸಿದ) ನುಣ್ಣಗೆ ರುಬ್ಬಿಕೊಳ್ಳಿ. ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ ಮತ್ತು ಈ ಮಿಶ್ರಣವನ್ನು ಬಾಧಿತ ಪ್ರದೇಶಕ್ಕೆ ಸುಮಾರು 20 ನಿಮಿಷಗಳ ಕಾಲ ಅನ್ವಯಿಸಿ. ಇದು ಸಂಪೂರ್ಣವಾಗಿ ಒಣಗಿದ ನಂತರ ತೊಳೆಯಿರಿ.
ಕಾರ್ನ್ ಸ್ಟಾರ್ಚ್:ಒಂದು ಟೇಬಲ್ ಚಮಚ ಕಾರ್ನ್ ಸ್ಟಾರ್ಚ್ ಮತ್ತು ಸಕ್ಕರೆಯನ್ನು ಮೊಟ್ಟೆಯ ಬಿಳಿಯೊಂದಿಗೆ ಮಿಶ್ರಗೊಳಿಸಿ. ಬೇಡದ ಕೂದಲು ಇರುವ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚಿ ಒಣಗಿದ ನಂತರ ಸಿಪ್ಪೆ ಸುಲಿದು ಬಿಡಿ. ತುಂಬಾ ಸರಳ, ಅಲ್ಲವೇ? ಮೊಟ್ಟೆಯ ಬಿಳಿ ಅಂಟು, ಮತ್ತು ಸಕ್ಕರೆ ಮತ್ತು ಕಾರ್ನ್ ಸ್ಟಾರ್ಚ್ ನೊಂದಿಗೆ ಸಂಯೋಗಗೊಂಡಾಗ ಚರ್ಮದ ಮೇಲೆ ತೆಳುವಾದ ಪದರ ರಚಿಸುತ್ತದೆ.
ಅರಿಶಿನ:ಅರಿಶಿನಪುಡಿಯನ್ನು ನೀರಿನಲ್ಲಿ ನೆನೆಸಿ, ಹೆಚ್ಚುವರಿ ಕೂದಲು ಇರುವ ಭಾಗಕ್ಕೆ ಹಚ್ಚಿ ಕೆಲವು ನಿಮಿಷ ಹಾಗೆಯೇ ಬಿಡಿ. ಅದು ಬತ್ತಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಬಳಸಿ ಅರಿಶಿನ ಮತ್ತು ಕೂದಲನ್ನು ಕೂಡ ಒರೆಸಿ.
ಕಡಲೆ ಹಿಟ್ಟು:ಅಜ್ಜಿಯ ಕಾಲದಿಂದಲೂ ಕಡಲೆ ಹಿಟ್ಟನ್ನು ಫೇಸ್ ಪ್ಯಾಕ್ ಗಳಿಗೆ ಬಳಸಲಾಗುತ್ತದೆ ಎಂದು ತಿಳಿದಿದೆ. ಮುಖದ ಮೇಲಿನ ಹೆಚ್ಚುವರಿ ಕೂದಲನ್ನು, ವಿಶೇಷವಾಗಿ ಬಾಯಿ ಮತ್ತು ಗಲ್ಲದ ಸುತ್ತ ತೆಗೆಯುವ ಸಾಮರ್ಥ್ಯ ಇದರಲ್ಲಿದೆ ಎಂದು ನಂಬಲಾಗಿದೆ.
ಪಪ್ಪಾಯಿ:ಒಂದು ಪಪ್ಪಾಯಿಯ ಸಿಪ್ಪೆ ಸುಲಿದು, ಅದನ್ನು ನುಣ್ಣಗೆ ಪೇಸ್ಟ್ ಆಗುವವರೆಗೆ ಬ್ಲೆಂಡ್ ಮಾಡಿ. ಇದಕ್ಕೆ ಅರ್ಧ ಚಮಚ ಅರಿಶಿನ ಪುಡಿ ಹಾಕಿ ಚೆನ್ನಾಗಿ ಕಲಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 5-10 ನಿಮಿಷ ಕಾಲ ಮಸಾಜ್ ಮಾಡಿ. ನಂತರ ಸ್ವಚ್ಛ ನೀರಿನಿಂದ ತೊಳೆಯಿರಿ.
ಈರುಳ್ಳಿ ರಸ:ಈರುಳ್ಳಿ ರಸವು ತುಳಸಿ ಎಲೆಗಳೊಂದಿಗೆ ಹಚ್ಚಿದಾಗ ದೇಹದಲ್ಲಿರುವ ಅನಗತ್ಯ ಕೂದಲನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.