ಪಿರಿಯಡ್ಸ್ ನೋವು ನಿವಾರಿಸುತ್ತೆ ಈ ಆಹಾರಗಳು.. ಮಿಸ್ ಮಾಡ್ಬೇಡಿ

Suvarna News   | Asianet News
Published : Jan 31, 2021, 04:43 PM IST

ಪಿರಿಯಡ್ಸ್ ಸಮಯದಲ್ಲಿ ಕೆಲವು ಮಹಿಳೆಯರಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಿಸಲು ವಿವಿಧ ರೀತಿಯ ಮನೆ ಮದ್ದುಗಳನ್ನು ಸಹ ಬಳಕೆ ಮಾಡುತ್ತಾರೆ. ಈ ನೋವನ್ನು ಕಡಿಮೆ ಮಾಡಲು ಈ ಸಮಯದಲ್ಲಿ ಕೆಲವೊಂದು ಆಹಾರ ಪದಾರ್ಥಗಳ ಸೇವನೆ ಮಾಡಬಹುದು. ಅವು ಯಾವುವು ? ಸೇವನೆ ಹೇಗೆ ? ಹೆಚ್ಚಿನ ಮಾಹಿತಿ ಇಲ್ಲಿದೆ... 

PREV
19
ಪಿರಿಯಡ್ಸ್ ನೋವು ನಿವಾರಿಸುತ್ತೆ ಈ ಆಹಾರಗಳು.. ಮಿಸ್ ಮಾಡ್ಬೇಡಿ

ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಆಹಾರಗಳು ಸಹಾಯ ಮಾಡಬಲ್ಲವೇ? ಕೆಲವು ಆಹಾರಗಳಲ್ಲಿ ದೇಹದಲ್ಲಿ ಉರಿಯೂತ ಕಡಿಮೆ ಮಾಡುವ ಶಕ್ತಿ ಇದ್ದು, ಇದು ಮುಟ್ಟಿನ ನೋವನ್ನು ಶಮನಗೊಳಿಸಲು ನೆರವಾಗುತ್ತದೆ. ಅಂತಹ ಆಹಾರ ಕ್ರಮಗಳ ಬಗ್ಗೆ ತಿಳಿಯಲು ಮುಂದೆ ಓದಿ... 

29

ಮುಟ್ಟಿನ ನೋವನ್ನು ನಿವಾರಿಸಲು ಆಹಾರಗಳು: ಮುಟ್ಟಿನ ಸೆಳೆತವನ್ನು ನಿವಾರಿಸಲು ಮತ್ತು ಕಡಿಮೆ ಮಾಡಲು ನೀವು ತಿನ್ನಬಹುದಾದ ಕೆಲವು ಆಹಾರಗಳು ಇಲ್ಲಿವೆ.

39

ಶುಂಠಿ: ಶುಂಠಿಯು ಹೊಟ್ಟೆ ನೋವು ಕಡಿಮೆಗೊಳಿಸುತ್ತದೆ. ಇದರಲ್ಲಿ ಔಷಧೀಯ ಗುಣಗಳಿದ್ದು, ಇದು ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಗುಣಪಡಿಸುವ ಗುಣ ಹೊಂದಿದೆ.

49

ಸಾಲ್ಮನ್: ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಸಾಲ್ಮನ್ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮುಟ್ಟಿನ ಸೆಳೆತಕ್ಕೆ ತಕ್ಷಣ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.

59

ನಟ್ಸ್: ನಟ್ಸ್ ಗಳು ಮೆಗ್ನೀಶಿಯಂನ ಸಮೃದ್ಧ ಮೂಲಗಳಾಗಿವೆ. ಇದು ಸೆರೋಟಿನ್ ಅನ್ನು ನಿಯಂತ್ರಿಸಲು ಮತ್ತು ಮುಟ್ಟಿನ ಸೆಳೆತದ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ತಡೆಯುತ್ತದೆ.

69

ಸೊಪ್ಪು ತರಕಾರಿಗಳು: ಋತುಚಕ್ರವು ರಕ್ತವನ್ನು ಕಳೆದುಕೊಳ್ಳುವುದಕ್ಕೆ ಮತ್ತು ಕಬ್ಬಿಣಾಂಶದ ಕೊರತೆಗೆ ಕಾರಣವಾಗುತ್ತದೆ, ಆಲಸ್ಯವನ್ನು ಪ್ರಚೋದಿಸುತ್ತದೆ. ಸೊಪ್ಪುಗಳು ವಿಟಮಿನ್ ಗಳು ಮತ್ತು ಕಬ್ಬಿಣಾಂಶಗಳಿಂದ ತುಂಬಿವೆ, ಇದು ದೇಹದಿಂದ ಪ್ರಮುಖ ಪೋಷಕಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.

79

ಅವಕಾಡೋಗಳು: ಅವಕಾಡೋಗಳಲ್ಲಿ ಉರಿಯೂತ ನಿವಾರಕ ಕೊಬ್ಬು, ಮೆಗ್ನೀಷಿಯಂ ಮತ್ತು ಪೊಟ್ಯಾಶಿಯಂಗಳು ಹೇರಳವಾಗಿದ್ದು, ಇದು ಮುಟ್ಟಿನ ಸೆಳೆತವನ್ನು ನಿವಾರಿಸಲು ಅತ್ಯುತ್ತಮ ಆಹಾರವಾಗಿದೆ.
.

89

ಓಟ್ಸ್: ನಾರಿನಂಶದಿಂದ ಕೂಡಿರುವ ಓಟ್ಸ್ ಕೇವಲ ಪೌಷ್ಟಿಕಾಂಶಗಳಿಂದ ಕೂಡಿರುವುದಷ್ಟೇ ಅಲ್ಲ, ದೀರ್ಘ ಸಮಯದವರೆಗೆ ಸಂತುಷ್ಟವಾಗಿರಿಸಲು ನೆರವಾಗುತ್ತದೆ. ಜೊತೆಗೆ ಇವು ಸತು ಮತ್ತು ಮೆಗ್ನೀಶಿಯಂ ನಿಂದ ಸಮೃದ್ಧವಾಗಿದ್ದು, ಇದು  ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

99

ಅಗಸೆ ಬೀಜಗಳು: ಅಗಸೆ ಬೀಜದಲ್ಲಿರುವ ಒಮೆಗಾ-3 ಕೊಬ್ಬಿನಆಮ್ಲವು ದೇಹದಲ್ಲಿ ಉರಿಯೂತವನ್ನು ನಿವಾರಿಸುತ್ತದೆ ಮತ್ತು ಮುಟ್ಟಿನ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

click me!

Recommended Stories