ಆಯುರ್ವೇದ ಚಿಕಿತ್ಸೆಯ ಮೂಲಕ ಪಡೆಯಿರಿ ಸುಂದರ, ಸುಕೋಮಲ ತ್ವಚೆ

Suvarna News   | Asianet News
Published : Apr 16, 2021, 05:04 PM IST

ಆಯುರ್ವೇದ ಹಿಂದಿನ ಕಾಲದಿಂದಲೂ ಬಳಸುತ್ತಿರುವ ಚಿಕಿತ್ಸಾ ಪದ್ದತಿ. ಇದನ್ನು ಆರೋಗ್ಯ ಉತ್ತಮಪಡಿಸಲು ಮತ್ತು ಸೌಂದರ್ಯ ಚಿಕಿತ್ಸೆಗಾಗಿಯೂ ಬಳಕೆ ಮಾಡುತ್ತಾರೆ. ಆಯುರ್ವೇದ ಚಿಕಿತ್ಸೆ ಖಂಡಿತವಾಗಿಯೂ ಕಡಿಮೆ ಹಾನಿಕಾರಕ ಮತ್ತು ರಾಸಾಯನಿಕಗಳಿಗಿಂತ ಹೆಚ್ಚು ಪರಿಣಾಮಕಾರಿ. ಆಯುರ್ವೇದ ನೈಸರ್ಗಿಕ ಪದಾರ್ಥಗಳು ಸುಲಭವಾಗಿ ದೊರೆಯುತ್ತವೆ. ಆಯುರ್ವೇದದ ಮೂಲಕ ಚರ್ಮಕ್ಕೆ ಚಿಕಿತ್ಸೆ ಪಡೆಯುವುದು ಹೇಗೇ? ತಿಳಿಯಿರಿ  

PREV
110
ಆಯುರ್ವೇದ ಚಿಕಿತ್ಸೆಯ ಮೂಲಕ ಪಡೆಯಿರಿ ಸುಂದರ, ಸುಕೋಮಲ ತ್ವಚೆ

ಕುಂಕುಮಾದಿ ತೈಲ 
ಅಂಗೈಗೆ 4 ರಿಂದ 5 ಹನಿ ಕುಂಕುಮಾದಿ ಎಣ್ಣೆಯನ್ನು ಸುರಿಯಿರಿ ಮತ್ತು ಮುಖ ಮತ್ತು ಕುತ್ತಿಗೆಯ ಮೇಲೆ ಹಗುರವಾಗಿ ಹಚ್ಚಿ. ಬೆರಳುಗಳ ಮೇಲಿನ ಭಾಗಗಳನ್ನು ಚರ್ಮದ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ಕನಿಷ್ಠ 5 ನಿಮಿಷಗಳ ಕಾಲ ಇದನ್ನು ಮಾಡಿ. 

210

ಎಣ್ಣೆಯನ್ನು ಮುಖದ ಮೇಲೆ 20 ನಿಮಿಷಗಳ ಕಾಲ ಹಾಗೆ ಬಿಡಿ. ಅಂತಿಮವಾಗಿ, ಮುಖ ಮತ್ತು ಕುತ್ತಿಗೆಯನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ದಿನಕ್ಕೆ ಒಮ್ಮೆಯಾದರೂ ಈ ವಿಧಾನವನ್ನು ಅನುಸರಿಸುವ ಮೂಲಕ ಹೊಳೆಯುವ ಚರ್ಮ ಪಡೆಯಿರಿ.

310

ಕೆಲವು ಬಾದಾಮಿಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಅವುಗಳ ಸಿಪ್ಪೆ ತೆಗೆದು ಪುಡಿ ಮಾಡಿ. ಹಾಲಿನ ಜೊತೆ ಬೆರೆಸಿ ಮುಖಕ್ಕೆ ಹಚ್ಚಿ.

