ಉದ್ದನೆಯ ಕಣ್ರೆಪ್ಪೆಗಳನ್ನು ಪಡೆಯಲು ಸೀಕ್ರೆಟ್ ಟಿಪ್ಸ್ ಇಲ್ಲಿವೆ

First Published Nov 19, 2020, 5:42 PM IST

ಕೆಲವು ಜನರು ಸ್ವಾಭಾವಿಕವಾಗಿ ಉದ್ದವಾದ ರೆಪ್ಪೆಗೂದಲುಗಳನ್ನೂ ಹೊಂದಿರುತ್ತಾರೆ, ಇನ್ನೂ ಕೆಲವರಿಗೆ ಅದು ಹಾಗಲ್ಲ. ಆ ಉದ್ದನೆಯ ರೆಪ್ಪೆಗೂದಲುಗಳನ್ನು  ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ, ಹಾಗೂ ನಿಮ್ಮ ಕಣ್ಣುಗಳು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ನಕಲಿ ರೆಪ್ಪೆಗೂದಲುಗಳನ್ನು ಬಳಸುವುದು ಸುಲಭವಾದ ಮಾರ್ಗವಾಗಿದ್ದರೂ, ನೈಸರ್ಗಿಕವಾಗಿ ಉದ್ದವಾದ ರೆಪ್ಪೆಗೂದಲುಗಳನ್ನು ಹೊಂದಲು ಕೆಲವು ಸಲಹೆಗಳು ಇಲ್ಲಿವೆ.

