ತುಟಿ ಮೇಲೆ ಕೂದಲು ಹೆಚ್ಚು ಬೆಳೆಯುತ್ತಿದೆ ಎಂದು ನಿಮಗೆ ಅನಿಸುತ್ತಿದಿಯಾ? ಅದರಿಂದ ಮುಕ್ತಿ ಪಡೆಯಲು ಇಲ್ಲಿದೆ ಕೆಲವು ಈಸೀ ಪರಿಹಾರಗಳು.
ಟ್ವೀಜಿಂಗ್ :ಅಪ್ಪರ್ ಲಿಪ್ ಮೇಲಿನ ಹೆಚ್ಚುವರಿ ಕೂದಲನ್ನು ಪ್ಲಕರ್ ಮೂಲಕ ನಿವಾರಿಸುಕೊಳ್ಳಬಹುದು.ಸ್ವಲ್ಲ ನೋವಾದರೂಟ್ವೀಜಿಂಗ್ ತುಂಬಾ ಪರಿಣಾಮ.
ರೇಜರ್:ರೇಜರ್‌ಗಳು ಬಳಸಲು ಸುಲಭ ಮತ್ತು ಖರೀದಿಸಲು ಅಗ್ಗವಾಗಿದೆ. ಫೇಸ್ ರೇಜರ್ ಮೂಲಕ ಹೆಚ್ಚುವರಿ ಕೂದಲನ್ನು ತೆಗೆಯಬಹುದು. ಆದರೆ, ಆಮೇಲೆ ಸ್ವಚೆ ಮೇಲೆ ಪರಿಣಾಮ ಬೀರೋ ಸಾಧ್ಯತೆ ಇರೋದ್ರಿಂದ ಈ ದಾರಿ ಅಷ್ಟು ಒಳ್ಳೇಯದಲ್ಲ.
ಮಾಸ್ಕ್:ಜೇನುತುಪ್ಪ, ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟಿನಿಂದ ದಪ್ಪ ಪೇಸ್ಟ್ ತಯಾರಿಸಿ ಅದನ್ನುಕೂದಲು ಬೆಳೆಯುವ ವಿರುದ್ಧ ದಿಕ್ಕಿನಲ್ಲಿ ಹಚ್ಚಿ. ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ. ಇದು ಕೂದಲ ಬೆಳವಣಿಗೆಯನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತದೆ
ಟ್ರಿಮ್ಮರ್‌ಗಳು ಮತ್ತು ಲೇಸರ್ ಮಷಿನ್:ಇಂಟರ್‌ನೆಟ್‌ನಲ್ಲಿ ಅನೇಕ ಟ್ರಿಮ್ಮರ್‌ಗಳು ಮತ್ತು ಲೇಸರ್ ಯಂತ್ರಗಳು ಲಭ್ಯವಿದ್ದು, ಮೇಲಿನ ತುಟಿ ಕೂದಲನ್ನು ತೆಗೆದು ಹಾಕಲು ಆಯ್ಕೆ ಮಾಡಬಹುದು. ಇದು ಪರ್ಫೇಕ್ಟ್ ಕ್ಲೀನ್ ಲುಕ್ ನೀಡದಿರಬಹುದು, ಆದರೆ ಇದು ಪರಿಣಾಮಕಾರಿ.
ವ್ಯಾಕ್ಸಿಂಗ್ :ವ್ಯಾಕ್ಸಿಂಗ್ ಮುಖದಿಂದ ಕೂದಲನ್ನು ತೆಗೆಲು ಸಮಯ ತೆಗೆದುಕೊಳ್ಳುವ ವಿಧಾನ. ಇದಕ್ಕೆ ಉತ್ತಮ ಗುಣಮಟ್ಟದ ವ್ಯಾಕ್ಸ್ ಆರಿಸಬೇಕು ಮತ್ತು ನಂತರ ಅದನ್ನು ಮೇಲಿನ ತುಟಿಗೆ ನಿಧಾನವಾಗಿ ಹಚ್ಚಿ ಸ್ಟ್ರೀಪ್ ಮೂಲಕ ತೆಗೆಯಿರಿ. ಇದು ಹೇರ್ ರಿಮೂವ್ ಮಾಡಲು ಹೆಚ್ಚು ನೋವಾಗುತ್ತೆ, ಜೋಪಾನ.