410

ಒಂದು ಟೀ ಚಮಚ ಕಡ್ಲೆ ಹುಡಿ, ಒಂದು ಟೀ ಚಮಚ ಹಾಲು ಮತ್ತು 4 ಹನಿ ನಿಂಬೆ ರಸ ಸೇರಿಸಿ. ಪೇಸ್ಟ್ ತಯಾರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ನಿಯಮಿತ ಮಸಾಜ್  ದೀರ್ಘಕಾಲದ ಸ್ಪಷ್ಟ ಮತ್ತು ಸುಂದರ ಚರ್ಮವನ್ನು ನೀಡುತ್ತದೆ.

510

ಶ್ರೀಗಂಧದ ಪೇಸ್ಟ್ ಚರ್ಮವನ್ನು ಉತ್ತಮಗೊಳಿಸುವುದು ಮಾತ್ರವಲ್ಲದೆ ಸನ್ ಸ್ಕ್ರೀನ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದನ್ನು ಅತ್ಯುತ್ತಮ ವಯಸ್ಸಾಗುವಿಕೆ ವಿರೋಧಿ ಪದಾರ್ಥ ಎಂದೂ ಪರಿಗಣಿಸಲಾಗುತ್ತದೆ.

610

ಪುದೀನಾ ಎಲೆಗಳು ಮತ್ತು ಬಾದಾಮಿ ಬೀಜಗಳನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ನೀರಿನಿಂದ ಮುಖ ಮತ್ತು ಕುತ್ತಿಗೆಯನ್ನು ತೊಳೆದು ಮತ್ತೆ ಸ್ವಚ್ಛವಾದ ಬೆಚ್ಚಗಿನ ನೀರಿನಿಂದ ತೊಳೆಯಿರಿ.  

710

ಚರ್ಮಕ್ಕೆ ಹೊಳಪು ಮತ್ತು ತಾಜಾತನವನ್ನು ಪಡೆಯಲು ಸ್ನಾನದ ನೀರಿನಲ್ಲಿ ಪುದೀನಾ ಎಲೆಗಳನ್ನು ಸೇರಿಸಬಹುದು. ಇದು ಫ್ರೆಶ್ ಫೀಲ್ ಕೊಡೋದರಲ್ಲಿ ಎರಡು ಮಾತಿಲ್ಲ. 

810

ಋತುಮಾನ ಮತ್ತು ಲಭ್ಯತೆಗೆ ಅನುಗುಣವಾಗಿ ಆಹಾರದಲ್ಲಿ ಬಾಳೆಹಣ್ಣು, ಪಪ್ಪಾಯಿ, ಸೇಬು ಮತ್ತು ಕಲ್ಲಂಗಡಿಯಂತಹ ಆರೋಗ್ಯಕರ ಹಣ್ಣುಗಳನ್ನು ಸೇರಿಸಿ. 

910

ಪಾಲಕ್, ಕ್ಯಾರೆಟ್, ಟೊಮೆಟೊ, ಎಲೆಕೋಸು ಮುಂತಾದ ತರಕಾರಿಗಳು ಸಹ ಚರ್ಮಕ್ಕೆ ಅಗತ್ಯವಿರುವ ಖನಿಜಗಳು, ವಿಟಮಿನ್ ಗಳು ಮತ್ತು ಪ್ರೋಟೀನ್ ಗಳನ್ನು ಒದಗಿಸುತ್ತವೆ.

1010

ಹಾಲನ್ನು ಇಷ್ಟ ಪಡುವವರು, ಸಕ್ಕರೆ ಇಲ್ಲದೆ ಪ್ರತಿದಿನ 250 ಮಿಲೀ ಹಸುವಿನ ಹಾಲನ್ನು ಕುಡಿಯಿರಿ. ಇದರಿಂದ ಉತ್ತಮ ತ್ವಚೆ ಪಡೆಯಬಹುದು.
 
click me!

Recommended Stories