ಬೆಳ್ಳಿ ಕಾಲುಂಗರ ಶ್ರೀಮತಿಗೆ ಸುಂದರ, ಸೌಂದರ್ಯಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಒಳಿತು

First Published Mar 10, 2021, 12:37 PM IST

ಏಕೆ ಭಾರತೀಯ ವಿವಾಹಿತ ಮಹಿಳೆಯರು ಕಾಲುಂಗುರಗಳನ್ನು ಧರಿಸುತ್ತಾರೆ ಎನ್ನುವ ಕುರಿತು ಮಾಹಿತಿ ಇದೆಯೇ? ಅಥವಾ ಈ ಕಾಲುಂಗುರದ ಉಗಮ ಮತ್ತು ಮಹತ್ವವೇನು? ಆಧ್ಯಾತ್ಮಿಕತೆ, ಜ್ಯೋತಿಷ್ಯದಲ್ಲಿ ಏನು ಹೇಳುತ್ತವೆ ಎನ್ನುವ ಮಾಹಿತಿ ಇಲ್ಲಿದೆ... 

ಭಾರತದಲ್ಲಿ, ಟೋ ರಿಂಗ್ಗಳನ್ನು ಹಲವುಕಾರಣಗಳಿಗಾಗಿ ಧರಿಸಲಾಗುತ್ತದೆ. ಅಲಂಕಾರಿಕ (ಆಭರಣ), ರಕ್ಷಣೆ (ದುಷ್ಟ ಕಣ್ಣುಗಳನ್ನು ಪ್ರತಿಬಿಂಬಿಸಲು ಕನ್ನಡಿ) ಅಥವಾ ಗುಣಪಡಿಸುವ ಶಕ್ತಿಯುಳ್ಳ ರತ್ನಗಳು ಅಥವಾ ವೈವಾಹಿಕ ಸ್ಥಿತಿಯನ್ನು ಸೂಚಿಸಲು ಇದನ್ನು ಬಳಸಲಾಗುತ್ತದೆ.
undefined
ಕಾಲುಂಗುರದ ವಿಷಯಕ್ಕೆ ಬಂದಾಗ 'ಕಾಲುಂಗುರ ಚಿನ್ನದಿಂದ ಮಾಡಬಾರದು, ಎನ್ನುತ್ತಾರೆ. ಏಕೆಂದರೆ ಚಿನ್ನವು 'ಗೌರವಾನ್ವಿತ' ಸ್ಥಾನಮಾನವನ್ನು ಹೊಂದಿದೆ ಮತ್ತು ಸೊಂಟದ ಕೆಳಗೆ ಚಿನ್ನ ಧರಿಸಬಾರದು ಎನ್ನಲಾಗುತ್ತದೆ. ಭಾರತೀಯರು ಅದರಲ್ಲೂ ಹಿಂದೂಗಳು ಚಿನ್ನವು ಸಂಪತ್ತಿನ ದೇವತೆ ಲಕ್ಷ್ಮಿದೇವಿಯ ಲೋಹ ಎಂದು ನಂಬುತ್ತಾರೆ, ಆದ್ದರಿಂದ ಅವರು ಸೊಂಟಕ್ಕಿಂತ ಕೆಳಗೆ ಚಿನ್ನವನ್ನು ಧರಿಸುವುದು ಸೂಕ್ತವಲ್ಲವೆಂದು ಭಾವಿಸುತ್ತಾರೆ.
undefined
ಎರಡನೇ ಬೆರಳಿಗೆ ಉಂಗುರವನ್ನು ಧರಿಸುವುದು ಲೈಂಗಿಕಕಾಮಪ್ರಚೋದಕ ಪರಿಣಾಮವನ್ನು ಹೊಂದಿದೆ.
undefined
ಕಾಲಿನ ಎರಡನೇ ಬೆರಳಿನ ಮೇಲೆ ಒತ್ತಡ ಬಿಂದುಗಳಿವೆ ಎಂದು ವೈಜ್ಞಾನಿಕ ನಂಬಿಕೆ ಇದೆ. ಆದುದರಿಂದ ಕಾಲಿನ ಎರಡನೆ ಬೆರಳಿಗೆ ಉಂಗುರಗಳನ್ನು ಧರಿಸಲಾಗುತ್ತದೆ. ವೇದಗಳ ಪ್ರಕಾರ ಈ ಬಿಂದುಗಳಿಗೆ ಒತ್ತಡ ಹೇರುವುದರಿಂದ ಮಹಿಳೆಯರಲ್ಲಿ ಋತುಚಕ್ರವನ್ನು ನಿಯಂತ್ರಿಸಲು ಸಹಾಯವಾಗುತ್ತದೆ, ರಕ್ತಪರಿಚಲನೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಗರ್ಭಾಶಯವನ್ನು ಆರೋಗ್ಯವಾಗಿಡುತ್ತದೆ.
undefined
ಸಂತಾನೋತ್ಪತ್ತಿಗೆ ಸಂಬಂಧಿಸಿದ ಕೆಲವು ನರಗಳ ಮೇಲೆ ಕಾಲಿನ ಉಂಗುರ ಪರಿಣಾಮ ಬೀರುತ್ತದೆ. ಇದನ್ನು ಧರಿಸುವುದರಿಂದ ಅದು ಸಮತೋಲನದಲ್ಲಿರುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ ಎಂಬ ನಂಬಿಕೆಯೂ ಇದೆ.
undefined
ಎರಡನೇ ಬೆರಳಿಗೆ ಮಸಾಜ್ ಮಾಡುವ ಮೂಲಕ ಸ್ತ್ರೀರೋಗ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಬಗ್ಗೆಯೂ ರಿಫ್ಲೆಕ್ಸಾಲಾಜಿ ಪಠ್ಯಗಳು ಉಲ್ಲೇಖಿಸುತ್ತವೆ.
undefined
ಅಲ್ಲದೆ, ಈ ಎರಡನೇ ಬೆರಳಿನಲ್ಲಿರುವ ನಿರ್ದಿಷ್ಟ ನರವು, ಗರ್ಭಾಶಯಗಳನ್ನು ಸಂಪರ್ಕಿಸುತ್ತದೆ ಮತ್ತು ಹೃದಯವನ್ನು ಹಾದು ಹೋಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದ, ಒಂದು ದಿನದ ಅವಧಿಯಲ್ಲಿ ನಡೆಯುವಾಗ ಮತ್ತು ಎಲ್ಲಾ ರೀತಿಯ ಕೆಲಸಗಳನ್ನು ಮಾಡುವಾಗ ಉಂಗುರದಿಂದಾಗಿ ಒತ್ತಡಕ್ಕೆ ಒಳಗಾಗಿ ಹೃದಯ ಆರೋಗ್ಯದಿಂದಿರುತ್ತದೆ.
undefined
ಬೆಳ್ಳಿ ಉತ್ತಮ ವಾಹಕಮತ್ತು ಅದು ಭೂಮಿಯಿಂದ ಧ್ರುವೀಯ ಶಕ್ತಿಗಳನ್ನು ಹೀರಿಕೊಂಡು ಅದನ್ನು ದೇಹಕ್ಕೆ ರವಾನಿಸುತ್ತದೆ ಎಂದು ಸಹ ಹೇಳಲಾಗುತ್ತದೆ.
undefined
click me!