ನೈಸರ್ಗಿಕ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಸುಂದರವಾದ ಐ ಲ್ಯಾಷಸ್ ಪಡೆದುಕೊಳ್ಳಬಹುದು, ಅದಕ್ಕಾಗಿ ನೀವು ಕಷ್ಟಪಡಬೇಕಾಗಿಲ್ಲ, ಕೆಲವೊಂದಿಷ್ಟು ಸಿಂಪಲ್ ವಿಧಾನಗಳನ್ನು ಅನುಸರಿಸಿದರೆ ಸಾಕು. ಅವು ಯಾವುವು ನೋಡೋಣ...
undefined
ಪ್ರತಿ ರಾತ್ರಿ ಎಣ್ಣೆ ಹಚ್ಚಿನೀವು ಮಲಗುವ ಮೊದಲು, ಕ್ಯಾಸ್ಟರ್ ಆಯಿಲ್, ಸಾಸಿವೆ ಎಣ್ಣೆ ಅಥವಾ ತೆಂಗಿನ ಎಣ್ಣೆಯಂತಹ ಯಾವುದೇ ಎಣ್ಣೆಯ ಕೆಲವು ಹನಿಗಳನ್ನು ನಿಮ್ಮ ರೆಪ್ಪೆಗೂದಲುಗಳ ಮೇಲೆ ಹಚ್ಚಿ. ಪ್ರತಿದಿನ ಎಣ್ಣೆಯನ್ನು ಹಚ್ಚಿದ್ರೆ, ಅವುಗಳು ಸ್ವಲ್ಪ ಸಮಯದಲ್ಲಿಯೇ ಬೆಳೆಯುವುದನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ.
undefined
ಪೆಟ್ರೋಲಿಯಂ ಜೆಲ್ಲಿಸ್ವಲ್ಪ ಪೆಟ್ರೋಲಿಯಂ ಜೆಲ್ಲಿಯನ್ನು ತೆಗೆದುಕೊಂಡು ಹಳೆಯ ಮಸ್ಕರಾ ಬ್ರಷ್ ಬಳಸಿ ಪ್ರತಿ ರಾತ್ರಿ ನಿಮ್ಮ ಕಣ್ರೆಪ್ಪೆಗಳ ಮೇಲೆ ಹಚ್ಚಿ. ಇದು ನಿಮಗೆ ಶೀಘ್ರ ಫಲಿತಾಂಶಗಳನ್ನು ತೋರಿಸುತ್ತದೆ ಮತ್ತು ನಿಮ್ಮ ರೆಪ್ಪೆಗೂದಲುಗಳನ್ನು ಬೆಳೆಯಲು ಸಹಾಯ ಮಾಡುತ್ತದೆ.
undefined
ವಿಟಮಿನ್ ಇ ಸೇರಿಸಿತ್ವರಿತ ಫಲಿತಾಂಶಗಳನ್ನು ಪಡೆಯಲು ಪ್ರತಿದಿನ ನಿಮ್ಮ ಆಹಾರದಲ್ಲಿ ವಿಟಮಿನ್ ಇ ಪೂರಕಗಳನ್ನು ಸೇರಿಸಿ ಏಕೆಂದರೆ ಈ ಪೂರಕಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
undefined
ಗ್ರೀನ್ ಟೀ ಪ್ರಯತ್ನಿಸಿದೇಹವನ್ನು ನಿರ್ವಿಷಗೊಳಿಸಲು ಗ್ರೀನ್ ಟೀಯನ್ನು ಕುಡಿಯುವುದು ಅದ್ಭುತವಾಗಿದೆ ಆದರೆ ಇದು ರೆಪ್ಪೆಗೂದಲುಗಳಿಗೆ ಅದ್ಭುತವಾಗಿದೆ. ನೀವು ಮಾಡಬೇಕಾಗಿರುವುದು ಕೆಲವು ಗ್ರೀನ್ ಟೀ ಎಲೆಗಳನ್ನು ಹದಿನೈದು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ನೀರು ತಣ್ಣಗಾದ ನಂತರ, ನೀರನ್ನು ಕಣ್ಣಿನ ಲಾಷೆಸ್ ಗೆ ಹಚ್ಚಿ ರಾತ್ರಿಯಿಡೀ ಬಿಡಿ.
undefined
ಗ್ರೀನ್ ಟೀ ಚೀಲಗಳನ್ನು ನೀವು ಅರ್ಧ ಘಂಟೆಯವರೆಗೆ ಕಣ್ಣುಗಳ ಮೇಲೆ ಇಟ್ಟುಕೊಳ್ಳಬಹುದು, ಅವು ಒಂದೇ ರೀತಿಯ ಪರಿಣಾಮವನ್ನು ಬೀರುತ್ತವೆ. ಇವು ಕಣ್ಣುಗಳಿಗೆ ಆರಾಮ ನೀಡುತ್ತದೆ, ಅಲ್ಲದೆ ಕಣ್ಣಿನ ಸುತ್ತಲೂ ಕಾಣಿಸಿಕೊಳ್ಳುವ ಡಾರ್ಕ್ ಸರ್ಕಲ್ ಕಡಿಮೆ ಮಾಡುತ್ತದೆ.
undefined
ಶಿಯಾ ಬೆಣ್ಣೆ ಸಹ ಸಹಾಯ ಮಾಡುತ್ತದೆಶಿಯಾ ಬೆಣ್ಣೆಯು ಕೂದಲನ್ನು ಮೃದುಗೊಳಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ವಿಟಮಿನ್ ಎ ಮತ್ತು ವಿಟಮಿನ್ ಇ ಯಿಂದ ಸಮೃದ್ಧವಾಗಿದೆ ಎಂಬ ಕಾರಣಕ್ಕೆ ಇದು ರೆಪ್ಪೆಗೂದಲು ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
undefined
ಕೇವಲ ಅರ್ಧ ಟೀ ಚಮಚ ಶಿಯಾ ಬೆಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಬೆರಳ ತುದಿಯಲ್ಲಿ ಉಜ್ಜಿಕೊಳ್ಳಿ. ಈಗ, ಈ ಕರಗಿದ ಬೆಣ್ಣೆಯನ್ನು ನಿಮ್ಮ ರೆಪ್ಪೆಗೂದಲುಗಳಿಗೆ ಹಚ್ಚಿ ಮತ್ತು ರಾತ್ರಿಯಿಡೀ ಬಿಡಿ. ಇದರಿಂದ ರೆಪ್ಪೆ ಕೂದಲು ಚೆನ್ನಾಗಿ ಬೆಳೆಯುತ್ತದೆ.
undefined
click me!