Using Vinegar in Washing Clothes: ಕಡಿಮೆ ಬೆಲೆಗೆ ದೊರೆಯುವ, ನಮ್ಮ ಅಡುಗೆಮನೆಯಲ್ಲೇ ಲಭ್ಯವಿರುವ 'ಬಿಳಿ ವಿನೆಗರ್' ಬಳಸಿ. ಇದು ಇವೆಲ್ಲವುಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅದು ಹೇಗೆಂದು ನೋಡೋಣ ಬನ್ನಿ..
ಕೆಲವರು ಬಟ್ಟೆ ಬಿಳಿಯಾಗಬೇಕೆಂದು ಮತ್ತು ಸಾಫ್ಟ್ ಆಗಿರಬೇಕೆಂದು ದುಬಾರಿ ಡಿಟರ್ಜೆಂಟ್‌ಗಳು ಮತ್ತು ಫ್ಯಾಬ್ರಿಕ್ ಸಾಫ್ಟ್‌ನರ್ ಬಳಸುತ್ತಾರೆ. ಆದರೆ ಇದಕ್ಕೆಲ್ಲಾ ಹೆಚ್ಚು ಖರ್ಚು ಮಾಡಬೇಕಾಗುತ್ತದೆ ಅಲ್ಲವೇ, ಹಾಗಾಗಿ ಕಡಿಮೆ ಬೆಲೆಗೆ ದೊರೆಯುವ, ನಮ್ಮ ಅಡುಗೆಮನೆಯಲ್ಲೇ ಲಭ್ಯವಿರುವ 'ಬಿಳಿ ವಿನೆಗರ್' ಬಳಸಿ. ಇದು ಇವೆಲ್ಲವುಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅದು ಹೇಗೆಂದು ನೋಡೋಣ ಬನ್ನಿ..
29
ವಾಷಿಂಗ್ ಮಷಿನ್‌ನಲ್ಲಿ ಕೆಟ್ಟ ವಾಸನೆಯನ್ನ ತೆಗೆಯುತ್ತೆ
ಬಿಳಿ ವಿನೆಗರ್ ಬಟ್ಟೆಗಳ ಮೇಲಿನ ಮೊಂಡುತನದ ಕಲೆಗಳನ್ನು ತೆಗೆದುಹಾಕುವುದರ ಜೊತೆಗೆ ವಾಷಿಂಗ್ ಮಷಿನ್‌ನಲ್ಲಿ ಕೆಟ್ಟ ವಾಸನೆಯನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
39
ವಾಷಿಂಗ್ ಮಷಿನ್‌ನ ಬಾಳಿಕೆಗೂ ಒಳ್ಳೇದು
ಕೆಮಿಕಲ್ ಕ್ಲೀನರ್ ಬಳಸದೆ ನಿಮ್ಮ ಬಟ್ಟೆಗಳು ನ್ಯಾಚುರಲ್ ಆಗಿ ಫಳ ಫಳ ಹೊಳೆಯಬೇಕಂದ್ರೆ ನೀವು ವಾಷಿಂಗ್ ಪೌಡರ್ ಅಥವಾ ಲಿಕ್ವಿಡ್ ಜೊತೆಗೆ ವಿನೆಗರ್ ಹೇಗೆ ಬಳಸಬೇಕೆಂದು ತಿಳಿದುಕೊಳ್ಳಬೇಕು. ಏಕೆಂದರೆ ಇದು ಬಟ್ಟೆಗಳಿಗೆ ಮಾತ್ರವಲ್ಲದೆ, ವಾಷಿಂಗ್ ಮಷಿನ್‌ನ ಬಾಳಿಕೆಗೂ ಒಳ್ಳೇದು.
ಬಿಳಿ ವಿನೆಗರ್ ನೈಸರ್ಗಿಕವಾದ, ಕಡಿಮೆ ಬೆಲೆಯ ಕ್ಲೀನಿಂಗ್ ಏಜೆಂಟ್. ಇದು ಬಟ್ಟೆಗಳ ಮೇಲೆ ಹೇಗೆ ಕಾರ್ಯನಿರ್ವಹಿಸುತ್ತದೆಯೆಂದು ಮುಂದೆ ನೋಡೋಣ ಬನ್ನಿ..
59
ಮೃದುಗೊಳಿಸುವಿಕೆ
ಬಟ್ಟೆ ಸಾಫ್ಟ್ ಆಗಬೇಕಂದ್ರೆ ಬೇರೇನೂ ಬೇಡ. ವಿನೆಗರ್ ಒಂದಿದ್ರೆ ಸಾಕು. ಇದು ನೈಸರ್ಗಿಕವಾಗಿ ಬಟ್ಟೆಯನ್ನು ಮೃದುಗೊಳಿಸುತ್ತದೆ. ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ತೊಳೆಯುವಾಗ ಅರ್ಧ ಕಪ್ ವಿನೆಗರ್ ಸೇರಿಸುವುದರಿಂದ ಒರಟಾಗಿ ಕಾಣುವ ಬಟ್ಟೆ ಸಹ ಮೃದುವಾಗುತ್ತವೆ.
69
ವಾಸನೆ ತಡೆಗಟ್ಟುವಿಕೆ
ವಿನೆಗರ್ ಬೆವರು ಮತ್ತು ತೇವಾಂಶದಿಂದ ಉಂಟಾಗುವ ಮೊಂಡುತನದ ವಾಸನೆಯನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ.
79
ಬೆಳ್ಳಗೆ ಕಾಣ್ತವೆ
ಹಳದಿ ಬಣ್ಣದ ಬಿಳಿ ಬಟ್ಟೆಗಳನ್ನು ವಿನೆಗರ್ ಬೆರೆಸಿದ ಬಿಸಿ ನೀರಿನಲ್ಲಿ ನೆನೆಸುವುದರಿಂದ ಅವು ಮತ್ತೆ ಬಿಳಿಯಾಗಿ ಹೊಳೆಯುತ್ತವೆ.
89
ಹೆಚ್ಚು ಪರಿಣಾಮಕಾರಿ ಫಲಿತಾಂಶ
ನೀವು ವಾಷಿಂಗ್ ಮಷಿನ್ ಅಥವಾ ಕೈನಲ್ಲೇ ಬಟ್ಟೆ ಒಗೆಯುತ್ತಿರಲಿ ಡಿಟರ್ಜೆಂಟ್ ಸೇರಿಸುವ ಮೊದಲು ಬಟ್ಟೆಗಳನ್ನು ವಿನೆಗರ್‌ನಲ್ಲಿ ನೆನೆಸುವುದರಿಂದ ಹೆಚ್ಚು ಪರಿಣಾಮಕಾರಿ ಫಲಿತಾಂಶಗಳು ಸಿಗುತ್ತವೆ.
99
ನೇರವಾಗಿ ವಿನೆಗರ್ ಸೇರಿಸಬೇಡಿ
ಬ್ಲೀಚ್ ಅಥವಾ ಹೈಡ್ರೋಜನ್ ಪೆರಾಕ್ಸೈಡ್ ನಂತಹ ರಾಸಾಯನಿಕ ಕ್ಲೀನಿಂಗ್ ಏಜೆಂಟ್‌ನೊಂದಿಗೆ ವಿನೆಗರ್ ಅನ್ನು ಎಂದಿಗೂ ಬೆರೆಸಬೇಡಿ. ಅಲ್ಲದೆ, ಬಟ್ಟೆಯ ಮೇಲೆ ನೇರವಾಗಿ ವಿನೆಗರ್ ಸುರಿಯುವುದನ್ನು ತಪ್ಪಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.