ವೈನ್ ಕಿಕ್ ಏರಿಸೋದು ಮಾತ್ರವಲ್ಲ ಬ್ಯೂಟಿಗೂ ಬೆಸ್ಟ್

First Published Jan 29, 2021, 5:16 PM IST

ವೈನ್ ಎಂದ ಕೂಡಲೇ ವೈನ್ ಪ್ರಿಯರು ಆಹಾ ಎಂದರೆ... ಇದನ್ನೆಲ್ಲಾ ದೂರ ಇಡೋರು ಏನ್ರಿ ವೈನ್ ಬಗ್ಗೆ ಬರೀತೀರಾ ಎನ್ನಬಹುದು. ಇಲ್ಲಿ ವೈನ್ ಕುಡಿಯಲು ಹೇಳ್ತಿಲ್ಲ. ಬದಲಾಗಿ ವೈನ್ನಿಂದ ಸೌಂದರ್ಯ ಹೆಚ್ಚಿಸೋದು ಹೇಗೆ ಅನ್ನೋ ಮಾಹಿತಿ ಇದೆ. ಹೌದು ವೈನ್ನಿಂದ ತ್ವಚೆಯ ಅಂದ ಹೆಚ್ಚುವುದರೊಂದಿಗೆ ಕೂದಲಿಗೂ ಅಂದ ನೀಡುತ್ತದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.. 

ವಯಸ್ಸಾಗುವುದನ್ನು ನಿಲ್ಲಿಸುತ್ತದೆಕೆಂಪು ವೈನ್‌ನಲ್ಲಿಆ್ಯಂಟಿಆಕ್ಸಿಡೆಂಟ್‌ಗಳಿದ್ದು, ಕಾಲಜನ್ ಅನ್ನು ಪುನಾ ಸ್ಥಾಪಿಸುವ ಮೂಲಕ ವಯಸ್ಸಾಗುವುದನ್ನು ತಡೆಯುತ್ತದೆ. ಇದರಿಂದ ಸದಾ ಯಂಗ್ ಆಗಿ ಕಾಣೋದರಲ್ಲಿ ಸಂಶಯವಿಲ್ಲ.
undefined
ಮೊಡವೆಗಳ ವಿರುದ್ಧ ಹೋರಾಡುತ್ತದೆಇದರಲ್ಲಿ ನಂಜುನಿರೋಧಕ ಗುಣವಿದ್ದು, ಇದು ಮೊಡವೆಗಳ ವಿರುದ್ಧ ಹೋರಾಡಲು ಮತ್ತು ಚರ್ಮವನ್ನು ಸ್ವಚ್ಛಮಾಡಲು ಸಹಾಯ ಮಾಡುತ್ತದೆ.
undefined
ಹೊಳೆಯುವ ಚರ್ಮಇದರಲ್ಲಿ ಪಾಲಿಫಿನಾಲ್‌ಗಳಿದ್ದು, ಇದು ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. ಸುಂದರ ಸಾಫ್ಟ್ ಸ್ಕಿನ್ ಪಡೆಯಬಹುದು.
undefined
ತಲೆ ಹೊಟ್ಟಿನ ವಿರುದ್ಧ ಹೋರಾಡುತ್ತದೆತಲೆಹೊಟ್ಟಿನಿಂದ ಬೇಸರವಾಗಿದೆಯೇ? ಇದನ್ನು ತೊಳೆಯುವ ಮುನ್ನ ಸ್ವಲ್ಪ ವೈನ್ ಅನ್ನು ಕೂದಲಿಗೆ ಹಚ್ಚಿ, ಇದರಿಂದ ಎಲ್ಲಾ ರೀತಿಯ ಕಾಂತಿಯನ್ನು ಪಡೆಯಬಹುದು. ಜೊತೆಗೆ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
undefined
ಅತ್ಯುತ್ತಮ ಟೋನರ್ಇದು ಚರ್ಮಕ್ಕೆ ಅತ್ಯುತ್ತಮ ಸಾವಯವ ಟೋನರ್ ಎಂದು ಸಾಬೀತಾಗಿದೆ. ಕಾಟನ್ ಪ್ಯಾಡ್ ಮೇಲೆ ಸ್ವಲ್ಪ ವೈನ್ ಹಾಕಿ ಅದರಿಂದ ಪ್ರತಿದಿನವೂ ಮುಖವನ್ನು ಸ್ವಚ್ಛಗೊಳಿಸಿ.
undefined
ಕ್ಲೆನ್ಸರ್ಎರಡು ಟೇಬಲ್ ಚಮಚ ವೈನ್ ಅನ್ನು ಒಂದು ಟೇಬಲ್ ಸ್ಪೂನ್ ನಿಂಬೆ ರಸದೊಂದಿಗೆ ಬೆರೆಸಿ. ಈಗ ಈ ಎರಡು ದ್ರವಗಳನ್ನು ಮಿಶ್ರಣ ಮಾಡಿ ಮತ್ತು ಅದನ್ನು ಮುಖಕ್ಕೆ ಹತ್ತಿಯ ಪ್ಯಾಡ್ ನಿಂದ ಹಚ್ಚಿ ಸುಂದರ ತ್ವಚೆ ಪಡೆಯಿರಿ.
undefined
ಸತ್ತ ಚರ್ಮ ನಿವಾರಕಒಂದು ಚಮಚ ಕಾಫಿ ಪುಡಿ ತೆಗೆದುಕೊಂಡು ಒಂದು ಚಮಚ ವೈನ್ ಬೆರೆಸಿ, ಇದು ಮುಖಕ್ಕೆ ಅತ್ಯುತ್ತಮ ಎಕ್ಸ್ ಫೋಲಿಯೇಟರ್ ಆಗಿದ್ದು, ಇದು ನೈಸರ್ಗಿಕವಾಗಿ ಸತ್ತ ಚರ್ಮವನ್ನು ತೆಗೆದುಹಾಕುತ್ತದೆ.
undefined
ಮಸಾಜ್ ಪ್ಯಾಕ್ಮುಖಕ್ಕೆ ಮಸಾಜ್ ಮಾಡಲು ಸ್ವಲ್ಪ ಅಲೋವೆರಾ ಜೆಲ್ ಅನ್ನು ಒಂದು ಚಮಚ ವೈನ್‌ನೊಂದಿಗೆ ಬೆರೆಸಿ ಹಚ್ಚಿ ಮಸಾಜ್ ಮಾಡಿ. ಇದರಿಂದ ರಕ್ತ ಪರಿಚಲನೆ ಉತ್ತಮವಾಗುತ್ತದೆ. ಜೊತೆಗೆ ಹೊಳೆಯುವ ತ್ವಚೆ ಪಡೆಯುತ್ತೀರಿ.
undefined
ಹೊಳೆಯುವ ಕೂದಲುಕೂದಲನ್ನು ತೊಳೆದ ನಂತರ ವೈನ್‌ನಿಂದ ತೊಳೆಯಿರಿ ಮತ್ತು ಫಲಿತಾಂಶ ನೋಡಿ ನಿಮಗೇ ಆಶ್ಚರ್ಯವಾಗುತ್ತದೆ.
undefined
click me!